Ola Scooter: S1 ಪ್ರೊ ಖರೀದಿದಾರರಿಗಾಗಿ S1 ಇಲೆಕ್ಟ್ರಿಕ್ ಸ್ಕೂಟರ್‌ನ Production ನಿಲ್ಲಿಸಿದ ಓಲಾ!

S1 ಪ್ರೊ ಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು S1 ಆವೃತ್ತಿಯ ಬೇಸಿಕ್ ವಿಶೇಷತೆಯನ್ನು ಬುಕ್ ಮಾಡಿದವರು ಅಪ್‌ಗ್ರೇಡ್ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

S1 ಅನ್ನು ಬುಕ್ ಮಾಡಿದ ಗ್ರಾಹಕರು(Customers) S1 ಆವೃತ್ತಿಯನ್ನು 2022 ರ ಕೊನೆಯಲ್ಲಿ ಮಾತ್ರವೇ ಉತ್ಪಾದಿಸಲಾಗುವುದು ಎಂಬ ಮಾಹಿತಿಯನ್ನು(Information) ಪಡೆದುಕೊಂಡಿದ್ದಾರೆ. ಓಲಾ ಇಲೆಕ್ಟ್ರಿಕ್ (Ola Electric) ಕಳೆದ ವರ್ಷ ಡಿಸೆಂಬರ್‌ನಿಂದ ವಿತರಣೆಯನ್ನು ಪ್ರಾರಂಭಿಸಿದ್ದರೂ ಸಹ, ಎಲ್ಲಾ ಗ್ರಾಹಕರು ಇದರಿಂದ ಖುಷಿಗೊಂಡಂತಿಲ್ಲ. ಇತ್ತೀಚಿನ ಬೆಳವಣಿಗೆಯ (Developments) ಮೇರೆಗೆ S1 ಖರೀದಿದಾರರಿಗೆ ತಿಳಿಸಿರುವುದೇನೆಂದರೆ S1 ಉತ್ಪಾದನೆಯನ್ನು(S1 production) 2022 ರ ಕೊನೆಗೆ ವರ್ಗಾಯಿಸಲಾಗಿದ್ದು ಈ ಕುರಿತು ಮಾಹಿತಿ ನೀಡಿದ ಓಲಾ ಇಲೆಕ್ಟ್ರಿಕ್, ಪ್ರಸ್ತುತ S1 ಪ್ರೊದ ಪ್ರೊಡಕ್ಶನ್‌ಗೆ ಆದ್ಯತೆ ನೀಡುತ್ತಿದ್ದು, ಹೆಚ್ಚಿನ ಗ್ರಾಹಕರು ಉನ್ನತ ವಿಶೇಷತೆಗಳಿರುವ ಆವೃತ್ತಿಗೆ ಇದೀಗ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದು ಇದಕ್ಕೆ ಕಾರಣ ಎಂಬುದಾಗಿ ತಿಳಿಸಿದೆ.


ಹೋಮ್ ಡೆಲಿವರಿ ಡಿಸ್‌ಪ್ಯಾಚ್

S1 ಪ್ರೊ ಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು S1 ಆವೃತ್ತಿಯ ಬೇಸಿಕ್ ವಿಶೇಷತೆಯನ್ನು ಬುಕ್ ಮಾಡಿದವರು ಅಪ್‌ಗ್ರೇಡ್ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದೆ. ಓಲಾ ಆ್ಯಪ್‌ನಲ್ಲಿ ಅಂತಿಮ ಪಾವತಿ ವಿಂಡೋವನ್ನು ಜನವರಿ 21 ರಂದು ಸಂಜೆ 6 ಗಂಟೆಗೆ ತೆರೆದ ಸಮಯದಲ್ಲಿ ಇದನ್ನು ಮಾಡಬಹುದಾಗಿದೆ. ಡಿಸ್‌ಪ್ಯಾಚ್‌ಗಳನ್ನು ಜನವರಿ ಹಾಗೂ ಫೆಬ್ರವರಿ ತಿಂಗಳುಗಳಾದ್ಯಂತ ಮಾಡಲಾಗುತ್ತದೆ. ಈ ಸಮಯದಲ್ಲಿ ಗ್ರಾಹಕರು ಸ್ಕೂಟರ್‌ಗಳ ಹೋಮ್ ಡೆಲಿವರಿಗಾಗಿ ಡಿಸ್‌ಪ್ಯಾಚ್ ನಂತರ 10-20 ದಿನಗಳ ಕಾಲ ಕಾಯಬೇಕಾಗುತ್ತದೆ.

ಅದೇ ರೀತಿ ಗ್ರಾಹಕರ ಸ್ಥಳ ಹಾಗೂ ನಗರದ ಆರ್‌ಟಿಒ ಅಗತ್ಯಗಳನ್ನು ಆಧರಿಸಿದೆ ಎಂಬುದಾಗಿ ಸಂಸ್ಥೆ ತಿಳಿಸಿದೆ. S1 ಎಲೆಕ್ಟ್ರಿಕ್ ಸ್ಕೂಟರ್‌ನ ಖರೀದಿದಾರರಿಗೆ ಕಳುಹಿಸಿದ ಇಮೇಲ್ ಪ್ರಕಾರ, ಖರೀದಿದಾರರು ಆ ಆವೃತ್ತಿಗಾಗಿ ಉತ್ಪಾದನೆಯನ್ನು ಪುನರಾರಂಭಿಸುವವರೆಗೆ ಕಾಯುವ ಆಯ್ಕೆಯನ್ನು ಹೊಂದಿರುತ್ತಾರೆ ಎಂದರ್ಥ. ಸುಮಾರು 9-11 ತಿಂಗಳ ಹೆಚ್ಚುವರಿ ಕಾಯುವ ಸಮಯವನ್ನು ಕಂಪನಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: Ola Grocery: 10 ನಿಮಿಷದಲ್ಲೇ ಮನೆಗೆ ಬರುತ್ತೆ ದಿನಸಿ ಸಾಮಾನು; ಬೆಂಗಳೂರು, ಮುಂಬೈನಲ್ಲಿ Ola ಸೇವೆಗೆ ಹೆಚ್ಚಿದ ಡಿಮ್ಯಾಂಡ್​​

S1 ಗಾಗಿ ಉತ್ಪಾದನೆ ಪುನರಾರಂಭವಾದ ತಕ್ಷಣ ಗ್ರಾಹಕರಿಗೆ ಸೂಚನೆ ನೀಡಲಾಗುತ್ತದೆ. ನಂತರ ಅವರು ಅಂತಿಮ ಪಾವತಿಯನ್ನು ಮಾಡಬಹುದು. S1 ಖರೀದಿದಾರರಿಗೆ ಇತರ ಆಯ್ಕೆಯೆಂದರೆ ಅವರು ಬುಕಿಂಗ್ ಅನ್ನು ರದ್ದುಗೊಳಿಸಬಹುದಾಗಿದ್ದು, ಓಲಾ ಆ್ಯಪ್‌ನಲ್ಲಿ ಅಥವಾ ಓಲಾದ ಗ್ರಾಹಕ ಬೆಂಬಲ ತಂಡವನ್ನು ಸಂಪರ್ಕಿಸುವ ಮೂಲಕ ಇದನ್ನು ಮಾಡಬಹುದು.

S1 ಖರೀದಿದಾರರಿಗೆ ಹೊಸ ಅಪ್‌ಡೇಟ್:

ಕಂಪನಿಯ ಸಿಇಒ ಈ ವಿಷಯಕ್ಕೆ ಸಂಬಂಧಿಸಿದಂತೆ ಅಪ್‌ಡೇಟ್ ಒಂದನ್ನು ಪೋಸ್ಟ್ ಮಾಡಿದ್ದು ಇದನ್ನು ಓಲಾ S1 ಖರೀದಿದಾರರಿಗೆ ಕಳುಹಿಸಲಾಗಿದೆ. ಸಂಸ್ಥೆಯ ಎಲ್ಲಾ S1 ಗ್ರಾಹಕರನ್ನು S1 ಪ್ರೊ ಹಾರ್ಡ್‌ವೇರ್‌ಗೆ ಅಪ್‌ಗ್ರೇಡ್ ಮಾಡುತ್ತಿದ್ದು, ಗ್ರಾಹಕರು ಎಲ್ಲಾ S1 ವೈಶಿಷ್ಟ್ಯಗಳನ್ನು ಪಡೆಯುತ್ತಾರೆ ಮತ್ತು ಕಾರ್ಯಕ್ಷಮತೆಯ ಅಪ್‌ಗ್ರೇಡ್‌ನೊಂದಿಗೆ ಪ್ರೊ ಶ್ರೇಣಿ, ಹೈಪರ್ ಮೋಡ್, ಇತರ ವೈಶಿಷ್ಟ್ಯಗಳನ್ನು ಅನ್‌ಲಾಕ್ ಮಾಡಬಹುದು. ಮಿಷನ್ ಎಲೆಕ್ಟ್ರಿಕ್‌ನ ಆರಂಭಿಕ ಬೆಂಬಲಿಗರಾಗಿದ್ದಕ್ಕಾಗಿ ಧನ್ಯವಾದಗಳು! ಜನವರಿ ಫೆಬ್ರವರಿಯಲ್ಲಿ ಡಿಸ್‌ಪ್ಯಾಚ್ ಆಗುತ್ತದೆ. ಇನ್ನಷ್ಟು ವಿವರಗಳಿಗೆ ಇಮೇಲ್ ಮಾಡಿ ಎಂದು ತಿಳಿಸಿದ್ದಾರೆ.

S1 ಗ್ರಾಹಕರ ಪ್ರತಿಕ್ರಿಯೆಗಳು:

ಖರೀದಿದಾರರಿಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಅಪ್‌ಡೇಟ್‌ಗಳನ್ನು ಕಳುಹಿಸುವ ಮೂಲಕ ಓಲಾ S1 ಎಲೆಕ್ಟ್ರಿಕ್ ಸ್ವಲ್ಪ ಗೊಂದಲವನ್ನು ಉಂಟುಮಾಡಿದೆ. ಅನೇಕ S1 ಗ್ರಾಹಕರು ಸಾಮಾಜಿಕ ಚಾನಲ್‌ಗಳಲ್ಲಿ ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ. ಕೆಲವು ಗ್ರಾಹಕರು ಮುಂದಿನ ದಿನಗಳಲ್ಲಿ ಅಪ್‌ಗ್ರೇಡ್ ಮಾಡುವ ಆಯ್ಕೆಯನ್ನು ಪಡೆಯಲಿದ್ದಾರೆ ಎಂಬ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದರೆ.

ಇನ್ನು ಕೆಲವರು ಸ್ಪಷ್ಟವಾಗಿ ಅಸಮಾಧಾನಗೊಂಡಿರುವುದು ಕಂಡುಬಂದಿದ್ದು ಇದನ್ನು ಕಂಪನಿಯ ಪಕ್ಷಪಾತದ ವಿಧಾನ ಎಂದು ಕರೆಯುತ್ತಿದ್ದಾರೆ. ಎಲ್ಲಾ ಆವೃತ್ತಿಗಳಿಗೂ ಉತ್ಪಾದನೆಯನ್ನು ವಿಳಂಬಗೊಳಿಸಿದರೆ ವಿಷಯಗಳು ವಿಭಿನ್ನವಾಗಿರುತ್ತಿದ್ದವು. ಆದರೆ ಇತರಕ್ಕಿಂತ ನಿರ್ದಿಷ್ಟ ಆವೃತ್ತಿಗೆ ಆದ್ಯತೆಯನ್ನು ನೀಡಿದಾಗ, ಅದನ್ನು ಸ್ವಾಭಾವಿಕವಾಗಿ ಗ್ರಾಹಕರು ವಿರೋಧಿಸುತ್ತಾರೆ ಎಂದಾಗಿದೆ.

S1 ವರ್ಸಸ್. S1 ಪ್ರೊ:

ದೈನಂದಿನ ಅಗತ್ಯಗಳಿಗೆ S1 ಉತ್ತಮವಾಗಿದ್ದರೂ, S1 ಪ್ರೊ ಖರೀದಿದಾರರು ಹಲವಾರು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಾರೆ. ಉದಾಹರಣೆಗೆ, S1 ನಾರ್ಮಲ್ ಮತ್ತು ಸ್ಪೋರ್ಟ್‌ನ ರೈಡ್ ಮೋಡ್‌ಗಳನ್ನು ಹೊಂದಿದ್ದರೆ, S1 ಪ್ರೊ ಹೆಚ್ಚುವರಿ ಹೈಪರ್ ರೈಡ್ ಮೋಡ್ ಅನ್ನು ಪಡೆಯುತ್ತದೆ. ಹೈಪರ್ ಮೋಡ್‌ನಲ್ಲಿ, ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 115 ಕಿಮೀ ಆಗಿದ್ದು ನಗರ ವಾತಾವರಣಗಳಲ್ಲಿ ಇದನ್ನು ಸಂಪೂರ್ಣವಾಗಿ ಬಳಸಲಾಗುವುದಿಲ್ಲ, ಆದರೆ ಓವರ್‌ಟೇಕಿಂಗ್ ಸಮಯದಲ್ಲಿ ಇದು ಸೂಕ್ತವಾಗಿರಬಹುದು. S1 ಗರಿಷ್ಠ ವೇಗ ಗಂಟೆಗೆ 90 ಕಿಮೀ ಆಗಿದೆ.

ಇದನ್ನೂ ಓದಿ: Ola S1 Electric Scooter: ಒಂದು ಬಾರಿ ಚಾರ್ಜ್ ಮಾಡಿದರೆ 181 ಕಿ.ಮೀ ಮೈಲೇಜ್; ಓಲಾ ಸ್ಕೂಟರ್​​​ನಲ್ಲಿದೆ ರಿವರ್ಸ್ ಫೀಚರ್

S1 ಪ್ರೊ ವೇಗವಾಗಿರುವ ವೇಗವರ್ಧನೆಯನ್ನು ಪಡೆದಿದ್ದು, ಜೊತೆಗೆ 0-40 kmph ಅನ್ನು 3 ಸೆಕೆಂಡ್‌ಗಳಲ್ಲಿ ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ. S1 ಗೆ ಹೋಲಿಸಿದರೆ 3.6 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. S1 ಪ್ರೊನ ಅತ್ಯಂತ ಉಪಯುಕ್ತ ಪ್ರಯೋಜನವೆಂದರೆ ಅದು 181 ಕಿಮೀ ಹೆಚ್ಚಿನ ವ್ಯಾಪ್ತಿಯನ್ನು ನೀಡುತ್ತದೆ. ಇದೇ ಸಮಯದಲ್ಲಿ S1, 121 ಕಿಮೀ ವ್ಯಾಪ್ತಿಯನ್ನು ಹೊಂದಿದೆ.
Published by:vanithasanjevani vanithasanjevani
First published: