ಡಿಸೆಂಬರ್ 15 ಕ್ಕೆ ರಸ್ತೆಗಿಳಿಯಲಿವೆ ಓಲಾ ಸ್ಕೂಟರ್​ಗಳು, ಬೆಲೆ-ಬಣ್ಣ ಮೈಲೇಜ್ ಫುಲ್ ಡೀಟೆಲ್ಸ್

Ola electric Scooter: ಸ್ಕೂಟರ್‌ಗಳು ತಯಾರಾಗುತ್ತಿವೆ. ಉತ್ಪಾದನೆಯನ್ನು ಹೆಚ್ಚಿಸಲಾಗಿದೆ ಮತ್ತು ಡಿಸೆಂಬರ್ 15 ರಿಂದ ವಿತರಣೆಯನ್ನು ಪ್ರಾರಂಭಿಸಲು ಸಜ್ಜಾಗಿದೆ ಎಂದು ಭವಿಶ್ ಅಗರ್ವಾಲ್ ವಾಹನ ವಿತರಣೆ ದಿನಾಂಕವನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಘೋಷಣೆ ಮಾಡಿದ್ದಾರೆ

ಓಲಾ

ಓಲಾ

 • Share this:
  ಓಲಾ ಕಂಪೆನಿಯು(Ola) ಎಲೆಕ್ಟ್ರಿಕ್ ವಾಹನ(Electric Vehicle) ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸುವ ತವಕದಲ್ಲಿದೆ. ಆನ್​ಲೈನ್ ಟ್ಯಾಕ್ಸಿ(Online Taxi) ಸೇವೆಯ ಮೂಲಕ ಈಗಾಗಲೇ ಮನೆಮಾತಾಗಿರುವ ಓಲಾ ಇದೇ ಮೊದಲ ಬಾರಿ ತನ್ನದೇ ಬ್ರ್ಯಾಂಡ್​ನ ಎಲೆಕ್ಟ್ರಿಕ್ ಸ್ಕೂಟರ್​ನ್ನು(Electric Scooter) ಪರಿಚಯಿಸಲು ಮುಂದಾಗಿದೆ.ಅದರಂತೆ ಕಳೆದ ಕೆಲವು ತಿಂಗಳುಗಳ ಹಿಂದೆ ಶೀಘ್ರದಲ್ಲೇ ಪ್ರಮುಖ ನಗರಗಳಲ್ಲಿ(Town) ಮಾರಾಟ ಮಳಿಗೆಗಳನ್ನು(Shop) ತೆರೆಯಲ್ಲಿದ್ದೇವೆ. ಹಾಗೆಯೇ ಬುಕ್ಕಿಂಗ್(Booking) ಮಾಡಲಾದ ಸ್ಕೂಟರ್​ನ್ನು ಕೊರೋನಾ(Corona) ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ತಲುಪಿಸುವುದಾಗಿ ಓಲಾ ಕಂಪೆನಿ ಘೋಷಿಸಿತ್ತು ಈಗ ಯಾವಾಗ ಓಲಾ ಸ್ಕೂಟರ್ ಅಧಿಕೃತವಾಗಿ ಲಾಂಚ್ ಆಗಲಿದೆ ಎಂಬ ದಿನಾಂಕ ಘೋಷಣೆ ಮಾಡಿದೆ.

  ಓಲಾ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ದಿನಾಂಕ ಘೋಷಣೆ

  ಸುಮಾರು 4 ತಿಂಗಳ ಕಾಲ ಕಾಯುತ್ತಿದೆ, Ola ಎಲೆಕ್ಟ್ರಿಕ್ ಸ್ಕೂಟರ್‌ಗಳು S1 ಮತ್ತು S1 Pro ಅಂತಿಮವಾಗಿ ಈ ತಿಂಗಳು ಭಾರತೀಯ ರಸ್ತೆಗಳಿಗೆ ಬರಲಿವೆ. ಓಲಾ ಎಲೆಕ್ಟ್ರಿಕ್‌ನ ಸಿಇಒ ಮತ್ತು ಸಹ-ಸಂಸ್ಥಾಪಕರಾದ ಭವಿಶ್ ಅಗರ್ವಾಲ್, EV ಸ್ಟಾರ್ಟ್‌ಅಪ್ ಗ್ರಾಹಕರಿಗೆ ಬಹು ನಿರೀಕ್ಷಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ವಿತರಣೆ ಯಾವಾಗ ಪ್ರಾರಂಭವಾಗಲಿದೆ ಎಂಬ ಮಾಹಿತಿ ಬಹಿರಂಗ ಮಾಡಿದ್ದಾರೆ.

  ಇದನ್ನೂ ಓದಿ: ಬೆಂಗಳೂರಿನಲ್ಲಿ Rapido ಆಟೋ ಸೇವೆ: ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕೋಬೇಕಾ ಎನ್ನುತ್ತಿರುವ ಚಾಲಕರು

  ಈ ಹಿಂದೆ Ola Electric ಅಕ್ಟೋಬರ್ 25 ಮತ್ತು ನವೆಂಬರ್ 25 ರ ನಡುವೆ ಮೊದಲ ಬ್ಯಾಚ್ ಡೆಲಿವರಿ ನಡೆಯಲಿದೆ ಎಂದು ಘೋಷಿಸಿತ್ತು. ಆದ್ರೆ , ಕಂಪನಿಯು ಇ-ಸ್ಕೂಟರ್‌ನ ವಿತರಣೆ ವಿಳಂಬವಾಗಲಿದೆ ಅಂತ ತನ್ನ ಗ್ರಾಹಕರಿಗೆ ತಿಳಿಸಿತ್ತು.. ಆದ್ರೆ ಈಗ ಓಲಾ ಎಲೆಕ್ಟ್ರಿಕ್‌ನ ಸಿಇಒ ಮತ್ತು ಸಹ-ಸಂಸ್ಥಾಪಕರಾದ ಭವಿಶ್ ಅಗರ್ವಾಲ್ ವಾಹನ ವಿತರಣೆ ದಿನಾಂಕವನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ

  ಡಿ.15 ರಿಂದ ಓಲಾ ಎಲೆಕ್ಟ್ರಿಕ್ ಬೈಕ್ ವಿತರಣೆ

  ಸ್ಕೂಟರ್‌ಗಳು ತಯಾರಾಗುತ್ತಿವೆ. ಉತ್ಪಾದನೆಯನ್ನು ಹೆಚ್ಚಿಸಲಾಗಿದೆ ಮತ್ತು ಡಿಸೆಂಬರ್ 15 ರಿಂದ ವಿತರಣೆಯನ್ನು ಪ್ರಾರಂಭಿಸಲು ಸಜ್ಜಾಗಿದೆ ಎಂದು ಭವಿಶ್ ಅಗರ್ವಾಲ್ ವಾಹನ ವಿತರಣೆ ದಿನಾಂಕವನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಘೋಷಣೆ ಮಾಡಿದ್ದಾರೆ

  ಈ ಹಿಂದೆ ಓಲಾ 499 ರೂ. ಮುಂಗಡ ಹಣ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಲು ತನ್ನ ಗ್ರಾಹಕರಿಗೆ ಸೂಚಿಸಿತ್ತು.. ಅದರಂತೆ 1 ಕೋಟಿಗೂ ಅಧಿಕ ಜನರು ಇಲ್ಲಿಯವರೆಗೆ ಓಲಾ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ ಬುಕ್ ಮಾಡಿದ್ದಾರೆ. ಇನ್ನು ಓಲಾ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂರು ಮಾಡೆಲ್​ಗಳಲ್ಲಿ ಬಿಡುಗಡೆ ಮಾಡಲಿದೆ. ಈ ಮೂರು ಮಾಡೆಲ್​​ಗಳಿಗೆ ಓಲಾ ಎಸ್, ಎಸ್ 1 ಮತ್ತು ಓಲಾ ಎಸ್ 1 ಪ್ರೊ ಎಂದು ಹೆಸರಿಡಲಾಗಿದೆ. ಇವುಗಳು ಕ್ರಮವಾಗಿ 2kW, 4kW ಮತ್ತು 7kW ಮೋಟರ್‌ಗಳನ್ನು ಹೊಂದಿರಲಿವೆ. ಬೇಸ್ ಮಾಡೆಲ್​ 45 ಕಿಲೋಮೀಟರ್ ವೇಗ ಹೊಂದಿದ್ದರೆ, ಎರಡನೆಯದು 70 ಕಿಲೋಮೀಟರ್ ವೇಗವನ್ನು ಹೊಂದಿರಲಿದೆ. ಹಾಗೆಯೇ 7kW ಮಾಡೆಲ್​ನ್ನು 95 ಕಿ.ಮೀ ವೇಗದಲ್ಲಿ ಓಡಿಸಬಹುದು.

  ಇದನ್ನೂ ಓದಿ: ಅದೊಂದು ಅವಮಾನ ‘ಓಲಾ ಕ್ಯಾಬ್’ ಸ್ಥಾಪಿಸಲು ಕಾರಣವಾಯಿತು!

  10 ಬಣ್ಣಗಳಲ್ಲಿ ಓಲಾ ಸ್ಕೂಟರ್ ಲಭ್ಯ

  ಇನ್ನು S1 ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬೆಲೆ ₹1 ಲಕ್ಷವಾಗಿದ್ದರೆ, S1 pro ಬೆಲೆ ₹1.30 ಲಕ್ಷಕ್ಕೆ ಬರುತ್ತದೆ (ಎಕ್ಸ್ ಶೋರೂಮ್, ರಾಜ್ಯ ಸಬ್ಸಿಡಿ ಹೊರತು ಪಡಿಸಿ ). S1 ರೂಪಾಂತರವು 121 ಕಿಮೀಗಳನ್ನು ಕ್ರಮಿಸುತ್ತದೆ ಎಂದು ಹೇಳಿಕೊಂಡರೆ, ಹೆಚ್ಚು ದುಬಾರಿಯಾದ S1 Pro ರೀಚಾರ್ಜ್ ಮಾಡುವ ಮೊದಲು 180 ಕಿಲೋಮೀಟರ್‌ಗಳನ್ನು ಸುತ್ತುತ್ತದೆ ಇನ್ನು ಒಟ್ಟು 10 ಬಣ್ಣಗಳಲ್ಲಿ ಓಲಾ ಸ್ಕೂಟರ್ ಖರೀದಿಗೆ ಬುಕ್ಕಿಂಗ್​ಗೆ ಲಭ್ಯವಿದ್ದು, ಗ್ರಾಹಕರು ಕೆಂಪು, ಪಿಂಕ್, ಹಳದಿ, ಸ್ವಿಲರ್, ಬಿಳಿ ಹಾಗೂ ನೀಲಿ ಬಣ್ಣಗಳಲ್ಲಿ ಖರೀದಿಸಬಹುದು
  Published by:ranjumbkgowda1 ranjumbkgowda1
  First published: