Ola Electric scooter: ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಓಲಾ ಇ ಸ್ಕೂಟರ್: ಬೆಲೆ ಎಷ್ಟು ಗೊತ್ತಾ?

Ola electric scooter launch on August 15: ಬ್ಯಾಟರಿ 3.6 ಕಿಲೋವ್ಯಾಟ್ ಸಾಮರ್ಥ್ಯವನ್ನು ಹೊಂದಿದ್ದು,  ಇದು ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ಯಾವುದೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಓಲಾ ಸ್ಕೂಟರ್​

ಓಲಾ ಸ್ಕೂಟರ್​

 • Share this:
  ಓಲಾ  ಸಂಸ್ಥೆ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುವ ಬಗ್ಗೆ ಹಲವು ದಿನಗಳಿಂದ ಸುದ್ದಿ ಹರಿದಾಡಿದ್ದವು. ಆದರೆ ಇದೀಗ ಓಲಾ ಎಲೆಕ್ಟ್ರಿಕ್ ನ ಸಿಇಓ ಭಾವಿಶ್ ಅಗರ್ವಾಲ್ ಆ ಸುದ್ದಿಯನ್ನು ದೃಢಪಡಿಸಿದ್ದಾರೆ. ಇದೇ ಆಗಸ್ಟ್ 15ರಂದು ಓಲಾ  ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ. ಬಿಡುಗಡೆ  ಸಮಾರಂಭದಲ್ಲಿ ಸ್ಕೂಟರ್​​ನ ವಿಶೇಷತೆ, ವೈಶಿಷ್ಟ್ಯಗಳ ಬಗ್ಗೆ ಹಾಗೂ ಮಾರಾಟ ಸೇರಿದಂತೆ ಇತರ ಮಾಹಿತಿಯನ್ನು ಹಂಚಿಕೊಳ್ಳಲಿದ್ದೇವೆ ಎಂದಿದ್ದಾರೆ. ಇನ್ನು ಈ ಹೊಸ ಸ್ಕೂಟರ್ ಸಿರೀಸ್ ಗೆ ಓಲಾ ಸಿರೀಸ್ ಎಸ್ ಎಂದು ಹೆಸರಿಡಲಾಗಿದೆ ಎಂದು ಹೇಳಲಾಗುತ್ತಿದೆ.

  ಓಲಾ ಎಲೆಕ್ಟ್ರಿಕ್ ಸ್ಕೂಟರ್ , ಎಟರ್ಗೋ ಆಪ್ಸ್ಕೂಟರ್ನಲ್ಲಿ ಇರುವಂಥಹ ಬಾಳೆಹಣ್ಣಿನ ಆಕಾರದ ಬ್ಯಾಟರಿಗಳನ್ನು ಹೊಂದಿದೆ. ಆದರೆ ಇದರಲ್ಲಿ ಬ್ಯಾಟರಿಯನ್ನು ತೆಗೆಯಲು ಸಾಧ್ಯವಿಲ್ಲ. ಅದನ್ನು ಫಿಕ್ಸ್ ಮಾಡಲಾಗಿದೆ. ಇನ್ನು ಬ್ಯಾಟರಿ 3.6 ಕಿಲೋವ್ಯಾಟ್ ಸಾಮರ್ಥ್ಯವನ್ನು ಹೊಂದಿದ್ದು,  ಇದು ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ಯಾವುದೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

  ಇನ್ನು ವಾಹನದ ಮೈಲೇಜ್ 150 ಕಿಲೋ ಮೀಟರ್ ಎಂದು ಅಂದಾಜಿಸಲಾಗಿದೆ. ಆದರೆ ARAI (Automotive Research Association of India) ಪ್ರಮಾಣೀಕರಿಸುವ ಶ್ರೇಣಿಯ ಪ್ರಕಾರ ಇನ್ನು ಹೆಚ್ಚಿರಬಹುದು ಎಂದು ಹೇಳಲಾಗುತ್ತಿದೆ. ಕೆಲ ಅಂದಾಜಿನ ಪ್ರಕಾರ 180 ರಿಂದ 190 ಕಿಲೋಮೀಟರ್ಗಳ ನಡುವೆ ಇರಬಹುದು ಎನ್ನಲಾಗಿದೆ. ಅಲ್ಲದೇ ಈ ಸ್ಕೂಟರ್ ಸ್ಪಕ್ ಮಾದರಿ-ವಿಭಿನ್ನ ಬ್ಯಾಟರಿ ಕಾನ್ಫಿಗರೇಶನ್ ಇದ್ದು, ಗ್ರಾಹಕರಿಗೂ ಕೂಡ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ಬೆಲೆ ನಿರ್ಧರಿಸಲಾಗುವುದು ಎಂದು ಕಂಪನಿ ತಿಳಿಸಿದೆ.

  ಓಲಾ ಎಲೆಕ್ಟ್ರಿಕ್ ಸೀರೀಸ್ ಎಸ್ ಇ-ಸ್ಕೂಟರ್ ತನ್ನ ವಿಭಾಗದಲ್ಲಿ ಅತಿದೊಡ್ಡ ಸೀಟ್ ಅಂಡರ್ ಸ್ಟೋರೇಜ್ ಹೊಂದಿದೆ. ಎರಡು ಅರ್ಧ ಮುಖದ ಹೆಲ್ಮೆಟ್​​​​ಗಳನ್ನು ಸೀಟ್ ಕೆಳಭಾಗದಲ್ಲಿ ಇಡಬಹುದು ಎಂದು ಕಂಪನಿ  ಹೇಳಿಕೊಂಡಿದೆ. ಇನ್ನು ಈ ಸ್ಕೂಟರ್  ಸೈಡ್-ಸ್ಟ್ಯಾಂಡ್ ಕಟ್-ಆಫ್ ಫಂಕ್ಷನ್( ಗಾಡಿ ಸ್ಡ್ಯಾಂಡ್ ಹಾಕಿದ ತಕ್ಷಣ ಗಾಡಿ ಆಫ್ ಆಗುತ್ತದೆ). ಸಂಪರ್ಕ ವೈಶಿಷ್ಟ್ಯಗಳಿಗಾಗಿ ಇ-ಸಿಮ್ ಅನ್ನು ಸಹ ಹೊಂದಿರುತ್ತದೆ.  ಈ ಗಾಡಿ ಒಟ್ಟು ಹತ್ತು ಬಣ್ಣಗಳಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ. ಓಲಾದ ಎಲೆಕ್ಟ್ರಿಕ್ ಸ್ಕೂಟರ್ ಏಕ-ಬದಿಯ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಶನ್ ಮತ್ತು ಹಿಂಭಾಗದಲ್ಲಿ ಅಡ್ಡಲಾಗಿ  ಶಾಕ್ ಅಬ್ಸಾರ್ಬರ್ ಅನ್ನು ಅಳವಡಿಸಲಾಗಿದೆ.  ಜೊತೆಗೆ ಸ್ಲಾಟ್ ಫ್ರಂಟ್ ಮತ್ತು ಡಿಸ್ಕ್ ಬ್ರೇಕ್ ಹೊಂದಿದ

  ಇದನ್ನೂ ಓದಿ: iPhone: ಐಫೋನ್‌ ಬಳಕೆದಾರರೇ: ಈ ಕೂಡಲೇ ನಿಮ್ಮ ಫೋನ್‌ ಸಾಫ್ಟ್‌ವೇರ್‌ ಅಪ್ಡೇಟ್‌ ಮಾಡಿಕೊಳ್ಳಿ..!

  ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸಧ್ಯ ಭಾರತದ 100 ನಗರಳಲ್ಲಿ ಚಾರ್ಜಿಂಗ್ ಪಾಯಿಂಟ್ ಗಳನ್ನು ನಿರ್ಮಿಸಿದೆ. ಅಲ್ಲಿ ನಿಧಾನಗತಿಯ ಮತ್ತು ವೇಗವಾಗಿ ಎರೆಡು ರೀತಿಯಲ್ಲಿ( Fast and Slow Charging Points) ಚಾರ್ಜ್ ಮಾಡುವ ಅವಕಾಶ ನೀಡಿದೆ. ಹಾಗೆಯೇ ಮುಂದಿನ ದಿನಗಳಲ್ಲಿ 400 ಕ್ಕೂ ಹೆಚ್ಚು ನಗರಗಳಲ್ಲಿ ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ಈ ಸ್ಕೂಟರ್ ಅನ್ನು ಆನ್ಲೈನ್ ಮೂಲಕ ಮತ್ತು ನೇರವಾಗಿ ಸಹ ಮಾರಾಟ ಮಾಡುವ ಅವಕಾಶವನ್ನು ಕಂಪನಿ ನೀಡಿದೆ. ದೇಶದ ಪ್ರತಿ ನಗರದಲ್ಲಿ ರೀಟೈಲ್ ಅಂಗಡಿಗಳಲ್ಲಿ ಸಹ ಮಾರಾಟಕ್ಕೆ ಮೊದಲ ದಿನದಿಂದಲೇ ಅವಕಾವಿದೆ ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯದ ಒಂದು ಅಂದಾಜಿನ ಪ್ರಕಾರ ಈ ಓಲಾ ಇ- ಸ್ಕೂಟರ್​​ನ ಬೆಲೆ 80 ಸಾವಿರದಿಂದ 1 ಲಕ್ಷದವರೆಗೆ ಇರಲಿದೆ  ಎನ್ನಲಾಗುತ್ತಿದೆ.
  Published by:Kavya V
  First published: