• ಹೋಂ
 • »
 • ನ್ಯೂಸ್
 • »
 • ಮೊಬೈಲ್- ಟೆಕ್
 • »
 • YouTube: ಇನ್ಮುಂದೆ ಯೂಟ್ಯೂಬ್​ನಲ್ಲಿ ಜಾಹೀರಾತು ಇಲ್ಲದೆಯೇ ವಿಡಿಯೋಗಳನ್ನು ನೋಡ್ಬಹುದು! ಇಲ್ಲಿದೆ ಸಿಂಪಲ್ ಟ್ರಿಕ್ಸ್​

YouTube: ಇನ್ಮುಂದೆ ಯೂಟ್ಯೂಬ್​ನಲ್ಲಿ ಜಾಹೀರಾತು ಇಲ್ಲದೆಯೇ ವಿಡಿಯೋಗಳನ್ನು ನೋಡ್ಬಹುದು! ಇಲ್ಲಿದೆ ಸಿಂಪಲ್ ಟ್ರಿಕ್ಸ್​

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

YouTube Without Ads: ಯೂಟ್ಯೂಬ್​ನಲ್ಲಿ ಯಾವುದೇ ವಿಡಿಯೋ ನೋಡುವಾಗಲೂ ಜಾಹೀರಾತು ಬಂದೇ ಬರುತ್ತದೆ. ಆದರೆ ಈ ಜಾಹೀರಾತು ಬಾರದಂತೆ ಮಾಡುವುದು ಹೇಗೆ ಎಂದು ಎಷ್ಟೋ ಜನ ಯೋಚನೆ ಮಾಡ್ತಾ ಇರ್ತಾರೆ. ಆದ್ರೆ ನಾವು ನಿಮಗೆ ಈ ಲೇಖನದಲ್ಲಿ ನೀಡುವ ಟ್ರಿಕ್ ಮುಲಕ ಯೂಟ್ಯೂಬ್​ನಲ್ಲಿ ಜಾಹೀರಾತು ಇಲ್ಲದೆಯೇ ಆರಾಮದಲ್ಲಿ ವಿಡಿಯೋಗಳನ್ನು ವೀಕ್ಷಿಸಬಹುದು.

ಮುಂದೆ ಓದಿ ...
 • Share this:

  ಸ್ಮಾರ್ಟ್​​ಫೋನ್​ಗಳು ಇತ್ತೀಚೆಗೆ ಹೇಗೆ ಅಗತ್ಯವಾಗಿದೆಯೋ ಅದೇ ರೀತಿ ಅದರಲ್ಲಿರುವಂತಹ ಕೆಲವೊಂದು ಅಪ್ಲಿಕೇಶನ್​ಗಳು ಸಹ ಬಹಳ ಮುಖ್ಯವಾಗಿದೆ ಎಂದು ಅನೇಕರು ಹೇಳುತ್ತಾರೆ. ಜನಪ್ರಿಯ ಅಪ್ಲಿಕೇಶನ್​ಗಳಲ್ಲಿ ಒಂದಾಗಿರುವ ಯೂಟ್ಯೂಬ್​, ಈಗ ಹೆಚ್ಚಿನ ಜನರ ಆದಾಯದ ಮೂಲವಾಗಿದೆ. ಇದನ್ನು ಒಂದು ರೀತಿಯಲ್ಲಿ ಓಟಿಟಿ ಪ್ಲಾಟ್​ಫಾರ್ಮ್​ ಎಂದರೂ ತಪ್ಪಾಗದು. ಆದರೆ ಯೂಟ್ಯೂಬ್​ನಲ್ಲಿ (YouTube) ಎಷ್ಟೋ ಜನರು ತನ್ನದೇ ಆದ ಚಾನೆಲ್​ ಕ್ರಿಯೇಟ್​ ಮಾಡಿಕೊಂಡು ಲಕ್ಷಗಟ್ಟಲೆ ಹಣ ಸಂಪಾದನೆ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗಂತೂ ನೋಡುಗರಿಗೆ ಜಾಹೀರಾತಿನಿಂದ ಸ್ವಲ್ಪ ಕಿರಿಕಿರಿ ಉಂಟಾಗಿದೆ. ಯಾವುದಾದರೂ ಕುತೂಹಲಕಾರಿಯಾದ ವಿಡಿಯೋ (Video) ನೋಡುತ್ತಿರಬೇಕಾದರೆ ತಕ್ಷಣ ಜಾಹೀರಾತು (Advertisement) ಬಂದುಬಿಡುತ್ತದೆ. ಆದರೆ ಈಗ ಜಾಹೀರಾತು ಬಾರದಂತೆ ಮಾಡ್ಬಹುದು.


  ಯೂಟ್ಯೂಬ್​ನಲ್ಲಿ ಯಾವುದೇ ವಿಡಿಯೋ ನೋಡುವಾಗಲೂ ಜಾಹೀರಾತು ಬಂದೇ ಬರುತ್ತದೆ. ಆದರೆ ಈ ಜಾಹೀರಾತು ಬಾರದಂತೆ ಮಾಡುವುದು ಹೇಗೆ ಎಂದು ಎಷ್ಟೋ ಜನ ಯೋಚನೆ ಮಾಡ್ತಾ ಇರ್ತಾರೆ. ಆದ್ರೆ ನಾವು ನಿಮಗೆ ಈ ಲೇಖನದಲ್ಲಿ ನೀಡುವ ಟ್ರಿಕ್ ಮುಲಕ ಯೂಟ್ಯೂಬ್​ನಲ್ಲಿ ಜಾಹೀರಾತು ಇಲ್ಲದೆಯೇ ಆರಾಮದಲ್ಲಿ ವಿಡಿಯೋಗಳನ್ನು ವೀಕ್ಷಿಸಬಹುದು.


  ಯೂಟ್ಯೂಬ್ ಬದಲು ಬೇರೆ ಆ್ಯಪ್​​ಗಳನ್ನು ಬಳಸಿ


  ಯೂಟ್ಯೂಬ್​ನಲ್ಲಿ ಹೆಚ್ಚು ಜಾಹೀರಾತು ಬರುತಿರುವುದರಿಂದ ಕಿರಿಕಿರಿಯಾಗಿದ್ರೆ ಯೂಟ್ಯೂಬ್ ಬದಲಿಗೆ ಬೇರೆ ಪರ್ಯಾಯ ಆ್ಯಪ್​ಗಳನ್ನು ಬಳಕೆ ಮಾಡ್ಬಹುದು. ಈ ಆ್ಯಪ್​ಗಳಲ್ಲಿ ಜಾಹೀರಾತು ಇಲ್ಲದೆಯೇ ಆರಾಮವಾಗಿ ವಿಡಿಯೋ, ಸಿನಿಮಾಗಳನ್ನು ನೋಡಬಹುದು. OGYoutube, DNS66, NewPipe, YT Vanced, Ad Clearನಂತಹ ಆ್ಯಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.


  ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಸೈಕಲ್​ನಂತೇ ಇರುವ ಎಲೆಕ್ಟ್ರಿಕ್​ ಬೈಕ್​! ಫೀಚರ್ಸ್​ ಹೇಗಿದೆ ಗೊತ್ತಾ?


  ಇವುಗಳನ್ನು ಡೌನ್​ಲೋಡ್​ ಮಾಡಿಕೊಂಡು ಜಾಹೀರಾತು ಮುಕ್ತವಾಗಿ ಯೂಟ್ಯೂಬ್​ನಲ್ಲಿರುವಂತಹ ವಿಡಯೋಗಳನ್ನು ವೀಕ್ಷಿಸಬಹುದು. ಇನ್ನು ಈ ಆ್ಯಪ್​ಗಳಲ್ಲಿ ಡೌನ್​ಲೋಡ್​ ಆಯ್ಕೆಯನ್ನೂ ನೀಡಿದ್ದು, ಈ ಮೂಲಕ ನೆಟ್​ವರ್ಕ್​​ ಇಲ್ಲದಿದ್ದರೆ  ಅಥವಾ ಇಂಟರ್ನೆಟ್​ ಕನೆಕ್ಷನ್​ ಇಲ್ಲದ ಸಂದರ್ಭಗಳಲ್ಲಿ ಡೌನ್​ಲೋಡ್​ ಮಾಡಿದ್ದರೆ ಜಾಹೀರಾತು ಇಲ್ಲದೆಯೇ ಆ ವಿಡಿಯೋಗಳನ್ನು ನೋಡಬಹುದು.


  ಆ್ಯಡ್​ ಬ್ಲಾಕ್​ ಬಳಸಿ


  ಇನ್ನು ನೀವು ಬ್ರೌಸರ್​ನಲ್ಲಿ ವಿಡಿಯೋಗಳನ್ನು ನೋಡುತ್ತೀರಿ ಎಂದಾದರೆ ನೀವು ಉತ್ತಮ ಆ್ಯಡ್​ ಬ್ಲಾಕರ್​ ಟೆಕ್ನಾಲಜಿಯನ್ನು ಬಳಸಿದರೆ ಆ್ಯಡ್​ಫ್ರೀಯಾಗಿ ಯೂಟ್ಯೂಬ್​ ಅನ್ನು ವೀಕ್ಷಿಸಬಹುದು. ಇದಕ್ಕಾಗಿ ಆ್ಯಡ್​ ಬ್ಲಾಕ್​, ಸ್ಟಾಪ್​ ಆ್ಯಡ್​ಗಳಂತಹ ಆ್ಯಡ್​ ಬ್ಲಾಕರ್​​ಗಳು ಬ್ರೌಸರ್​ನಲ್ಲಿ ಬಳಕೆ ಮಾಡಲು ಅನುವು ಮಾಡಿಕೊಡುತ್ತದೆ. ಇದನ್ನು ಇನ್‌ಸ್ಟಾಲ್‌ ಮಾಡಿಕೊಂಡು ನೀವು ಜಾಹೀರಾತು ಮುಕ್ತ ಯೂಟ್ಯೂಬ್‌ ಆನಂದಿಸಬಹುದು.


  ಸಾಂಕೇತಿಕ ಚಿತ್ರ


  ಆ್ಯಡ್‌ಬ್ಲಾಕರ್‌ಗಳಿಗಿಂತ ಬೇರೆ ಆಯ್ಕೆಗಳೂ ಕೂಡ ಇವೆ. ಆ್ಯಡ್‌ಬ್ಲಾಕರ್‌ ಬಳಸಲು ಆಗಿಲ್ಲವೆಂದರೆ, ಯೂಟ್ಯೂಬ್‌ ವಿಡಿಯೋದ URL ಮತ್ತು ಪದಗಳ ಮೂಲಕ AdlessTube, ViewPure ಮತ್ತು Voilaದಂತಹವುಗಳನ್ನು ಟೈಪ್​ ಮಾಡುವ ಮೂಲಕ ಜಾಹೀರಾತು ಇಲ್ಲದೆಯೇಯೂಟ್ಯೂಬ್ ವಿಡಿಯೋಗಳನ್ನು ನೋಡಬಹುದು.


  URLನಲ್ಲಿ ಈ ರೀತಿ ಟೈಪ್​ ಮಾಡಿ


  ಅಂತೆಯೆ ಕೇವಲ ಒಂದು ಡಾಟ್​ ಹಾಕುವುದರಿಂದ ಯೂಟ್ಯೂಬ್​ನಲ್ಲಿ ಬರುವ ಜಾಹೀರಾತುಗಳನ್ನು ಬ್ಲಾಕ್ ಮಾಡಬಹುದು. ಯಾವುದೇ ಯೂಟ್ಯೂಬ್‌ ಲಿಂಕ್‌ ಅನ್ನು ಓಪನ್​ ಮಾಡಿದಾಗ youtube.com ನಂತರದಲ್ಲಿ ಬರುವ ‘/’ ಚಿಹ್ನೆಗೂ ಮೊದಲು ಒಂದು ಚುಕ್ಕಿ (.) ಹಾಕಿ ಪ್ಲೇ ಮಾಡಿದರೆ, ಆ ವಿಡಿಯೋದಲ್ಲಿ ಬರುವಂತಹ ಎಲ್ಲಾ ಜಾಹೀರಾತುಗಳು ತನ್ನಷ್ಟಕ್ಕೇ ಬ್ಲಾಕ್ ಆಗುತ್ತದೆ. ಆದರೆ ಈ ಟ್ರಿಕ್ ಕೇವಲ ಡೆಸ್ಕ್​ಟಾಪ್ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ.
  ಚಂದಾದಾರಿಕೆ ಪಡೆಯಿರಿ


  ಇನ್ನು ಯೂಟ್ಯೂಬ್​ನಲ್ಲಿ ಜಾಹೀರಾತಿನ ಕಿರಿಕಿರಿ ಬೇಡವೇ ಬೇಡ ಎನ್ನುವವರು ಯೂಟ್ಯೂಬ್​ ಪ್ರೀಮಿಯಂ ಸಬ್​​ಸ್ಕ್ರಿಪ್ಷನ್​ ಅನ್ನು ಖರೀದಿ ಮಾಡ್ಬಹುದು. ಈ ಮೂಲಕ ಜಾಹೀರಾತು ಮುಕ್ತ ಸೌಲಭ್ಯ ಮಾತ್ರವಲ್ಲದೇ ಇನ್ನೂ ಹಲವಾರು ಫೀಚರ್ಸ್​ಗಳು ದೊರೆಯಲಲಿದೆ. ಈ ಪ್ರೀಮಿಯಂನ ಪ್ರಯೋಜನಗಳೆಂದರೆ ಇದರಲ್ಲಿ ಯೂಟ್ಯೂಬ್‌ ಮ್ಯೂಸಿಕ್‌ನ ಅಪ್ಲಿಕೇಶನ್​ನಲ್ಲಿರುವ ಎಲ್ಲಾ ಹಾಡುಗಳನ್ನು ಕೇಳಬಹುದು. ಜೊತೆಗೆ ಯೂಟ್ಯೂಬ್‌ ಒರಿಜಿನಲ್ಸ್‌ ಸೀರಿಸ್​ನಲ್ಲಿರುವ ಸೀರಿಯಲ್​ಗಳನ್ನು ಸಹ ನೋಡಬಹುದಾಗಿದೆ.

  Published by:Prajwal B
  First published: