ಈ ಆ್ಯಪ್​ನ ಮೂಲಕ ರಾಜಕಾರಣಿಗಳ ಕೆಲಸಕ್ಕೆ ನೀವು ಅಂಕ ನೀಡಬಹುದು


Updated:August 26, 2018, 6:18 PM IST
ಈ ಆ್ಯಪ್​ನ ಮೂಲಕ ರಾಜಕಾರಣಿಗಳ ಕೆಲಸಕ್ಕೆ ನೀವು ಅಂಕ ನೀಡಬಹುದು

Updated: August 26, 2018, 6:18 PM IST
ಚುನಾವಣೆ ಬಳಿಕ ಒಂದು ಬಾರಿಯೂ ಮತ ಹಾಕಿದವರ ಮುಖ ನೋಡ ಬಯಸಿದ ರಾಜಕಾರಣಿಗಳು ಒಂದೆಡೆ, ಜನರೊಂದಿಗೆ ಬೆರೆತು ಜನರ ಕಷ್ಟಕ್ಕೆ ಸ್ಪಂದಿಸಿ ಜನರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗುವ ರಾಜಕಾರಣಿಗಳು ಮತ್ತೊಂದೆಡೆ. ಈ ಇಬ್ಬರು ರಾಜಕಾರಣಿಗಳ ಕುರಿತು ಜನರು ಎಷ್ಟು ಅಂಕ ನೀಡುತ್ತಾರೆ ಎಂಬುದನ್ನು ಅರಿಯಲೆಂದೇ ಮಾರುಕಟ್ಟೆಗೆ ಬಂದ "Neta - Leaders' Report Card" ಎಂಬ ಆ್ಯಪ್​ ಬಿಡುಗಡೆಯಾಗಿ ಕೇವಲ ಗಂಟೆಯೊಳಗೆ ಒಂದು ಲಕ್ಷಕ್ಕೂ ಅಧಿಕ ಡೌನ್​ಲೋಡ್​ ಆಗಿದೆ.

ಶಾಸಕರು ಮತ್ತು ಸಂಸದರ ಕುರಿತು ಜನರು ಏನು ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ಅರಿಯಲೆಂದೇ ಫ್ಲಿಪ್ಪಡ್​ ಪ್ರೈವೆಟ್​ ಲಿಮಿಟೆಡ್​ ಸಂಸ್ಥೆ ಈ ಆ್ಯಪ್​ನ್ನು ಅಭಿವೃದ್ಧಿ ಪಡಿಸಿದೆ. ಸಾರ್ವಜನಿಕರ ಅಭಿಪ್ರಾಯವನ್ನು ರಾಜಕಾರಣಿಗಳಿಗೆ ತಿಳಿಸುವುದೇ ಈ ಆ್ಯಪ್​ನ ಮೂಲ ಉದ್ದೇಶ. ಇದರೊಂದಿಗೆ ಸಾರ್ವಜನಿಕ ನೀತಿ ನಿಯಮಗಳನ್ನು ರೂಪಿಸುವವರಿಗೂ ಈ ಆ್ಯಪ್​ನಿಂದ ಸಾಕಷ್ಟು ಉಪಯೋಗಳಿವೆ. ಸಾರ್ವಜನಿಕರ ಅಭಿಪ್ರಯಾದಿಂದ ನಾವು ಬದಲಾವಣೆಯನ್ನು ಸಹ ಕಾಣಬಹುದು ಎಂದು ಸಂಸ್ಥೆ ವಕ್ತಾರ ಮುಖರ್ಜಿ ತಿಳಿಸಿದ್ದಾರೆ.

27 ವರ್ಷದ ಟೆಕ್ಕಿ ಪ್ರಥಮ್​ ಮಿತ್ತಲ್​ ಎಂಬವರು ಈ ಆ್ಯಪ್​ ಅಭಿವೃದ್ಧಿ ಪಡಿಸಿದ್ದು, ಆ್ಯಪ್​ ಬಿಡುಗಡೆ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವಿಜಯ್ ಸಂಪ್ಲಾ, ಮಾಜಿ ಕೇಂದ್ರ ಸಚಿವರಾದ ಶಿವರಾಜ್ ಪಾಟೀಲ್, ಮುರಳಿ ಮನೋಹರ್ ಜೋಶಿ ಮತ್ತು ಅಶ್ವನಿ ಕುಮಾರ್ ಹಾಗೂ ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಎಸ್.ವೈ. ಖುರೇಶಿ ಮತ್ತು ನಾಸಿಮ್ ಝೈದಿ ಪಾಲ್ಗೊಂಡಿದ್ದರು.
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...