ಒನ್​ ಪ್ಲಸ್​ 6 ಕ್ಯಾಮೆರಾ ವೈಶಿಷ್ಟ್ಯ ಹೇಗಿದೆ ಗೊತ್ತಾ?


Updated:April 18, 2018, 11:15 PM IST
ಒನ್​ ಪ್ಲಸ್​ 6 ಕ್ಯಾಮೆರಾ ವೈಶಿಷ್ಟ್ಯ ಹೇಗಿದೆ ಗೊತ್ತಾ?

Updated: April 18, 2018, 11:15 PM IST
ನ್ಯೂಯಾರ್ಕ್​: ಮೊಬೈಲ್​ ಜಗತ್ತಿನಲ್ಲಿ ತನ್ನದೇ ವೈಶಿಷ್ಟ್ಯಗಳಿಂದ ಛಾಪು ಮೂಡಿಸಿರುವ ಒನ್​ಪ್ಲಸ್​ ಮೊಬೈಲ್​ ಇದೀಗ ಹೊಸ ಮೊಬೈಲ್​ ಒನ್​ಪ್ಲಸ್​ 6ನ್ನು ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿದೆ.

ಈವರೆಗೆ ಬಿಡುಗಡೆಯಾಗಿರುವ ಎಲ್ಲಾ ಶ್ರೇಣಿಯ ಮೊಬೈಲ್​ ಗ್ರಾಹಕರಿಗೆ ಯಾವುದೇ ರೀತಿಯಲ್ಲೂ ನಿರಾಸೆ ಮೂಡಿಸಿಲ್ಲ, ಹೀಗಾಗಿ ಕೊಟ್ಟ ಹಣಕ್ಕೆ ಅಧಿಕ ಮಟ್ಟದಲ್ಲೇ ಫೀಚರ್ಸ್​ ಕೊಟ್ಟು ಸುದ್ದಿಯಾದ ಒನ್​ಪ್ಲಸ್​ ಸಂಸ್ಥೆ ಇದೀಗ ಒನ್​ ಪ್ಲಸ್​ 6 ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಕೆಲ ದಿನಗಳ ಹಿಂದೆ ಇದರ ಫೀಚರ್ಸ್​ ಕೂಡಾ ಆನ್​ಲೈನ್​ ಮಾರುಕಟ್ಟೆಯಲ್ಲಿ ಲೀಕ್​ ಆಗಿತ್ತು.ಇದೀಗ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಾಕ ಅಧಿಕಾರಿ ಪೆಟು ಲಾವು ಕೆಲ ಚಿತ್ರಗಳನ್ನು ವೆಬ್​ಸೈಟ್​ವೊಂದರಲ್ಲಿ ಹಂಚಿಕೊಂಡಿದ್ದು, ಈ ಚಿತ್ರಗಳು ಒನ್​ಪ್ಲಸ್​ 6ನಲ್ಲಿ ತೆಗೆದಿರುವ ಚಿತ್ರಗಳು ಎನ್ನಲಾಗಿದೆ. ಅಲ್ಲದೇ ಇತ್ತೀಚಿನ ಟ್ವೀಟ್​ನಲ್ಲಿ ಒನ್​ ಪ್ಲಸ್​ ಮೊಬೈಲ್​ ವಾಟರ್​ ರೆಸಿಸ್ಟೆಂಟ್​ ಸೌಲಭ್ಯ ಕೂಡಾ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದೆ.ಪೆಟು ಲಾವು ಕ್ಯಾಲಿಫೋರ್ನಿಯಾದ ಸ್ಟಾನ್​ಫೋರ್ಡ್​​ನ ಕಟ್ಟಡವನ್ನು ಫೋನ್​ನಲ್ಲಿ ಕ್ಲಿಕ್ಕಿಸಿದ್ದು ಇವುಗಳನ್ನು ಒನ್​ಪ್ಲಸ್​ 6 ಮೊಬೈಲ್​ನಲ್ಲಿ ತೆಗೆದಿರುವ ಚಿತ್ರಗಳು ಎನ್ನಲಾಗಿದೆ. ಈಗಾಗಲೇ ಸ್ನ್ಯಾಪ್‌ಡ್ರಾಗನ್ 845 ಸಿಪಿಯು ಹಾಗೂ 8GB RAM ಮತ್ತು 256GB ಆಂತರಿಕ ಸಂಗ್ರಹದೊಂದಿಗೆ ಮಾರುಕಟ್ಟೆಗೆ ಕಾಲಿಡುತ್ತಿರುವ ಒನ್‌ಪ್ಲಸ್ 6ಗೆ ಸುಮಾರು 749 ಡಾಲರ್​​ ಬೆಲೆ ನಿಗದಿ ಮಾಡಬಹುದು ಎನ್ನಲಾಗಿದೆ. ಒಂದು ವೇಳೆ ಇದೇ ಬೆಲೆ ನಿಗದಿಯಾದರೆ ಭಾರತದಲ್ಲಿ ಸುಮಾರು 45,000 ರೂ.ಗೆ ಈ ಮೊಬೈಲ್​ ಮಾರುಕಟ್ಟೆಯಲ್ಲಿ ದೊರಕುತ್ತದೆ.ಇದೇ ಮೊದಲ ಬಾರಿಗೆ ಒನ್​ ಪ್ಲಸ್​ 6 256ಜಿಬಿ, 128 ಜಿಬಿ ಹಾಗೂ 64 ಜಿಬಿಯ ಮೂರು ಸ್ಟೋರೆಜ್​ ಅವತರಣಿಕೆಯಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.
First published:April 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ