ಹೊಸ ವರ್ಷಕ್ಕೆ ಬಂಪರ್​ ಆಫರ್​; ರಿಯಾಯಿತಿ ದರದಲ್ಲಿ ‘ಒನ್ ಪ್ಲಸ್ 6ಟಿ’ ಮೊಬೈಲ್​

ಕೇವಲ ಮೊಬೈಲ್​ ಅನ್ನು ರಿಯಾಯತಿ ದರದಲ್ಲಿ ಮಾತ್ರವಲ್ಲದೇ ಹಳೆಯ ಮೊಬೈಲ್​ ಅನ್ನು ಹೊಸ ಮೊಬೈಲ್​ನೊಂದಿಗೆ ಎಕ್ಸ್​ಚೆಂಜ್​​ ಮಾಡಿಕೊಳ್ಳುವ ಅವಕಾಶ ಕೂಡ ಇದೆ. ಅಷ್ಟಕ್ಕೂ ಏನಿದು ಆಫರ್, ಎಲ್ಲಿಯವರೆಗೆ ಈ ಆಫರ್​ ಇರಲಿದೆ​ ಎಂಬ ಮಾಹಿತಿ ಇಲ್ಲಿದೆ...

Seema.R | news18
Updated:December 28, 2018, 5:33 PM IST
ಹೊಸ ವರ್ಷಕ್ಕೆ ಬಂಪರ್​ ಆಫರ್​; ರಿಯಾಯಿತಿ ದರದಲ್ಲಿ ‘ಒನ್ ಪ್ಲಸ್ 6ಟಿ’ ಮೊಬೈಲ್​
ಒನ್​ ಪ್ಲಸ್​ 6ಟಿ ಮೊಬೈಲ್​
Seema.R | news18
Updated: December 28, 2018, 5:33 PM IST
ಹೊಸ ವರ್ಷದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು 'ಒನ್​ ಪ್ಲಸ್​ 6ಟಿ' ಮೊಬೈಲ್​ ಸಜ್ಜಾಗಿದೆ. ರಿಯಾಯತಿ ದರದಲ್ಲಿ  ಕ್ಯಾಮೆರಾ, ಅತ್ಯುತ್ತಮ ಫೀಚರ್ಸ್​ ಹೊಂದಿರುವ ಮೊಬೈಲ್​ ಕೊಳ್ಳುವ ಮೂಲಕ ನಿಮ್ಮ ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸಬಹುದಾಗಿದೆ.

ಕೇವಲ ಮೊಬೈಲ್​ ಅನ್ನು ರಿಯಾಯತಿ ದರದಲ್ಲಿ ಮಾತ್ರವಲ್ಲದೇ ಹಳೆಯ ಮೊಬೈಲ್​ ಅನ್ನು ಹೊಸ ಮೊಬೈಲ್​ನೊಂದಿಗೆ ಎಕ್ಸ್​ಚೆಂಜ್​​ ಮಾಡಿಕೊಳ್ಳುವ ಅವಕಾಶ ಕೂಡ ಇದೆ. ಅಷ್ಟಕ್ಕೂ ಏನಿದು ಆಫರ್, ಎಲ್ಲಿಯವರೆಗೆ ಈ ಆಫರ್​ ಇರಲಿದೆ​ ಎಂಬ ಮಾಹಿತಿ ಇಲ್ಲಿದೆ...

ಇತ್ತೀಚೆಗಷ್ಟೆ ಮಾರುಕಟ್ಟೆಗೆ ಬಂದಿರುವ ಒನ್​ ಪ್ಲಸ್​ 6ಟಿ' ಮೊಬೈಲ್​ಗೆ ಈಗಾಗಲೇ ಗ್ಯಾಜೆಟ್​ ಪ್ರಿಯರು ಮನಸೋತಿದ್ದಾರೆ. ದುಬಾರಿ ಬೆಲೆಯಾದರೂ ಅತ್ಯುತ್ತಮ ಮೊಬೈಲ್​ ಎಂದರೆ ಒನ್​ ಪ್ಲಸ್​ 6ಟಿ' ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಹಾಗಾಗಿ ಕಂಪನಿ ಗ್ರಾಹಕರಿಗೆ ಆನ್​ಲೈನ್​ ಮೂಲಕ ಈ ರಿಯಾಯಿತಿ ನೀಡಲು ಮುಂದಾಗಿದೆ.

ಅಮೆಜಾನ್​ ಆನ್​ಲೈನ್​ ಶಾಪಿಂಗ್​ ತಾಣದಲ್ಲಿ ಲಭ್ಯವಿರುವ ಈ ಮೊಬೈಲ್​ಗೆ ಇಎಂಐ ಮೂಲಕ ಕೊಂಡರೆ 1.500 ರೂಗಳು ಡಿಸ್ಕೌಂಟ್​ ಅನ್ನು ಗ್ರಾಹಕರು ಪಡೆಯಬಹುದಾಗಿದೆ. ಆದರೆ ಈ ಆಫರ್​ ಕೊಳ್ಳಬೇಕು ಎಂದರೆ ನೀವು ಎಚ್​ಡಿಎಫ್​ಸಿ ಬ್ಯಾಂಕ್​ ಮೂಲಕ ಮಾತ್ರ ವಹಿವಾಟು ಮಾಡಬೇಕು.

ಇನ್ನು ಹಳೆ ಮೊಬೈಲ್​ನೊಂದಿಗೆ ನೀವು ಎಕ್ಸ್​ಚೆಂಜ್​ ಮೊರೆ ಹೋದರೆ, ನಿಮ್ಮ ಮೊಬೈಲ್​ನ ಮೇಲೆ ಹೆಚ್ಚುವರಿಯಾಗಿ 1.500 ನೀಡಲು ಕಂಪನಿ ಸಿದ್ದವಾಗಿದೆ. ಇನ್ನು ಒನ್​ ಪ್ಲಸ್​ ನೊಂದಿಗೆ ಬದಲಾವಣೆಗೆ ಮುಂದಾದರೆ ಮೊಬೈಲ್​ ಬೆಲೆ ಮೇಲೆ 2000 ಹೆಚ್ಚುವರಿ ರಿಯಾಯಿತಿ ಲಭ್ಯವಾಗಲಿದೆ.

ಸದ್ಯ ಭಾರತದ ಮಾರುಕಟ್ಟೆಯಲ್ಲಿ ಒನ್​ ಪ್ಲಸ್​ 6ಟಿ' ಮೊಬೈಲ್​ ದರ 37,999 ರೂನಿಂದ ಶುರವಾಗಲಿದೆ. 6 GB RAM, 128 GB ಸ್ಟೋರೆಜ್ ಹೊಂದಿದೆ. ಮೊಬೈಲ್​ ಬೆಲೆ ದುಬಾರಿಯಾದಂತೆ ಮೊಬೈಲ್​ ಮೆಮೋರಿ ಸ್ಟೋರೆಜ್​ ಕೂಡ ಅಧಿಕವಾಗಲಿದೆ,

‘ಒನ್ ಪ್ಲಸ್ 6ಟಿ’ ವಿಶೇಷತೆ:
Loading...

‘ಒನ್ ಪ್ಲಸ್ 6ಟಿ ಸ್ಪೋರ್ಟ್’ 6.41 ಇಂಚು ಫುಲ್ ಎಚ್​​ಡಿ (1080x2340), ಓಪ್ಟಿಕ್ ಅಮೋಲ್ಡ್ ಪ್ಯಾನಲ್ ಹೊಂದಿದೆ. ಇನ್ನು ಕ್ವಾಲ್ ಕ್ಯಾಮ್ ಸ್ನಾಪ್ ಡ್ರ್ಯಾಗನ್ 845 ಎಸ್ಒಸಿ ಮತ್ತು 6GB / 8GB RAM ಹೊಂದಿದೆ. 128GB / 256GB ಸ್ಟೋರೆಜ್ ಅವಕಾಶವಿದೆ.

ಇದನ್ನು ಓದಿ: ಶಿಯೋಮಿ ಕಂಪೆನಿಯ ಹೊಸ 'ಮಿ ನೋಟ್​ಬುಕ್​ ಏರ್' ಬಿಡುಗಡೆ: ಏನಿದರ ವಿಶೇಷತೆ?

ಮೊಬೈಲ್ ಡುಯೆಲ್ ಕ್ಯಾಮೆರಾವನ್ನು ಹೊಂದಿದ್ದು 16 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಸೆನ್ಸಾರ್ ಮತ್ತು 20 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಹೊಂದಿದೆ. ಇನ್ನು 3,700mAh ಬ್ಯಾಟರಿಯ ಜೊತೆಗೆ 20w ಫಾಸ್ಟ್ ಚಾರ್ಜರ್ ಒಳಗೊಂಡಿದೆ. ಬ್ಲೂಟೂತ್ v5.0 ಸಪೋರ್ಟ್ ಹೊಂದಿದೆ.

ಇನ್ನು ಈ ಬಂಪರ್​ ಆಫರ್​ ಡಿಸೆಂಬರ್​ 29ರಿಂದ ಜನವರಿ 6ರವರೆಗೆ ಇರಲಿದೆ.

First published:December 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ