7 ವರ್ಷಗಳನ್ನು ಪೂರ್ಣಗೊಳಿಸಿದ OnePlus: ಈ ಸಂಭ್ರಮದಲ್ಲಿ ಗ್ರಾಹಕರಿಗೆ ನೀಡುತ್ತಿದೆ ಬಿಗ್ ಆಫರ್

ನೀವು ರೆಡ್ ಕೇಬಲ್ ಕ್ಲಬ್ ಸದಸ್ಯರಾಗಿದ್ದರೆ, ನೀವು ಡಿಸೆಂಬರ್ 17 ರಂದು OnePlus ಸೇವಾ ಕೇಂದ್ರಗಳಿಗೆ ಭೇಟಿ ನೀಡಿದಲ್ಲಿ ಸ್ಮಾರ್ಟ್‌ಫೋನ್ ಬಿಡಿಭಾಗಗಳ ಮೇಲೆ 15% ರಿಯಾಯಿತಿ, ಸೇವಾ ಶುಲ್ಕರಹಿತ ಸ್ಮಾರ್ಟ್‌ಫೋನ್ ರಿಪೇರಿ ಮತ್ತು OnePlus ಗುಡಿಗಳನ್ನು 'ಬೌಲ್ ಆಫ್ ಹ್ಯಾಪೀನೆಸ್' ಲಕ್ಕೀ ಡ್ರಾ ಮೂಲಕ ಗೆಲ್ಲುವ ಅವಕಾಶವನ್ನು ಪಡೆಯಬಹುದು.

ಒನ್​ಪ್ಲಸ್

ಒನ್​ಪ್ಲಸ್

 • Share this:
  ಏಳು ವರ್ಷಗಳ ಹಿಂದೆ, ಒಂದು ಸ್ಮಾರ್ಟ್‌ಫೋನ್ ಕಂಪನಿಯ ಉಗಮವಾಗುತ್ತದೆ, ಅದು ಶೀಘ್ರದಲ್ಲೇ ಜಾಗತಿಕ ವಿದ್ಯಮಾನವಾಗಿ ಪರಿಣಮಿಸುತ್ತದೆ, ಆಗ ಅದನ್ನು ಕೈಗೆಟುಕುವ ಶ್ರೇಣಿಯ ಫ್ಲ್ಯಾಗ್‌ಶಿಪ್ ಕಿಲ್ಲರ್ ಸ್ಮಾರ್ಟ್‌ಫೋನ್‌ಗಳು ಎಂದು ಕರೆಯಲಾಗುತ್ತಿತ್ತು. ಕಾಲ ಕ್ರಮಿಸಿದಂತೆ, OnePlus, OnePlus ಟಿವಿಗಳಂತಹ ಹಲವಾರು ಉತ್ಪನ್ನಗಳನ್ನು ಸಹ ಬಿಡುಗಡೆ ಮಾಡಿತು. ಈ ವರ್ಷ, ಕಂಪನಿಯು ಹೊಸ ಉತ್ಪನ್ನದ ಸಾಲಿನ OnePlus Nord ಅನ್ನು INR 24,999 ಬೆಲೆಯಿಂದ ಪ್ರಾರಂಭಿಸುತ್ತದೆ, ಇದು Q3 2020 ರ ಇತ್ತೀಚಿನ ಕೌಂಟರ್ಪಾಯಿಂಟ್ ತ್ರೈಮಾಸಿಕ ವರದಿಯ ಪ್ರಕಾರ ಭಾರತದ ಕೈಗೆಟುಕುವ ಪ್ರೀಮಿಯಂ ವಿಭಾಗದಲ್ಲಿ ನಂ.1 ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ ಆಗಿ ಮಾರ್ಪಟ್ಟಿದೆ. ವಿವಿಧ ಕೈಗೆಟುಕುವ ಬೆಲೆಯಲ್ಲಿ ಸಂಪರ್ಕಿತ ಪರಿಸರ ವ್ಯವಸ್ಥೆಯನ್ನು ರಚಿಸುವ ಅನ್ವೇಷಣೆಯಲ್ಲಿ OnePlus Bullets Wireless Z ಮತ್ತು OnePlus Buds Z ಅನ್ನು ಪ್ರಾರಂಭಿಸುವುದರೊಂದಿಗೆ ಅದು ತನ್ನ ಆಡಿಯೊ ಉತ್ಪನ್ನಗಳ ಕೊಡುಗೆಗಳನ್ನು ವಿಸ್ತರಿಸಿದೆ.

  OnePlus ಪ್ರಾರಂಭವಾದಾಗಿನಿಂದಲೂ ಬದಲಾಗದೇ ಉಳಿದುಕೊಂಡಿರುವ ಒಂದು ವಿಷಯವೆಂದರೆ, ಅವರ ಪ್ರತಿಕ್ರಿಯೆಯನ್ನು ಆಲಿಸಿ ಮತ್ತು ಪ್ರತಿ ಪುನರಾವರ್ತನೆಯೊಂದಿಗೆ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಸುಧಾರಿಸುತ್ತಾ ನಡೆದಿರುವ ಕಂಪನಿಯೊಂದಿಗೆ ಉಳಿದುಕೊಂಡಿರುವ ಅಭಿಮಾನಿಗಳ ಸಮುದಾಯ.ಈ ಕಾರಣವೇ ಕಂಪನಿಯು ಭಾರತದ ಅಗ್ರ ಸ್ಮಾರ್ಟ್‌ಫೋನ್ ಕಂಪನಿಯಾಗಲು ಸಹಾಯ ಮಾಡಿತು. OnePlus ತನ್ನ ಏಳನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಂತೆ, ಹಿಂದೆಂದೂ ನೋಡಿರದ ಕೆಲವು ಡೀಲ್‌ಗಳು ಮತ್ತು ಕೊಡುಗೆಗಳನ್ನು ಈ ಸಮುದಾಯ ನೋಡಲಿದೆ. ಪ್ರಸ್ತುತ ನಡೆಯುತ್ತಿರುವ ಅವರ 7 ವರ್ಷಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ನೀವು ಮಿಸ್ ಮಾಡಲು ಬಯಸದ OnePlus ನ ಎಲ್ಲಾ ಡೀಲ್‌ಗಳು ಮತ್ತು ಕೊಡುಗೆಗಳನ್ನು ನಾವು ನಿಮಗಾಗಿ ಪಟ್ಟಿಮಾಡಿ ನೀಡುತ್ತಿದ್ದೇವೆ.

  ಕೆಳಗಿನ ಕೊಡುಗೆಗಳನ್ನು ಪಡೆಯಲು OnePlus.in ಮತ್ತು OnePlus ಸ್ಟೋರ್ ಆ್ಯಪ್‌‌ಗೆ ಲಾಗ್ ಇನ್ ಮಾಡಿ:

  HDFC Bank ಕಾರ್ಡ್ ವಹಿವಾಟುಗಳು ಮತ್ತು ಸುಲಭ EMI ಆಯ್ಕೆಗಳೊಂದಿಗೆ ನೀವು INR 2000 ತ್ವರಿತ ರಿಯಾಯಿತಿಯನ್ನು ಪಡೆಯಬಹುದು, ಮತ್ತು OnePlus.in, OnePlus ಸ್ಟೋರ್ ಆ್ಯಪ್‌ ಮತ್ತು Amazon.in ನಿಂದ OnePlus ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವಾಗ ಆಯ್ದ American Express® ಕಾರ್ಡ್ ವಹಿವಾಟಿನಲ್ಲಿ 10% ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು.

  ನೀವು OnePlus ಸ್ಟೋರ್ ಆ್ಯಪ್‌‌ನಲ್ಲಿ OnePlus ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದರೆ ನೀವು ಪೂರಕ INR 500 ರಿಯಾಯಿತಿ ವೌಚರ್ ಪಡೆಯಬಹುದು. ನೀವು OnePlus ಪವರ್ ಬ್ಯಾಂಕ್ ಅನ್ನು INR 777 ರ ವಿಶೇಷ ಬೆಲೆಗೆ ಖರೀದಿಸಬಹುದು ಮತ್ತು ಡಿಸೆಂಬರ್ 17 ರಿಂದ ಎಲ್ಲಾ OnePlus ಆಡಿಯೊ ಉತ್ಪನ್ನಗಳಿಗೆ 10% ರಿಯಾಯಿತಿ ಪಡೆಯಬಹುದು.

  ಇದಲ್ಲದೆ, ನೀವು ಡಿಸೆಂಬರ್ 17 ರಂದು OnePlus ಸ್ಟೋರ್ ಆ್ಯಪ್‌‌ನಲ್ಲಿನ “ಸ್ಪಿನ್ ದಿ ವೀಲ್” ಚಟುವಟಿಕೆಯಲ್ಲಿ ಭಾಗವಹಿಸಬಹುದು ಮತ್ತು ಅತ್ಯಾಕರ್ಷಕ OnePlus ಗುಡಿಗಳನ್ನು ಗೆಲ್ಲಬಹುದು. ಹಾಗೆಯೇ, ನೀವು OnePlus ಸ್ಟೋರ್ ಆ್ಯಪ್‌‌ನಲ್ಲಿ ದಿ ಗ್ರೇಟ್ OnePlus ಲಕ್ಕಿ ಡಿಪ್‌ನಲ್ಲಿ ಭಾಗವಹಿಸಬಹುದು ಮತ್ತು ಪ್ರತಿದಿನವೂ ಅತ್ಯಾಕರ್ಷಕ OnePlus ಉತ್ಪನ್ನಗಳನ್ನು ಗೆಲ್ಲಬಹುದು.

  ರೆಡ್ ಕೇಬಲ್ ಕ್ಲಬ್ ಸದಸ್ಯರು ಈ ಕೆಳಗಿನ ಆ್ಯನಿವರ್ಸಯರೀ ವಿಶೇಷ ಕೊಡುಗೆಗಳನ್ನು ಪಡೆಯಬಹುದು:

  ಕಂಪನಿಯು ಇತ್ತೀಚೆಗೆ OnePlus ರೆಡ್ ಕೇಬಲ್ ಲೈಫ್ ಅನ್ನು ಪರಿಚಯಿಸಿತು, ಇದು ರೆಡ್ ಕೇಬಲ್ ಕೇರ್ ಯಶಸ್ಸಿನ ನಂತರ ಹೊಸ ಅನುಕೂಲಗಳ ಪ್ರಸ್ತಾಪವಾಗಿದೆ. ರೆಡ್ ಕೇಬಲ್ ಲೈಫ್‌ನ ಭಾಗವಾಗಿದ್ದಕ್ಕಾಗಿ ನೀವು 12 ತಿಂಗಳ ವಿಸ್ತೃತ ವಾರೆಂಟೀ, 12 ತಿಂಗಳ 50 GB ಕ್ಲೌಡ್ ಸ್ಟೋರೇಜ್ ಮತ್ತು ಆದ್ಯತೆಯ ಸೇವೆ ಮತ್ತು Amazon Primeನ ಹೆಚ್ಚುವರಿ 12 ತಿಂಗಳ ಪೂರಕ ಸದಸ್ಯತ್ವವನ್ನು INR 999 ಬೆಲೆಯ ರಿಯಾಯಿತಿ ದರದಲ್ಲಿ ಪಡೆಯಬಹುದು.

  ನೀವು OnePlus Privé ನಲ್ಲಿನ ವಿಶೇಷ ಆ್ಯನಿವರ್ಸಯರೀ ಲಕ್ಕಿ ಡ್ರಾದಲ್ಲಿ ಭಾಗವಹಿಸಬಹುದು ಮತ್ತು ಡಿಸೆಂಬರ್ 17 ರಂದು ರೋಚಕ ಬಹುಮಾನಗಳನ್ನು ಗೆಲ್ಲಬಹುದು. ಡಿಸೆಂಬರ್ 17 ರಿಂದ, OnePlus 3 ಯಿಂದ 6T ಡಿವೈಸ್ ಬಳಕೆದಾರರಾಗಿರುವ ಮತ್ತು OnePlus 8, 8 Pro ಅಥವಾ 8T ಗೆ ಅಪ್‌ಗ್ರೇಡ್ ಮಾಡಲು ಸಿದ್ಧರಿರುವ ರೆಡ್ ಕೇಬಲ್ ಕ್ಲಬ್ ಸದಸ್ಯರು ಪೂರಕ ರೆಡ್ ಕೇಬಲ್ ಪ್ರೊ ಸದಸ್ಯತ್ವ ಮತ್ತು OnePlus ಪವರ್ ಬ್ಯಾಂಕ್ ಅನ್ನು ಸಹ ಪಡೆಯಬಹುದು. ಸದಸ್ಯರು ರೆಡ್ ಕೇಬಲ್ ಪ್ರೊ ಮತ್ತು ರೆಡ್ ಕೇಬಲ್ ಪ್ರೊಗಾಗಿ ಹೊಸ ಚಂದಾದಾರಿಕೆ ಯೋಜನೆಗಳನ್ನು Amazon Prime ನೊಂದಿಗೆ ರೆಡ್ ಕೇಬಲ್ ಪ್ರಿವ್ನಲ್ಲಿ ಡಿಸೆಂಬರ್ 25 ರಿಂದ ಅತ್ಯಾಕರ್ಷಕ ಬೆಲೆಗೆ ಖರೀದಿಸಬಹುದು.

  ನೀವು ಡಿಸೆಂಬರ್ ಅಂತ್ಯದವರೆಗೆ ರೆಡ್ ಕೇಬಲ್ ಪ್ರೊ ಸದಸ್ಯತ್ವದಲ್ಲಿ ಈ ಕೆಳಗಿನ ಪ್ರಯೋಜನವನ್ನು ಪಡೆಯಬಹುದು, ಇದರಲ್ಲಿ ನೀವು ಯಾವುದೇ OnePlus ಸ್ಮಾರ್ಟ್‌ಫೋನ್ ಅನ್ನು OnePlus ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳಲ್ಲಿ ಖರೀದಿಸಬಹುದು ಮತ್ತು ರೆಡ್ ಕೇಬಲ್ ಕೇರ್ ಸದಸ್ಯತ್ವವನ್ನು (INR 2499 ಮೌಲ್ಯದ) ಕೇವಲ INR 99 ಗೆ ಪಡೆಯಬಹುದು ಅಥವಾ ಯಾವುದೇ OnePlus ಸ್ಮಾರ್ಟ್‌ಫೋನ್ ಅನ್ನು OnePlus ಸ್ಟೋರ್ ಆ್ಯಪ್‌ನಲ್ಲಿ ಖರೀದಿಸಬಹುದು ಮತ್ತು ಪೂರಕ ರೆಡ್ ಕೇಬಲ್ ಕೇರ್ ಸದಸ್ಯತ್ವವನ್ನು ಪಡೆಯಬಹುದು.

  ಆ್ಯನಿವರ್ಸಯರೀ ಆಚರಣೆಯ ಸಂದರ್ಭದಲ್ಲಿ OnePlus ಆಫ್‌ಲೈನ್ ಸ್ಟೋರ್‌ಗಳಿಗೆ ಭೇಟಿ ನೀಡುವ ಪ್ರಯೋಜನಗಳು:

  ಡಿಸೆಂಬರ್ 17 ರಂದು, OnePlus ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳಲ್ಲಿನ ಮೊದಲ 10 OnePlus 8T ಗ್ರಾಹಕರು ಪೂರಕ INR 3000 ಬೆಲೆಯ ಆಕ್ಸೆಸರೀಸ್ ಕೂಪನ್ ಪಡೆಯಲಿದ್ದಾರೆ. ಅಂತೆಯೇ, 11 ರಿಂದ 30 ನೇ OnePlus 8T ಗ್ರಾಹಕರು, ಮತ್ತು 30 ರಿಂದ 70 ನೇ 8T ಗ್ರಾಹಕರು ಕ್ರಮವಾಗಿ ಪೂರಕ INR 2000 ಮತ್ತು INR 500 ಆಕ್ಸೆಸರೀಸ್ ಕೂಪನ್‌ಗಳನ್ನು ಪಡೆಯಲಿದ್ದಾರೆ. ಕೂಪನ್‌ಗಳು ಖರೀದಿಯ ದಿನಾಂಕದಿಂದ ಪ್ರಾರಂಭವಾಗುವ ಒಂದು ತಿಂಗಳ ಅವಧಿಗೆ ಮಾನ್ಯವಾಗಿರುತ್ತವೆ. HDFC ಕಾರ್ಡ್ ವಹಿವಾಟಿನಲ್ಲಿ ನೀವು INR 200 ವರೆಗೆ ತ್ವರಿತ ರಿಯಾಯಿತಿಯನ್ನು ಸಹ ಪಡೆಯಬಹುದು. ನೀವು ಸ್ಟೋರ್‌ಗಳಲ್ಲಿ Bajaj Finance ‌ನೊಂದಿಗೆ ಕೈಗೆಟುಕುವ ಯೋಜನೆಗಳನ್ನು ಸಹ ಪಡೆಯಬಹುದು.

  ನೀವು ರೆಡ್ ಕೇಬಲ್ ಕ್ಲಬ್ ಸದಸ್ಯರಾಗಿದ್ದರೆ, ನೀವು ಡಿಸೆಂಬರ್ 17 ರಂದು OnePlus ಸೇವಾ ಕೇಂದ್ರಗಳಿಗೆ ಭೇಟಿ ನೀಡಿದಲ್ಲಿ ಸ್ಮಾರ್ಟ್‌ಫೋನ್ ಬಿಡಿಭಾಗಗಳ ಮೇಲೆ 15% ರಿಯಾಯಿತಿ, ಸೇವಾ ಶುಲ್ಕರಹಿತ ಸ್ಮಾರ್ಟ್‌ಫೋನ್ ರಿಪೇರಿ ಮತ್ತು OnePlus ಗುಡಿಗಳನ್ನು 'ಬೌಲ್ ಆಫ್ ಹ್ಯಾಪೀನೆಸ್' ಲಕ್ಕೀ ಡ್ರಾ ಮೂಲಕ ಗೆಲ್ಲುವ ಅವಕಾಶವನ್ನು ಪಡೆಯಬಹುದು. ರೆಡ್ ಕೇಬಲ್ ಕ್ಲಬ್ ಸದಸ್ಯರಾಗಿ, ನಿಮ್ಮ ಹಳೆಯ OnePlus ಡಿವೈಸ್ ಅನ್ನು ಹೊಸದಕ್ಕೆ ವಿನಿಮಯ ಮಾಡಿಕೊಳ್ಳಲು ನೀವು INR 3000 ಗಳ ರಿಯಾಯಿತಿಯನ್ನು ಸಹ ಪಡೆಯಬಹುದು.

  ಇವೆಲ್ಲದರ ಜೊತೆಗೆ, ನೀವು Amazon.in ‌ನಲ್ಲಿ OnePlus 8T 5G ಮತ್ತು OnePlus 8 Series 5G ಖರೀದಿಸಲು ಯೋಜಿಸಿದ್ದಲ್ಲಿ, ನೀವು ಈಗ HDFC Bank ಕಾರ್ಡ್ ವಹಿವಾಟಿನೊಂದಿಗೆ ಕ್ರಮವಾಗಿ INR 2000 ಮತ್ತು INR 3000 ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಡಿಸೆಂಬರ್ 17 ಮತ್ತು 18 ರಂದು Amazon.in ಮತ್ತು Flipkart ನಲ್ಲಿ ಆಯ್ದ OnePlus ಆಡಿಯೊ ಉತ್ಪನ್ನಗಳಿಗೆ ನೀವು 10% ರಿಯಾಯಿತಿ ಪಡೆಯುಬಹುದು.

  ಈ ಇತ್ತೀಚಿನ OnePlus ಡಿವೈಸ್‌ಗಳನ್ನು ಪಡೆಯಲು ಇದು ಸುಸಮಯ.
  OnePlus ಟಿವಿಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳು:
  ನೀವು OnePlus ಟಿವಿಗಳನ್ನು ಕೊಳ್ಳಲು ಬಯಸಿದ್ದರೆ, ಇದು ನಿಮಗೆ ಹೇಳಿ ಮಾಡಿಸಿದ ಒಂದು ಅವಕಾಶ. OnePlus TV Y series 32 ಇಂಚು ಮತ್ತು 43 ಇಂಚುಗಳ ಮೇಲೆ INR 1000 ಯಷ್ಟು ಮತ್ತಷ್ಟು ರಿಯಾಯಿತಿ ನೀಡಿದ್ದು, ಈಗ ಕ್ರಮವಾಗಿ INR 13,999 ಮತ್ತು INR 23,999 ಬೆಲೆಗೆ ಲಭ್ಯವಾಗಲಿದೆ. HDFC Bank ಕ್ರೆಡಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ EMI, ಮತ್ತು ಡೆಬಿಟ್ ಕಾರ್ಡ್ EMI ವಹಿವಾಟುಗಳೊಂದಿಗೆ ಖರೀದಿಸಿದ ನಂತರ ನೀವು OnePlus ಟಿವಿಗಳಿಗೆ INR 4000 ನಷ್ಟು ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

  ಎಲ್ಲಾ ಪ್ರಮುಖ ಬ್ಯಾಂಕುಗಳ ಕಾರ್ಡ್ ವಹಿವಾಟಿನಲ್ಲಿ OnePlus TVs Y Series ಖರೀದಿಸಿದಾಗ ನೀವು 6 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಅನ್ನು ಆನಂದಿಸಬಹುದು, ಮತ್ತು OnePlus TVs Q1 Series ಖರೀದಿಸಿದ ನಂತರ 12 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಅನ್ನು ನೀವು ಆನಂದಿಸಬಹುದು. ಮೇಲಿನ ಕೊಡುಗೆಗಳು OnePlus.in, OnePlus ಸ್ಟೋರ್‌ಗಳು ಹಾಗೂ Amazon, Flipkart ಮತ್ತು ಇತರ ಪಾಲುದಾರ ಸ್ಟೋರ್‌ಗಳಲ್ಲಿ ಡಿಸೆಂಬರ್ 2020 ರ ಕೊನೆಯವರೆಗೆ ಲಭ್ಯವಿದೆ.
  Published by:zahir
  First published: