• Home
 • »
 • News
 • »
 • tech
 • »
 • Mobile Bomb: ಮಕ್ಕಳ ಕೈಯಲ್ಲಿ ಬಾಂಬುಗಳಿವೆ! ಪೋಷಕರೇ ಎಚ್ಚರ ಎಚ್ಚರ

Mobile Bomb: ಮಕ್ಕಳ ಕೈಯಲ್ಲಿ ಬಾಂಬುಗಳಿವೆ! ಪೋಷಕರೇ ಎಚ್ಚರ ಎಚ್ಚರ

ಮಕ್ಕಳ ಕೈಯಲ್ಲಿ ಬಾಂಬುಗಳಿವೆ

ಮಕ್ಕಳ ಕೈಯಲ್ಲಿ ಬಾಂಬುಗಳಿವೆ

ಆಧುನಿಕ ತಂತ್ರಜ್ಞಾನದ ಕೊಡುಗೆಗಳಲ್ಲೊಂದಾದ ಮೊಬೈಲ್ ಫೋನುಗಳು ಮಕ್ಕಳ ಕೈಯಲ್ಲಿದ್ದರೆ ಅವು ಅತ್ಯಂತ ಅಪಾಯಕಾರಿ ಬಾಂಬುಗಳಿದ್ದಂತೆ ಎಂದು ಮದ್ರಾಸ್ ಹೈಕೋರ್ಟ್ ಎಚ್ಚರಿಸಿದೆ.

 • Share this:

  ಆಧುನಿಕ ತಂತ್ರಜ್ಞಾನದ (Modern Technology) ಕೊಡುಗೆಗಳಲ್ಲೊಂದಾದ ಮೊಬೈಲ್ ಫೋನುಗಳು (Mobile phones) ಮಕ್ಕಳ ಕೈಯಲ್ಲಿದ್ದರೆ ಅವು ಅತ್ಯಂತ ಅಪಾಯಕಾರಿ (Danger) ಬಾಂಬುಗಳಿದ್ದಂತೆ (Bomb) ಎಂದು ಮದ್ರಾಸ್ ಹೈಕೋರ್ಟ್ (Madras High court) ಎಚ್ಚರಿಸಿದೆ. ಮೊಬೈಲ್ಗಳು ಈ ಸಮಯದಲ್ಲಿ ಅಪಾಯದ ಬಾಗಿಲಾಗಿದೆ ಅಸಹಾಯಕ ಪೋಷಕರು (Parents) ತಮ್ಮ ಮಕ್ಕಳಿಗೆ ಮಹಾಮಾರಿ ಮೊಬೈಲ್ಗಳನ್ನು ಕೊಡಿಸುತ್ತಿದ್ದಾರೆ ಎಂದು ಕೋರ್ಟ್ ತಿಳಿಸಿದೆ.  ಪೋಷಕರು ಇಂತಹ ವಿಷಯದ ಬಗ್ಗೆ ಗಮನಹರಿಸಬೇಕು. ಮತ್ತು ಮಕ್ಕಳ ಮನಸ್ಥಿತಿಯ ಬಗ್ಗೆ ಕಾಳಜಿವಹಿಸಬೇಕು (Care) . ಇಲ್ಲದಿದ್ದಲ್ಲಿ ಮಕ್ಕಳು ದಾರಿ ತಪ್ಪುವುದು ಖಂಡಿತ. ಅದೇ ರೀತಿ ಇದೋಂದು ಎಚ್ಚರದ ಗಂಟೆ ಎಂದು ತಿಳಿದುಕೊಳ್ಳಿ.


  ಈ ಒಂದು ಫಟನೆ ಬೆಚ್ಚಿಬೀಳಿಸುವಂತಿದೆ


  ಒಂದು ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಮಹಿಳಾ ಹಾಸ್ಟೆಲ್ ವಾರ್ಡನ್ ಗೆ ಜಾಮೀನು ನೀಡಿದ ನ್ಯಾಯಮೂರ್ತಿ ಪಿ ದೇವದಾಸ್ ಅವರು ಈ ಮಾತುಗಳನ್ನು ಹೇಳಿದ್ದಾರೆ. ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ದಿವ್ಯಾ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ ಪ್ರಕರಣದಲ್ಲಿ ಹಾಸ್ಟೆಲ್ ವಾರ್ಡನ್ ಕೌಶಿಕಾ ಅವರನ್ನು ಬಂಧಿಸಲಾಗಿತ್ತು.


  ವಿದ್ಯಾರ್ಥಿನಿ ಕೈಯಲ್ಲಿ ಮೊಬೈಲ್ ಇತ್ತೆಂದು ವಾರ್ಡನ್ ಕೌಶಿಕಾ ಅವರು ದಿವ್ಯಾಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದಾದ ಮಾರನೆಯ ದಿನವೇ ದಿವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಳು.


  One of the offerings of modern technology mobile phones are like the most dangerous bombs in the hands of children
  ಮಕ್ಕಳ ಕೈಯಲ್ಲಿ ಮೊಬೈಲ್ ಬಾಂಬುಗಳಿವೆ !


  ಇದನ್ನೂ ಓದಿ: Google ಸಂಸ್ಥೆಗೆ ಬಿತ್ತು ಬರೋಬ್ಬರಿ 1337 ಕೋಟಿ ರೂಪಾಯಿ ದಂಡ! ಇಂಟರ್‌ನೆಟ್‌ ದೈತ್ಯ ಕಂಪನಿ ಮಾಡಿದ ತಪ್ಪೇನು?


  ಕಾಲೇಜಿನಲ್ಲಿ ನಿರ್ದಿಷ್ಟ ಅವಧಿಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ವಿದ್ಯಾರ್ಥಿಗಳು ದಿನದಲ್ಲಿ ಹೆಚ್ಚಿನ ಸಮಯವನ್ನು ಮೊಬೈಲ್ ಜೊತೆ ಕಳೆಯುತ್ತಿದ್ದಾರೆ. ಇದರಿಂದ ಅವರು ತಮ್ಮ ಅಮೂಲ್ಯ ಸಮಯವನ್ನು ಕಾಲಹರಣ ಮಾಡುತ್ತಿದ್ದಾರೆ. ಇನ್ನು ಮಕ್ಕಳು ಮೊಬೈಲಿಗಾಗಿ ರಂಪಾಟ ಮಾಡುತ್ತಾರೆ ಎಂದು ಪೋಷಕರೂ ಮಕ್ಕಳ ಮನಸ್ಸಿಗೆ ನೆಮ್ಮದಿ ಸಿಗಲೆಂದು, ಮೊಬೈಲ್  ಕೊಡಿಸಿಬಿಡುತ್ತಾರೆ.


  ಇದು ಅನಾಹುತಗಳನ್ನು ಸೃಷ್ಟಿಸುತ್ತಿದೆ' ಎಂದು  ನ್ಯಾಯಮೂರ್ತಿ ಪಿ ದೇವದಾಸ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.


  ವಿದ್ಯಾರ್ಥಿಗಳು ತುಂಬಾ ಸೂಕ್ಷ್ಮಜೀವಿಳಾಗುತ್ತಿದ್ದಾರೆ. ಅವರನ್ನು ಎಚ್ಚರಿಕೆ ಮತ್ತು ಜಾಣ್ಮೆಯಿಂದ ನಿಭಾಯಿಸಬೇಕು. ವಾರ್ಡನ್ ಆದವರು ಮಕ್ಕಳ ಪಾಲಿಗೆ ತಾಯಿ, ಸೋದರಿ ಮತ್ತು ಪಾಲಕಿಯೂ ಆಗಿರುತ್ತಾಳೆ. ಈ ಸೂಕ್ಷ್ಮವನ್ನು ಅರಿತಿರಬೇಕು ಎಂದು ಜಾಮೀನು ನೀಡುವ ಮುನ್ನ ವಾರ್ಡನ್ ಕೌಶಿಕಾಗೆ ನ್ಯಾಯಮೂರ್ತಿಗಳು ತಿಳಿಹೇಳಿದ್ದಾರೆ.


  ಮಕ್ಕಳ ಸಾವಿಗೆ ಕಾರಣೀಕರ್ತನಾದ ಅಮೆಜಾನ್


  ಆಹಾರ ರಕ್ಷಕ ರಾಸಾಯನಿಕ ಸೋಡಿಯಂ ನೈಟ್ರೈಟ್ ಹೆಚ್ಚಿನ ಮಟ್ಟದ ಶುದ್ಧತೆಯ ಹೆಸರಿನಲ್ಲಿ ಸೈಟ್‌ನಲ್ಲಿ ಮಾರಾಟವಾಗಿದೆ. ಈ ಕುರಿತು ಕಳೆದ ತಿಂಗಳು ಕ್ಯಾಲಿಫೋರ್ನಿಯಾದ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.


  ರಾಸಾಯನಿಕವನ್ನು ಖರೀದಿಸಿದ ಗ್ರಾಹಕರು  ಸರಿಯಾದ ಡೋಸ್ ಅನ್ನು ಅಳೆಯಲು ಮಾಪನ, ನಿರೋಧಕ ಔಷಧ ಹಾಗೂ ಜೊತೆಯಾಗಿ ಸಾಯಲು ಈ ಸಾಮಾಗ್ರಿಗಳನ್ನು ಹೇಗೆ ನಿರ್ವಹಿಸುವುದು ಎಂಬ ಸೂಚನೆಗಳನ್ನೊಳಗೊಂಡ ಅಮೆಜಾನ್ ಆವೃತ್ತಿಯ ಕೈಪಿಡಿಯನ್ನು ಖರೀದಿಸಲು ಅಮೆಜಾನ್ ಶಿಫಾರಸು ಮಾಡಿದೆ ಎಂಬುದಾಗಿ ಮೊಕದ್ದಮೆಯಲ್ಲಿ ಉಲ್ಲೇಖಿಸಲಾಗಿದೆ.


  ಇದನ್ನೂ ಓದಿ: Anand Mahindra: ಇಂಟರ್‌ನೆಟ್ ನಿಮ್ಮನ್ನು ಗಮನಿಸುತ್ತಿದೆ ಹುಷಾರ್! ಹೀಗಂದಿದ್ದೇಕೆ ಆನಂದ್ ಮಹೀಂದ್ರಾ?


  ವಾಣಿಜ್ಯ ಆಹಾರ ತಯಾರಿಕೆಯಲ್ಲಿ ಸೋಡಿಯಂ ನೈಟ್ರೈಟ್ ಅನ್ನು ಕಡಿಮೆ ಸಾಂದ್ರತೆಗಳಲ್ಲಿ ಬಳಸಲಾಗುತ್ತದೆ.


  ಸೋಡಿಯಂ ನೈಟ್ರೈಟ್ ಅನ್ನು ಹೆಚ್ಚು ಸೇವಿಸುವವರು ಉಸಿರಾಟದ ತೊಂದರೆ, ಹೊಟ್ಟೆ ನೋವು ಅಥವಾ ಇನ್ನಿತರ ಕಾರಣಗಳಿಂದ ಸಾಯಬಹುದು.


  ಅಮೆಜಾನ್‌ನಿಂದ ಮಾರಾಟವಾಗುತ್ತಿರುವ ರಾಸಾಯನಿಕದ ಕೆಲವು ಉದಾಹರಣೆಗಳು ಹೆಚ್ಚಿನ ಶುದ್ಧತೆಯ ಮಟ್ಟವನ್ನು ಹೊಂದಿವೆ, ಅಂದರೆ ಅದು ಹೆಚ್ಚು ವಿಷಕಾರಿಯಾಗಿದೆ ಎಂದರ್ಥ ಎಂದು ಗೋಲ್ಡ್‌ಬರ್ಗ್ ತಿಳಿದ್ದಾರೆ.

  Published by:Harshith AS
  First published: