VIDEO: ಬಿಡುಗಡೆಯಾಯ್ತು ಡುಯೆಲ್​ ಡಿಸ್​ಪ್ಲೇ ಸ್ಮಾರ್ಟ್​ಫೋನ್​; ಹೇಗಿದೆ ಗೊತ್ತಾ?

ನುಬಿಯಾ ಝೆಡ್​20 ಸ್ಮಾರ್ಟ್​ಪೋನ್​ ಎರಡು ಅಮೊಲ್ಡ್​ ಡಿಸ್​ಪ್ಲೇಯನ್ನು ಹೊಂದಿದೆ. ಜೊತೆಗೆ ಸ್ನಾಪ್​​​​​​ಡ್ರ್ಯಾಗನ್​ 855+Socಯನ್ನು ಅಳವಡಿಸಲಾಗಿದೆ.

news18
Updated:August 9, 2019, 2:13 PM IST
VIDEO: ಬಿಡುಗಡೆಯಾಯ್ತು ಡುಯೆಲ್​ ಡಿಸ್​ಪ್ಲೇ ಸ್ಮಾರ್ಟ್​ಫೋನ್​; ಹೇಗಿದೆ ಗೊತ್ತಾ?
ನುಬಿಯಾ ಝೆಡ್​20
  • News18
  • Last Updated: August 9, 2019, 2:13 PM IST
  • Share this:
ಚೀನಾ ಮೂಲದ ನುಬಿಯಾ ಸ್ಮಾರ್ಟ್​ಫೋನ್​ ಸಂಸ್ಥೆ ಡುಯೆಲ್​ ಡಿಸ್​​ಪ್ಲೇ ಹೊಂದಿರುವ ಝೆಢ್​20 ಸ್ಮಾರ್ಟ್​ಫೋನ್​​​ ಅನ್ನು ತಯಾರಿಸಿದ್ದು, ಈ ನೂತನ ಸ್ಮಾರ್ಟ್​ಫೋನ್​ ಅನ್ನು ಬೀಜಿಂಗ್​ನಲ್ಲಿ ನಡೆದ ಗ್ಲೋಬಲ್​ ಇವೆಂಟ್​ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದೆ.

ನುಬಿಯಾ ಝೆಡ್​20 ಸ್ಮಾರ್ಟ್​ಪೋನ್​ ಎರಡು ಅಮೊಲ್ಡ್​ ಡಿಸ್​ಪ್ಲೇಯನ್ನು ಹೊಂದಿದೆ. ಜೊತೆಗೆ ಸ್ನಾಪ್​​​​​​ಡ್ರ್ಯಾಗನ್​ 855+Socಯನ್ನು ಅಳವಡಿಸಲಾಗಿದೆ. ಗ್ರಾಹಕರಿಗಾಗಿ ಈ ಸ್ಮಾರ್ಟ್​ಫೋನ್​ ಕಪ್ಪು, ನೀಲಿ, ಹಾಗೂ ಕೇಸರಿ ಬಣ್ಣದಲ್ಲಿ ಸಿಗಲಿದೆ. ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನುಬಿಯಾ ಝೆಡ್​20 ಸ್ಮಾರ್ಟ್​ಪೋನ್​ ಆ.16 ರಿಂದ ಗ್ರಾಹಕರ ಕೈ ಸೇರಲಿದೆ. ಸೆಪ್ಟಂಬರ್​ ತಿಂಗಳಿನಲ್ಲಿ ದೇಶದಾದ್ಯಂತ ಬಿಡುಗಡೆಗೊಳಿಸಲು ನಿರೀಕ್ಷೆಯಲ್ಲಿದೆ.

ನುಬಿಯಾ ಝೆಡ್​ 20 ಸ್ಮಾರ್ಟ್​ಪೋನ್ ವಿಶೇಷತೆ:

ನುಬಿಯಾ ಝೆಡ್​ 20 ಸ್ಮಾರ್ಟ್​ಪೋನ್ ಮುಂಭಾಗವು​ 6.42 ಇಂಚಿನ FHD+ ಕರ್ವ್ಡ್​​​ ಡಿಸ್​ಪ್ಲೇಯನ್ನು ಹೊಂದಿದೆ. ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 5.1 ಇಂಚಿನ HD+ ಅಮೋಲ್ಡ್​ ಪ್ಯಾನೆಲ್​ ನೀಡಲಾಗಿದೆ. ಅಂತೆಯೇ, ಈ ಸ್ಮಾರ್ಟ್​ಪೋನ್​ 6GB RAM​ + 128GB ಇಂಟರ್​ನಲ್​ ಸ್ಟೊರೇಜ್​, 8GB RAM+128GB ಸ್ಟೊರೇಜ್​, ಹಾಗೂ 8GB RAM+512GB ಸ್ಟೊರೇಜ್​ನಲ್ಲಿ ಲಭ್ಯವಿದೆ. ಇದರ ಅಂದಾಜು ಬೆಲೆ 35,035 ರಿಂದ 42,079 ಇರಲಿದೆ.

First published:August 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...