ವಿಶ್ವದ ಮೊದಲ ಫ್ಲೆಕ್ಸಿಬಲ್ ಸ್ಮಾರ್ಟ್​ಫೋನ್​ ವಾಚ್​ ಬಿಡುಗಡೆ: ಆಕರ್ಷಕ ಮೊಬೈಲ್​-ವಾಚ್​​ನ ಬೆಲೆಯೆಷ್ಟು ಗೊತ್ತೆ?

ನುಬಿಯಾ ಅಲ್ಫಾ ಸ್ಮಾರ್ಟ್​ವಾಚ್​ನ ಮತ್ತೊಂದು ವಿಶೇಷತೆ ಎಂದರೆ ಇದರ ಸ್ಕ್ರೀನ್​ ಅನ್ನು ಎಡ-ಬಲ ಮತ್ತು ಕೆಳಕ್ಕೆ ಸ್ಕ್ರಾಲ್ ಮಾಡುವ ಮೂಲಕ ನಿಯಂತ್ರಿಸಿಕೊಳ್ಳಬಹುದು.

zahir | news18
Updated:April 10, 2019, 5:13 PM IST
ವಿಶ್ವದ ಮೊದಲ ಫ್ಲೆಕ್ಸಿಬಲ್ ಸ್ಮಾರ್ಟ್​ಫೋನ್​ ವಾಚ್​ ಬಿಡುಗಡೆ: ಆಕರ್ಷಕ ಮೊಬೈಲ್​-ವಾಚ್​​ನ ಬೆಲೆಯೆಷ್ಟು ಗೊತ್ತೆ?
ಸ್ಮಾರ್ಟ್​ಫೋನ್​ ವಾಚ್
zahir | news18
Updated: April 10, 2019, 5:13 PM IST
ಈ ವರ್ಷ ಬಾರ್ಸಿಲೋನಾದಲ್ಲಿ ನಡೆದ ವರ್ಲ್ಡ್​​ ಮೊಬೈಲ್​ ಕಾಂಗ್ರೆಸ್ ಅತ್ಯಾದ್ಭುತ ಗೆಜೆಟ್​ಗಳಿಗೆ ಸಾಕ್ಷಿಯಾಗಿತ್ತು. ಸ್ಯಾಮ್​ಸಂಗ್, ಸೋನಿ, ಎಲ್​ಜಿ, ಶಿಯೋಮಿ ಸೇರಿದಂತೆ ಅತಿರಥ ಕಂಪೆನಿಗಳ ನಡುವೆ ಗಮನ ಸೆಳೆಯುವಲ್ಲಿ ಚೀನಾದ ನುಬಿಯಾ ಸಂಸ್ಥೆ ಕೂಡ ಯಶಸ್ವಿಯಾಗಿತ್ತು. ಇದಕ್ಕೆ ಮುಖ್ಯ ಕಾರಣ ನುಬಿಯಾ ಪ್ರದರ್ಶಿಸಿದ್ದ ವಿಶ್ವದ ಮೊದಲ ಫ್ಲೆಕ್ಸಿಬಲ್ ಸ್ಮಾರ್ಟ್​ಫೋನ್ ವಾಚ್. ಈ ಸ್ಮಾರ್ಟ್​ಫೋನ್​ ಇದೀಗ ಯುರೋಪ್​ ಹಾಗೂ ಚೀನಾ ಪ್ರಮುಖ ಸ್ಮಾರ್ಟ್​ಫೋನ್​ ಕ್ಷೇತ್ರಕ್ಕೆ ಲಗ್ಗೆಯಿಟ್ಟಿದೆ.

ನುಬಿಯಾ ಅಲ್ಫಾ ಎಂಬ ಹೆಸರಿನ ಈ ಸ್ಮಾರ್ಟ್​ವಾಚ್ 4 ಇಂಚಿನ ಪ್ಲೆಕ್ಸಿಬಲ್ OLED ಡಿಸ್​ಪ್ಲೇಯನ್ನು ಹೊಂದಿದ್ದು, ಇದರಲ್ಲಿ 960 x 192 ಪಿಕ್ಸೆಲ್​ ರೆಸಲ್ಯೂಷನ್ ನೀಡಲಾಗಿದೆ. ಸಾಮಾನ್ಯ ಸ್ಟ್ಯಾಂಡರ್ಡ್​ ಸ್ಮಾರ್ಟ್​ವಾಚ್​ಗಳಿಗಿಂತ ಶೇ.230 ರಷ್ಟು ರಿಯಲ್ ಎಸ್ಟೇಟ್​ ಸ್ಕ್ರೀನ್ ಕ್ವಾಲಿಟಿ ಇದಕ್ಕೆ ನೀಡಲಾಗಿದೆ ಎಂದು ನುಬಿಯಾ ಹೇಳಿಕೊಂಡಿದೆ. ಇದಲ್ಲದೆ ಅಲ್ಫಾ ವಾಚ್​ ಜಲ ನಿರೋಧಕವಾಗಿದ್ದು, 10 ಸಾವಿರ ಬಾರಿ ಇದನ್ನು ಬೆಂಡ್ ಮಾಡಿ ಪರೀಕ್ಷಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.

ಇದು ಅಡ್ರಿನೋ 304 ಜಿಪಿಯುನ 28nm ಸ್ನ್ಯಾಪ್​ಡ್ರಾಗನ್ ವೇರ್ 2100 ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್​ವಾಚ್​ನಲ್ಲಿ 1GB RAM ಮತ್ತು 8GB ಆಂತರಿಕ ಸಂಗ್ರಹವಿದೆ. ಇದರಲ್ಲಿ 5000 mAh ಬ್ಯಾಟರಿಯನ್ನು ನೀಡಲಾಗಿದ್ದು, ಒಂದು ಬಾರಿ ಚಾರ್ಜ್​ ಮಾಡಿದ್ರೆ 48 ಗಂಟೆಗಳವರೆಗೆ ಕಾರ್ಯ ನಿರ್ವಹಿಸಲಿದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ಕ್ಯಾಮೆರಾಗಳನ್ನು ಈ ವಾಚ್​ ಹೊಂದಿದ್ದು, 6MP ಕ್ಯಾಮೆರಾ 82 ಡಿಗ್ರಿ ವೈಡ್ ಆಂಗಲ್ ಸೆನ್ಸರ್​ನಲ್ಲಿ ಬಳಸಬಹುದಾಗಿದೆ.

ನುಬಿಯಾ ಅಲ್ಫಾ ಸ್ಮಾರ್ಟ್​ವಾಚ್​ನ ಮತ್ತೊಂದು ವಿಶೇಷತೆ ಎಂದರೆ ಇದರ ಸ್ಕ್ರೀನ್​ ಅನ್ನು ಎಡ-ಬಲ ಮತ್ತು ಕೆಳಕ್ಕೆ ಸ್ಕ್ರಾಲ್ ಮಾಡುವ ಮೂಲಕ ನಿಯಂತ್ರಿಸಿಕೊಳ್ಳಬಹುದು. ಹಾಗೆಯೇ ಟೈಪಿಂಗ್​ಗಾಗಿ T9 ಆಲ್ಫಾನ್ಯೂಮರಿಕ್ ಡಯಲರ್ ಕೂಡ ಇದರಲ್ಲಿ ನೀಡಲಾಗಿದೆ. ಆ್ಯಂಡ್ರಾಯ್ಡ್​ ಓಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯ ನಿರ್ವಹಿಸಲಿರುವ ಈ ಸ್ಮಾರ್ಟ್​ಫೋನ್ ಮುಂದಿನ ದಿನಗಳಲ್ಲಿ ಮೊಬೈಲ್​ ಜಗತ್ತಿನಲ್ಲಿ ಹೊಸ ಹವಾ ಸೃಷ್ಟಿಸಲಿದೆ ಎನ್ನಲಾಗುತ್ತಿದೆ.

ಚೀನಾದಲ್ಲಿ ಈ ಸ್ಮಾರ್ಟ್​ವಾಚ್​ ಎರಡು ಮಾಡೆಲ್​ಗಳಲ್ಲಿ ಬಿಡುಗಡೆಯಾಗಿದ್ದು, ಇದರ ಬೆಲೆ 3,499 ಹಾಗೂ 4,499 ಸಿಎನ್​ವೈ ಎನ್ನಲಾಗಿದೆ. ಅಂದರೆ ಭಾರತದಲ್ಲಿ ಈ ಫ್ಲೆಕ್ಸಿಬಲ್ ಸ್ಮಾರ್ಟ್​ವಾಚ್ 35 ಸಾವಿರದಿಂದ 45 ಸಾವಿರದೊಳಗೆ ಖರೀದಿಗೆ ಲಭ್ಯವಾಗಲಿದೆ ಎಂದು ತಿಳಿಸಲಾಗಿದೆ.
Loading...

ಇದನ್ನೂ ಓದಿ: ನೆಟ್​​ಫ್ಲಿಕ್ಸ್​ ಭರ್ಜರಿ ಆಫರ್: ಕೇವಲ 65 ರೂ. ರೀಚಾರ್ಜ್​ನಲ್ಲಿ ಸಾವಿರಾರು ಸಿನಿಮಾ ಹಾಗೂ ವೆಬ್​ ಸಿರೀಸ್ ವೀಕ್ಷಿಸುವ ಅವಕಾಶ
First published:April 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626