ಒನ್ ಪ್ಲಸ್ 6 ಕೆಂಪು ಬಣ್ಣದ ಆವೃತ್ತಿ ಬಿಡುಗಡೆ, ಇಲ್ಲಿದೆ ಬೆಲೆ, ವೈಶಿಷ್ಟ್ಯಗಳ ಮಾಹಿತಿ


Updated:July 3, 2018, 10:27 AM IST
ಒನ್ ಪ್ಲಸ್ 6 ಕೆಂಪು ಬಣ್ಣದ ಆವೃತ್ತಿ ಬಿಡುಗಡೆ, ಇಲ್ಲಿದೆ ಬೆಲೆ, ವೈಶಿಷ್ಟ್ಯಗಳ ಮಾಹಿತಿ

Updated: July 3, 2018, 10:27 AM IST
ಹೊಸ ರೂಪಾಂತರಗೊಂಡು ಮಾರುಕಟ್ಟೆ ಪ್ರವೇಶಿಸುತ್ತಿರುವ ಒನ್ ಪ್ಲಸ್ 6 ಕೆಂಪು ಬಣ್ಣದ ಈ ಆವೃತ್ತಿಯನ್ನು ಜುಲೈ.16ಕ್ಕೆ ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೇ ತಿಂಗಳಿನಲ್ಲಿ ಬಿಡುಗಡೆ ಹೊಂದಿದ ಒನ್​ ಪ್ಲಸ್​ 6 ಅತ್ಯಂತ ಹೆಚ್ಚು ಮಾರಾಟಗೊಂಡ ಮೊಬೈಲ್​ ಪಟ್ಟಿಯಲ್ಲಿ ದಾಖಲಾಗಿತ್ತು. ಇದೀಗ ಈ ಮೊಬೈಲ್​ನ ಕೆಂಪು ಬಣ್ಣದ ಆವೃತ್ತಿಯೂ ಲಾಂಚ್​ ಆಗಿದೆ. ಈ ಕುರಿತು ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿರುವ ಸಂಸ್ಥೆ ರೆಡ್ ವೆರಿಯಂಟ್​ಗೆ ಸಂಬಂಧಿಸಿದ ಟೀಸರ್ ವಿಡಿಯೋ ಒಂದನ್ನು ಕಂಪನಿ ಬಿಡುಗಡೆ ಮಾಡಿದೆ.

Now initiating: C61422. Do you wish to continue? ಎಂದು ಟ್ವಿಟ್ ಮಾಡಿರುವ ಸಂಸ್ಥೆಗೆ ಆರ್ ಜಿ ಬಿ ಕೋಡ್ C61422 ಜಾರಿ ಮಾಡಿತ್ತು.  ಕೆಂಪು ಬಣ್ಣದ ಒನ್ ಪ್ಲಸ್ 6, ಕೇವಲ 8GB RAM ಹಾಗೂ 128 ಜಿಬಿ ಆಂತರಿಕ ಮೆಮೋರಿ ಸ್ಟೋರೇಜ್​ ವ್ಯವಸ್ಥೆಯನ್ನು ಹೊಂದಿದೆ. ತಜ್ಞರ ಪ್ರಕಾರ ಮೊಬೈಲ್ 39,999 ರೂಪಾಯಿಗೆ ಸಿಗಲಿದೆ ಎಂದು ಅಂದಾಜಿಸಲಾಗಿದೆ.

ಒನ್​ ಪ್ಲಸ್​ 6 ವೈಶಿಷ್ಟ್ಯ

ಸ್ಟೋರೇಜ್: 64 GB ಮತ್ತು 128 GB (ಮೆಮೊರಿ ಕಾರ್ಡ್ ಸೌಲಭ್ಯವಿಲ್ಲ)
RAM: 6 GB ಮತ್ತು 8 GB
ಬ್ಯಾಟರಿ: 3300 mAh ಫಾಸ್ಟ್‌ ಚಾರ್ಜಿಂಗ್
Loading...

ಸಾಫ್ಟ್‌ವೇರ್‌: ಆ್ಯಂಡ್ರಾಯ್ಡ್ v8.1 (Oreo) Oxygen OS ಸಹಿತ
Snapdragon™ 845 Qualcomm ಪ್ರೊಸೆಸ್ಸರ್‌

ಡಿಸ್‌ಪ್ಲೇ: 6.28"
ಆಪ್ಟಿಕ್ ಅಮೋಲೆಡ್ Corning Gorilla Glass v5
16 ಎಂಪಿ ಸೆಲ್ಫಿ ಕ್ಯಾಮೆರಾ, Digital Zoom, Auto Flash, Face detection
Exmor-RS CMOS ಸೆನ್ಸರ್, 16 ಎಂಪಿ ಮತ್ತು 20 ಎಂಪಿ ಹಿಂಭಾಗದ ಕ್ಯಾಮೆರಾ.

ಬೆಲೆ: 64 ಜಿಬಿ ಆವೃತ್ತಿಯ ಬೆಲೆ 34,999 ರೂ.
128 ಜಿಬಿ ಆವೃತ್ತಿ ಬೆಲೆ 39,999 ರೂ.
ಮಾರ್ವೆಲ್ ಅವೆಂಜರ್ಸ್‌ ಸೀಮಿತ ಆವೃತ್ತಿ 44,999 ರೂ.
First published:July 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ