ಮೇ.17ರಂದು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಒನ್​ ಪ್ಲಸ್​ 6

news18
Updated:April 30, 2018, 5:02 PM IST
ಮೇ.17ರಂದು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಒನ್​ ಪ್ಲಸ್​ 6
news18
Updated: April 30, 2018, 5:02 PM IST
ನ್ಯೂಸ್​ 18 ಕನ್ನಡ

ನವದೆಹಲಿ: ಭಾರತದ ಸ್ಮಾರ್ಟ್​ಫೊನ್​ ಮಾರುಕಟ್ಟೆಯಲ್ಲಿ ತಮ್ಮದೇ ವೈಶಿಷ್ಟ್ಯಗಳಿಂದ ಟ್ರೆಂಡ್​​ ಎಬ್ಬಿಸಿರುವ ಒನ್​ ಪ್ಲಸ್​ ಸ್ಮಾರ್ಟ್​ಫೋನ್ ಇದೀಗ ಮತ್ತೊಂದು ಮೊಬೈಲ್​ನ್ನು ಮಾರುಕಟ್ಟೆಗೆ ಪರಿಚಯಿಸಯಿಸಲು ಮುಂದಾಗಿದೆ.

ಈಗಾಗಲೇ ಒನ್​ ಪ್ಲಸ್​ 5ಟಿ ಮೊಬೈಲ್​ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದೆ, ಇದರ ಬೆನ್ನಿಗೆ ಆ್ಯಪಲ್​ನ ನೂತನ ನೋಟ್ಚ್​ ಡಿಸ್ಪ್​ಪ್ಲೇ ಹೊಂದಿರುವ ಐಫೊನ್​ ಎಕ್ಸ್​ ಮಾದರಿಯಲ್ಲೇ ಒನ್​ ಪ್ಲಸ್​ 6 ಮಾರುಕಟ್ಟೆಗೆ ಬರಲು ಸಿದ್ಧಗೊಂಡಿದ್ದು, ಮೇ.16 ರಂದು ಬಿಡುಗಡೆ ಮಾಡುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರ ಈ ಮೊಬೈಲ್​ ಮೇ.17ಕ್ಕೆ ಲಗ್ಗೆಯಿಡಲಿದೆ.

ಕಂಪನಿಯ ಬ್ಲಾಗ್​ನಲ್ಲಿ ಈ ಕುರಿತು ಪೋಸ್ಟ್​ ಮಾಡಿರುವ ಸಂಸ್ಥೆ, ಮೊಬೈಲ್​ ಲಾಂಚ್​ ಕಾರ್ಯಕ್ರಮವನ್ನು ಫೇಸ್​ಬುಕ್​ ಸೇರಿದಂತೆ ಹಲವು ಸಾಮಾಜಿಕ ಜಾಲತಾಣದಲ್ಲಿ ಲೈವ್​ ಮಾಡುವುದಾಗಿ ಹೇಳಿಕೊಂಡಿದೆ. ಈ ಮೊಬೈಲ್​ನ ಫೀಚರ್​ಗಳು ಹೀಗಿವೆ .

ಗುಣಲಕ್ಷಣಗಳು
ಪ್ರೊಸೆಸರ್ - ಸ್ನಾಪ್‌ಡ್ರ್ಯಾಗನ್ 845 ಎಸ್‌ಒಸಿ
ಮೆಮೊರಿ – 8 ಜಿಬಿ (ರ‍್ಯಾಮ್‌)
Loading...

6.28 (1080 x 2160 ಪಿಕ್ಸೆಲ್‌) ಡಿಸ್​ಪ್ಲೇ
ಬ್ಯಾಟರಿ– ವೈರ್‌ಲೆಸ್‌ ಚಾರ್ಜಿಂಗ್‌

ಇದಲ್ಲದೇ ಮೊಬೈಲ್​ ಸಂಪೂರ್ಣ ಗ್ಲಾಸ್​ ಡಿಸೈನ್​ ಹೊಂದಿದ್ದು, ನೀರು ಹಾಗೂ ದೂಳಿನಿಂದ ಭದ್ರತೆಯನ್ನ ನೀಡಲು ಸೂಕ್ತ ಕ್ರಮವನ್ನು ತೆಗೆದುಕೊಂಡಿದೆ ಎಂದು ಸಂಸ್ಥೆ ಹೇಳಿಕೊಂಡಿತ್ತು.

 
First published:April 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...