ಟ್ರಾಫಿಕ್​​ ಪೊಲೀಸರಿಗೆ ಈ ದಾಖಲೆಗಳನ್ನು ತೋರಿಸಲೇ ಬೇಕುಂತಿಲ್ಲ!


Updated:August 11, 2018, 5:45 PM IST
ಟ್ರಾಫಿಕ್​​ ಪೊಲೀಸರಿಗೆ ಈ ದಾಖಲೆಗಳನ್ನು ತೋರಿಸಲೇ ಬೇಕುಂತಿಲ್ಲ!

Updated: August 11, 2018, 5:45 PM IST
ಇನ್ನು ಮುಂದೆ ವಾಹನದ ದಾಖಲೆ ನಿಮ್ಮ ಕೈನಲ್ಲಿ ಇಲ್ಲದಿದ್ದರೂ ಪರವಾಗಿಲ್ಲ, ನಿಮ್ಮಲ್ಲಿ ಡಿಜಿ ಲಾಕರ್​ ಇದ್ದರೆ ಆ ಆ್ಯಪ್​ನ ಮೂಲಕವೇ ನಿಮ್ಮ ವಾಹನದ ಚಾಲನಾ ಪರವಾನಗಿಯನ್ನು ನೀವು ಪೊಲೀಸರಿಗೆ ತೋರಿಸಿದರೆ ಸಾಕು ಎಂದು ಕೇಂದ್ರ ಅಧಿಕೃತವಾಗಿ ಹೇಳಿದೆ.

ಈ ಕುರಿತು ರಾಜ್ಯಗಳಿಗೆ ಆದೇಶ ನೀಡಿರುವ ಕೇಂದ್ರ ಸಾರಿಗೆ ಇಲಾಖೆ, ವ್ಯಕ್ತಿಯ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಡಿಜಿ ಲಾಕರ್​ನಲ್ಲಿಯೇ ಪರಿಶೀಲಿಸಬಹುದೆಂದು ಮಾನ್ಯತೆ ನೀಡಿದ್ದಾರೆ. ಹೀಗಾಗ ಒಂದು ವೇಳೆ ನಿಮ್ಮನ್ನು ಯಾವುದೇ ಪೊಲೀಸರು ಅಡ್ಡ ಹಾಕಿ ದಾಖಲೆ ಕೇಳಿದರೆ ಈ ಆ್ಯಪ್​ನ ಮೂಲಕ ದಾಖಲೆ ತೋರಿಸಿ. ಈ ಮೂಲಕ ದಂಡ ಕಟ್ಟುವುದರಿಂದ ಪರಾಗಿ.

ಇನ್ನು ಈ ಡಿಜಿಲಾಕರ್ ​ಆ್ಯಪ್​ನಲ್ಲಿ ಚಾಲನಾ ಪರವಾನಗಿ, ನೋಂದಣಿ ಪತ್ರ ಮತ್ತು ವಾಯುಮಾಲಿನ್ಯ ಪ್ರಮಾಣಪತ್ರದ ಡಿಜಿಟಲ್ ಪ್ರತಿಗಳನ್ನು ಸಂಗ್ರಹಿಸಬಹುದಾಗಿದೆ. ಈ ಹಿಂದೆ ಡಿಜಿಲಾಕರ್​ನಲ್ಲಿ ಅಪ್ಲೋಡ್​ ಆಗಿರುವ ಮಾಹಿತಿಯನ್ನು ಪೊಲೀಸರಿಗೆ ತೋರಿಸಿದರೆ ಅದನ್ನು ಅವರು ಸ್ವೀಕರಿಸಲು ಒಪ್ಪುತ್ತಿರಲಿಲ್ಲ. ಹೀಗಾಗಿ ಹಲವಾರು ಮಂದಿ ಸರಕಾರಕ್ಕೆ ದೂರು ಸಲ್ಲಿಸಿದ್ದರು. ಅಲ್ಲದೇ ಈ ಸೌಲಭ್ಯದ ಕುರಿತು ಹಲವಾರು ಆರ್​ಟಿಐ ಅರ್ಜಿ ಸಲ್ಲಿಕೆಯಾಗಿತ್ತು. ಹೀಗಾಗಿ ಈ ನೂತನ ಆದೇಶ ಹೊರಬಿದ್ದಿದೆ.

ಏನಿದು ಡಿಜಿ ಲಾಕರ್ ಅಥವಾ ಎಮ್​ಪರಿವಾಹನ್​?

ನಮ್ಮ ಯಾವುದೇ ದಾಖಲೆಗಳನ್ನು ಡಿಜಿಟಲ್​ ರೂಪದಲ್ಲಿ ಶೇಖರಿಸಿಟ್ಟುಕೊಳ್ಳಲು, ಕೇಂದ್ರ ಸರ್ಕಾರವೇ ಸೃಷ್ಠಿಸಿರುವ ಹೊಸ ವ್ಯವಸ್ಥೆಯನ್ನು ಡಿಜಿಲಾಕರ್​ ಎನ್ನುತ್ತಾರೆ. ಈ ಡಿಜಿ ಲಾಕರ್ ವೆಬ್‍ಸೈಟ್‍ನಲ್ಲಿ ಒಟ್ಟು 1 ಜಿಬಿವರೆಗಿನ ದಾಖಲೆಗಳನ್ನು ಶೇಖರಿಸಿಡಬಹುದು. ಹೀಗಾಗಿ ವಾಹನದ ಪತ್ರ, ಶೈಕ್ಷಣಿಕ ದಾಖಲೆಗಳು ಹೀಗೆ ಹಲವಾರು ದಾಖಲೆಗಳನ್ನು ಸೇವ್​ ಮಾಡಿಟ್ಟುಕೊಳ್ಳಬಹುದು. ಇದಕ್ಕಾಗಿ ನೀವು ಡಿಜಿ ಲಾಕರ್​ ಆ್ಯಪ್​ನಲ್ಲಿ ನೀವು ರಿಜಿಸ್ಟ್ರೇಷನ್​ ಮಾಡಿಕೊಂಡರೆ ಸಾಕು.
First published:August 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ