ಒನ್ಪ್ಲಸ್ ಕಂಪನಿ (Oneplus Company) ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಜನಪ್ರಿಯತೆ ಪಡೆದಂತಹ ಎಲೆಕ್ಟ್ರಾನಿಕ್ ಕಂಪನಿಯಾಗಿದೆ. ಈ ಚೀನೀ ಕಂಪನಿಯು ಗುಣಮಟ್ಟದ ಫೀಚರ್ಸ್ನೊಂದಿಗೆ ತನ್ನ ಬ್ರಾಂಡ್ನ ಅಡಿಯಲ್ಲಿ ಸ್ಮಾರ್ಟ್ ಫೋನ್ಗಳನ್ನು ಪರಿಚಯಿಸುತ್ತಿದೆ. ಇದೀಗ ಹೊಸವರ್ಷದಲ್ಲಿ ಒನ್ಪ್ಲಸ್ 11 5ಜಿ (Oneplus 11 5G) ಅನ್ನು ಜನವರಿ 4 ರಂದು ಚೀನಾದಲ್ಲಿ ಪ್ರಾರಂಭಿಸಲಾಗುವುದು ಎಂದು ವರದಿಯಾಗಿದೆ. ಆದರೆ ಈ ಹ್ಯಾಂಡ್ಸೆಟ್ನ ವಿಶೇಷಣಗಳು ಅಂತರ್ಜಾಲದಲ್ಲಿ ಬಿಡುಗಡೆಗೆ ಮೊದಲೇ ಸೋರಿಕೆಯಾಗಿದೆ. ವಿಶೇಷವಾಗಿ ಸ್ನ್ಯಾಪ್ಡ್ರಾಗನ್ 8 ಜೆನ್ 2 ಚಿಪ್ಸೆಟ್ (Snapdragon 8 Gen 2 Chipset) ಅನ್ನು ಬಳಸಲಾಗಿದೆ ಎಂದು ತೋರುತ್ತದೆ. ಜೊತೆಗೆ ಇದು ಮೂರು ರೀತಿಯ ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.
ಒನ್ಪ್ಲಸ್ ಕಂಪನಿ ತನ್ನ ಬ್ರಾಂಡ್ನ ಅಡಿಯಲ್ಲಿ ಇದುವರೆಗೆ ಸಾಕಚ್ಟು ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿದೆ. ಇದೀಗ ಹೊಸವರ್ಷದಲ್ಲಿ ತನ್ನ ಕಂಪನಿಯಿಂದ ಮೊದಲ ಸ್ಮಾರ್ಟ್ಫೋನ್ ಬಿಡುಗಡೆಯಾಗುತ್ತಿದ್ದು, ಬಿಡುಗಡೆಗೆ ಮೊದಲೇ ಇದರ ಕೆಲ ಫೀಚರ್ಸ್ಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿವೆ. ಹಾಗಿದ್ರೆ ಒನ್ಪ್ಲಸ್ನ ಮುಂಬರುವ ಸ್ಮಾರ್ಟ್ಫೋನ್ ಯಾವುದು? ಫೀಚರ್ಸ್ ಹೇಗಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ಇವಾನ್ ಬ್ಲಾಸ್ ವೆಬ್ಸೈಟ್ನಲ್ಲಿ ಸೋರಿಕೆ
ಒನ್ಪ್ಲಸ್ 11 5ಜಿ ಸ್ಮಾರ್ಟ್ಫೋನ್ನ ಫೀಚರ್ಸ್ ಅನ್ನು ಜನಪ್ರಿಯ ಲೀಕರ್ ಇವಾನ್ ಬ್ಲಾಸ್ ಸಂಪೂರ್ಣವಾಗಿ ಸೋರಿಕೆ ಮಾಡಿದ್ದಾರೆ. ಇವಾನ್ ಬ್ಲಾಸ್ ಪ್ರಕಾರ, ಇದು ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. 50 ಮೆಗಾಪಿಕ್ಸೆಲ್ ಸೋನಿ IMX890 ಮುಖ್ಯ ಕ್ಯಾಮೆರಾ ಹೊಂದಿರುತ್ತದೆ. ಇದಲ್ಲದೆ, ಇವಾನ್ ಬ್ಲಾಸ್ ಈ ಹ್ಯಾಂಡ್ಸೆಟ್ನ ಹೊಸ ರೆಂಡರ್ಗಳು ಮತ್ತು ಬಣ್ಣ ಆಯ್ಕೆಗಳ ವಿವರಗಳನ್ನು ಕೂಡ ಸೋರಿಕೆ ಮಾಡಿದೆ.
ಇದನ್ನೂ ಓದಿ: ಹೊಸ ವರ್ಷದ ಆರಂಭದಲ್ಲೇ ಶುರುವಾಯ್ತು ಪ್ರೀ-ಬುಕಿಂಗ್ ಆಫರ್! ಮೊಬೈಲ್ ಯಾವುದು ಗೊತ್ತಾ?
ಡಿಸ್ಪ್ಲೇ ಫೀಚರ್ಸ್
ಇವಾನ್ ಬ್ಲಾಸ್ ಅವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ವಿವರಗಳ ಪ್ರಕಾರ. ಒನ್ಪ್ಲಸ್ 11 5ಜಿ ಸ್ಮಾರ್ಟ್ಫೋನ್ 120Hz ರಿಫ್ರೆಶ್ ರೇಟ್ನೊಂದಿಗೆ 6.7 ಇಂಚಿನ QHD+ ಅಮೋಲ್ಡ್ ಡಿಸ್ಪ್ಲೇಯೊಂದಿಗೆ ಬರುವ ಸಾಧ್ಯತೆಯಿದೆ.
ಕ್ಯಾಮೆರಾ ಫೀಚರ್ಸ್
ಒನ್ಪ್ಲಸ್ 11 5ಜಿ ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಇದು ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸಾರ್, 48 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಅಗಿದೆ. ಸೆಲ್ಫಿಗಾಗಿ ಫೋನ್ನ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದೆ.
ಮೂರು ರೂಪಾಂತರಗಳಲ್ಲಿ ಲಭ್ಯ
ಒನ್ಪ್ಲಸ್ 11 5ಜಿ ಸ್ಮಾರ್ಟ್ಫೋನ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಬಹುದು. ಇದರಲ್ಲಿ ಮೂಲ ರೂಪಾಂತರವು 12ಜಿಬಿ ರ್ಯಾಮ್ ಮತ್ತು 256ಜಿಬಿ ಆಗಿರಬಹುದು, ಇನ್ನೊಂದು 16ಜಿಬಿ ರ್ಯಾಮ್ ಮತ್ತು 256ಜಿಬಿ ಆಗಿರುತ್ತದೆ ಮತ್ತು ಕೊನೆಯ ರೂಪಾಂತರವು 16ಜಿಬಿ ರ್ಯಾಮ್ ಮತ್ತು 512ಜಿಬಿ ಸ್ಟೋರೇಜ್ ಆಯ್ಕೆಯನ್ನು ಹೊಂದಿರುವ ಸಾಧ್ಯತೆಯಿದೆ.
ಪ್ರೊಸೆಸರ್ ಸಾಮರ್ಥ್ಯ
ಈ ಸ್ಮಾರ್ಟ್ಫೋನ್ನ ಉತ್ತಮ ಕಾರ್ಯವೈಖರಿಗಾಗಿ ಹ್ಯಾಂಡ್ಸೆಟ್ IP54 ರೇಟಿಂಗ್ ವೈಶಿಷ್ಟ್ಯದೊಂದಿಗೆ ಬರಬಹುದು. ಇದು ಕಲರ್ ಓಎಸ್ 13.0 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಬ್ಲಾಸ್ ತನ್ನ ವರದಿಯಲ್ಲಿ ತಿಳಿಸಿದೆ.
ಭಾರತದಲ್ಲಿ ಯಾವಾಗ ಬಿಡುಗಡೆ?
ಒನ್ಪ್ಲಸ್ 11 5ಜಿ ಭಾರತದಲ್ಲಿ ಫೆಬ್ರವರಿ 7 ರಂದು ಬಿಡುಗಡೆಯಾಗಲಿದೆ. ಭಾರತದಲ್ಲಿ ಬಿಡುಗಡೆಯಾಗುವ ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 13 ಆಧಾರಿತ ಆಕ್ಸಿಜನ್ ಓಎಸ್ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಒನ್ಪ್ಲಸ್ 11 5ಜಿ ಸ್ಮಾರ್ಟ್ಫೋನ್ನ ಟೀಸರ್ ಬಿಡುಗಡೆ
ಇತ್ತೀಚೆಗೆ ಒನ್ಪ್ಲಸ್ ಕಂಪನಿ ತನ್ನ ಹೊಸ ಸ್ಮಾರ್ಟ್ಫೋನ್ನ ಟಿಸರ್ ಒಂದನ್ನು ಬಿಡುಗಡೆ ಮಾಡಿತ್ತು. ಈ ಟೀಸರ್ನಲ್ಲಿ ನೋಡುವುದಾದರೆ ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವುದು ಗಮನಿಸಬಹುದಾಗಿದೆ. ಇದಲ್ಲದೆ ಚೀನಾದಲ್ಲಿ ಆಯೋಜಿಸಿದ್ದ ಒಂದು ಕಾರ್ಯಕ್ರಮದಲ್ಲಿ ಕಂಪನಿ ಮುಂಬರುವ ಒನ್ಪ್ಲಸ್ 11 5ಜಿ ಸ್ಮಾರ್ಟ್ಫೋನ್ನ ವಿಶೇಷತೆಗಳನ್ನು ಬಹಿರಂಗ ಪಡಿಸಿತ್ತು. ಹಾಗೆ ತಿಳಿಸಿದಂತೆ ಇದು ಕ್ಲಾಸಿಕ್ ಬ್ಲ್ಯಾಕ್ ಕಲರ್ನಲ್ಲಿ ಬರುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ