ಒನ್​ಪ್ಲಸ್​ 6 ಖರೀದಿಸುವ ಮುನ್ನ ಇದನ್ನು ಓದಿ ಶಾಕ್ ಆಗ್ತೀರ !


Updated:July 27, 2018, 5:04 PM IST
ಒನ್​ಪ್ಲಸ್​ 6 ಖರೀದಿಸುವ ಮುನ್ನ ಇದನ್ನು ಓದಿ ಶಾಕ್ ಆಗ್ತೀರ !

Updated: July 27, 2018, 5:04 PM IST
ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಒನ್​ಪ್ಲಸ್​ ಮೊಬೈಲ್​ಗಳಿಗೆ ಇತರೇ ಕಂಪನಿಗಳಿಂದ ಸಾಕಷ್ಟು ಸ್ಪರ್ಧೆಗಳು ಏರ್ಪಟ್ಟ ಪರಿಣಾಮ ಇತ್ತೀಚೆಗೆ ಬಿಡುಗಡೆಯಾದ ಒನ್​ಪ್ಲಸ್​ 6 ಮೊಬೈಲ್​ 5ಟಿ ಯಷ್ಟು ಪ್ರಮಾಣದಲ್ಲಿ ಸದ್ದು ಮಾಡದೇ ಇದ್ದರೂ ಟೆಕ್​ ಜಗತ್ತಿನಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿತ್ತು.

ಇದೀಗ ಮತ್ತೊಮ್ಮೆ ಒನ್​ ಪ್ಲಸ್​ 6 ಹೆಸರು ಮತ್ತೊಮ್ಮೆ ಚಾಲ್ತಿಗೆ ಬಂದಿದ್ದು, ವಿವೋ ನೆಕ್ಸ್​ ಮತ್ತು ಒಪ್ಪೋ ಫೈಂಡ್​ ಎಕ್ಸ್​ ಮಾದರಿಯಲ್ಲೇ ಪಾಪ್​ ಅಪ್​ ಕ್ಯಾಮೆರಾದೊಂದಿಗೆ ಹೊಸ ಆಯಾಮದಲ್ಲಿ ಒನ್​ ಪ್ಲಸ್​ 6ಟಿ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಟೆಕ್​ ಕ್ಷೇತ್ರದಲ್ಲಿ ಈ ವಿಡಿಯೋ ಹೊಸ ಸಂಚಲನ ಸೃಷ್ಟಿಸಿದೆ.ವಿಡಿಯೋದಲ್ಲಿ ಕಂಡುಬಂದ ಅಂಶಗಳ ಪ್ರಕಾರ ಈ ಫೋನ್​ಗಳು ಕಪ್ಪು , ಬಿಳಿ, ಕೆಂಪು ಹಾಗೂ ನೀಲಿ ಬಣ್ಣಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ. 6.4 ಇಂಚಿನ ಆಪ್ಟಿಕ್​ ಅಮೊಲೆಡ್​ ಡಿಸ್​ಪ್ಲೇ ಹೊಂದಿದೆ. ಇದರ ರಕ್ಷಣೆಗೆ ಗೋರಿಲ್ಲಾ ಗ್ಲಾಸ್​ 6 ಅಳವಡಿಸಲಾಗಿದೆ. ಆ್ಯಂಡ್ರಾಯ್ಡ್​ 8.1 ಒರಿಯೋ ಆಪರೇಟಿಂಗ್​ ಸಿಸ್ಟಂ ಹಾಗೂ 3300mAh ಬ್ಯಾಟರಿ ಸಪೋರ್ಟ್​ ಕೂಡಾ ಇದೆ. ಇದರ ಪ್ರೊಸೆಸರ್​ನಲ್ಲಿ ಯಾವುದೇ ಬದಲಾವಣೆಯಿಲ್ಲ, ಈ ಹಿಂದೆ ಒನ್​ಪ್ಲಸ್​ 6ನಲ್ಲಿ ಬಳಸಲಾಗಿದ್ದ ಸ್ನಾಪ್​ಡ್ರಾಗನ್​ 845 ಪ್ರೊಸೆಸರ್​ ಇಲ್ಲಿ ಬಳಸಲಾಗಿದೆ.

ಕ್ಯಾಮೆರಾದಲ್ಲೇ ಸೆಳೆಯುತ್ತಾ ಒನ್​ಪ್ಲಸ್​ 6ಟಿ
ಇತ್ತೀಚೆಗೆ ಎಲ್ಲಾ ಮೊಬೈಲ್​ಗಳು ಕ್ಯಾಮೆರಾದ ಹಿಂದೆ ಬಿದ್ದ ಪರಿಣಾಮ ಅತ್ಯುತ್ತಮ ಕ್ಯಾಮೆರಾವನ್ನು ತಮ್ಮ ಮೊಬೈಲ್​ಗಳಲ್ಲಿ ಪರಿಚಯ ಮಾಡುತ್ತದೆ, ಅಲ್ಲದೇ ಒನ್​ಪ್ಲಸ್​ ಸಂಸ್ಥೆ ಉತ್ತಮ ಕ್ಯಾಮೆರಾಕ್ಕಾಗಿಯೇ ಹೆಸರು ಕೂಡಾ ಮಾಡಿತ್ತು. ಮಾಹಿತಿಗಳ ಪ್ರಕಾರ ಒನ್​ಪ್ಲಸ್​ 6ಟಿ ಮೊಬೈಲ್​ ಮುಂಭಾಗದಲ್ಲಿ ಸೆಲ್ಫಿ ಪ್ರಿಯರಿಗಾಗಿ 16 ಎಂಪಿಯ ಎರಡು ಕ್ಯಾಮೆರಾ ನೀಡುತ್ತಿದೆ ಎನ್ನಲಾಗಿದೆ. ಹಿಂಭಾಗದಲ್ಲಿ ಮೂರು ಕ್ಯಾಮೆರಾವನ್ನು ನೀಡುತ್ತಿರುವ ಒನ್​ಪ್ಲಸ್​ ಸಂಸ್ಥೆ 16MP, 20MP and 8MP ಸೆನ್ಸಾರ್​ ಒಳಗೊಂಡ ಅತ್ಯುತ್ತಮ ಕ್ಯಾಮೆರಾ ಮೊಬೈಲ್​ ನೀಡುತ್ತಿದೆ.

ಇದಲ್ಲದೇ ಡಿಸ್​ಪ್ಲೇಯಲ್ಲೇ ಫಿಂಗರ್​ ಸ್ಕ್ಯಾನರ್​ ಆಯ್ಕೆಯನ್ನು ನೀಡಲಾಗಿದೆ, ಅಲ್ಲದೇ 3ಡಿ ಫೇಸ್​ ರೀಡಿಂಗ್​ ಆಯ್ಕೆಯನ್ನು ನೀಡಲಾಗಿದೆ. ಅದೇನೆ ಇರಲಿ ಒನ್​ಪ್ಲಸ್​ 6ಟಿ, ಒಪ್ಪೋ, ವಿವೋ ಹಾಗೂ ಹಾನರ್​ ಮೊಬೈಲ್​ಗಳಿಗಿಂತ ಉತ್ತಮ ಮೊಬೈಲ್​ ಎಂದು ಮತ್ತೊಮ್ಮೆ ನಿರೂಪಿಸಲು ಹೊರಟಿದೆ ಎಂದರೆ ತಪ್ಪಾಗುವುದಿಲ್ಲ.
First published:July 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ