HOME » NEWS » Tech » ONE PLUS 9 5G IS A BEST SMARTPHONE IN THE HISTORY OF MOBILE MANUFACTURING

ಸಬ್ 6-5G ಅತ್ಯಂತ ಜನಪ್ರಿಯವಾದ ಮತ್ತು ಹೆಚ್ಚು ಒಪ್ಪಿಕೊಂಡಿರುವ 5G ಬ್ಯಾಂಡ್ ಆಗಿರುವುದನ್ನು ಪರಿಗಣಿಸಿ, OnePlus 9 ಅದರತ್ತ ಗಮನ ಹರಿಸಿರುವುದರಲ್ಲಿ ಅಚ್ಚರಿಯೇನಿಲ್ಲ

ಸ್ಪಷ್ಟವಾಗಿ ಹೇಳಬೇಕೆಂದರೆ, OnePlus ನಂತಹ ತಯಾರಕರು mmWave ನಂತಹ ವೇಗವಾದ 5G ಬ್ಯಾಂಡ್‍ಗಳನ್ನು ಬೆಂಬಲಿಸುವುದರಲ್ಲಿ ಅರ್ಥವಿಲ್ಲ, ಇದು ನಮ್ಮಂತಹ ಬಳಕೆದಾರರಿಗೆ ಯಾವುದೇ ಸೂಕ್ತ ಪ್ರಯೋಜನ ನೀಡದೇ ಕೇವಲ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ.

news18-kannada
Updated:June 3, 2021, 6:29 PM IST
ಸಬ್ 6-5G ಅತ್ಯಂತ ಜನಪ್ರಿಯವಾದ ಮತ್ತು ಹೆಚ್ಚು ಒಪ್ಪಿಕೊಂಡಿರುವ 5G ಬ್ಯಾಂಡ್ ಆಗಿರುವುದನ್ನು ಪರಿಗಣಿಸಿ, OnePlus 9 ಅದರತ್ತ ಗಮನ ಹರಿಸಿರುವುದರಲ್ಲಿ ಅಚ್ಚರಿಯೇನಿಲ್ಲ
One Plus
  • Share this:
5G ಬಗ್ಗೆ ಮೊದಲು ಘೋಷಿಸಿದಾಗ, ಅದು ಸ್ಮಾರ್ಟ್‌ಫೋನ್‌ ತಂತ್ರಜ್ಞಾನದಲ್ಲಿ ಮುಂದಿನ ಬಹುದೊಡ್ಡ ಕ್ರಾಂತಿಯಾಗಲಿದೆ ಎಂದು ತೋರುತ್ತಿತ್ತು. 5G ಭರವಸೆದಾಯಕ ಗಿಗಾಬೈಟ್ ಡೌನ್‌ಲೋಡ್ ವೇಗ ನೀಡುವುದರಿಂದ, ನಾವು ಸೆಕೆಂಡುಗಳಲ್ಲಿ ಇಡೀ ಚಲನಚಿತ್ರವನ್ನು ಡೌನ್‌ಲೋಡ್ ಮಾಡಬಹುದು, ನೀವು ನಿಮ್ಮ ಪಿಸಿ ಅಥವಾ ಫೋನ್‌ನ ಆಂತರಿಕ ಸ್ಟೋರೇಜ್‌ನಿಂದ ಮಾಡುವುದಕ್ಕಿಂತ ಹೆಚ್ಚು ವೇಗವಾಗಿ ಕ್ಲೌಡ್‍ನಲ್ಲಿ ಫೈಲ್‌ಗಳನ್ನು ಎಡಿಟ್ ಮಾಡಬಹುದು, ಇರು ಶೂನ್ಯ-ಸುಪ್ತತೆಯ ಗೇಮಿಂಗ್ ಇತ್ಯಾದಿಗಳನ್ನೂ ನೀಡುತ್ತದೆ.

ಆದರೆ, ವಾಸ್ತವವೆಂದರೆ ಇದರ ಆಗಮನ  ನಿಧಾನವಾಗಲಿದೆ. 5G ಬ್ಯಾಂಡ್‍ಗಳ ಅಳವಡಿಕೆ ಹೊಂದಿರುವ ಕೆಲವು ದೇಶಗಳು ಮತ್ತು 5G ಲಭ್ಯವಿರುವ ಸ್ಥಳಗಳಲ್ಲಿ, ವೇಗ ಉತ್ತಮವಾದ 4G ವೇಗದಷ್ಟು ವೇಗವಾಗಿಲ್ಲ. ಇಲ್ಲಿಯವರೆಗೆ, ವೇಗವಾದ ಗಿಗಾಬೈಟ್ ಸಾಕಾರಗೊಳ್ಳುವ ಭರವಸೆ ಕಂಡುಬಂದ ಸ್ಥಳಗಳು ಬೆರಳಿಕೆಯಷ್ಟು ಮಾತ್ರ, ಇತರ ಅನೇಕ ಸ್ಥಳಗಳಲ್ಲಿ ನೆಟ್‌ವರ್ಕ್ ಸ್ಥಿತಿಗಳಿಂದ ಮತ್ತು ಇನ್ನೂ ಮುಖ್ಯವಾಗಿ ಸ್ಮಾರ್ಟ್‌ಫೋನ್‌ನೊಂದಿಗೆ ಸಂಪರ್ಕಿಸಲಾದ ನೆಟ್‌ವರ್ಕ್‌ನಿಂದಾಗಿ ಅಷ್ಟೇನೂ ವೇಗವಾದ ಗಿಗಾಬೈಟ್ ಲಭ್ಯವಿಲ್ಲ.

5G ಎನ್ನುವುದು ಕೇವಲ ಒಂದು ಹಗರಣವೇ?:

ಇಲ್ಲ, ಆದರೆ ಇದನ್ನು ಉತ್ಪ್ರೇಕ್ಷೆ ಮಾಡಿದಷ್ಟು ಇದು ವಾಸ್ತವವಾಗಿಲ್ಲ. 5G ಭರವಸೆ ನೀಡಿರುವುದನ್ನು ನಿಖರವಾಗಿ ವಿತರಿಸಬಲ್ಲದು, ಆದರೆ ಇದು ಕೇವಲ ಸೂಕ್ತ ಸನ್ನಿವೇಶಗಳು ಹಾಗೂ ಅತ್ಯಂತ ಸೀಮಿತ ಶ್ರೇಣಿಯಲ್ಲಿ ಮಾತ್ರ ಸಾಧ್ಯವಾಗುತ್ತದೆ.

ನಾವು 5G ಎಂದರೇನು ಎಂದು ಅರ್ಥಮಾಡಿಕೊಳ್ಳುವ ಮೊದಲು, ಸ್ಮಾರ್ಟ್‌ಫೋನ್‌ಗಳು ಪರಸ್ಪರ ಹೇಗೆ ಸಂವಹಿಸುತ್ತವೆ ಎಂದು ಅರ್ಥಮಾಡಿಕೊಳ್ಳುವುದು ಮುಖ್ಯ.

ಆವರ್ತನದ ಬ್ಯಾಂಡ್‍ಗಳ ಬಗ್ಗೆ ಅರ್ಥಮಾಡಿಕೊಳ್ಳುವುದು:

ನೀವೆಲ್ಲಿ ವಾಸಿಸುತ್ತಿದ್ದೀರಾ ಎನ್ನುವುದನ್ನು ಆಧರಿಸಿ, ಪ್ರಸ್ತುತ ಸೆಲ್ಯುಲಾರ್ ಫೋನ್‌ಗಳನ್ನು 600 MHz ನಿಂದ ಸುಮಾರು 2,700 MHz ವರೆಗಿನ ವಿವಿಧ ಪೂರ್ವ ನಿರ್ಧಾರಿತ ರೇಡಿಯೋ ಆವರ್ತನಗಳಲ್ಲಿ ನೆಟ್‌ವರ್ಕ್‌ಗೆ ಸಂಪರ್ಕಿಸಲಾಗಿರುತ್ತದೆ. ಸರಿಯಾಗಿ ಹೇಳಬೇಕೆಂದರೆ, ಆವರ್ತನ ಕಡಿಮೆ ಇದ್ದಷ್ಟೂ, ಶ್ರೇಣಿ ಹೆಚ್ಚಾಗಿರುತ್ತದೆ ಮತ್ತು ನೆಟ್‌ವರ್ಕ್‌ನ ಪ್ರವೇಶಲಭ್ಯ ಶಕ್ತಿ ಹೆಚ್ಚಾಗಿರುತ್ತದೆ. ಅಂತೆಯೇ, ಆವರ್ತನ ಹೆಚ್ಚಾಗಿದ್ದಷ್ಟೂ, ಶ್ರೇಣಿ ಕಡಿಮೆಯಾಗಿರುತ್ತದೆ ಮತ್ತು ಬ್ಯಾಂಡ್ ವಿಡ್ತ್ ಹೆಚ್ಚಾಗಿರುತ್ತದೆ. ಇದರ ಒಟ್ಟು ಫಲಿತಾಂಶವೆಂದರೆ 5G ಯ ಒಳಾಂಗಣ ಆವರಿಸುವಿಕೆ ಬಳಸುವ ಬ್ಯಾಂಡ್ ಅನ್ನು ಆಧರಿಸಿ ಭಿನ್ನವಾಗಿದ್ದು, ಅದು ಮನೆ ಹಾಗೂ ಕಚೇರಿ ಕಟ್ಟಡಗಳ ಒಳಗೆ ಬಳಸುವ ಫೋನ್ ಮೇಲೆ ಪರಿಣಾಮ ಬೀರುತ್ತದೆ.ಈ ಬ್ಯಾಂಡ್ ಗಳನ್ನು ನೀವು ಶಬ್ದದ ಅಲೆಗಳಾಗಿ ಭಾವಿಸಿದರೆ, ಬ್ಯಾಂಡ್ ವಿಡ್ತ್ ಹೆಚ್ಚು ಸೂಕ್ತವೆನಿಸುತ್ತದೆ. ಕಡಿಮೆ ಬಾಸ್ ಆವರ್ತನ ಹೆಚ್ಚು ದೂರ ಪ್ರಯಾಣಿಸುತ್ತದೆ, ಆದರೆ ಅಧಿಕ ಶಬ್ದ ಆವರ್ತನ ಹೊಂದಿರುತ್ತದೆ, ಉದಾಹರಣೆಗೆ, ನೀವು ಹೆಲಿಕಾಪ್ಟರ್‌ನ ಗಟ್ಟಿಯಾದ ಶಬ್ದವನ್ನು ಕಿಲೋಮೀಟರ್‌ಗಳ ದೂರದಿಂದಲೇ ಕೇಳಬಹುದು, ಆದರೆ ನೀವು ಅದು ಹತ್ತಿರವಿಲ್ಲದ ಹೊರತು ಅದರ ಗ್ಯಾಸ್ ಟರ್ಬೈನ್ ಶಬ್ದ ಕೇಳಲು ಸಾಧ್ಯವಿಲ್ಲ.

ರೇಡಿಯೋ ಆವರ್ತನದ ಬಗ್ಗೆ ಹೇಳಬೇಕೆಂದರೆ, ಈ ಬ್ಯಾಂಡ್‍ಗಳನ್ನು ಮತ್ತಷ್ಟು ಸಣ್ಣ ಗುಂಪುಗಳಾಗಿ ವಿಭಜಿಸಲಾಗುತ್ತದೆ. 2G ನೆಟ್‌ವರ್ಕ್‌ಗಳು 900 MHz ಮತ್ತು 1800 MHz ಗಳಲ್ಲಿ, ಕ್ರಮವಾಗಿ B8 ಹಾಗೂ B3 ಲೇಬಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತವೆ. 3G 800 MHz (B8) ಮತ್ತು 2,100 MHz (B1) ಗಳಲ್ಲಿ ಕಾರ್ಯನಿರ್ವಹಿಸುತ್ತದೆ. 4G – B1, B3, B5, B8. B40, B41 – 850 MHz ನಿಂದ 2,100 MHz ಶ್ರೇಣಿಯವರೆಗಿನ ಆವರ್ತನದಲ್ಲಿ ಅನೇಕ ಬ್ಯಾಂಡ್‍ಗಳಲ್ಲಿ ಕಾರ್ಯನಿರ್ವಹಿಸುತ್ತದೆ.

ಸೆಲ್ಯುಲಾರ್ ನೆಟ್‌ವರ್ಕ್‌ಗಳನ್ನು ಸೀಮಿತ ಆವರ್ತನ ಶ್ರೇಣಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವ  ಪ್ರಮುಖ ಕಾರಣವೆಂದರೆ ಸರ್ಕಾರಿ ಮತ್ತು ಮಿಲಿಟರಿ ನೀಡಿಕೆ. ಮಿಲಿಟರಿ ಸಾಧನಗಳಾದ ರೇಡಿಯೋಗಳು, ಹಾಗೂ ಉಪಗ್ರಹ ಇತ್ಯಾದಿಯಂತಹ ನಾಗರಿಕ ಸಾಧನಗಳು ಸಾಮಾನ್ಯವಾಗಿ ಅಧಿಕ ಹಾಗೂ ಕಡಿಮೆ ಆವರ್ತನಗಳಲ್ಲಿ ಸುಭದ್ರವಾಗಿ ಸಂವಹನ ನಡೆಸುತ್ತವೆ. ಲಕ್ಷಾಂತರ ಸೆಲ್ ಫೋನ್‌ಗಳನ್ನು ಒಂದೇ ಬ್ಯಾಂಡ್‍ನಲ್ಲಿ ಕಾರ್ಯನಿರ್ವಹಿಸಲು ಅನುಮತಿಸಿದರೆ, ಅಡಚಣೆ ಉಂಟಾಗಿ, ಪ್ರಮುಖ ಸಂವಹನಗಳಿಗೆ ಅಡ್ಡಿಯಾಗುವ ಸಾಧ್ಯತೆಗಳಿರುತ್ತವೆ.

ಸೂಕ್ತ ಹಾರ್ಡ್‌ವೇರ್‌ನೊಂದಿಗೆ, 5G 600 MHz ನಿಂದ 52,000 MHz ವರೆಗಿನ ಹಾಗೂ ಅದರಾಚೆಗಿನ ಶ್ರೇಣಿಯಲ್ಲಿ ಕಾರ್ಯನಿರ್ವಹಿಸುತ್ತದೆ.

2G ಮತ್ತು 3G ಮತ್ತು 4G ಮತ್ತು 5G ಗಳ ನಡುವಿನ ಹೋಲಿಕೆ:

ಹೆಚ್ಚು ತಾಂತ್ರಿಕವಾಗಿ ಹೇಳದೇ, ಸರಳವಾಗಿ ಹೇಳಬೇಕೆಂದರೆ, ಪ್ರತೀ 'G' ಅಥವಾ ಸೆಲ್ಯುಲಾರ್ ತಂತಜ್ಞಾನದ ಜನರೇಶನ್ ಯಾವ ಸೆಲ್ಯುಲಾರ್ ಬ್ಯಾಂಡ್‍ನೊಂದಿಗೆ ಪರಿಣಾಮಕಾರಿಯಾಗಿ ಬಳಸಬಹುದೆಂದು ಸರಳವಾಗಿ ನಿರ್ಧರಿಸುತ್ತದೆ. 600 MHz ಬ್ಯಾಂಡ್‍ನ ಭೌತಿಕ ಗುಣಲಕ್ಷಣಗಳು (ಶ್ರೇಣಿ, ಬ್ಯಾಂಡ್ ವಿಡ್ತ್ ಇತ್ಯಾದಿ) ಬದಲಾಗದೇ ಹಾಗೇ ಉಳಿಯುತ್ತದೆ, ಆದರೆ, ಹೆಚ್ಚು ಪರಿಣಾಮಕಾರಿಯಾದ 5G ನೆಟ್‌ವರ್ಕ್‌ 600 MHz ನಲ್ಲಿ ಕಾರ್ಯನಿರ್ವಹಿಸಬಹುದಾಗಿದ್ದು, ಇದು ಹೆಚ್ಚಿನ ಸಾಧನಗಳಲ್ಲಿ ಹಾಗೂ 2G, 3G ಅಥವಾ 4G ನೆಟ್‌ವರ್ಕ್‌ಗಳಿಗಿಂತ ಹೆಚ್ಚಿನ ವೇಗದಲ್ಲಿ ಕಾರ್ಯ ನಿರ್ವಹಿಸುತ್ತದೆ.

ಭಾರತದಲ್ಲಿ ಪ್ರಸ್ತುತ 4G ಸನ್ನಿವೇಶವನ್ನು ತೆಗೆದುಕೊಳ್ಳಿ. ಮೊದಲ ಬಾರಿ ಅದು ಆರಂಭವಾದಾಗ, ನಾವು 300 Mbps ವೇಗದ ಭರವಸೆ ನೀಡಿದ್ದೆವು. ಇಂದು, ವಿಶ್ವದ ಅತಿದೊಡ್ಡ 4G ನೆಟ್‌ವರ್ಕ್‌ಗಳಲ್ಲಿ ಒಂದಾಗಿದ್ದು, ಇದರ ಕಂಜೆಷನ್ ಮತ್ತು ಬ್ಯಾಂಡ್ ವಿಡ್ತ್ ಸೀಮಿತತೆ ಸರಾಸರಿ ವೇಗ 10-15 Mbps  ನಡುವಿನ ಶ್ರೇಣಿ ಯಲ್ಲಿದೆ.4G ಈಗಾಗಲೇ ಸಂತೃಪ್ತ ಸ್ಥಿತಿಯಲ್ಲಿದೆ.

ವಿಶ್ವದಲ್ಲಿ ನಡೆಯುತ್ತಿರುವಂತೆ ಮುಂದುವರೆದರೆ, 5G 4G ನಿರ್ವಹಿಸುತ್ತಿರುವ ಬ್ಯಾಂಡ್‍ನ ಆವರ್ತನದಲ್ಲೇ ಕಾರ್ಯನಿರ್ವಹಿಸುವ ಮೂಲಕ ಸುಲಭವಾಗಿ 4G ಯನ್ನು ಆಕ್ರಮಿಸುತ್ತದೆ, ನಾವು ಸ್ವಲ್ಪಮಟ್ಟಿನ ವೇಗದ ಭರವಸೆ ನೀಡುತ್ತೇವೆ, ಆದರೆ ಹೆಚ್ಚು ಸ್ಥಿರ ನೆಟ್‌ವರ್ಕ್‌ ಇದಾಗಿರುತ್ತದೆ. ಇದು ಗೆಲ್ಲಲು ಪ್ರಮುಖ ಕಾರಣ ಇದೇ ಆಗಿದೆ.

ನಾವು 1 Gbps ವೇಗ ಮತ್ತು ಶೂನ್ಯ-ಸುಪ್ತತೆಯ ಗೇಮಿಂಗ್ ಪಡೆಯಲು ಸಾಧ್ಯವಿಲ್ಲವೇ?:

ಹೌದು ಮತ್ತು ಇಲ್ಲ. ಇಂತಹ ವೇಗವನ್ನು ಪಡೆಯಲು, ನಿಮಗೆ 30,000 MHz ಹಾಗೂ ಅದಕ್ಕಿಂತ ಹೆಚ್ಚಿನ (mm ವೇವ್ ಎಂದು ಕರೆಯಲಾಗುತ್ತದೆ)  ವೇಗದಲ್ಲಿ ಕಾರ್ಯನಿರ್ವಹಿಸುವ 5G ನೆಟ್‌ವರ್ಕ್‌ ಅಗತ್ಯವಿದೆ. ಇಂತಹ  ಆವರ್ತನಗಳಲ್ಲಿ, ನೀವು 1 Gbps ಡೌನ್‌ಲೋಡ್ ವೇಗವನ್ನು ನೀಡುವ ಸೆಲ್ ಸಂಕೇತಗಳನ್ನು ಹುಡುಕಬೇಕಾಗುತ್ತದೆ, ಆದರೆ, ಗಾಜಿನ ಹಾಳೆ ಅಥವಾ ಮರದ ಎಲೆಗಳಿಂದ ಅಡಚಣೆಗೆ ಒಳಗಾಗಬಹುದಾದ ದುರ್ಬಲವೂ ಆಗಿರಬಹುದು. ನೀವು ಟವರ್ ಅನ್ನು ಸೂಕ್ಷ್ಮವಾಗಿ ಗಮನಿಸಿ ಆಂಟೆನಾ ಗೋಚರಿಸುವಂತೆ ಸ್ಪಷ್ಟ ಲೈನ್ ಹೊಂದಿರಬೇಕು. ಇದನ್ನು ಇನ್ನೂ ಪ್ರಾಯೋಗಿಕವಾಗಿ ಅಳವಡಿಸಿಲ್ಲ, ಪರಿಶೀಲನೆಯಲ್ಲಿದೆ.

ಹೆಚ್ಚು ಮುಖ್ಯವಾಗಿ, ಈ ಆವರ್ತನಗಳನ್ನು ಸೆಲ್ಯುಲಾರ್ ನೆಟ್‌ವರ್ಕ್‌ ಕಾರ್ಯನಿರ್ವಾಹಕರ ಬಳಕೆಗೆ ನಿಯೋಜಿಸುವ ಅಗತ್ಯವಿದೆ. ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ, ಇದರರ್ಥ TRAI ಮತ್ತು COAI ನೊಂದಿಗೆ ಚರ್ಚಿಸಬೇಕಾಗಿದ್ದು, ಯಾವ ಸೂಕ್ತ mmWave ಆವರ್ತನ ಬ್ಯಾಂಡ್ ಅನ್ನು ಮುಕ್ತಗೊಳಿಸಬಹುದು, ಇಂತಹ ನೆಟ್‌ವರ್ಕ್‌ಗಳಿಗೆ ನೀಡಲಾದ ನಿಬಂಧನೆಗಳು ಮತ್ತು ಮಾರ್ಗಸೂಚಿಗಳನ್ನು ಅಳವಡಿಸುವುದು, ನಿರ್ಬಂಧಗಳು, ಸ್ಪೆಕ್ಟ್ರಮ್ ಹರಾಜುಗಳು ಇತ್ಯಾದಿಗಳ ಬಗ್ಗೆ ನಿರ್ಧರಿಸಲು ಮಿಲಿಟರಿ ಹಾಗೂ ISRO ದಂತಹ ಸಂಸ್ಥೆಗಳೊಂದಿಗೆ ಚರ್ಚಿಸುವ ಅಗತ್ಯವಿದೆ.

ಈ ಮಿತಿಗಳೊಂದಿಗೆ, ಭಾರತವೂ ಸೇರಿದಂತೆ, ಅನೇಕ ದೇಶಗಳಲ್ಲಿ, 5G 6 GHz ಅಥವಾ ಸಬ್-6 ಗಿಂತ ಕೆಳಗಿನ ಬ್ಯಾಂಡ್‍ಗೆ  ಪ್ರಾಯೋಗಿಕವಾಗಿ ಸೀಮಿತಗೊಳಿಸಲಾಗಿದೆ. ನಿಖರ ಬ್ಯಾಂಡ್‍ಗಳನ್ನು ಇನ್ನೂ ಅಂತಿಮಗೊಳಿಸಬೇಕಿದ್ದು, ಮುಂದಿನ ದಿನಗಳಲ್ಲಿ ಸಬ್-6 ಗೆ ಸೀಮಿತವಾಗುತ್ತದೆಯೇ ಎನ್ನುವುದು ನಮಗೆ ತಿಳಿದಿಲ್ಲ.

ಈ ಎಲ್ಲಾ ಹಾಗೂ ಇನ್ನೂ ಅನೇಕ ಕಾರಣಗಳಿಂದ, OnePlus ಸೇರಿದಂತೆ ಹೆಚ್ಚಿನ ಸ್ಮಾರ್ಟ್ ಫೋನ್ ತಯಾರಕರು, ಕೇವಲ ಸಬ್-6 5G ಬ್ಯಾಂಡ್‍ಗಳನ್ನು ಬೆಂಬಲಿಸುತ್ತಿವೆ,

ಭಾರತದಲ್ಲಿ OnePlus 9 ನಂತಹ ಫೋನ್‌ಗಳು 3.5 GHz 5G ಯನ್ನೇ ಏಕೆ ಬೆಂಬಲಿಸುತ್ತವೆ

ನಾವು ಈಗಾಗಲೇ ವಿವರಿಸಿರುವಂತೆ, mmWave ಅನ್ನು ಭಾರತದಲ್ಲಿ ಟೆಲಿಕಾಂ ಕಾರ್ಯನಿರ್ವಾಹಕರ ಬಳಕೆಗೆ ನಿಯೋಜಿಸಲಾಗಿಲ್ಲ. 5G ಪ್ರಯೋಗಗಳು ಕೆಲವೇ ವಾರಗಳ ಹಿಂದೆ ಆರಂಭವಾಗಿದೆ ಹಾಗೂ ಆ ಪ್ರಯೋಗಗಳು ಕೇವಲ ಸಬ್-6 ಬ್ಯಾಂಡ್‍ಗಳಿಗೆ ಸೀಮಿತವಾಗಿತ್ತು. ವಾಸ್ತವದಲ್ಲಿ, ಯೂರೋಪಿಯನ್ ಮತ್ತು ಏಷ್ಯಾ ದೇಶಗಳಿಗೆ n78 ಬ್ಯಾಂಡ್ -3.2 GHz ನಿಂದ 3.67 GHz ವರೆಗಿನ ಶ್ರೇಣಿಯನ್ನು 5G ಬಳಕೆಗೆ ನೀಡಲಾಗುತ್ತದೆಂದು ನಿರೀಕ್ಷಿಸಲಾಗಿತ್ತು. 5G ಗೆ mmWave ಬಳಕೆಗೆ ಅನುಮತಿ ಶೀಘ್ರದಲ್ಲೇ ಬರಲಿದ್ದು, ಅದನ್ನು ನೋಡಲು ನಾವು ಅನೇಕ ವರ್ಷಗಳವರೆಗೆ ನಿರೀಕ್ಷಿಸಬೇಕಾಗಬಹುದು

ಸ್ಪಷ್ಟವಾಗಿ ಹೇಳಬೇಕೆಂದರೆ, OnePlus ನಂತಹ ತಯಾರಕರು mmWave ನಂತಹ ವೇಗವಾದ 5G ಬ್ಯಾಂಡ್‍ಗಳನ್ನು ಬೆಂಬಲಿಸುವುದರಲ್ಲಿ ಅರ್ಥವಿಲ್ಲ, ಇದು ನಮ್ಮಂತಹ ಬಳಕೆದಾರರಿಗೆ ಯಾವುದೇ ಸೂಕ್ತ ಪ್ರಯೋಜನ ನೀಡದೇ ಕೇವಲ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ.
Published by: Sharath Sharma Kalagaru
First published: June 3, 2021, 6:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories