Snapdragon 8+ Gen1 ಕಾರ್ಯನಿರ್ವಹಣೆ ಹಾಗೂ ಹೊಸ ವೈಶಿಷ್ಟ್ಯಗಳೊಂದಿಗೆ, OnePlus 10T 5G ಅದ್ಭುತ ಕಾರ್ಯಕ್ಷಮತೆಯ ಫ್ಲ್ಯಾಗ್‌ಶಿಪ್‌ ವಿಶೇಷತೆಗಳನ್ನು ಹೊಂದಿದೆ

8+ Gen 1 ಫಾಸ್ಟ್ ಹಾಗೂ ಫ್ಲುಯಿಡ್ ಬಳಕೆದಾರರ ಅನುಭವಕ್ಕೆ ಅವಶ್ಯಕವಾಗಿರುವ CPU ಕಾರ್ಯಕ್ಷಮತೆಯನ್ನು 10% ರಷ್ಟು ಹೆಚ್ಚಿಸುವುದು ಅಷ್ಟೇ ಅಲ್ಲ, ಅದರೊಂದಿಗೆ ಶಕ್ತಿ ಸಮರ್ಥತೆಯನ್ನು ಸಹ 30% ರಷ್ಟು ಸುಧಾರಿಸುತ್ತದೆ, ಆ ಮೂಲಕ ಬ್ಯಾಟರಿ ಬಾಳಿಕೆ ಹಾಗೂ ಕಾರ್ಯನಿರ್ವಹಣೆ ಎರಡನ್ನೂ ಪರಿಣಾಮಕಾರಿಯಾಗಿ ಸುಧಾರಿಸುತ್ತದೆ

Oneplus 10T 5G Smartphone With Snapdragon 8+ Gen1 Processor Launching on August 3rd

Oneplus 10T 5G Smartphone With Snapdragon 8+ Gen1 Processor Launching on August 3rd

 • Share this:
  ಸ್ಮಾರ್ಟ್‌ಫೋನ್‌ಗಳ (Smartphone) ವಿಷಯಕ್ಕೆ ಬಂದರೆ, ರಾ ಪರ್ಫಾರ್ಮೆನ್ಸ್‌ಗೆ (Performence) ತನ್ನದೇ ಆದ ವರ್ಚಸ್ಸಿದೆ, ಆದರೆ ಆ ಕಾರ್ಯಕ್ಷಮತೆಯನ್ನು ಬುದ್ಧಿವಂತಿಕೆಯಿಂದ ಬಳಸಿಕೊಂಡಾಗ ಮಾತ್ರವೇ ನೀವು ಫ್ಲ್ಯಾಗ್‌ಶಿಪ್ (Flagship) ಅನುಭವ ಪಡೆಯುವಿರಿ. OnePlus ತನ್ನ ಹೊಚ್ಚಹೊಸ OnePlus 10T 5G ಸ್ಮಾರ್ಟ್‌ಫೋನ್‌ ಮೂಲಕ ಅದನ್ನು ಕಾರ್ಯಗತಗೊಳಿಸುವ ಭರವಸೆಯನ್ನು ನೀಡುತ್ತಿದೆ. ಇಂದು ನೀವು ಪಡೆಯಬಹುದಾದ ಅತ್ಯಂತ ಶಕ್ತಿಶಾಲಿ ಮೊಬೈಲ್ ಚಿಪ್‌ಸೆಟ್‌ಗಳಲ್ಲಿ (Mobile Chipset) ಒಂದಾಗಿರುವ Qualcomm Snapdragon 8+ Gen 1 ಚಿಪ್ ಅನ್ನು ಇದು ಒಳಗೊಂಡಿದೆ ಹಾಗೂ 16 GB ವರೆಗಿನ LPDDR5x RAM ಮತ್ತು 256 GB ಯ UFS 3.1 ಸಂಗ್ರಹಣೆಯನ್ನು ಹೊಂದಿದೆ, ನೀವು ಇದೆಲ್ಲವನ್ನೂ ಒಳಗೊಂಡ ವೇಗದ ಫೋನ್ ಅನ್ನು ಪಡೆಯುವುದು ಇಂದು ಅತ್ಯಂತ ಕಠಿಣ ಎಂಬುದೂ ನಿಜ.

  ಇದರ ಪವರ್ ಬಗ್ಗೆ ಹೇಳುವುದಾದರೆ, ಇದು ವೇಗವಾಗಿದೆ, 120 Hz AMOLED ಡಿಸ್‌ಪ್ಲೇಯೊಂದಿಗೆ ಅದಕ್ಕಿಂತಲೂ ಹೆಚ್ಚಿನದಾದ 1,000 Hz ಟಚ್ ರೆಸ್ಪಾನ್ಸ್ ಮತ್ತು Oxygen OS 12 ಇದೆ, ಇವೆಲ್ಲವೂ ಸಹ ಇದನ್ನು ಆಕರ್ಷಕ, ಅಗಾಧ ಕಾರ್ಯಕ್ಷಮತೆಯ ಫ್ಲ್ಯಾಗ್‌ಶಿಪ್ ಅಪ್‌ಗ್ರೇಡ್ ಆಗಿ ಮಾಡಿವೆ.

  8+ Gen 1 ಫಾಸ್ಟ್ ಹಾಗೂ ಫ್ಲುಯಿಡ್ ಬಳಕೆದಾರರ ಅನುಭವಕ್ಕೆ ಅವಶ್ಯಕವಾಗಿರುವ CPU ಕಾರ್ಯಕ್ಷಮತೆಯನ್ನು 10% ರಷ್ಟು ಹೆಚ್ಚಿಸುವುದು ಅಷ್ಟೇ ಅಲ್ಲ, ಅದರೊಂದಿಗೆ ಶಕ್ತಿ ಸಮರ್ಥತೆಯನ್ನು ಸಹ 30% ರಷ್ಟು ಸುಧಾರಿಸುತ್ತದೆ, ಆ ಮೂಲಕ ಬ್ಯಾಟರಿ ಬಾಳಿಕೆ ಹಾಗೂ ಕಾರ್ಯನಿರ್ವಹಣೆ ಎರಡನ್ನೂ ಪರಿಣಾಮಕಾರಿಯಾಗಿ ಸುಧಾರಿಸುತ್ತದೆ. 

  ಹೊಚ್ಚ ಹೊಸ ಕೂಲಿಂಗ್ ಸಿಸ್ಟಂ
  ಹೆಚ್ಚಿನ ಕಾರ್ಯದೊತ್ತಡ ಇದ್ದಾಗಲೂ, ವಿಶೇಷವಾಗಿ ಗೇಮಿಂಗ್ ಅವಧಿಯಲ್ಲಿ, ಈ ಫೋನ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಖಚಿತಪಡಿಸಲು, ಕೂಲಿಂಗ್ ಸಿಸ್ಟಂ ಅನ್ನು ಒಂದು ಬೃಹತ್, ಹೊಸದಾದ 37,000 mm2 ‘ಕ್ರಯೊವೆಲಾಸಿಟಿ’ (cryovelocity) ವೇಪರ್ ಚೇಂಬರ್ ಕೂಲಿಂಗ್ ಸಿಸ್ಟಂಗೆ ಅಪ್‌ಗ್ರೇಡ್ ಮಾಡಲು OnePlus ನಿರ್ಧರಿಸಿದೆ. ಈ ಸಿಸ್ಟಂ ಸಾಂಪ್ರದಾಯಿಕ ವೇಪರ್ ಚೇಂಬರ್ ವಿನ್ಯಾಸಗಳಿಗಿಂತ ಎರಡು ಪಟ್ಟು ಹೆಚ್ಚಿನ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ ಹಾಗೂ 8 ಡಿಸಿಪೇಷನ್ ಚಾನೆಲ್‌ಗಳು, ಉಷ್ಣತೆಯನ್ನು ಹೊರಹಾಕಲು ಮೈಕ್ರಾನ್-ಹಂತದ 3D ಕ್ಯಾಪಿಲರಿ ಡಿಸಿಪೇಷನ್ ಕ್ರಿಯೆಯನ್ನು ಹಾಗೂ ಬಿಸಿಯಾದ, SoC ಕೋರ್‌ಗಳಿಂದ ಉಷ್ಣತೆಯ ವರ್ಗಾವಣೆಯನ್ನು ಇನ್ನಷ್ಟು ಸುಧಾರಿಸಲು ವಿಭಿನ್ನ ಪ್ರಕಾರದ ಗ್ರಾಫೈಟ್ ಪದರವನ್ನು ಒಳಗೊಂಡಿದೆ.

  ಇವೆಲ್ಲವೂ ಜತೆಯಾಗಿ, ಒಟ್ಟಾರೆ ಉಷ್ಣತೆಯನ್ನು ಗಣನೀಯವಾಗಿ ತಗ್ಗಿಸುತ್ತವೆ, ಅಲ್ಲದೆ ಲೋಡ್ ಆಗುವಾಗ ಉಂಟಾಗುವ ಕಾರ್ಯಾಚರಣೆ ಉಷ್ಣತೆಯನ್ನು ತಗ್ಗಿಸುತ್ತವೆ, ಆ ಮೂಲಕ ಯಾವುದೇ ಸಂದರ್ಭಗಳೇ ಇರಲಿ, ಶಕ್ತಿಶಾಲಿ Snapdragon ಚಿಪ್ ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ.  

  ಚಿಪ್‌ನ ವರ್ಧಿಸಲಾದ ಪವರ್ ಕಾರ್ಯದಕ್ಷತೆಯು ನಿಶ್ಚಿತವಾಗಿಯೂ ಇಡೀ-ದಿನದ ಬ್ಯಾಟರಿ ಬಾಳಿಕೆಯ ಗ್ಯಾರಂಟಿ ನೀಡುತ್ತದೆ ಹಾಗೂ 4,800 mAh ಡ್ಯುಯಲ್ ಬ್ಯಾಟರಿಯು 150W SUPERVOOC ನಿಂದಾಗಿ 19 ನಿಮಿಷಗಳಲ್ಲಿಯೇ 1-100% ಚಾರ್ಜ್ ಆಗುತ್ತದೆ, ಅಂದರೆ ನೀವು ಎಂದಿಗೂ ಚಾರ್ಜ್ ಕೊರತೆಯನ್ನು ಅನುಭವಿಸಲು ಸಾಧ್ಯವೇ ಇಲ್ಲ.

  ಗೇಮಿಂಗ್ ವಿಶೇಷತೆ
  ಗೇಮರ್‌ಗಳಿಗಾಗಿ ಇನ್ನಷ್ಟು ಖುಷಿಯ ಸಂಗತಿಗಳಿವೆ. OnePlus 10T 5G ಯು HyperBoost ಗೇಮ್ ಎಂಜಿನ್ ಅನ್ನು ಬೆಂಬಲಿಸುತ್ತದೆ, ಅದು ಮುಖ್ಯವಾಗಿ ಜನರಲ್ ಪರ್ಪಸ್ ಪರ್ಫಾಮೆನ್ಸ್ ಅಡಾಪ್ಟರ್ (GPA) ಫ್ರೇಮ್ ಸ್ಟೆಬಿಲೈಸರ್, ಮತ್ತು LSTouch ಅನ್ನು ಹೊಂದಿದೆ.  

  ಫ್ರೇಮ್-ರೇಟ್ ಫ್ಲಟರ್ ಅನ್ನು ಕಡಿಮೆ ಮಾಡುವ ಮೂಲಕ GPA FA ಗೇಮಿಂಗ್ ಅನುಭವವನ್ನು ಆರಾಮದಾಯಕ ಆಗಿಸುತ್ತದೆ, ಇನ್ನು LSTouch, ಗೇಮಿಂಗ್ ಅವಧಿಯಲ್ಲಿ ಇನ್ನೂ ಅತ್ಯುತ್ತಮವಾದ ವೇಗ ಮತ್ತು ಪ್ರತಿಸ್ಪಂದನೆಗಾಗಿ ಈಗಾಗಲೇ ಇರುವ 1,000 Hz ಟಚ್ ರೆಸ್ಪಾನ್ಸ್ ಅನ್ನು ಖಂಡಿತವಾಗಿಯೂ ವರ್ಧಿಸುತ್ತದೆ.

  ವೇಗ? ಈ ಫೋನ್ ಆ ಪದವನ್ನು ಮರುವ್ಯಾಖ್ಯಾನಿಸುತ್ತದೆ.

  OnePlus 10T 5G ಆಗಸ್ಟ್ 3 ರಂದು ಸಂಜೆ 7.30 ಕ್ಕೆ ಬಿಡುಗಡೆಯಾಗಲಿದೆ.
  First published: