OnePlus 10 Pro: ತ್ರಿವಳಿ ಕ್ಯಾಮೆರಾ, ಆಕರ್ಷಕ ವಿನ್ಯಾಸ.. ಮುಂದಿನ ವಾರ ಮಾರುಕಟ್ಟೆಗೆ ಬರಲಿದೆ ಒನ್​ಪ್ಲಸ್​​ ನೂತನ ಸ್ಮಾರ್ಟ್​ಫೋನ್​

OnePlus 10 Pro: ಒನ್​ಪ್ಲಸ್​ ನೂತನ ಸ್ಮಾರ್ಟ್​​ಫೋನಿನ ಟೀಸರ್ ಚಿತ್ರವು ಫೋನ್‌ನ ಹಿಂಭಾಗ ಮಾತ್ರವಲ್ಲದೆ, ಹೆಚ್ಚಿನದನ್ನು ತೋರಿಸದಿದ್ದರೂ ಒನ್​ಪ್ಲಸ್​ 10 ಪ್ರೊ ಮೂರು ಹಿಂದಿನ ಕ್ಯಾಮೆರಾಗಳನ್ನು ಹೊಂದಿದೆ ಎಂಬುದನ್ನು ಈ ಚಿತ್ರ ಖಚಿತಪಡಿಸಿದೆ.

OnePlus 10 Pro

OnePlus 10 Pro

  • Share this:
    ಒನ್​ಪ್ಲಸ್ (OnePlus)​ ಹೊಸ ವರ್ಷದ (New Year) ಉಡುಗೊರೆಯಾಗಿ  ಮುಂದಿನ ಪ್ರಮುಖವಾದ ಒನ್​ಪ್ಲಸ್​ 10 ಪ್ರೊ (OnePlus 10 Pro) ಸ್ಮಾರ್ಟ್​ಫೋನ್​ ಅನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಅದಕ್ಕೂ ಮುನ್ನ ಸ್ಮಾರ್ಟ್​ಫೋನಿನ ಹಿಂದಿನ ಕ್ಯಾಮೆರಾ (Back Camera) ವಿನ್ಯಾಸವನ್ನು ಟೀಸರ್ನಲ್ಲಿ (Teaser) ತೋರಿಸಿದೆ. ಅಂದಹಾಗೆಯೇ ಈ ಹ್ಯಾಂಡ್‌ಸೆಟ್ (Handset) ಜನವರಿ 11 ರಂದು ಚೀನಾದಲ್ಲಿ ಬಿಡುಗಡೆಯಾಗಲಿದ್ದು, ವರ್ಷದ ನಂತರ ವಿಶ್ವದ ಇತರ ಭಾಗಗಳಿಗೆ ಬರಲಿದೆ. ಒನ್‌ಪ್ಲಸ್ ಸಿಇಒ ಪೀಟ್ ಲಾವ್ ಈ ಹಿಂದೆ ವೀಬೊದಲ್ಲಿ ಮಾಡಿದ ಪೋಸ್ಟ್‌ವೊಂದರಲ್ಲಿ ಒನ್​ಪ್ಲಸ್​ 10 ಪ್ರೊ ಫೋನ್ ಅನ್ನು ಜನವರಿಯಲ್ಲಿ ಬಹಿರಂಗಪಡಿಸಲಾಗುವುದು ಎಂದು ದೃಢಪಡಿಸಿದರು.

    ಒನ್​ಪ್ಲಸ್​ ನೂತನ ಸ್ಮಾರ್ಟ್​​ಫೋನಿನ ಟೀಸರ್ ಚಿತ್ರವು ಫೋನ್‌ನ ಹಿಂಭಾಗ ಮಾತ್ರವಲ್ಲದೆ, ಹೆಚ್ಚಿನದನ್ನು ತೋರಿಸದಿದ್ದರೂ ಒನ್​ಪ್ಲಸ್​ 10 ಪ್ರೊ ಮೂರು ಹಿಂದಿನ ಕ್ಯಾಮೆರಾಗಳನ್ನು ಹೊಂದಿದೆ ಎಂಬುದನ್ನು ಈ ಚಿತ್ರ ಖಚಿತಪಡಿಸಿದೆ. ಮಾತ್ರವಲ್ಲದೆ, ಹ್ಯಾಸೆಲ್‌ಬ್ಲಾಡ್ ಬ್ರ್ಯಾಂಡಿಂಗ್ ಅನ್ನು ಹೊಂದಿರುವುದನ್ನು ಸಾರಿದೆ. ಸ್ವೀಡಿಷ್ ಕ್ಯಾಮೆರಾ ತಯಾರಕರೊಂದಿಗೆ ಒನ್​ಪ್ಲಸ್​ನ ಪಾಲುದಾರಿಕೆಯು ಕಳೆದ ವರ್ಷ ಪ್ರಾರಂಭವಾಯಿತು, OnePlus 9 ಮೂಲಕ ಪಾಲುದಾರಿಕೆ ಶುರುವಾಯಿತು.

    ಮೂರು-ಹಂತದ ರಿಂಗರ್ ಸ್ವಿಚ್ ಸಹ ಗೋಚರಿಸುತ್ತದೆ

    ಚಿತ್ರವು ಒನ್​ಪ್ಲಸ್​ 10 ಪ್ರೊ ಸ್ಮಾರ್ಟ್​ಫೋನ್‌ನ ಕ್ಯಾಮೆರಾ ಬಂಪ್ ವಿನ್ಯಾಸವನ್ನು ದೃಢೀಕರಿಸುತ್ತದೆ, ಇದು ಹಿಂದೆ Twitter ಟಿಪ್‌ಸ್ಟರ್ @OnLeaks ಮತ್ತು 91Mobiles ನಿಂದ ಸೋರಿಕೆಯಲ್ಲಿ ಕಾಣಿಸಿಕೊಂಡಿದೆ. ಈ ಕ್ಯಾಮೆರಾಗಳ ವಿಶೇಷತೆಗಳು ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲವಾದರೂ, ವರದಿಗಳು OnePlus 10 Pro 48-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಅಲ್ಟ್ರಾವೈಡ್, 8-ಮೆಗಾಪಿಕ್ಸೆಲ್ ಟೆಲಿಫೋಟೋ ಮತ್ತು 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

    ಆಂತರಿಕವಾಗಿ ಒನ್​ಪ್ಲಸ್​ 10 ಪ್ರೊ ಸ್ಮಾರ್ಟ್​ಫೋನ್​ 8GB ಅಥವಾ 12GB RAM, 128GB ಅಥವಾ 256GB ಸಂಗ್ರಹಣೆ ಮತ್ತು 5,000mAh ಬ್ಯಾಟರಿಯೊಂದಿಗೆ ಜೋಡಿಸಲಾದ Snapdragon 8 Gen 1 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ ಎಂದು ವರದಿಯಾಗಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಕೂಡ ಇದೆ. ಬಿಡುಗಡೆಯಾದ ಅಧಿಕೃತ ಚಿತ್ರದಲ್ಲಿ, ಟ್ರೇಡ್‌ಮಾರ್ಕ್ OnePlus ಮೂರು-ಹಂತದ ರಿಂಗರ್ ಸ್ವಿಚ್ ಅನ್ನು ಸಹ ನೋಡಬಹುದು, ಇದು ಫೋನ್ ಅನ್ನು ಅದರ ವೈಬ್ರೇಶನ್ ಮತ್ತು ಸೈಲೆಂಟ್ ಮೋಡ್‌ಗಳಿಗೆ ಸುಲಭವಾಗಿ ಬದಲಾಯಿಸಲು ಅವಕಾಶ ಮಾಡಿಕೊಡಲಿದೆ.

    ಇದನ್ನು ಓದಿ: Jio: ಕುದುರೆಮುಖದ ಜಾಂಬಳೆ ಹಳ್ಳಿಗೆ ಡಿಜಿಟಲ್ ಲೈಫ್ ಪರಿಚಯಿಸಿದ ಜಿಯೋ

    OnePlus 10 ಸರಣಿಯು ಚೀನಾದ ಹೊರಗೆ ಯಾವಾಗ ಪ್ರಾರಂಭವಾಗಬಹುದು ಎಂದು OnePlus ಘೋಷಿಸಿಲ್ಲ, ಆದರೆ 91Mobiles ಈ ಹಿಂದೆ ಏಪ್ರಿಲ್ ವೇಳೆಗೆ ಜಾಗತಿಕವಾಗಿ ಬಿಡುಗಡೆಯಾಗಬಹುದು ಎಂದು ವರದಿ ಮಾಡಿದೆ. ಚೀನಾದಲ್ಲಿ ಮಾತ್ರ ಜನವರಿ 11 ರಂದು ಪರಿಚಯಿಸುವ ಸಾಧ್ಯತೆ ಇದೆ. ಹಾಗಾಗಿ ಬಹುತೇಕರು ನೂತನ ಸ್ಮಾರ್ಟ್​ಫೋನ್​ ಬಿಡುಗಡೆಗೆ ಕಾಯುತ್ತಿದ್ದಾರೆ.

    ಒನ್​ಪ್ಲಸ್​ ಸ್ಮಾರ್ಟ್​ಫೋನ್​ ಸಂಸ್ಥೆ ವಿವಿಧ ವಿಶೇಷತೆಯುಳ್ಳ ಸ್ಮಾರ್ಟ್​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ, ಆದರೀಗ ಹೊಸ ವರ್ಷದ ವಿಶೇಷವಾಗಿ ಒನ್​ಪ್ಲಸ್​ 10 ಪ್ರೊ ಅನ್ನು ಪರಿಚಯಿಸಲು ಮುಂದಾಗಿದೆ. ನೂತನ ಫೋನಿನ ಬೆಲೆಯ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ ಸೋರಿಕೆಯಾದ ಟೀಸರ್​ ಮೂಲಕ ಕ್ಯಾಮೆರಾ ವಿಶೇಷತೆಯು ಗೊತ್ತಾಗಿದೆ. ಜೊತೆಗೆ ಅದರ ಹಿಂಭಾಗ ವಿನ್ಯಾಸವು ತಿಳಿದಿದೆ.

    ಇದನ್ನು ಓದಿ: FaceBook Money: ಫೇಸ್‌ಬುಕ್ ಪೇಜ್‌ಯಿಂದ ಸಹ ನೀವು ಹಣ ಗಳಿಸಬಹುದಂತೆ? ಇಲ್ಲಿದೆ ನೋಡಿ ಐಡಿಯಾ!

    ಚೀನಾದಲ್ಲಿ ಜನವರಿ 11 ರಂದು ಬಿಡುಗಡೆಯಾಗಲಿರುವ ಒನ್​ಪ್ಲಸ್​ 10 ಪ್ರೊ ಸ್ಮಾರ್ಟ್​ಫೋನ್​ ಭಾರತಕ್ಕೆ ಯಾವಾಗ ಬರಲಿದೆ ಎಂದು ಹೇಳಲು ಅಸಾಧ್ಯ. ಕಂಪನಿ ತನ್ನ ಮಾರುಕಟ್ಟೆಯ ಜೊತೆಗೆ ನೂತನ ಸ್ಮಾರ್ಟ್​ಫೋನನ್ನು ಯಾವಾಗ ಇತರ ದೇಶಗಳ ಮಾರುಕಟ್ಟೆಗೆ ಪರಿಚಯಿಸಲಿದೆ ಎಂಬುದು ಗೊತ್ತಾಗಲು ಸಮಯವಕಾಶ ಬೇಕಿದೆ. ಚೀನಾದಲ್ಲಿ ಒನ್​ಪ್ಲಸ್​ 10 ಪ್ರೊ ಬಿಡುಗಡೆಗೊಂಡ ನಂತರ ಉಳಿದ ದೇಶಗಳಿಗೆ ಯಾವಾಗ ಬರಲಿದೆ ಎಂಬುದು ಗೊತ್ತಾಗಲಿದೆ.
    Published by:Harshith AS
    First published: