ಅದ್ಭುತವಾದ ಹೊಸ ವಿನ್ಯಾಸ ಮತ್ತು ಆಕರ್ಷಕ ಮೇಲ್ಮೈನ ರೇರ್ ಫಿನಿಷ್‌ನೊಂದಿಗೆ ಬದಲಾವಣೆ ಉಂಟು ಮಾಡಲು OnePlus 10R ಸಿದ್ಧವಾಗಿದೆ

ಈ ಡಿವೈಸ್ 8 ಅಥವಾ 12 GB RAM ಮತ್ತು 128 ಅಥವಾ 256 GB  ಸ್ಟೋರೇಜ್‌ ಹೊಂದಿರುವ ಸಿಯೆರಾ ಬ್ಲಾಕ್ ಮತ್ತು ಫಾರೆಸ್ಟ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಡೀಫಾಲ್ಟ್ ಆಗಿ, ಈ ಫೋನ್ 80 W ಚಾರ್ಜರ್‌ ಹಾಗೂ 5,000 mAh ಬ್ಯಾಟರಿಯೊಂದಿಗೆ ದೊರೆಯಲಿದ್ದು, ಸುಮಾರು 30 ನಿಮಿಷದಲ್ಲಿ 100%ರಷ್ಟು ಚಾರ್ಜ್ ಆಗಲಿದೆ.

OnePlus 10R

OnePlus 10R

 • Share this:
  ಫ್ಲಾಗ್‌ಷಿಪ್‌ಗಳ ವಿಷಯ ಬಂದಾಗ, ಅದರಲ್ಲಿ ಪವರ್ ಮತ್ತು ಕಾರ್ಯಕ್ಷಮತೆಯನ್ನು ನೀಡಲಾಗುತ್ತದೆ. OnePlus 10R ಮತ್ತು ಅದರ ಶಕ್ತಿಶಾಲಿ MediaTek Dimensity 8100-MAX SoC ಯೊಂದಿಗೆ ಜೋಡಿಸಲಾದ 12 GB LPDDR5x RAM  ಮತ್ತು 256 GB of UFS 3.1 ಸ್ಟೋರೇಜ್‌ನಿಂದಾಗಿ, ಆ ಎಲ್ಲ ವೈಶಿಷ್ಟ್ಯವನ್ನೂ ಕೊಡುವ ಮೊಬೈಲ್ ಫೋನ್ ಆಗಿದೆ.

  ಆದರೆ ಸ್ಪರ್ಧೆಯಿಂದ ಇದನ್ನು ಪ್ರತ್ಯೇಕಿಸಿರುವ ಅಂಶಗಳು ಯಾವುವು? ಅದು ಬರೀ ಕ್ಯಾಮೆರಾಗಳು ಮತ್ತು ಆಂತರಿಕ ಭಾಗಗಳು ಅಷ್ಟೇ ಅಲ್ಲ ಅಲ್ಲವೇ? ಹಾಗಾಗಿಯೇ ವಿನ್ಯಾಸ, ಎರ್ಗೊನಾಮಿಕ್ಸ್ ಮತ್ತು ಸೌಂದರ್ಯವು ಪ್ರಾಮುಖ್ಯತರ ಪಡೆಯುತ್ತವೆ. ಈವರೆಗೆ ನಾವು ಈ ಫೋನ್‌ನಲ್ಲಿ ನೋಡಿರುವುದನ್ನು ಇಟ್ಟುಕೊಂಡು ಹೇಳುವುದಾದರೆ, ಈ ವೈಶಿಷ್ಟ್ಯಗಳ ವಿಭಾಗದಲ್ಲಿ ಸಾಕಷ್ಟು ಪರಿಶ್ರಮಪಟ್ಟಿದೆ ಮತ್ತು ಆ ಎಲ್ಲ ಪರಿಶ್ರಮವು ಅದ್ಭುತ ಫಲಿತಾಂಶ ನೀಡಿದೆ ಎಂದು ಹೇಳಬಹುದು.

  ಫ್ಲಾಟ್ ಬದಿಗಳು ಮತ್ತು ಟೆಕ್ಸ್ಚರ್ಡ್ ರೇರ್ಗಳು

  ಫ್ಲಾಟ್ ಬದಿಗಳ ವೈಶಿಷ್ಟ್ಯ ಮತ್ತು ಕೇವಲ 8.17 ಮಿ.ಮೀ ತೆಳುವಾಗಿರುವ ಚಸಿಸ್‌ನಿಂದಾಗಿ ಇದು ಅತ್ಯಂತ ಸ್ಲಿಮ್ ಫೋನ್ ಆಗಿದೆ. ಗ್ರಿಪ್‌ಗೆ ಸಹಾಯವಾಗಲು ಮತ್ತು ವಿನ್ಯಾಸಕ್ಕೆ ಅನನ್ಯತೆಯನ್ನು ಸೇರಿಸಲು, ಫೋನ್‌ನ ಹಿಂಬದಿಯಲ್ಲಿ ‘ನ್ಯಾನೊ-ಲೆವೆಲ್ ಡಾಟ್ ಮ್ಯಾಟ್ರಿಕ್ಸ್’ ಇದೆ. ಮತ್ತು OnePlus ಇಷ್ಟಕ್ಕೇ ನಿಲ್ಲಿಸಿಲ್ಲ, ರೇರ್ ಗ್ಲಾಸ್‌ನಲ್ಲಿ ಏಕರೂಪದ ಟೆಕ್ಸ್ಚರ್ ಕೊಡುವ ಬದಲಾಗಿ, ಕ್ಯಾಮೆರಾ ಬಂಪ್‌ನಿಂದ ಫೋನ್‌ನ ತಳಭಾಗದವರೆಗೆ ವಿಸ್ತರಿಸಿರುವ ವಿಶಿಷ್ಟವಾದ ಗೆರೆಗಳನ್ನು ಹೊಂದಿರುವ ಟೂ-ಟೋನ್ ಟೆಕ್ಸ್ಚರ್ ಅನ್ನು OnePlus ವಿನ್ಯಾಸಗೊಳಿಸಿದೆ. ಇದು ಫೋನ್ ಅನ್ನು ಆಸಕ್ತಿದಾಯಕವಾಗಿ ಅಷ್ಟೇ ಮಾಡಿಲ್ಲ, ಜತೆಗೆ OnePlusಗೆ ಅನನ್ಯವಾಗಿರುವ ವಿನ್ಯಾಸಕ್ಕೆ ಮೋಹಕತೆ ಮತ್ತು ಸೌಂದರ್ಯವನ್ನು ಸೇರಿಸಿದೆ.  ಈ ಫೋನ್ ಆಕರ್ಷಕ ಸಿಯೆರಾ ಬ್ಲಾಕ್ ಮತ್ತು ಅಷ್ಟೇ ಆಕರ್ಷಕವಾಗಿರುವ ಫಾರೆಸ್ಟ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ.

  ಇದಕ್ಕೆ ಹೆಚ್ಚುವರಿಯಾಗಿ, ಈ ನ್ಯಾನೊ-ಲೆವೆಲ್ ಡಾಟ್ ಮ್ಯಾಟ್ರಿಕ್ಸ್ ಟೆಕ್ಸ್ಚರ್ ಫಿಂಗರ್‌ಪ್ರಿಂಟ್ ನಿರೋಧಕವೂ ಆಗಿದೆ ಮತ್ತು ಫ್ರಿಕ್ಷನ್ ಅನ್ನು ಸೇರಿಸುತ್ತದೆ, ಆ ಮೂಲಕ ಗ್ರಿಪ್ ಅನ್ನು ಸುಧಾರಿಸುತ್ತದೆ. ಅಲ್ಲದೆ, ಈ ಫೋನ್‌ನ ತೂಕ ಕೇವಲ 186 ಗ್ರಾಮ್‌ಗಳಾಗಿದ್ದು, ಈ ವರ್ಗದ ಫೋನ್‌ಗಳಲ್ಲಿಯೇ ಕಡಿಮೆ ತೂಕದ್ದಾಗಿದೆ. ಫ್ಲಾಟ್‌ ಬದಿಗಳಿಂದಾಗಿ, ಸುದೀರ್ಘ ಅವಧಿಗೆ, ವಿಶೇಷವಾಗಿ ಗೇಮ್ ಆಡುವಾಗ ಅಥವಾ ಅದ್ಭುತವಾದ AMOLED ಸ್ಕ್ರೀನ್‌ನಲ್ಲಿ ವೀಡಿಯೊ ಕಂಟೆಂಟ್ ವೀಕ್ಷಿಸುವಾಗ, ಫೋನ್ ಹಿಡಿದುಕೊಳ್ಳಲು ಆರಾಮದಾಯಕವಾಗಿರುತ್ತದೆ.

  ಅಚ್ಚರಿಗೊಳಿಸುವ ಡಿಸ್ಪ್ಲೇ ಮತ್ತು ಅದ್ಭುತ OS

  ಡಿಸ್‌ಪ್ಲೇಗಳ ಬಗ್ಗೆ ಹೇಳುವುದಾದರೆ, ಹಿಂಬದಿಯಷ್ಟೇ ಮುಂಬದಿಯೂ ಸಹ ವಿಶೇಷವಾಗಿದ್ದು, ದೊಡ್ಡದಾದ, ವೈಡ್ P3 ಕಲರ್ ಸಪೋರ್ಟ್ ಮತ್ತು HDR10+ ಪ್ರಮಾಣೀಕರಣದೊಂದಿಗಿನ 6.7–ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ. ಇದು ನವಿರಾದ ಪಂಚ್-ಹೋಲ್ ಕ್ಯಾಮೆರಾ ವೈಶಿಷ್ಟ್ಯತೆಯನ್ನು ಹೊಂದಿದ್ದು, ಅದರಲ್ಲಿರುವ ನಾಜೂಕಾಗಿ ವಿನ್ಯಾಸಗೊಳಿಸಲಾದ ಕೆಲವು ಆಕರ್ಷಕ ವಾಲ್‌ಪೇಪರ್‌ಗಳು ಕ್ಯಾಮೆರಾವನ್ನು ಮರೆಮಾಡುವುದರಿಂದ ಆ ವೈಶಿಷ್ಟ್ಯವು ಬಹುತೇಕ ಕಾಣಿಸದಿರಬಹುದು.

  ಈ ಫೋನ್‌ ಅನ್ನು OxygenOS 12.1 ನಿಂದ ರಚಿಸಲಾಗಿದ್ದು, ಅದನ್ನು ‘ಪ್ರಯಾಸವಿಲ್ಲದ್ದು’ ಎಂದು OnePlus ಬಣ್ಣಿಸಿದೆ. ಫೋನ್‌ನ ಸೌಂದರ್ಯದೊಂದಿಗೆ ಹೊಂದಾಣಿಕೆಯಾಗುವಂತೆ OS ಅಂಶಗಳು ಮತ್ತು ಒಟ್ಟಾರೆ ವಿನ್ಯಾಸವನ್ನು ಬಹಳ ಎಚ್ಚರಿಕೆಯಿಂದ ಸಂಯೋಜಿಸಲಾಗಿದ್ದು, ಹಾಗಾಗಿ ಈ ಫೋನ್ ಮೋಹಕ ಮತ್ತು ಆಕರ್ಷಕವಾಗಿರುವ ಜತೆಗೆ ಸೌಂದರ್ಯದ ಅನುಭೂತಿಯನ್ನು ನೀಡುತ್ತದೆ.

  ಹೊಂದಾಣಿಕೆಗಾಗಿ ಕಾರ್ಯಕ್ಷಮತೆ

  ಖಂಡಿತವಾಗಿಯೂ, ಕಾರ್ಯಕ್ಷಮತೆ ಇಲ್ಲದ ಸೌಂದರ್ಯದ ಸೊಬಗು ಪ್ರಯೋಜನಕಾರಿಯಾದುದಲ್ಲ. 600 BHP ಎಂಜಿನ್‌ನೊಂದಿಗಿನ Ferrariಯ ಅಥವಾ ಚಾಲನೆಯನ್ನು ಆರಾಮದಾಯಕವಾಗಿಸುವ ಅಗಾಧ ಟಾರ್ಕ್ ಇಲ್ಲದೇ ಇರುವ Rolls Royce ನ ಉಪಯೋಗವಾದರೂ ಏನು?

  ಒಳಗೊಂಡಿರುವ ಶಕ್ತಿಶಾಲಿ ಹಾರ್ಡ್‌ವೇರ್‌, ಇದೊಂದು ಪ್ರೀಮಿಯಂ ಡಿವೈಸ್ ಎಂಬ ಭಾವನೆಯನ್ನು ನೀಡಲು 120 Hz ಡಿಸ್‌ಪ್ಲೇ ಮತ್ತು ಅಪಾರ-ವೇಗದ 1000 Hz ಟಚ್-ರೆಸ್ಪಾನ್ಸ್ ಹೊಂದಿದ್ದು, ಅದು ಈ ಫೋನ್‌ಗೆ ಆಕರ್ಷಣೆಯನ್ನು ಮತ್ತು ಸ್ಪಂದನಶೀಲತೆಯನ್ನು ಒದಗಿಸಿದೆ.

  ಸುಸ್ಥಿರ ಕಾರ್ಯಕ್ಷಮತೆಯನ್ನು ಖಚಿತಪಡಿಸಲು ಬೃಹತ್, ಹೊಸ ವೇಪರ್ ಚೇಂಬರ್ ಕೂಲರ್ ಇದೆ ಮತ್ತು ಸಾಫ್ಟ್‌ವೇರ್ ವೈಶಿಷ್ಟ್ಯಗಳ ಗುಚ್ಛವಿದ್ದು ಅದು ಫ್ರೇಮ್-ಡ್ರಾಪ್‌ಗಳನ್ನು ಮತ್ತು ಅಂತಹುದೇ ಇತರ ಪರಿಸ್ಥಿತಿಗಳನ್ನು ಊಹಿಸಲು ಮತ್ತು ಸ್ಪಂದಿಸಲು Dimensity 8100 ನ AI ಚಾಪ್‌ಗಳ ಪ್ರಯೋಜನವನ್ನು ಪಡೆಯುತ್ತದೆ.  ಅಂತಿಮವಾಗಿ, ಇದರಲ್ಲಿ ಬ್ಯಾಟರಿ ಮತ್ತು ಚಾರ್ಜರ್ ಇದ್ದು, ಅವೆರಡೂ ನಿಮಗೆ ಫೋನ್ ಇಡೀ ದಿನ ಅತ್ಯುನ್ನತ ಕಾರ್ಯಕ್ಷಮತೆ ಒದಗಿಸುವುದನ್ನು ಮತ್ತು ಯಾವುದೇ ಡೌನ್-ಟೈಮ್ ಆಗದಿರುವುದನ್ನು ಖಚಿತಪಡಿಸುತ್ತದೆ.

  OnePlus 10R, ಮೇ 4 ರಂದು ಖರೀದಿಗೆ ಲಭ್ಯವಾಗಲಿದೆ. ಬಿಡುಗಡೆಯಲ್ಲಿ, ಈ ಡಿವೈಸ್ 8 ಅಥವಾ 12 GB RAM ಮತ್ತು 128 ಅಥವಾ 256 GB  ಸ್ಟೋರೇಜ್‌ ಹೊಂದಿರುವ ಸಿಯೆರಾ ಬ್ಲಾಕ್ ಮತ್ತು ಫಾರೆಸ್ಟ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಡೀಫಾಲ್ಟ್ ಆಗಿ, ಈ ಫೋನ್ 80 W ಚಾರ್ಜರ್‌ ಹಾಗೂ 5,000 mAh ಬ್ಯಾಟರಿಯೊಂದಿಗೆ ದೊರೆಯಲಿದ್ದು, ಸುಮಾರು 30 ನಿಮಿಷದಲ್ಲಿ 100%ರಷ್ಟು ಚಾರ್ಜ್ ಆಗಲಿದೆ. ನೀವು 150 W SUPERVOOC Endurance Edition ಮಾದರಿಯನ್ನೂ ಸಹ ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಅದು 4,500 mAh ಸಣ್ಣ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯು ಸ್ವಲ್ಪ ಸಣ್ಣದಾಗಿದ್ದರೂ, ಕೇವಲ 3 ನಿಮಿಷದಲ್ಲಿ 30% ರಷ್ಟು ಮತ್ತು ಬರೀ 17 ನಿಮಿಷದಲ್ಲಿ 1-100% ಚಾರ್ಜ್ ಆಗುತ್ತದೆ.
  Published by:Soumya KN
  First published: