ಪಾಪ್ ಅಪ್ ಸೆಲ್ಫಿ ಕ್ಯಾಮೆರಾದ ಮೂಲಕ ಮಾರುಕಟ್ಟೆಗೆ ಧಾವಿಸಿದ ಒನ್​​ಪ್ಲಸ್​​ 7 ಪ್ರೋ: ಹೇಗಿದೆ ಗೊತ್ತಾ?

OnePlus 7 Pro: ವಿಶೇಷವೆಂದರೆ ಒನ್​ ಪ್ಲಸ್​7 ಪ್ರೋ ಸ್ಮಾರ್ಟ್​ಫೋನ್​ನಲ್ಲಿ ಸೆಲ್ಫಿ ತೆಗೆಯಲು ಯೋಗ್ಯವಾದ 16 ಮೆಗಾಪಿಕ್ಸೆಲ್​ನ ಪಾಪ್​ ಅಪ್​ ಕ್ಯಾಮೆರಾವನ್ನು ನೀಡಿದ್ದಾರೆ.

news18
Updated:May 15, 2019, 6:58 PM IST
ಪಾಪ್ ಅಪ್ ಸೆಲ್ಫಿ ಕ್ಯಾಮೆರಾದ ಮೂಲಕ ಮಾರುಕಟ್ಟೆಗೆ ಧಾವಿಸಿದ ಒನ್​​ಪ್ಲಸ್​​ 7 ಪ್ರೋ: ಹೇಗಿದೆ ಗೊತ್ತಾ?
OnePlus 7 Pro: ವಿಶೇಷವೆಂದರೆ ಒನ್​ ಪ್ಲಸ್​7 ಪ್ರೋ ಸ್ಮಾರ್ಟ್​ಫೋನ್​ನಲ್ಲಿ ಸೆಲ್ಫಿ ತೆಗೆಯಲು ಯೋಗ್ಯವಾದ 16 ಮೆಗಾಪಿಕ್ಸೆಲ್​ನ ಪಾಪ್​ ಅಪ್​ ಕ್ಯಾಮೆರಾವನ್ನು ನೀಡಿದ್ದಾರೆ.
  • News18
  • Last Updated: May 15, 2019, 6:58 PM IST
  • Share this:
ಪ್ರತಿಷ್ಠಿತ ಒನ್​ಪ್ಲಸ್​ ಸ್ಮಾರ್ಟ್​ಫೋನ್​ ತಯಾರಿಕ ಸಂಸ್ಥೆ  ‘ಒನ್​ಪ್ಲಸ್​ 7 ಪ್ರೋ‘ ಹೆಸರಿನ ನೂತನ ಸ್ಮಾರ್ಟ್​ಫೋನ್​ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.   ವಿಶೇಷ ಫೀಚರ್​ಗಳನ್ನು ಮತ್ತು ನೂತನ ತಂತ್ರಜ್ಞಾನವನ್ನು  ಅಳವಡಿಸಿಕೊಂಡಿರುವ ‘ಒನ್​ಪ್ಲಸ್​7‘ ಸ್ಮಾರ್ಟ್​ಫೋನ್​ ಗ್ರಾಹಕರ ಮನಗೆದ್ದಿದೆ.

ನೂತನ ಒನ್​ಪ್ಲಸ್​ 7 ಪ್ರೋ ಸ್ಮಾರ್ಟ್​ಫೋನ್​ 6.67 ಇಂಚಿನ HD+ ಅಮೋಲ್ಡ್​​ ಡಿಸ್​​ಪ್ಲೇಯನ್ನು ಹೊಂದಿದೆ.  ಸ್ನಾಪ್​ಡ್ರಾಗನ್​​​ 855 ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ.  ಬಳಕೆ ಯೋಗ್ಯವಾದ 12 GB RAM ನೀಡಲಾಗಿದೆ. ಅಂತೆಯೇ, ಸ್ಮಾರ್ಟ್​ಫೋನ್​ ವೇಗವಾಗಿ ಕೆಲಸ ಮಾಡಲು ರ್ಯಾಮ್​ ಬೂಸ್ಟರ್​ ಎಂಬ ಹೊಸ ವೈಶಿಷ್ಯವನ್ನು ಅಳವಡಿಸಲಾಗಿದೆ

ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಮೂರು ಕ್ಯಾಮೆರಾಗಳನ್ನು ನೀಡಲಾಗಿದೆ. ಸಂದರ್ಭವನ್ನು ಸೆರೆಹಿಡಿಯಲು 48 ಮೆಗಾಫಿಕ್ಸೆಲ್​​ + 16 ಮೆಗಾಫಿಕ್ಸೆಲ್​ + 8 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ವಿಶೇಷವೆಂದರೆ ಒನ್​ ಪ್ಲಸ್​7 ಪ್ರೋ ಸ್ಮಾರ್ಟ್​ಫೋನ್​ನಲ್ಲಿ ಸೆಲ್ಫಿ ತೆಗೆಯಲು ಯೋಗ್ಯವಾದ 16 ಮೆಗಾಪಿಕ್ಸೆಲ್​ನ ಪಾಪ್​ ಅಪ್​ ಕ್ಯಾಮೆರಾವನ್ನು ನೀಡಿದ್ದಾರೆ.

ದೀರ್ಘ ಕಾಲದ ಬಾಳಿಕೆಗಾಗಿ 4,000 mAh ಬ್ಯಾಟರಿಯನ್ನು ಹೊಂದಿದೆ, ಸೂಪರ್​ಫಾಸ್ಟ್​​ ಫೀಚರ್​ ಅಳವಡಿಕೆಯಿಂದಾಗಿ 20 ನಿಮಿಷದಲ್ಲಿ ಬ್ಯಾಟರಿ ಚಾರ್ಜ್​ ಆಗುತ್ತದೆ.

ಇದನ್ನೂ ಓದಿ: ಕೂದಲು ಉದುರುವಿಕೆಗೆ ಪ್ರಮುಖವಾಗಿ ಏನು ಕಾರಣ ಗೊತ್ತಾ?

ಒನ್​ಪ್ಲಸ್​ 7 ಪ್ರೋ ವಿಶೇಷತೆಗಳು:ಡಿಸ್​ಪ್ಲೇ : 6.67 ಇಂಚಿನ HD+ ಅಮೋಲ್ಡ್​​ ಡಿಸ್​​ಪ್ಲೇ
ಪ್ರೊಸೆಸರ್​ : ಸ್ನಾಪ್​ಡ್ರಾಗನ್​​​ 855 ಪ್ರೊಸಸರ್

ಕ್ಯಾಮೆರಾ : 48 ಮೆಗಾಫಿಕ್ಸೆಲ್​​ + 16 ಮೆಗಾಫಿಕ್ಸೆಲ್​ + 8 ಮೆಗಾಫಿಕ್ಸೆಲ್​ ಕ್ಯಾಮೆರಾ
ಫ್ರಂಟ್​ ಕ್ಯಾಮೆರಾ : 16 ಮೆಗಾಪಿಕ್ಸೆಲ್​ ಪಾಪ್​ ಅಪ್​ ಕ್ಯಾಮೆರಾ
ಬ್ಯಾಟರಿ : 4,000 mAh
ರ‍್ಯಾಮ್‌ ಮತ್ತು ಸ್ಟೋರೇಜ್​ : 12 GB RAM
ಬೆಲೆ :  48,999. ರೂ

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'

First published:May 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading