ಡಿಸ್​ಪ್ಲೇ ಮೇಲೆ ಫಿಂಗರ್​ ಸ್ಕ್ಯಾನಿಂಗ್​ ಆಯ್ಕೆ ಹೊಂದಿದೆ ಒನ್​ಪ್ಲಸ್​ 6t


Updated:September 6, 2018, 5:45 PM IST
ಡಿಸ್​ಪ್ಲೇ ಮೇಲೆ ಫಿಂಗರ್​ ಸ್ಕ್ಯಾನಿಂಗ್​ ಆಯ್ಕೆ ಹೊಂದಿದೆ ಒನ್​ಪ್ಲಸ್​ 6t

Updated: September 6, 2018, 5:45 PM IST
ಸ್ಮಾರ್ಟ್​ಫೊನ್​ ಮಾರುಕಟ್ಟೆಯಲ್ಲಿ ಸೋಲಿಲ್ಲ ಸರದಾರ ಎಂದೇ ಬಿಂಬಿತಗೊಂಡಿರುವ ಒನ್​ಪ್ಲಸ್​ ಮೊಬೈಲ್​ ಕಳೆದ ಒಂದು ತಿಂಗಳಿನಿಂದ ಸಾಕಷ್ಟು ಸುದ್ದಿಯಲ್ಲಿದ್ದು, ನೂತನ ಮೊಬೈಲ್​ ಒನ್​ಪ್ಲಸ್​ 6T ಕುರಿತಾದ ಮಾಹಿತಿಗಳು ದಿನಕ್ಕೊಂದರಂತೆ ಸೋರಿಕೆಯಾಗುತ್ತಿವೆ.

ಬಿಡುಗಡೆಗೂ ಮುನ್ನವೇ ವೈರಲ್​ ಆಗುತ್ತಿರುವ ಒನ್​ಪ್ಲಸ್​ 6t ಕುರಿತಾದ ಚಿತ್ರಗಳು ಸ್ಮಾರ್ಟ್​ಫೋನ್​ ಪ್ರಿಯರಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟು ಹಾಕುತ್ತಲೇಯಿದ್ದು, ಇದೀಗ 'Unlock The Speed' ಎಂಬ ಅಡಿಬರಹದಲ್ಲಿ ಡಿಸ್​ಪ್ಲೇ ಮೇಲೆಯೇ ಸ್ಕ್ರೀನ್​ ಅನ್​ಲಾಕ್​ ಸೆನ್ಸಾರ್​ ವ್ಯವಸ್ಥೆ ಹೊಂದಿರುವ ಮಾಹಿತಿ ಕುರಿತಾದ ಚಿತ್ರ ವೈರಲ್​ ಆಗಿದೆ.

ಚೀನಾದ ಸಾಮಾಜಿಕ ಜಾಲತಾನದ ವೈಬೋದಲ್ಲಿ ಒನ್​ಪ್ಲಸ್​ 6t ಮೊಬೈಲ್​ನ ಚಿತ್ರಗಳು ಸೋರಿಕೆಯಾಗಿದೆ, ಬಿಳಿ ಬಣ್ಣದ ಬಾಕ್ಸ್​ನಲ್ಲಿ 6t ಎಂದು ಬರೆದಿದ್ದು ಈ ಮೊಬೈಲ್​ ಸಂಪೂರ್ಣ ನಾಚ್​ ಸ್ಕ್ರೀನ್​ ಹೊಂದಿರುವ ಕುರಿತು ವರದಿ ಮಾಡಿದೆ. ಈ ಹಿಂದೆ ಸೋರಿಕೆಯಾಗಿದ್ದ ಮಾಹಿತಿಯಲ್ಲಿ 6t ಮೊಬೈಲ್​ಗೆ ಹಿಂಭಾಗದಲ್ಲೇ ಅನ್​ಲಾಕ್​ ಫಿಂಗರ್​ ಸ್ಕ್ಯಾನಿಂಗ್​ ಆಯ್ಕೆಯನ್ನು ನೀಡಲಾಗಿತ್ತು. ಆದರೆ ಇದೀಗ ಡಿಸ್​ಪ್ಲೇ ಮೇಲೆಯೇ ಟಚ್​ ಮಾಡುವ ಮೂಲಕ ಸ್ಕ್ಯಾನಿಂಗ್​ ಆಯ್ಕೆಯನ್ನು ನೀಡಲಾಗಿದೆ.

ಈಗಾಗಲೇ ವಿವೋ X20 Plus, ವಿವೋ X21 ಹಾಗೂ ವಿವೋ ನೆಕ್ಸ್​ ಮತ್ತು ಒಪ್ಪೊ R17 ಮೊಬೈಲ್​ಗಳಲ್ಲಿ ಡಿಸ್​ಪ್ಲೇ ಫಿಂಗರ್​ ಸ್ಕ್ಯಾನಿಂಗ್​ ಆಯ್ಕೆಯನ್ನು ನೀಡಲಾಗಿದೆ.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ