ಜಿಯೋ ಗ್ರಾಹಕರಿಗೆ ಭರ್ಜರಿ ಆಫರ್​; 299 ರೀಚಾರ್ಜ್​ ಮಾಡಿ 5 ಸಾವಿರ ನಿಮ್ಮದಾಗಿಸಿ

ಬೆಂಗಳೂರು ಇಂಟರ್​​ ನ್ಯಾಷನಲ್​ ಎಕ್ಸಿಬಿಶನ್ ಸೆಂಟರ್​​​​​ನಲ್ಲಿ ನಡೆದ ಒನ್​​ಪ್ಲಸ್​​ 7 ಸ್ಮಾರ್ಟ್​ಫೋನ್​ ಸರಣಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜಿಯೋ ತನ್ನ ಗ್ರಾಹಕರಿಗಾಗಿ ‘ಜಿಯೋ-ಒನ್‌ಪ್ಲಸ್ 7  ಸೀರಿಸ್ ಬಿಯಾಂಡ್ ಸ್ವೀಡ್ ಆಫರ್​​​‘ ಪರಿಚಯಿಸಿದೆ.

news18
Updated:May 15, 2019, 9:30 PM IST
ಜಿಯೋ ಗ್ರಾಹಕರಿಗೆ ಭರ್ಜರಿ ಆಫರ್​; 299 ರೀಚಾರ್ಜ್​ ಮಾಡಿ 5 ಸಾವಿರ ನಿಮ್ಮದಾಗಿಸಿ
ಜಿಯೋ-ಒನ್‌ಪ್ಲಸ್ 7 ಬಿಯಾಂಡ್ ಸ್ಪೀಡ್ ಆಫರ್:
  • News18
  • Last Updated: May 15, 2019, 9:30 PM IST
  • Share this:
ಬೆಂಗಳೂರು(ಮೇ.14): ಪ್ರೀಮಿಯಂ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿಯಾದ ಒನ್‌ಪ್ಲಸ್ ಇದೀಗ ಪ್ರಪಂಚದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‌ವರ್ಕ್‌ ಜಿಯೋ ಜೊತೆಗೆ ಸಹಯೋಗವನ್ನು ಮುಂದುವರಿಸಿ ಗ್ರಾಹಕರಿಗೆ ಭರ್ಜರಿ ಆಫರ್​​ವೊಂದನ್ನು ನೀಡುತ್ತಿದೆ. ಆನ್​ಲಿಮಿಟೆಡ್​​ ಡೇಟಾದೊಂದಿಗೆ ಒನ್‌ಪ್ಲಸ್ ಮತ್ತು ಜಿಯೋ ಬಳಕೆದಾರರಿಗೆ ಗ್ರಾಹಕ-ಸ್ನೇಹಿ ಕೊಡುಗೆಯೊಂದನ್ನು ಪರಿಚಯಿಸುತ್ತಿದೆ.

ಬೆಂಗಳೂರು ಇಂಟರ್​​ ನ್ಯಾಷನಲ್​ ಎಕ್ಸಿಬಿಶನ್ ಸೆಂಟರ್​​​​​ನಲ್ಲಿ ನಡೆದ ಒನ್​​ಪ್ಲಸ್​​ 7 ಸ್ಮಾರ್ಟ್​ಫೋನ್​ ಸರಣಿ ಬಿಡುಗಡೆ ಕಾರ್ಯಕ್ರಮದಲ್ಲಿ ಜಿಯೋ ತನ್ನ ಗ್ರಾಹಕರಿಗಾಗಿ ‘ಜಿಯೋ-ಒನ್‌ಪ್ಲಸ್ 7  ಸೀರಿಸ್ ಬಿಯಾಂಡ್ ಸ್ವೀಡ್ ಆಫರ್​​​‘ ಪರಿಚಯಿಸುತ್ತಿದೆ. ಈ ಮೂಲಕ ಜಿಯೋ ಬಳಕೆಯ ಒನ್​ಪ್ಲಸ್​ 7, ಒನ್​ಪ್ಲಸ್​ 7 ಪ್ರೋ ಸ್ಮಾರ್ಟ್​ಫೋನ್​ ಗ್ರಾಹಕರಿಗೆ ಈ ಆಫರ್​ ನೀಡುತ್ತಿದೆ.

ಗ್ರಾಹಕರು www.youtube.com/watch?v=tq26eVb_-ww ಮೂಲಕ ಲೈವ್​ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.

ಜಿಯೋ-ಒನ್‌ಪ್ಲಸ್ 7 ಬಿಯಾಂಡ್ ಸ್ಪೀಡ್ ಆಫರ್:

ಗ್ರಾಹಕರು ಬಿಯಾಂಡ್ ಸ್ಪೀಡ್ ಆಫರ್​​ನಡಿಯಲ್ಲಿ ರೂ. 299 ಬೆಲೆಯ ಪ್ರೀಪೇಯ್ಡ್‌ ರಿಚಾರ್ಜ್ ಮಾಡಿಸಿದರೆ ರೂ, 5,400 ತ್ವರಿತ ಕ್ಯಾಷ್‌ಬ್ಯಾಕ್ ದೊರೆಯಲಿದೆ. ಇದು ಮೈ ಜಿಯೋ ಆಪ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ರೂ.150 ಮೌಲ್ಯದ 36 ಕೂಪನ್‌ಗಳು ಬಳಕೆದಾರರಿಗೆ ದೊರೆಯಲಿದೆ. ಇದನ್ನು ಬಳಕೆದಾರರು ರೀಚಾರ್ಜ್ ಮಾಡಿಕೊಳ್ಳುವ ಸಂದರ್ಭದಲ್ಲಿ ಬಳಸಬಹುದಾಗಿದೆ. ಇದರಿಂದಾಗಿ ಗ್ರಾಹಕರಿಗೆ ರೂ. 299 ಮೌಲ್ಯದ ರೀಚಾರ್ಜ್‌ ಕೇವಲ ರೂ. 149ಕ್ಕೆ ದೊರೆಯಲಿದೆ. ಈ ಯೋಜನೆಯು 4G ವೇಗದಲ್ಲಿ 3GB  ಡೇಟಾವನ್ನು ನೀಡಲಿದೆ, ಅಂತೆಯೇ, ಈ ಆಫರ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ. ಅಲ್ಲದೇ, ಅನಿಯಮಿತ ಕರೆಗಳು, ಎಸ್ಎಂಎಸ್, ಜಿಯೋ ಟಿವಿ, ಜಿಯೋ ಸಿಮೆನಾ, ಜಿಯೋ ನ್ಯೂಸ್ ಉಚಿತವಾಗಿ ನೀಡುತ್ತಿದೆ. ಇದರೊಂದಿಗೆ ರೂ 3,900  ಹೆಚ್ಚುವರಿ ಪಾಲುದಾರ ಪ್ರಯೋಜನಗಳು ದೊರೆಯಲಿದೆ.

ಜೂಮ್‌ ಕಾರ್ ನಲ್ಲಿ ರೂ.2000 ಅಥವಾ 20% ವರೆಗೆ ಕಡಿತವನ್ನು, ಇಸಿ ಮೈಟ್ರಿಪ್ ನಲ್ಲಿ ಫ್ಲೈಟ್ ಟಿಕೆಟ್​​ಗಳು, ಹೋಟೆಲ್ ಬುಕಿಂಗ್​​ನಲ್ಲಿ ರೂ.1550 ಮತ್ತು ಬಸ್ ಬುಕಿಂಗ್​ನಲ್ಲಿ 15% ಕಡಿತವವನ್ನು ಮಾಡುತ್ತಿದೆ.ಅಂತೆಯೇ, ಚಂಬಕ್​​ನಲ್ಲಿ ರೂ. 1699 ವೆಚ್ಚ ಮಾಡಿದರೆ ರೂ. 350 ರಷ್ಟು ಕಡಿತವನ್ನು ಪಡೆಯಬಹುದಾಗಿದೆ.

ಜಿಯೋ ಬಳಕೆಯ ಗ್ರಾಹಕರು ಮತ್ತು ಹೊಸ ಜಿಯೋ ಬಳಕೆದಾರರು ಒನ್‌ಪ್ಲಸ್ 7 ಮತ್ತು ಒನ್‌ಪ್ಲಸ್ 7 ಪ್ರೋ ಸ್ಮಾರ್ಟ್‌ಪೋನ್ ಮೇ 19, 2019 ನಂತರ ಖರೀದಿಸಬೇಕಾಗಿದೆ. ಖರೀದಿಸಿದ ನಂತರದಲ್ಲಿ ಈ ಯೋಜನೆಯ ಲಾಭವನ್ನು ಪಡೆಯಲು www.jio.com, ರಿಲಯನ್ಸ್ ಡಿಜಿಟಲ್ ಅಂಗಡಿಗಳು, ಮೈ ಜಿಯೋ ಸ್ಟೋರ್ಸ್, ಮೈ ಜಿಯೊ ಅಪ್ಲಿಕೇಶನ್​​ನಲ್ಲಿ ರೂ.299ಕ್ಕೆ ಮೊದಲ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ. ನಂತರ ವೋಚರ್ ಮೂಲಕ ರಿಚಾರ್ಜ್ ಮಾಡಿಕೊಳ್ಳಲು MyJio ಆಪ್ ಬಳಕೆ ಮಾಡಿಕೊಳ್ಳಬೇಕಾಗಿದೆ. ಇಲ್ಲಿ ಮಾತ್ರವೇ ಕ್ಯಾಷ್ ಬ್ಯಾಕ್ ಲಾಭ ದೊರೆಯಲಿದೆ.'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'

First published:May 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading