ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಒಕಿನೋವಾ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿ ಮತ್ತು ಮಾರಾಟ ಮಾಡುವ CredR ಸಂಸ್ಥೆ ಜೊತೆಗೆ ಕೈಜೋಡಿಸಿಕೊಂಡು ಎಕ್ಸ್ಚೇಂಜ್ ಆಫರ್ ಅನ್ನು ನೀಡಿದೆ. ಹಳೆಯ ವಾಹನಗಳನ್ನು CredRನಲ್ಲಿ ಎಕ್ಸ್ಚೇಂಜ್ ಮಾಡಿ ಹೊಸ ಒಕಿನೊವಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಅವಕಾಶವನ್ನು ಒದಗಿಸಿಕೊಟ್ಟಿದೆ.
ಪೆಟ್ರೋಲ್, ಡೀಸೆಲ್ ವಾಹನಗಳ ಜೊತೆ ಜೊತೆಗೆ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳತ್ತ ತೆರಳುತ್ತಿದ್ದಾರೆ. ಯಾವುದೇ ಖರ್ಚು ಮತ್ತು ಇಂಧನ ಬಳಸದೆ ಎಲೆಕ್ಟ್ರಿಕ್ ವಾಹನವನ್ನು ಚಲಾಯಿಸಬಹುದೆಂಬ ಕಾರಣಕ್ಕೆ ಖರೀದಿಸುತ್ತಿದ್ದಾರೆ. ಅದರಂತೆ ಒಕಿನೋವಾ ಹೊಸ ಆಫರ್ ಪರಿಚಯಿಸುವ ಮೂಲಕ ಮತ್ತಷ್ಟು ಹತ್ತಿರವಾಗಲು ಮುಂದಾಗಿದೆ.
ಸದ್ಯ ಒಕಿನೋವಾ ಮತ್ತು CredR ನೀಡಿರುವ ಎಕ್ಸ್ಚೇಂಜ್ ಆಫರ್ ಕೆಲವೇ ನಗರಗಳಲ್ಲಿ ಮಾತ್ರ ನೀಡಿದೆ. ಡೆಲ್ಲಿ, ಹೈದರಾಬಾದ್, ಜೈಪುರ, ಬೆಂಗಳೂರು, ಪುಣೆ ನಗರದ ಜನರು ಹಳೆಯ ವಾಹನವನ್ನು ಎಕ್ಸ್ಚೇಂಜ್ ಮಾಡುವ ಮೂಲಕ ಒಕಿನೊವಾ ಇ-ಸ್ಕೂಟರ್ ಖರೀದಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ