Ola Electric Scooters: ಶೀಘ್ರವೇ ರಸ್ತೆಗಿಳಿಯಲಿವೆ ಓಲಾ ಎಲೆಕ್ಟ್ರಿಕ್ ಸ್ಕೂಟರ್

Ola Electric scooters: ಓಲಾ ಸ್ಕೂಟರ್ ಕೇವಲ 499 ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬಹುದು. ಮತ್ತೊಂದು ವಿಶೇಷ ಅಂದರೆ ದಾಖಲೆ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಆದ ಹೆಗ್ಗಳಿಕೆಗೂ ಪಾತ್ರವಾಗಿದೆ. ನವೆಂಬರ್ 20 ರಿಂದ ಓಲಾ ದೇಶಾದ್ಯಂತ ಟೆಸ್ಟ್ ರೈಡ್ ಆರಂಭಿಸಿತ್ತು.

ಓಲಾ ಎಲೆಕ್ಟ್ರಿಕ್ ಸ್ಕೂಟರ್

ಓಲಾ ಎಲೆಕ್ಟ್ರಿಕ್ ಸ್ಕೂಟರ್

  • Share this:
    ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ (Petrol and Diesel)ಬೆಲೆಗಳು ಗಗನಕ್ಕೇರಿ(Hike) ವಾಹನ ಸವಾರರ ಪರದಾಡುವಂತಾಗಿದೆ. ಅಗತ್ಯ ವಸ್ತುಗಳ ಜೊತೆಗೆ ಇಂಧನ ಬೆಲೆ ಏರಿಕೆಯ ಹೊಡೆತಕ್ಕೆ ಜನಸಾಮಾನ್ಯರು ತತ್ತರಿಸಿ ಹೋಗಿರುವುದಂತೂ ನಿಜ. ಹಾಗಾಗಿ ಇದರಿಂದ ಬೇಸತ್ತ ದೇಶದ ಜನರು ಎಲೆಕ್ಟ್ರಿಕ್ ವಾಹನ(Electric Scooter)ಗಳ ಕಡೆಗೆ ಆಸಕ್ತಿ ತೋರಿಸುತ್ತಿರುವುದು ಹೆಚ್ಚಾಗಿದೆ. ಇದನ್ನು ಗಮನದಲ್ಲಿಕೊಂಡು ಅನೇಕ ಕಂಪನಿಗಳು ಪೂಪೋಟಿ ಮೇಲೆ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸಿ ನಾಮುಂದು ತಾಮುಂದು ಎಂದು ರಸ್ತೆಗಳಿಸುತ್ತಿವೆ. ಇದರ ಸಾಲಿಗೆ ಓಲಾ ಸಂಸ್ಥೆ ಸೇರಿದೆ ಎಂದರೆ ತಪ್ಪಾಗಲಾದರು. ಹೌದು ದೇಶದಲ್ಲಿ ಸಂಚಲನ ಸೃಷ್ಟಿಸಿರುವ ಓಲಾ ಎಲೆಕ್ಟ್ರಿಕ್(Ola Electric Scooter) S1 ಹಾಗೂ S1 Pro ಸ್ಕೂಟರ್ ಬೈಕ್ ಈಗಾಗಲೇ ತನ್ನ ಟೆಸ್ಟ್ ರೈಡ್(Test Ride) ಮುಗಿಸಿದ್ದು, ಇನ್ನೇನು ರಸ್ತೆಗಿಳಿಯಲು(Indian roads) ಸಜ್ಜಾಗಿವೆ. ತುಂಬಾ ಹತ್ತಿರದಲ್ಲಿ ಅಂದರೆ ಇದೇ ಡಿಸೆಂಬರ್(December) 15 ರಿಂದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಆರಂಭಗೊಳ್ಳುತ್ತಿದ್ದು, ತಡ ಮಾಡದೇ ನಿಮ್ಮ ಬುಕ್ಕಿಂಗ್‌ನ್ನು ಕಾಯ್ದಿಸಿಕೊಳ್ಳಿ.

    ಡಿಸೆಂಬರ್ 15 ರಿಂದ ಡಿಲಿವರಿ
    ಈ ಮೊದಲು ಅಕ್ಟೋಬರ್ 25, ಬಳಿಕ ನವೆಂಬರ್ 25 ರಿಂದ ಓಲಾ ಸ್ಕೂಟರ್ ವಿತರಣೆ ಆರಂಭಗೊಳ್ಳಲಿದೆ ಎಂದು ಓಲಾ ಕಂಪನಿ ಹೇಳಿತ್ತು. ಆದರೆ ಕೆಲ ಕಾರಣಗಳಿಂದ ಓಲಾ ಸ್ಕೂಟರ್ ವಿತರಣೆ ವಿಳಂಬವಾಗಿತ್ತು. ಇದೀಗ ಡಿಸೆಂಬರ್ 15 ರಿಂದ ಓಲಾ ಸ್ಕೂಟರ್ ವಿತರಣೆಯಾಗಲಿದೆ ಎಂದು ಓಲಾ ಸಿಇಓ ಹಾಗೂ ಸಹ ಸಂಸ್ಥಾಪಕ ಭವಿಷ್ ಅಗರ್ವಾಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: Ola Cab: ಅದೊಂದು ಅವಮಾನ ‘ಓಲಾ ಕ್ಯಾಬ್’ ಸ್ಥಾಪಿಸಲು ಕಾರಣವಾಯಿತು!

    ಓಲಾ ಬುಕ್ ಮಾಡಿದ ಗ್ರಾಹಕರಿಗೆ ಈಗಾಗಲೇ ಕಂಪನಿ ಇ ಮೇಲ್ ಮೂಲಕ ನೂತನ ಡೆಲಿವರಿ ದಿನಾಂಕವನ್ನು ತಿಳಿಸಿದೆ. ನಾಲ್ಕು ತಿಂಗಳಿನಿಂದ ಓಲಾ ಸ್ಕೂಟರ್‌ಗಾಗಿ ಕಾಯುತ್ತಿದ್ದ ಗ್ರಾಹಕರಿಗೆ ಇದೀಗ ಸ್ಕೂಟರ್ ಲಭ್ಯವಾಗಲಿದೆ. ಭಾರತದ ರಸ್ತೆಗಳಲ್ಲಿ ಇನ್ನು ಓಲಾ ಅಬ್ಬರ ಆರಂಭಗೊಳ್ಳಲಿದೆ. ಓಲಾ ಸ್ಕೂಟರ್ ಉತ್ಪಾದನೆ ಚುರುಕಿನಿಂದ ಆಗುತ್ತಿದೆ. ಎಲ್ಲವೂ ಸಜ್ಜಾಗಿದೆ. ಡಿಸೆಂಬರ್ 15 ರಿಂದ ಡಿಲಿವರಿ ಆರಂಭಗೊಳ್ಳುತ್ತಿದೆ ಎಂದು ಭವಿಷ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

    ಟೆಸ್ಟ್ ರೈಡ್ ವಿಶೇಷ
    ಓಲಾ ಸ್ಕೂಟರ್ ಕೇವಲ 499 ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬಹುದು. ಮತ್ತೊಂದು ವಿಶೇಷ ಅಂದರೆ ದಾಖಲೆ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಆದ ಹೆಗ್ಗಳಿಕೆಗೂ ಪಾತ್ರವಾಗಿದೆ. ನವೆಂಬರ್ 20 ರಿಂದ ಓಲಾ ದೇಶಾದ್ಯಂತ ಟೆಸ್ಟ್ ರೈಡ್ ಆರಂಭಿಸಿತ್ತು. ಈಗಾಗಲೇ 20,000ಕ್ಕೂ ಹೆಚ್ಚು ಟೆಸ್ಟ್ ರೈಡ್ ಮಾಡಲಾಗಿದೆ. ಇನ್ನು ಪ್ರತಿ ತಿಂಗಳು 10,000 ಟೆಸ್ಟ್ ರೈಡ್ ಮಾಡುವ ಗುರಿ ಇಟ್ಟುಕೊಂಡಿದೆ. ದೇಶದ 1,000 ನಗರಗಳಲ್ಲಿ ಟೆಸ್ಟ್ ರೈಡ್ ನಡೆಯಲಿರುವುದು ವಿಶೇಷ.

    ಗ್ರಾಹಕರು ಕಂಗಾಲಾಗಿದ್ದರು
    ವಿಳಂಭವಾದ ಹಿನ್ನಲೆಯಲ್ಲಿ ಓಲಾ ಎಲೆಕ್ಟ್ರಿಕ್ ಕಾಯುತ್ತಿದ್ದ ಗ್ರಾಹಕರಿಗೆ ಕ್ಷಮೆಯಾಚಿಸಿದೆ ಮತ್ತು ಗ್ರಾಹಕರಿಗೆ ಸ್ಕೂಟರ್‌ಗಳನ್ನು ಶೀಘ್ರವಾಗಿ ತಲುಪಿಸಲು ಉತ್ಪಾದನೆಯನ್ನು ಹೆಚ್ಚಿಸಲಾಗುತ್ತಿದೆ ಎಂದೂ ಭರವಸೆ ನೀಡಿದೆ. ಗ್ರಾಹಕರಿಗಾಗಿ ಈಗಾಗಲೇ ನೀಡಲಾಗಿದ್ದ ದಿನಾಂಕದ ಬದಲಾಗಿ ಡಿಸೆಂಬರ್ 15 ಮತ್ತು ಡಿಸೆಂಬರ್ 30 ರ ನಡುವೆ ಮರು ದಿನಾಂಕ ನಿಗದಿಪಡಿಸಲಾಗಿದೆ ಎಂದು ತಿಳಿಸಿದಿರುವುದಲ್ಲದೇ. ಡೆಲಿವರಿ ಪ್ರಾರಂಭವಾಗುವವರೆಗೆ ತಾಳ್ಮೆಯಿಂದ ಕಾಯುತ್ತಿದ್ದಕ್ಕಾಗಿ ಗ್ರಾಹಕರಿಗೆ ಭವಿಶ್ ಅಗರ್ವಾಲ್ ಧನ್ಯವಾದ ತಿಳಿಸಿದ್ದಾರೆ.

    ಜಾಗತಿಕವಾಗಿ ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಕಂಪನಿಯು ಡೆಲಿವರಿ ವಿಳಂಬ ಅನಿವಾರ್ಯವಾಗಿದೆ ಎಂದು ತಿಳಿಸಿತ್ತು. ಕಂಪನಿಯು ಇ-ಮೇಲ್ ಮೂಲಕ ಗ್ರಾಹಕರಲ್ಲಿ ಕ್ಷಮೆಯಾಚಿಸಿತ್ತು. ನಿಗದಿತ ಸಮಯಕ್ಕೆ ಸ್ಕೂಟರ್ ವಿತರಣೆಯಾಗದ ಕಾರಣ ಸ್ಕೂಟರ್ ಬುಕ್ ಮಾಡಿರುವ ಗ್ರಾಹಕರು ಕಂಗಾಲಾಗಿದ್ದರು.

    2022ರ ಜನವರಿಯಿಂದ  ಎರಡನೇ ಬುಕಿಂಗ್ ಆರಂಭ
    ಭಾರತದಲ್ಲಿ ಓಲಾ ಕಂಪನಿ ಓಲಾ S1 ಹಾಗೂ S1 Pro ಸ್ಕೂಟರ್ ಬಿಡುಗಡೆ ಮಾಡಿದೆ. ಓಲಾ S1 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಓಲಾ S1 Pro ಬೆಲೆ 1.30 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಓಲಾ S1 ಎಲೆಕ್ಟ್ರಿಕ್ ಸ್ಕೂಟರ್ ಒಂಜು ಬಾರಿ ಚಾರ್ಜ್ ಮಾಡಿದರೆ 121 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಇನ್ನು ಓಲಾ S1 Pro ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 180 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ.

    ಇದನ್ನೂ ಓದಿ: Tax Benefits: ಎಲೆಕ್ಟ್ರಿಕ್ ವಾಹನ ಖರೀದಿಸಿದ್ರೆ ಭಾರೀ ಮೊತ್ತದ ಟ್ಯಾಕ್ಸ್ ಉಳಿಸಬಹುದು, ಫುಲ್ ಡೀಟೆಲ್ಸ್ ಇಲ್ಲಿದೆ

    ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಸಬ್ಸಿಡಿ ಆಧಾರದ ಮೇಲೆ ಈ ಸ್ಕೂಟರ್ ಗಳ ಬೆಲೆ ಕಡಿಮೆಯಾಗಲಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್'ನಲ್ಲಿ 3.9 ಕಿ.ವ್ಯಾ ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್‌ ಅಳವಡಿಸಲಾಗಿದೆ. ಇದರ ಎಲೆಕ್ಟ್ರಿಕ್ ಮೋಟಾರ್ 8.5 ಕಿ.ವ್ಯಾ ಪವರ್ ಉತ್ಪಾದಿಸುತ್ತದೆ. ಓಲಾದಲ್ಲಿ ನಾರ್ಮಲ್, ಸ್ಪೋರ್ಟ್ಸ್ ಹಾಗೂ ಹೈಪರ್ ಮೊಡ್ ರೈಡ್ ಆಯ್ಕೆಗಳಿವೆ. 2022ರ ಜನವರಿಯಿಂದ ಎರಡನೇ ಬುಕಿಂಗ್ ಆರಂಭಿಸಲಿದೆ ಎಂದು ಓಲಾ ಕಂಪನಿ ಹೇಳಿದೆ.
    Published by:vanithasanjevani vanithasanjevani
    First published: