ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ‘ರೆಡ್​ ಮ್ಯಾಜಿಕ್​ 3‘ ಗೇಮಿಂಗ್​ ಸ್ಮಾರ್ಟ್​ಫೋನ್​: ಹೇಗಿದೆ ಗೊತ್ತಾ?

Red Magic 3: ಸ್ಮಾರ್ಟ್​ಫೋನ್​​ ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್​​ ಕ್ಯಾಮೆರಾ ಜೊತೆಗೆ LED ಫ್ಲಾಶ್​​ ಲೈಟ್​​​ ಅಳವಡಿಸಲಾಗಿದೆ.

news18
Updated:May 29, 2019, 5:56 PM IST
ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ‘ರೆಡ್​ ಮ್ಯಾಜಿಕ್​ 3‘ ಗೇಮಿಂಗ್​ ಸ್ಮಾರ್ಟ್​ಫೋನ್​: ಹೇಗಿದೆ ಗೊತ್ತಾ?
‘ರೆಡ್​ ಮ್ಯಾಜಿಕ್​ 3‘ ಸ್ಮಾರ್ಟ್​ಫೋನ್
  • News18
  • Last Updated: May 29, 2019, 5:56 PM IST
  • Share this:
ಚೀನಾ ಮೂಲದ  ನುಬಿಯಾ ಕಂಪೆನಿ ಗ್ರಾಹಕರಿಗಾಗಿ ‘ರೆಡ್​ ಮ್ಯಾಜಿಕ್​ 3‘ ಹೆಸರಿನ ಗೇಮಿಂಗ್​ ಸ್ಮಾರ್ಟ್​ಪೋನ್​ವೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ ಜನಪ್ರಿಯತೆ ಪಡೆಯುತ್ತಿರುವ ಈ ಸ್ಮಾಟ್​ಪೋನ್​  ದೇಶಿಯಾ ಮಾರುಕಟ್ಟೆಯಲ್ಲಿ ಸದ್ಯದಲ್ಲೇ ಬಿಡುಗಡೆಯಾಗುವ  ನಿರೀಕ್ಷೆಯಲ್ಲಿದೆ. ಮುಂಬರುವ ಜೂನ್​ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ಈಗಾಗಲೇ ಚೀನಾದಲ್ಲಿ ಜನಪ್ರಿಯತೆ ಪಡೆಯುತ್ತಿರುವ ‘ರೆಡ್​ ಮ್ಯಾಜಿಕ್​ 3‘ ಸ್ಮಾರ್ಟ್​ಫೋನ್​ ವೇಗದ ಪ್ರೊಸೆಸರ್​ ಅನ್ನು ಅಳವಡಿಸಿಕೊಂಡಿದೆ. ಕೇವಲ 10 ನಿಮಿಷ ಚಾರ್ಜ್​ ಮಾಡಿದರೆ ಒಂದು ಗಂಟೆಯ ಕಾಲ ಬ್ಯಾಟರಿ ಬೆಂಬಲವನ್ನು ಒದಗಿಸುತ್ತಿದೆ.

ಇದನ್ನೂ ಓದಿ: ಪಿಯುಸಿ ಪಾಸಾದ ‘ಸೈರಾಟ್’​​ ಚಿತ್ರದ ನಟಿ ರಿಂಕು; ತೆಗೆದ ಅಂಕವೆಷ್ಟು ಗೊತ್ತಾ?

ನೂತನ ಸ್ಮಾರ್ಟ್​ಫೋನ್​ ಸ್ನಾಪ್​ಡ್ರಾಗನ್​ 855 Soc ಪ್ರೊಸೆಸರ್​​ ಹೊಂದಿದೆ. 6.65 ಇಂಚಿನ HD + HDR​ ಅಮೋಲ್ಡ್​​​ ಡಿಸ್​ಪ್ಲೇ ಹೊಂದಿದೆ. ಅಂತೆಯೇ, 12 GB RAM​​ ಮತ್ತು 256 GB ಸ್ಟೊರೇಜ್​ ಅವಕಾಶವನ್ನು ನೀಡಿದೆ.

ಸ್ಮಾರ್ಟ್​ಫೋನ್​​ ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್​​ ಕ್ಯಾಮೆರಾ ಜೊತೆಗೆ LED ಫ್ಲಾಶ್​​ ಲೈಟ್​​​ ಅಳವಡಿಸಲಾಗಿದೆ.

ರೆಡ್​ ಮ್ಯಾಜಿಕ್​ ಸ್ಮಾರ್ಟ್​ಫೋನ್​ನಲ್ಲಿ 5,000 mAh​​ ಬ್ಯಾಟರಿಯನ್ನು ಅಳವಡಿಸಲಾಗಿದೆ. ಜೊತೆಗೆ 30W ಚಾರ್ಜರ್​​ ಸೌಲಭ್ಯವನ್ನು ​​​ನೀಡಲಾಗಿದೆ.

ಜೂನ್​ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲಿರುವ ಈ ಸ್ಮಾರ್ಟ್​ಫೋನ್​ ಮೂರು ವೇರಿಯಂಟ್​ ಆಯ್ಕೆಯಲ್ಲಿ, ಅದಕ್ಕೆ ಅನುಗುಣವಾದ ಬೆಲೆಯಲ್ಲಿ ದೊರೆಯಲಿದೆ. 6 GB +128 GB ಸ್ಮಾರ್ಟ್​ಫೋನ್​ 33,200ರೂ ಬೆಲೆಯನ್ನು ಹೊಂದಿರಲಿದೆ. 8 GB + 128 GB ಸ್ಮಾರ್ಟ್​ಪೋನ್​​ 36,300 ರೂ. ಬೆಲೆಗೆ ದೊರಕುತ್ತಿದೆ. ಅಂತೆಯೇ, 12 GB + 256 GB ಸ್ಮಾರ್ಟ್​ಫೋನ್​​ 44,600 ರೂ.ಬೆಲೆಯನ್ನು ಹೊಂದಿದೆ.ನಿಮ್ಮ ನ್ಯೂಸ್ 18 ಕನ್ನಡವನ್ನು ಇನ್​​​ಸ್ಟಾಗ್ರಾಂನಲ್ಲೂ ಹಿಂಬಾಲಿಸಿ

First published:May 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading