news18-kannada Updated:April 7, 2021, 12:53 PM IST
apps
ಜಾಗತಿಕವಾಗಿ 15,000 ಜನರನ್ನು ಸಂಶೋಧನೆ ಒಳಪಡಿಸಿದಾಗ ಅಚ್ಚರಿ ಎನಿಸುವ ಮಾಹಿತಿ ಬಹಿರಂಗವಾಗಿದೆ. ಕಾಲು ಭಾಗದಷ್ಟು ಆನ್ಲೈನ್ ಬಳಕೆದಾರರು ಆ್ಯಪ್ಗಳಿಗೆ ತಮ್ಮ ಮೈಕ್ರೋಫೋನ್ ಮತ್ತು ವೆಬ್ ಕ್ಯಾಮ್ ಬಳಸಲು ಅನುಮತಿ ನೀಡಿರುತ್ತಾರೆನ್ನುವ ಆಘಾತಕಾರಿ ಅಂಶ ಬಯಲಾಗಿದೆ. ಆದರೂ ವೆಬ್ಕ್ಯಾಮ್ನ ಸುರಕ್ಷತೆಯ ಅರಿವು ಹೆಚ್ಚಾಗಿಯೇ ಇದೆ. ಇನ್ನು, 10 ಜನರಲ್ಲಿ 6 ಜನರು ವೆಬ್ ಕ್ಯಾಮ್ ಮೂಲಕ ತಮಗೆ ಗೊತ್ತಿಲ್ಲದೇ ತಮ್ಮ ವೈಯಕ್ತಿಕ ನಡವಳಿಕೆಯನ್ನು ಗಮನಿಸುತ್ತಿರುವುದರ ಬಗ್ಗೆ ಆತಂಕಕ್ಕೀಡಾದರು. ಮೆಲಿಶಿಯಸ್ ಸಾಫ್ಟ್ವೇರ್ ಬಳಸಿ ಇದನ್ನು ಮಾಡಲಾಗುತ್ತಿದೆ ಎನ್ನುವುದನ್ನು ಶೇಕಡಾ 60 ರಷ್ಟು ಜನರು ಬಲ್ಲವರಾಗಿದ್ದಾರೆ. ಈ ಅಧ್ಯಯನವನ್ನು ಕೈಗೊಂಡಿದ್ದ Kaspersky ಎನ್ನುವ ಸೈಬರ್ ಸೆಕ್ಯೂರಿಟಿ ವೇದಿಕೆ ಈ ಅಂಶವನ್ನು ಬಹಿರಂಗಪಡಿಸಿದೆ. ವಿಡಿಯೋ ಕಾನ್ಫರೆನ್ಸಿಂಗ್ ವೇದಿಕೆ ಮತ್ತು ಸಾಂಕ್ರಾಮಿಕದ ಸಮಯದಲ್ಲಿ ಇದರ ಫಲಿತಾಂಶವನ್ನು ಹೆಚ್ಚಾಗಿ ಗಮನಿಸಬಹುದಾಗಿದೆ.
ಈ ತಂತ್ರಜ್ಞಾನಗಳು ಮತ್ತು ಆ್ಯಪ್ಗಳು ಜನರಿಗೆ ಅಗತ್ಯವಾದ ಕಳೆದ ವರ್ಷದ ಕೆಲಸದ ಬೆಳವಣಿಗೆಗಳು, ಸಾಮಾಜಿಕ ಮತ್ತು ಮನರಂಜನಾ ಅಗತ್ಯತೆಗಳಲ್ಲಿ ಪ್ರಯೋಜನಕ್ಕೆ ಬರುವುದರಿಂದ ತಮ್ಮ ಮೈಕ್ರೊಫೋನ್ ಮತ್ತು ಕ್ಯಾಮರಾಕ್ಕೆ ಅಪ್ಲಿಕೇಶನ್ಗಳಿಗೆ ಒಪ್ಪಿಗೆಯನ್ನು ಸೂಚಿಸುತ್ತಾರೆಂದು ಹೇಳಿದ್ದಾರೆ. Kaspersky ಸೈಬರ್ ಸೆಕ್ಯೂರಿಟಿಯ ಸಂಶೋಧನೆಯ ಪ್ರಕಾರ ಜನರು ಡಿಜಿಟಲ್ ಕ್ಷೇತ್ರದ ಸೌಲಭ್ಯ ಮತ್ತು ಶ್ರೀಮಂತಿಕೆಗೆ ತಮ್ಮನ್ನು ಒಗ್ಗಿಸಿಕೊಂಡಿದ್ದಾರೆ. ಆ ಮೂಲಕ ಇದರ ಸೇವೆ ಪಡೆಯಲು 25-35 ವರ್ಷ ವಯಸ್ಸಿನ ಶೇಕಡಾ 27 ರಷ್ಟು ಜನರು ಈ ಎಲ್ಲದ್ದಕ್ಕೂ ಪರ್ಮಿಷನ್ ಬಟನ್ ಕ್ಲಿಕ್ ಮಾಡುತ್ತಿದ್ದಾರೆ.
ಈ ಸಮಸ್ಯೆ ವಯಸ್ಸಾದವರಲ್ಲಿ ಕಡಿಮೆ ಇದ್ದು, 55 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮೇಲ್ಪಟ್ಟ 38 ಪ್ರತಿಶತದಷ್ಟು ಜನರು ಅಂತಹ ಆ್ಯಪ್ ಮತ್ತು ಸೇವೆಗಳಿಗೆ ಒಪ್ಪಿಗೆಯನ್ನು ನೀಡುವುದಿಲ್ಲ ಎನ್ನುವ ಅಂಶ ಬಹಿರಂಗಪಡಿಸಿದ್ದಾರೆ. ಇದಿಷ್ಟೇ ಅಲ್ಲದೇ ಬಹುತೇಕರಿಗೆ ವೆಬ್ಕ್ಯಾಮ್ ಬಳಕೆಯ ಪ್ರೊಟೋಕಾಲ್ನ ಅರಿವಿಲ್ಲದೇ ಬಳಸುತ್ತಿರುವುದು ಸಾಮಾನ್ಯವಾಗಿದೆ.
ಆನ್ಲೈನ್ ಸುರಕ್ಷತೆಯ ಬಗ್ಗೆ ಇಮ್ಮಡಿಯಾಗಿರುವ ಟ್ರೆಂಡ್ ಬಗ್ಗೆ ಈಗ ನಾವು ಸಾಕಷ್ಟು ಗಮನಿಸಿದ್ದೇವೆ. Kaspersky ಸೈಬರ್ ಸೆಕ್ಯೂರಿಟಿಯ ಗ್ರಾಹಕ ಉತ್ಪನ್ನ ಮಾರುಕಟ್ಟೆಯ ಮುಖ್ಯಸ್ಥೆ ಮರೀನಾ ಟಿಟೋವಾ ಹೇಳುವ ಪ್ರಕಾರ ಸೈಬರ್ ಸೆಕ್ಯೂರಿಟಿಯೂ ವಿಡಿಯೋ ಮತ್ತು ಮೈಕ್ರೋಫೋನ್ನ ಆ್ಯಕ್ಸೆಸ್ಗೆ ಒಪ್ಪಿಗೆ ನೀಡುವ ಮುನ್ನ ಪರಿಶೀಲಿಸುವಂತಹ ಮನಸ್ಥಿತಿಗೆ ಗ್ರಾಹಕರನ್ನು ಸಿದ್ಧ ಮಾಡುತ್ತದೆ.
ಆಧುನಿಕ ಡಿಜಿಟಲ್ ಕಮ್ಯೂನಿಕೇಷನ್ನಿಂದ ಸೇವೆಯನ್ನು ಸ್ವೀಕರಿಸುವಾಗ, ಸಾಕಷ್ಟು ಎಚ್ಚರಿಕೆಯಿಂದ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಯಾವ ಆ್ಯಪ್ಗಳು ಮೈಕ್ರೋಫೋನ್ ಮತ್ತು ಕ್ಯಾಮರಾ ಬಳಸಲು ಪರ್ಮಿಷನ್ ಕೇಳುತ್ತಿವೆ ಎಂದು ತಿಳಿದುಕೊಳ್ಳುವುದು ಸೂಕ್ತ.
ಉದಾ: ವಿಡಿಯೋ ಕಾಲಿಂಗ್ ಆ್ಯಪ್ಗಳು ಕ್ಯಾಮರಾ ಪರ್ಮಿಷನ್ ಕೇಳುವುದು ಒಪ್ಪುವಂತದ್ದು. ಆದರೆ ಇನ್ಯಾವುದೋ ಆ್ಯಪ್ಗೆ ಮೈಕ್ರೊಫೋನ್ ಪರ್ಮಿಷನ್ನ ಅಗತ್ಯವಿರದಿದ್ದರೂ ಪರ್ಮಿಷನ್ ಕೇಳುತ್ತಿದ್ದರೆ ಅದರ ಬಗ್ಗೆ ಎಚ್ಚರವಾಗಿರಬೇಕು. ಈ ಹಿನ್ನೆಲೆಯಲ್ಲಿ ಪರಿಶೀಲಿಸಿ ನಂತರ ಪರ್ಮಿಷನ್ ಕೊಡುವುದು ಉತ್ತಮ.
ಬಳಕೆದಾರರು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ವೆಬ್ಕ್ಯಾಮ್ ಬಳಕೆ ಮೇಲೆ ಹಿಡಿತವನ್ನು ಸಾಧಿಸಬಹುದು. Kaspersky ಸೈಬರ್ ಸೆಕ್ಯೂರಿಟಿ ನಿಮಗೆ ಕೆಲವು ಅಂಶಗಳನ್ನು ತಿಳಿಸುತ್ತದೆ. ಬಹಳ ಸರಳವಾದ ಒಂದು ವೆಬ್ ಕ್ಯಾಮ್ ಕವರ್ ಅನ್ನು ನೀವು ಕೊಂಡು ಬಳಸಿ. ನಿಮ್ಮ ವೆಬ್ಕ್ಯಾಮ್ನಲ್ಲಿ ಕೆಲಸ ಮುಗಿದ ಬಳಿಕ ವೆಬ್ ಕ್ಯಾಮ್ ಕವರ್ನಿಂದ ನಿಮ್ಮ ಡಿವೈಸ್ ಮುಚ್ಚಿ. ಇದು ನಿಮಗೆ ಮಾನಸಿಕ ನೆಮ್ಮದಿ ನೀಡುತ್ತದೆ. ಅಲ್ಲದೇ ಪರಿಣಾಮಕಾರಿ ಸೆಕ್ಯೂರಿಟಿ ಸಲ್ಯೂಷನ್ಗಾಗಿ ಅಡ್ವಾನ್ಸ್ಡ್ ಸುರಕ್ಷತೆಯ ಕಡೆ ಗಮನಕೊಡಿ. ಅಲ್ಲದೇ, ನಿಮ್ಮ ಕಂಪ್ಯೂಟರ್, ಮ್ಯಾಕ್ , ಆ್ಯಂಡ್ರಾಯ್ಡ್ ಮತ್ತು ಐಓಎಸ್ ಉಪಕರಣಗಳ ರಕ್ಷಣೆಗೆ ನೆರವಾಗುತ್ತದೆ.
Published by:
Harshith AS
First published:
April 7, 2021, 12:52 PM IST