ಅಕ್ಟೋರ್​ಬರ್​ನಲ್ಲಿ ಮಾರುಕಟ್ಟೆಗೆ ಒನ್​ಪ್ಲಸ್​ 6T?


Updated:August 20, 2018, 5:50 PM IST
ಅಕ್ಟೋರ್​ಬರ್​ನಲ್ಲಿ ಮಾರುಕಟ್ಟೆಗೆ ಒನ್​ಪ್ಲಸ್​ 6T?
(Image: SK/ YouTube)

Updated: August 20, 2018, 5:50 PM IST
ಒನ್​ಪ್ಲಸ್​ 6 ಮೊಬೈಲ್​ ಮಾರಾಟದಲ್ಲಿ ಅತ್ಯಂತ ಸಕ್ಸಸ್​ ಕಮಡಿದ್ದ ಸಂಸ್ಥೆ ಇದೀಗ ಈ ಮೊಬೈಲ್​ನ ಅಪ್​ಡೇಟೆಡ್​ ಆವೃತ್ತಿಯನ್ನು ಬಿಡುಗಡೆ ಮಾಡಲು ತೀರ್ಮಾನಿಸಿದೆ.

ಸಿನೆಟ್ ವರದಿ ಪ್ರಕಾರ ಮಂದಿನ ಅಕ್ಟೋಬರ್​ ಅಂತ್ಯದಲ್ಲೇ ಒನ್​ಪ್ಲಸ್​ 6T ಮೊಬೈಲ್​ನಲ್ಲಿ ಮಾರುಕಟ್ಟೆ ಪ್ರವೇಶಿಸಲಿದ್ದು, ಇದೇ ಮೊದಲ ಬಾರಿಗೆ ಈ ಮೊಬೈಲ್​ ಅಮೆರಿಕದಲ್ಲಿ ಬಿಡುಗಡೆಯಾಗಲಿದೆ. ಭಾರತದಂತಹ ಮಾರುಕಟ್ಟೆಯಲ್ಲಿ ಈಗಾಗಲೇ ಹೊಸ ಭರವಸೆ ಮಾಡಿಸಿದ್ದರೂ ಈ ವರೆಗೆ ಅಮೆರಿಕದಲ್ಲಿ ತನ್ನ ಮಾರುಕಟ್ಟೆಯನ್ನು ವ್ಯವಸ್ಥಿತವಾಗಿ ತಲುಪಲು ವಿಫಲವಾಗಿತ್ತು.

ಈವರೆಗೆ ಕೇಳಿಬಂದಿರುವ ಮಾತುಗಳ ಪ್ರಕಾರ, ಈಗಾಗಲೇ ಬಿಡುಗಡೆ ಯಾಗಿರುವ ಒನ್​ ಪ್ಲಸ್​ 6 ಮೊಬೈಲ್​ಗಿಂತ 20 ಡಾಲರ್​ ಅಧಿಕ ಬೆಲೆಯಲ್ಲಿ ಅಂದರೆ ಸುಮಾರು $550 ಒನ್​ಪ್ಲಸ್​ 6T ಮೊಬೈಲ್​ ಬಿಡುಗಡೆಯಾಗಲಿದೆ. ನೂತನ ಮೊಬೈಲ್​ ಕುರಿತಂತೆ ಎರಡು ವಿಡಿಯೋಗಳೂ ಕೂಡಾ ಶೇರ್​ ಆಗಿದೆ. ಈ ಮಾಹಿತಿಗಳು ಅಧಿಕೃತವಾಗಿ ಎಲ್ಲೂ ಲೀಕ್ ಆಗಿಲ್ಲ.

ವಿವಿದ ವೆಬ್​ ಸೈಟ್​​ಗಳಲ್ಲಿ ಬಿಡುಗಡೆಯಾದ ವಿಡಿಯೋ ಮಾಹಿತಿಗಳ ಪ್ರಕಾರ., ನೋಚ್​ ಸ್ಕ್ರೀನ್ ಮತ್ತು ಕ್ಯಾಮೆರಾದಲ್ಲಿ ಬದಲಾವಣೆ ತರಲಾಗಿದೆ. ಹಿಂಭಾಗದಲ್ಲಿ ಮೂರು ಕ್ಯಾಮೆರಾ ತರಲಾಗಿದೆ. ನೋಚ್​ ಡಿಸ್​ಪ್ಲೇಯ ಇಂಚುಗಳಲ್ಲಿ ಬದಲಾವಣೆ ಬಂದಿದೆ. ಆನ್​ ಸ್ಕ್ರೀನ್​ ಫಿಂಗರ್​ ಪ್ರಿಂಟ್​ ಸೆನ್ಸಾರ್​ ವ್ಯವಸ್ಥೆಯಿದೆ. ಎರಡನೇ ವಿಡಿಯೊದಲ್ಲಿ ಒನ್​ಪ್ಲಸ್​ 6T ಮೊಬೈಲ್​ಗೆ ಬೆಜಲ್​ ಗ್ಲಾಸ್​ ವ್ಯವಸ್ಥೆ ನೀಡಲಾಗಿದೆ. ಇದರಲ್ಲೂ ಆನ್​ ಸ್ಕ್ರೀನ್​ ಫಿಂಗರ್​ ಪ್ರಿಂಟ್​ ಸೆನ್ಸಾರ್​ ಕುರಿತು ಉಲ್ಲೇಖಿಸಲಾಗಿದೆ.
First published:August 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...