ಭಾರತದಲ್ಲಿ ಒನ್​​ಪ್ಲಸ್​ 8 ಸಿರೀಸ್​ ಸ್ಮಾರ್ಟ್​ಫೋನ್​ ಮಾರಾಟ ಪ್ರಾರಂಭ: ಬೆಲೆ ಇಲ್ಲಿದೆ

OnePlus 8: ಲಾಕ್​ಡೌನ್​ ಸಮಯದಲ್ಲಿ  ಒನ್​ಪ್ಲಸ್​ 8 ಸೀರೀಸ್​ ಸ್ಮಾರ್ಟ್​ಫೋನ್​ ಅನ್ನು ಮಾರಾಟ ಮಾಡುತ್ತಿದೆ. ಅದಕ್ಕಾಗಿ ಗ್ರಾಹಕರಿಗೆ  ಕೆಲವು ಆಫರ್​ಗಳನ್ನು ಹೊರಡಿಸಿದೆ. ಗ್ರಾಹಕರು ಸ್ಟೇಟ್​ ಬ್ಯಾಂಕ್​​ ಇಂಡಿಯಾ ಕ್ರೆಡಿಟ್​​ ಕಾರ್ಡ್​ ಮತ್ತು ಇಎಮ್​ಐ ಆಯ್ಕೆಯ ಮೂಲಕ ಖರೀದಿಸಿದರೆ 2,000 ಕಡಿತ ಮಾಡುತ್ತಿದೆ. ಜೊತೆಗೆ ನೂತನ ಸ್ಮಾರ್ಟ್​ಫೋನ್​ ಅನ್ನು ಪ್ರೀ ಬುಕ್​ ಮಾಡಿದರೆ 1 ಸಾವಿರದಷ್ಟು ಅಮೆಜಾನ್​​​ ಕ್ಯಾಶ್​​​​ಬ್ಯಾಕ್​​​ ನೀಡುತ್ತಿದೆ.

news18-kannada
Updated:May 29, 2020, 3:13 PM IST
ಭಾರತದಲ್ಲಿ ಒನ್​​ಪ್ಲಸ್​ 8 ಸಿರೀಸ್​ ಸ್ಮಾರ್ಟ್​ಫೋನ್​ ಮಾರಾಟ ಪ್ರಾರಂಭ: ಬೆಲೆ ಇಲ್ಲಿದೆ
ಒನ್​​ಪ್ಲಸ್​ 8
  • Share this:
ಒನ್​​​ಪ್ಲಸ್​ 8 ಸಿರೀಸ್​ ಸ್ಮಾರ್ಟ್​ಫೋನ್​ ಇಂದಿನಿಂದ​ ಭಾರತದಲ್ಲಿ ಮಾರಾಟವನ್ನು ಪ್ರಾರಂಭಿಸಿದೆ. ಆದರೆ ಸಿಮೀತ ಸ್ಮಾರ್ಟ್​ಫೋನ್​ಗಳನ್ನು ಆನ್​ಲೈನ್​ ಮತ್ತು ಆಫ್​​ಲೈನ್​ ಸ್ಟೋರ್​​ಗಳನ್ನು ಮಾರಾಟ ಮಾಡುತ್ತಿದೆ ಎಂದು ಹೇಳಿದೆ.

ಒನ್​ಪ್ಲಸ್​ ಸಿದ್ಧಪಡಿಸಿದ್ದ 8 ಸಿ​ ಸ್ಮಾರ್ಟ್​ಫೋನ್​ಗಳನ್ನ ಆನ್​ಲೈನ್​ ಮಳಿಗೆಯಾದ ಅಮೆಜಾನ್​ ಮತ್ತು ಒನ್​ಪ್ಲಸ್​​​.ಇನ್ ​ವೆಬ್​ಸೈಟ್​ನಲ್ಲಿ ಮಾರಾಟ ಮಾಡುತ್ತಿದೆ. ನೂತನ ಸ್ಮಾರ್ಟ್​ಫೋನ್​ ಮೂರು ವೇರಿಯೆಂಟ್​ಗಳಲ್ಲಿ ಗ್ರಾಹಕರಿಗೆ ಸಿಗಲಿದೆ ಎಂದಿದೆ.

ಲಾಕ್​ಡೌನ್​ ಸಮಯದಲ್ಲಿ  ಒನ್​ಪ್ಲಸ್​ 8  ಸ್ಮಾರ್ಟ್​ಫೋನ್​ ಅನ್ನು ಮಾರಾಟ ಮಾಡುತ್ತಿದೆ. ಅದಕ್ಕಾಗಿ ಗ್ರಾಹಕರಿಗೆ  ಕೆಲವು ಆಫರ್​ಗಳನ್ನು ಹೊರಡಿಸಿದೆ. ಗ್ರಾಹಕರು ಸ್ಟೇಟ್​ ಬ್ಯಾಂಕ್​​ ಇಂಡಿಯಾ ಕ್ರೆಡಿಟ್​​ ಕಾರ್ಡ್​ ಮತ್ತು ಇಎಮ್​ಐ ಆಯ್ಕೆಯ ಮೂಲಕ ಖರೀದಿಸಿದರೆ 2,000 ಕಡಿತ ಮಾಡುತ್ತಿದೆ. ಜೊತೆಗೆ ನೂತನ ಸ್ಮಾರ್ಟ್​ಫೋನ್​ ಅನ್ನು ಪ್ರೀ ಬುಕ್​ ಮಾಡಿದರೆ 1 ಸಾವಿರದಷ್ಟು ಅಮೆಜಾನ್​​​ ಕ್ಯಾಶ್​​​​ಬ್ಯಾಕ್​​​ ನೀಡುತ್ತಿದೆ.

ಒನ್​ಪ್ಲಸ್​ ​8 ಸ್ಮಾರ್ಟ್​ಫೋನ್​ ವಿಶೇಷತೆಗಳು:

ಒನ್​ಪ್ಲಸ್​ ​8 ಸ್ಮಾರ್ಟ್​ಫೋನ್​ 6.55 ಇಂಚಿನ ಅಮೋಲ್ಡ್​ ಡಿಸ್​​ಪ್ಲೇ ಜೊತೆಗೆ ಹೆಚ್​ಡಿಆರ್​​ 10+ ಸಪೋರ್ಟ್​ ಹೊಂದಿದೆ. 3D ಕಾರ್ನಿಂಗ್​ ಗೊರಿಲ್ಲಾ ಗ್ಲಾಸ್​ ಅಳವಡಿಸಲಾಗಿದೆ. ಇದರ ಜೊತೆಗೆ sRGB ಮತ್ತು ಡಿಸ್​​ಪ್ಲೇ P3 ಕಲರ್​ ಪ್ರೊಫೈಲ್​​ ಹೊಂದಿದೆ. ಇದು FHD+ ರೆಸಲ್ಯೂಶನ್​ನಲ್ಲಿ ಇರಲಿದೆ.

ಇನ್ನು ಸ್ಮಾರ್ಟ್​ಫೋನ್​​ ಸ್ನಾಪ್​​ಡ್ರ್ಯಾಗನ್​​​ 865 ಪ್ರೊಸೆಸರ್​​ ಹೊಂದಿದ್ದು, 6GB, 8GB,12GB RAM ಆಯ್ಕೆಯಲ್ಲಿ ಗ್ರಾಹಕರಿಗೆ ಪರಿಚಯಿಸಿದೆ.

ನೂತನ ಸ್ಮಾರ್ಟ್​ಫೋನ್​ ಒನ್​ಪ್ಲಸ್​ ​8 ತ್ರಿವಳಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. 48 ಮೆಗಾಫಿಕ್ಸೆಲ್​​ ಸೋನಿ ಐಎಮ್​ಎಕ್ಸ್​​586 ಸೆನ್ಸಾರ್​​​, 16 ಮೆಗಾಫಿಕ್ಸೆಲ್​ ಸೆನ್ಸಾರ್​ ಜೊತೆಗೆ ಅಲ್ಟ್ರಾವೈಡ್​​ ಲೆನ್ಸ್​​, 2 ಮೆಗಾಫಿಕ್ಸೆಲ್​​​ ಮ್ಯಾಕ್ರೊಕ್ಯಾಮೆರಾ ನೀಡಲಾಗಿದೆ.​​ಇನ್ನು 4,300mAh​ ಬ್ಯಾಟರಿಯನ್ನು ಅಳವಡಿಸಿಕೊಂಡಿರುವ ಈ ಸ್ಮಾರ್ಟ್​ಫೋನ್​​ 5G, 4G ಲೈಟ್​ ನೆಟ್​ವರ್ಕ್​, ವೈ-ಫೈ 6, ಬ್ಲೂಟೂತ್​ v5.1, ಯುಎಸ್​ಬಿ ಟೈಪ್​ -ಸಿ ಫೀಚರ್​ ಅನ್ನು ಹೊಂದಿದೆ.

ಬೆಲೆ:

ಒನ್​ಪ್ಲಸ್​ ​8 ಮೂರು ವೆರಿಯಂಟ್​ನಲ್ಲಿ ಗ್ರಾಹಕರಿಗೆ ಸಿಗಲಿದೆ, 8GB RAM​​ +128GB ಸ್ಟೊರೇಜ್​ ಸ್ಮಾರ್ಟ್​ಫೋನ್​ ಬೆಲೆ41,999 ರೂ. 8GB + 128GB ಸ್ಟೊರೇಜ್​​​ ಆಯ್ಕೆಯ ಸ್ಮಾರ್ಟ್​ಫೋನ್​​ 4,999 ರೂ. ಅಂತೆಯೇ 12GB RAM​​ + 256GB ಸ್ಟೊರೇಜ್​ ಆಯ್ಕೆಯ ಸ್ಮಾರ್ಟ್​ಫೋನ್​ ಬೆಲೆ 49,999 ರೂ ಇರಲಿದೆ.
First published: May 29, 2020, 3:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading