ಐಫೋನ್​ಗೆ ಸೆಡ್ಡುಹೊಡೆಯಲು ಸಿದ್ಧವಾದ ಒನ್​ಪ್ಲಸ್​ ಹೊಸ ಸ್ಮಾರ್ಟ್​ಫೋನ್​; ಸೆ. 26 ರಂದು ಬಿಡುಗಡೆ

ಒನ್​ಪ್ಲಸ್​ 7T ಸ್ಮಾರ್ಟ್​ಫೋನ್​ ತ್ರಿವಳಿ ಕ್ಯಾಮೆರಾವನ್ನು ಹೊಂದಿದ್ದು, 48 ಮೆಗಾಫಿಕ್ಸೆಲ್ ಪ್ರೈಮರಿ ಸೆನ್ಸಾರ್​​ + 12 ಟೆಲಿಫೋಟೋ ಲೆನ್ಸ್​ + 16 ಮೆಗಾಫಿಕ್ಸೆಲ್​ ಅಲ್ಟ್ರಾ ವೈಡ್​ ಆ್ಯಂಗಲ್​ ಸೆನ್ಸಾರ್​ ಲೆನ್ಸ್​ ಅಳವಡಿಸಲಾಗಿದೆ.

news18-kannada
Updated:September 18, 2019, 3:26 PM IST
ಐಫೋನ್​ಗೆ ಸೆಡ್ಡುಹೊಡೆಯಲು ಸಿದ್ಧವಾದ ಒನ್​ಪ್ಲಸ್​ ಹೊಸ ಸ್ಮಾರ್ಟ್​ಫೋನ್​; ಸೆ. 26 ರಂದು ಬಿಡುಗಡೆ
ಒನ್​ಪ್ಲಸ್​ 7T
  • Share this:
ಭಾರತೀಯ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿ ಐಫೋನ್​ಗೆ ಸೆಡ್ಡು ಹೊಡೆದಿದ್ದ ಒನ್​ಪ್ಲಸ್​ ಇದೀಗ ನೂತನ ‘ಒನ್​ಪ್ಲಸ್​ 7T‘ ಹೆಸರಿನ ಸ್ಮಾರ್ಟ್​ಫೋನ್​ವೊಂದನ್ನು ತಯಾರಿಸಿದೆ. ಸದ್ಯದಲ್ಲೇ ಈ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ ಬರಲಿದೆ.

ಈ ಕುರಿತಂತೆ ಒನ್​ಪ್ಲಸ್​ ಕಂಪೆನಿಯ ಸಿಇಓ ಪೀಟ್​ ಲಾ ಅವರು ನೂತನ ಸ್ಮಾರ್ಟ್​ಫೋನ್​ ಕುರಿತು ಟ್ಟೀಟ್​ ಮಾಡಿದ್ದು, ಸೆ. 26 ರಂದು ಒನ್​ಪ್ಲಸ್​ ಟಿವಿ ಬಿಡುಗಡೆ ಕಾರ್ಯಕ್ರಮದಂದು ‘ಒನ್​ಪ್ಲಸ್​ 7T‘ ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

‘ಒನ್​ಪ್ಲಸ್​ 7T‘ ಸ್ಮಾರ್ಟ್​ಫೋನ್​ 6.55 ಇಂಚಿನ ಅಮೋಲ್ಡ್​ ಡಿಸ್​ಪ್ಲೇ ಜೊತೆಗೆ HDR ​10+ ಸಪೋರ್ಟ್​ ನೀಡುತ್ತದೆ. ಸ್ನಾಪ್​ ಡ್ರ್ಯಾಗನ್​ 855+ Soc ಪ್ರೊಸೆಸರ್​ ಹೊಂದಿದ್ದು. 8GB RAM​ ಮತ್ತು 256GB ಇಂಟಲ್​ನಲ್​​​ ಸ್ಟೊರೇಜ್​ ಆಯ್ಕೆಯನ್ನು ಒಳಗೊಂಡಿದೆ.

 


ಒನ್​ಪ್ಲಸ್​ 7T ಸ್ಮಾರ್ಟ್​ಫೋನ್​ ತ್ರಿವಳಿ ಕ್ಯಾಮೆರಾವನ್ನು ಹೊಂದಿದ್ದು, 48 ಮೆಗಾಫಿಕ್ಸೆಲ್ ಪ್ರೈಮರಿ ಸೆನ್ಸಾರ್​​ + 12 ಟೆಲಿಫೋಟೋ ಲೆನ್ಸ್​ + 16 ಮೆಗಾಫಿಕ್ಸೆಲ್​ ಅಲ್ಟ್ರಾ ವೈಡ್​ ಆ್ಯಂಗಲ್​ ಸೆನ್ಸಾರ್​ ಲೆನ್ಸ್​ ಅಳವಡಿಸಲಾಗಿದೆ. ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಲಾಗಿದೆ.

‘ಒನ್​ಪ್ಲಸ್​ 7T‘ ಸ್ಮಾರ್ಟ್​ಫೋನ್​ನಲ್ಲಿ  3,800mAh​ ಬ್ಯಾಟರಿಯನ್ನು ಅಳವಡಿಸಲಾಗಿದೆ. ಒನ್​ಪ್ಲಸ್​ 7 ಪ್ರೋ ಹೊಲಿಕೆಯಂತಿಯಂತಿರುವ ನೂತನ ಸ್ಮಾರ್ಟ್​ಫೋನ್​ ನೆಬುಲಾ ಬ್ಲೂ ವೆರಿಯಂಟ್​ನಲ್ಲಿ ಗ್ರಾಹಕರಿಗೆ ದೊರೆಕಲಿದೆ. ಕಂಪೆನಿ ಈ ಸ್ಮಾರ್ಟ್​ಫೋನ್​ ಬೆಲೆಯ ಬಗೆಗೆ ಇನ್ನೂ ಬಹಿರಂಗ ಪಡಿಸಿಲ್ಲ.

‘ಒನ್​ಪ್ಲಸ್​ 7T‘ ಸ್ಮಾರ್ಟ್​ಫೋನ್​ ವಿಶೇಷತೆಗಳು

ಡಿಸ್​​ಪ್ಲೇ: 6.55 ಇಂಚಿನ ಅಮೋಲ್ಡ್​ ಡಿಸ್​ಪ್ಲೇ

ಪ್ರೊಸೆಸರ್​​: ಸ್ನಾಪ್​ ಡ್ರ್ಯಾಗನ್​ 855+ Soc

RAM​: 8GB RAM

ಸ್ಟೊರೇಜ್​: 8GB RAM

ಹಿಂಭಾಗದ ಕ್ಯಾಮೆರಾ: 48 ಮೆಗಾಫಿಕ್ಸೆಲ್ ಪ್ರೈಮರಿ ಸೆನ್ಸಾರ್​​ + 12 ಟೆಲಿಫೋಟೋ ಲೆನ್ಸ್​ + 16 ಮೆಗಾಫಿಕ್ಸೆಲ್​ ಅಲ್ಟ್ರಾ ವೈಡ್​ ಆ್ಯಂಗಲ್​ ಸೆನ್ಸಾರ್​ ಲೆನ್ಸ್

ಸೆಲ್ಫಿ ಕ್ಯಾಮೆರಾ: 16 ಮೆಗಾಫಿಕ್ಸೆಲ್

ಬ್ಯಾಟರಿ: 3,800mAh 
First published:September 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading