• Home
  • »
  • News
  • »
  • tech
  • »
  • OTT Platforms: ನಿಮ್ಮ ಮೊಬೈಲ್‌ನಲ್ಲಿ ಉಚಿತವಾಗಿ ಒಟಿಟಿ ಸಿನಿಮಾಗಳನ್ನು ನೋಡಿ, ಮೊದಲು ಹೀಗ್​ ಮಾಡಿ!

OTT Platforms: ನಿಮ್ಮ ಮೊಬೈಲ್‌ನಲ್ಲಿ ಉಚಿತವಾಗಿ ಒಟಿಟಿ ಸಿನಿಮಾಗಳನ್ನು ನೋಡಿ, ಮೊದಲು ಹೀಗ್​ ಮಾಡಿ!

OTT Platforms

OTT Platforms

ನೀವು ನೆಟ್‌ಫ್ಲಿಕ್ಸ್ (Netflix), ಅಮೆಜಾನ್ ಪ್ರೈಮ್ (Amazon Prime) ಮತ್ತು ಡಿಸ್ನಿ + ಹಾಟ್‌ಸ್ಟಾರ್‌(Disney + Hotstar)ನಂತಹ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಚಂದಾದಾರಿಕೆ ಪಡೆಯಬಹುದು. ಇದು ಹೇಗಂತೀರಾ? ಇಲ್ಲಿದೆ ಮಾಹಿತಿ.

  • Share this:

    ಪ್ರತಿಯೊಬ್ಬರೂ ಇತ್ತೀಚಿಗೆ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ  (OTT Platforms) ಸಿನಿಮಾ (Cinema), ವೆಬ್‌ಸೀರಿಸ್‌ (Webseriese) ನೋಡಲು ಇಷ್ಟಪಡುತ್ತಾರೆ. ಲಾಕ್‌ಡೌನ್‌ (Lockdown) ಯಾವಾಗ ಆರಂಭವಾಯಿತೋ ಅಲ್ಲಿಂದ ಇಲ್ಲಿಯವರೆಗೂ ಎಲ್ಲರೂ ಒಟಿಟಿ ಮೂಲಕವೇ ಸಿನಿಮಾ ನೋಡಲು ಆರಂಭಿಸಿದ್ದಾರೆ. ಆದರೆ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನೋಡಬೇಕಾದರೆ ಅದಕ್ಕೆ ಹಣ ಪಾವತಿ ಮಾಡಬೇಕು. ಹಣ ಪಾವತಿ ಮಾಡಿದರೆ ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಚಲನಚಿತ್ರ ಮತ್ತು ವೆಬ್ ಸಿರೀಸ್ ವೀಕ್ಷಿಸಬಹುದು. ಈ ಅಪ್ಲಿಕೇಶನ್‌ಗಳ ಶುಲ್ಕಗಳು ಸಹ ತುಂಬಾ ದುಬಾರಿ. ಆದರೆ ಕೆಲವೊಬ್ಬರು ಕೆಲವೊಂದು ಉದ್ದೇಶದಿಂದ ಇದಕ್ಕೆ ಹಣ ಪಾವತಿಸಿ ಸದಸ್ಯತ್ವವನ್ನು (Subscription) ಮಾಡಿಕೊಂಡಿದ್ದಾರೆ.,


    ನೀವು ನೆಟ್‌ಫ್ಲಿಕ್ಸ್ (Netflix), ಅಮೆಜಾನ್ ಪ್ರೈಮ್ (Amazon Prime) ಮತ್ತು ಡಿಸ್ನಿ + ಹಾಟ್‌ಸ್ಟಾರ್‌(Disney + Hotstar)ನಂತಹ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಚಂದಾದಾರಿಕೆ ಪಡೆಯಬಹುದು. ಇದು ಹೇಗಂತೀರಾ? ಇಲ್ಲಿದೆ ಮಾಹಿತಿ.


    ಯಾವೆಲ್ಲಾ ನೆಟ್‌ವರ್ಕ್‌ಗಳಲ್ಲಿ ಲಭ್ಯವಿದೆ?


    ಏರ್‌ಟೆಲ್, ರಿಲಯನ್ಸ್ ಜಿಯೋ, ಮತ್ತು ವೊಡಾಫೋನ್ ಐಡಿಯಾಗಳ ಪೋಸ್ಟ್‌ ಪೇಯ್ಡ್ ಪ್ಲಾನ್ ರಿಚಾರ್ಜ್ ಮಾಡಿದರೆ OTT ಪ್ಲಾಟ್‌ಫಾರ್ಮ್‌ಗಳಲ್ಲಿ  ಉಚಿತವಾಗಿ ಅನ್‌ಲಿಮಿಟೆಡ್ ಮನರಂಜನೆ ಪಡೆಯಬಹುದು. 1 ಸಾವಿರ ರೂ.ಗಿಂತಲೂ ಕಡಿಮೆ ಮೊತ್ತದ ಪ್ಲಾನ್ ರಿಚಾರ್ಜ್ ಮಾಡಿದರೆ ನಿಮಗೆ OTT ಚಂದಾದಾರಿಕೆ ಉಚಿತವಾಗಿ ಲಭ್ಯವಿರುತ್ತದೆ. 


    ಇದನ್ನೂ ಓದಿ: ಟ್ರೂ ಕಾಲರ್‌ನಲ್ಲಿ ನಿಮ್ಮ ಹೆಸರು ಏನೇನೋ ಇದೆಯಾ? ಹಾಗಿದ್ರೆ ಈ ಟ್ರಿಕ್ಸ್‌ ಬಳಸಿ ನೇಮ್ ಎಡಿಟ್ ಮಾಡಿ!


    ಪೋಸ್ಟ್‌ ಪೇಯ್ಡ್‌ ಯೋಜನೆಗಳು ಹೇಗಿವೆ?


    ಇಂದು ನಾವು ದೊಡ್ಡ ಟೆಲಿಕಾಂ ಕಂಪೆನಿಗಳಾದ ರಿಲಯನ್ಸ್‌ ಜಿಯೋ, ಏರ್ಟೆಲ್‌, ವೊಡಫೋನ್‌ ಐಡಿಯಾದ 1000 ರೂಪಾಯಿಯ ಪೋಸ್ಟ್ ಪೇಯ್ಡ್‌ ಯೋಜನೆಗಳು ಹೇಗಿವೆ ಎಂದು ಹೇಳಲಿದ್ದೇವೆ. ಜೊತೆಗೆ ಇದರಿಂಧ ಗ್ರಾಹಕರಿಗೆ ಯಾವ ರೀತಿಯಲ್ಲಿ ಲಾಭ ಕೂಡ ಆಗುತ್ತದೆ ಎಂದು ಹೇಳುತ್ತೇವೆ. ಇದು ಅನ್‌ಲಿಮಿಟೆಡ್ ಡೇಟಾ ಮತ್ತು ಧ್ವನಿ ಕರೆಗಳಂತಹ ಪ್ರಯೋಜನ ನೀಡುವುದಲ್ಲದೆ ನೀವು OTT ಪ್ಲಾಟ್‌ಫಾರ್ಮ್‌ಗಳ ಉಚಿತ ಚಂದಾದಾರಿಕೆ ಸಹ ನೀಡುತ್ತದೆ. ಪ್ರತಿಯೊಂದು ಕಂಪನಿಯು 1 ಸಾವಿರ ರೂ.ಗಿಂತ ಕಡಿಮೆ ಬೆಲೆಯಲ್ಲಿ ಇಂತಹ ಅನೇಕ ಯೋಜನೆಗಳನ್ನು ನೀಡುತ್ತಿದೆ. ಇವುಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿರಿ.


    Now you can watch OTT platforms on your mobile for free This work immediately
    OTT Platforms


    ಜಿಯೋದ 999 ರೂಪಾಯಿ ಪೋಸ್ಟ್‌ ಪೇಯ್ಡ್ ಯೋಜನೆ


    ಜಿಯೋದ 999 ರೂಪಾಯಿ ರೀಚಾರ್ಜ್ ಯೋಜನೆಯಲ್ಲಿ ನೀವು ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS ಮತ್ತು ಒಟ್ಟಾರೆ 200GB ಇಂಟರ್ನೆಟ್ ಅನ್ನು ಪಡೆಯಬಹುದು. ಈ ಯೋಜನೆಯಲ್ಲಿ 500GB ವರೆಗಿನ ಡೇಟಾ ರೋಲ್‌ಓವರ್ ಸಹ ಸಿಗಲಿದೆ.


    ಇದನ್ನೂ ಓದಿ: ಇನ್ಸ್ಟಾಗ್ರಾಮ್‌ನಲ್ಲಿ ನಿಮ್ಮ ಫಾಲೋವರ್ಸ್‌ ಹೆಚ್ಚಾಗಬೇಕೇ? ಹಾಗಿದ್ರೆ ನೀವು ಈ ಟ್ರಿಕ್ಸ್ ಫಾಲೋ ಮಾಡಿ!


    OTT ಪ್ರಯೋಜನಗಳ ಕುರಿತು ಮಾತನಾಡುವುದಾದರೆ ಈ ಯೋಜನೆಯಲ್ಲಿ ನೀವು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನ ಚಂದಾದಾರಿಕೆಯನ್ನು ಜಿಯೋ ಅಪ್ಲಿಕೇಶನ್‌ಗಳೊಂದಿಗೆ ಪಡೆಯಬಹುದು. ಇದು ರಿಲಯನ್ಸ್‌ ಜಿಯೋ ಗ್ರಾಹಕರಿಗೆ ನೀಡುತ್ತಿರುವ ಉತ್ತಮ ಯೋಜನೆಯಾಗಿದೆ.‌


    ಏರ್‌ಟೆಲ್ 999 ರೂಪಾಯಿ ಪೋಸ್ಟ್‌ ಪೇಯ್ಡ್ ಯೋಜನೆ


    ಏರ್‌ಟೆಲ್‌ನ ಈ ಪೋಸ್ಟ್‌ ಪೇಯ್ಡ್ ಪ್ಲಾನ್ 999 ರೂಪಾಯಿಗೆ ಲಭ್ಯವಿದೆ. ಈ ಪ್ಲಾನ್ ರಿಚಾರ್ಜ್ ಮಾಡಿಸಿದರೆ ಬಳಕೆದಾರರು ಪ್ರತಿ ತಿಂಗಳು 150GB ಡೇಟಾವನ್ನು ಪಡೆಯುತ್ತಾರೆ. ಇದು 200GB ವರೆಗಿನ ರೋಲ್‌ಓವರ್ ಪ್ರಯೋಜನಗಳನ್ನು ಕೂಡ ನೀಡುತ್ತದೆ. ಬಳಕೆದಾರರು ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMSಗಳ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ.


    OTT ಕುರಿತು ಮಾತನಾಡುವುದಾದರೆ 1 ವರ್ಷದ ಅಮೆಜಾನ್‌ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಶನ್ ಚಂದಾದಾರಿಕೆಯು ಈ ಯೋಜನೆಯಲ್ಲಿ ಲಭ್ಯವಿದೆ.


    Now you can watch OTT platforms on your mobile for free This work immediately
    OTT Platforms


    ವೊಡಫೋನ್‌ ಐಡಿಯಾದ 999 ರೂಪಾಯಿ ಪೋಸ್ಟ್‌ ಪೇಯ್ಡ್ ಯೋಜನೆ


    ವೊಡಫೋನ್‌ ಐಡಿಯಾ ಅಥವಾ Vi 999 ರೂಪಾಯಿ ಬೆಲೆಯ ಈ ರಿಚಾರ್ಜ್ ಪ್ಲಾನ್ ಹೊಂದಿದೆ. ಇದು ನಿಮಗೆ ಒಟ್ಟು 220GB ಇಂಟರ್ನೆಟ್ ಸಿಗಲಿದ್ದು, ಪ್ರಾಥಮಿಕ ಸಂಪರ್ಕಕ್ಕಾಗಿ 140GB ಮತ್ತು ದ್ವಿತೀಯ ಸಂಪರ್ಕಕ್ಕಾಗಿ 40GB ಡೇಟಾ ಸಿಗಲಿದೆ. ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಜೊತೆಗೆ ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 3 ಸಾವಿರ SMS ಸೌಲಭ್ಯವನ್ನು ಸಹ ಪಡೆಯುತ್ತೀರಿ. ಈ ಯೋಜನೆಯಲ್ಲಿ 200GB ವರೆಗೆ ಡೇಟಾ ರೋಲ್‌ಓವರ್ ಆಯ್ಕೆಯನ್ನು ಸಹ ನೀಡಲಾಗಿದೆ.


    ಇದನ್ನೂ ಓದಿ: WhatsApp ತರುತ್ತಿದೆ ಮತ್ತೊಂದು ಹೊಸ ಫೀಚರ್ಸ್, ಒಮ್ಮೆ ಸೆಂಡ್‌ ಮಾಡಿದ ಮೆಸೇಜ್‌ ಮತ್ತೆ ಎಡಿಟ್‌ ಮಾಡ್ಬಹುದಂತೆ!


    ಸ್ಟ್ರೀಮಿಂಗ್ ಪ್ರಯೋಜನಗಳ ಬಗ್ಗೆ ಹೇಳುವುದಾದರೆ ನೀವು ಅಮೆಜಾನ್‌ ಪ್ರೈಮ್ ವಿಡಿಯೋಗೆ 1 ವರ್ಷದ ಚಂದಾದಾರಿಕೆ ಪಡೆಯುತ್ತೀರಿ. ಡಿಸ್ನಿ + ಹಾಟ್‌ಸ್ಟಾರ್‌ 1 ವರ್ಷದ ಚಂದಾದಾರಿಕೆ ಮತ್ತು Vi ಮೂವೀಸ್ ಗೆ ಉಚಿತ ಪ್ರವೇಶವನ್ನು ಪಡೆಯುತ್ತೀರಿ.

    Published by:Harshith AS
    First published: