ಗಂಟೆಯಲ್ಲಿ ನೂರು ಕೋಟಿ ವ್ಯಾಪಾರ ನಡೆಸಿ ದಾಖಲೆ ನಿರ್ಮಿಸಿದ ಒನ್​ಪ್ಲಸ್​ 6

news18
Updated:May 24, 2018, 5:13 PM IST
ಗಂಟೆಯಲ್ಲಿ ನೂರು ಕೋಟಿ ವ್ಯಾಪಾರ ನಡೆಸಿ ದಾಖಲೆ ನಿರ್ಮಿಸಿದ ಒನ್​ಪ್ಲಸ್​ 6
news18
Updated: May 24, 2018, 5:13 PM IST
ನವದೆಹಲಿ: ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿರುವ ಒನ್​ಪ್ಲಸ್​ ತನ್ನ ನೂತಕ ಮೊಬೈಲ್​ ಒನ್​ಪ್ಲಸ್​ 6ನ್ನು ಅಮೇಜಾನ್​ನಲ್ಲಿ ಬಿಡುಗಡೆ ಮಾಡಿದ ಕೇವಲ ಒಂದು ಗಂಟೆಯಲ್ಲಿ ನೂರು ಕೋಟಿ ವ್ಯಾಪಾರ ವಹಿವಾಟು ನಡೆಸಿದೆ.

ಮೇ. 21 ರಂದು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ ಅಮೆಜಾನ್ ಮತ್ತು ಒನ್​ ಪ್ಲಸ್​ ವೈಬ್​ಸೈಟ್​ನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಮೊಬೈಲ್​ ಅಮೆಜಾನ್​ನಲ್ಲಿ ಕೇವಲ ಪ್ರೈಮ್ ಸದಸ್ಯರಿಗೆ ಮತ್ತು ಒನ್‌ಪ್ಲಸ್ ಕಮ್ಯೂನಿಟಿ ಸದಸ್ಯರಿಗೆ ಮಾತ್ರವೇ ಮಾರಾಟಕ್ಕೆ ಲಭ್ಯವಿತ್ತು. ಈ ಸೇಲ್‌ನಲ್ಲಿ ಹೊಸ ದಾಖಲೆ ನಿರ್ಮಿಸಿರುವ ಸಂಸ್ಥೆ ಗಂಟೆಯಲ್ಲಿ ನೂರು ಕೋಟಿಗೂ ಅಧಿಕ ವಹಿವಾಟು ನಡೆಸಿ ಮೇ.21ರಂದು 12 ಗಂಟೆಗೆ ನಡೆದ ಸೇಲ್‌ನಲ್ಲಿ ಈ ದಾಖಲೆಯನ್ನು ನಿರ್ಮಾಣ ಮಾಡಿದೆ.

ಭಾರತೀಯ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಒನ್​ಪ್ಲಸ್​ 6, ಅತ್ಯಂತ ಬೇಡಿಕೆಯ ಮೊಬೈಲ್​ ಆಗಿದೆ. ಅದರಲ್ಲೂ ಮುಖ್ಯವಾಗಿ ಒನ್​ಪ್ಲಸ್​ 6ನ ಮಿರರ್​ ಕಪ್ಪು ಬಣ್ಣದ ಎಡಿಶನ್​ ಮೊಬೈಲ್​ಗೆ ಹೆಚ್ಚು ಬೇಡಿಕೆಯಿದೆ ಎಂದು ಕಂಪನಿಯು ಹೇಳಿಕೊಂಡಿದೆ.

ಒನ್ ಪ್ಲಸ್ 6 ವೈಶಿಷ್ಟ್ಯಗಳು:

64 ಜಿಬಿ ಮತ್ತು 128 ಜಿಬಿ ಸ್ಟೋರೇಜ್, 6 ಜಿಬಿ ಮತ್ತು 8 ಜಿಬಿ ರ‍್ಯಾಮ್
3300 mAh ಫಾಸ್ಟ್‌ ಚಾರ್ಜಿಂಗ್ ಬ್ಯಾಟರಿ
ಆ್ಯಂಡ್ರಾಯ್ಡ್ v8.1 (Oreo) Oxygen ಆಪರೇಟಿಂಗ್ ಸಿಸ್ಟಂ
Loading...

Snapdragon™ 845 Qualcomm ಪ್ರೊಸೆಸ್ಸರ್‌ನೊಂದಿಗೆ 6.8 ಇಂಚ್​ ಡಿಸ್‌ಪ್ಲೇ
ಆಪ್ಟಿಕ್ ಅಮೋಲೆಡ್ Corning Gorilla Glass v5
ಪ್ರೈಮರಿ 16 ಎಂಪಿ ಮತ್ತು 20 ಎಂಪಿ ಕ್ಯಾಮೆರಾ ವ್ಯ್ವಸ್ಥೆಯಿದೆ
16 ಎಂಪಿ ಸೆಲ್ಫಿ Digital Zoom, Auto Flash, Face detection
Exmor-RS CMOS ಸೆನ್ಸರ್ ಒಳಗೊಂಡಿದೆ.

ಬೆಲೆ
64 ಜಿಬಿ ಆವೃತ್ತಿಯ ಬೆಲೆ 34,999 ರೂ. ಮತ್ತು
128 ಜಿಬಿ ಆವೃತ್ತಿ ಬೆಲೆ 39,999 ರೂ.
ಇದರೊಂದಿಗೆ ಮಾರ್ವೆಲ್ ಅವೆಂಜರ್ಸ್‌ ಸೀಮಿತ ಆವೃತ್ತಿ 44,999 ರೂ.ಗೆ ದೊರೆಯುತ್ತದೆ.
First published:May 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...