• Home
 • »
 • News
 • »
 • tech
 • »
 • Smart Rings: ಇನ್ಮುಂದೆ ಸ್ಮಾರ್ಟ್‌ವಾಚ್‌ ಬದಲು ಸ್ಮಾರ್ಟ್‌ರಿಂಗ್!‌ ಅರೇ, ಇದೇನು ಅಂತೀರಾ? ಇಲ್ಲಿದೆ ನೋಡಿ

Smart Rings: ಇನ್ಮುಂದೆ ಸ್ಮಾರ್ಟ್‌ವಾಚ್‌ ಬದಲು ಸ್ಮಾರ್ಟ್‌ರಿಂಗ್!‌ ಅರೇ, ಇದೇನು ಅಂತೀರಾ? ಇಲ್ಲಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಸ್ಮಾರ್ಟ್‌ ರಿಂಗ್ಸ್ ಉತ್ತಮ ಗುಣಮಟ್ಟದಲ್ಲಿದ್ದು ಗ್ರಾಹಕರನ್ನು ಬೇಗನೆ ಆಕರ್ಷಿಸುತ್ತದೆ. ಈ ಸ್ಮಾರ್ಟ್‌ರಿಂಗ್ಸ್ ಸ್ಮಾರ್ಟ್‌ವಾಚ್‌ಗಿಂತ ಹಾಕಿಕೊಳ್ಳಲು ಸುಲಭ. ಇದನ್ನು ದಿನದ 24 ಗಂಟೆಯೂ ಧರಿಸಿಯೂ ಇರಬಹುದು.

 • Share this:

  ಇತ್ತೀಚಿಗೆ ಹೊಸ ಟೆಕ್ನಾಲಜಿಯನ್ನು (Technology) ಬಳಕೆ ಮಾಡಿ ತಂತ್ರಜ್ಞಾನವನ್ನುಅಭಿವೃದ್ದಿ ಮಾಡುತ್ತಲೇ ಇದ್ದಾರೆ. ಮೊಬೈಲ್‌ಗಳಲ್ಲಿ (Mobile) ಅಭಿವೃದ್ಧಿ ಪಡಿಸಲಾದ ತಂತ್ರಗಳನ್ನು ಸ್ಮಾರ್ಟ್‌ವಾಚ್‌ಗೆ (Smartwatch) ಆ್ಯಡ್ ಮಾಡಲಾಯಿತು. ಇದೀಗ ಹೊಸದಾಗಿ ಸ್ಯಾಮ್‌ಸಂಗ್‌ (Samsung) ಕಂಪನಿ ಸ್ಮಾರ್ಟ್‌ರಿಂಗ್‌ (Smart Ring) ಅನ್ನು ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಸ್ಯಾಮ್‌ಸಂಗ್‌ ಯುಎಸ್‌ ಪೇಟೆಂಟ್‌ (US Patent) ಹಾಗೂ ಓಂದು ಟ್ರೇಡ್‌ ಮಾರ್ಕ್‌ (Trademark) ಅನ್ನು ಸ್ಥಾಪಿಸಿದೆ. ಇದು ಈ ಬಾರಿ ಬಿಡುಗಡೆ ಮಾಡಿದ ಹೊಸ ತಂತ್ರಜ್ಞಾನವಾಗಿದೆ. ಈ ಸ್ಮಾರ್ಟ್‌ರಿಂಗ್ಸ್ ಸ್ಮಾರ್ಟ್‌ವಾಚ್‌ಗಿಂತ ಹಾಕಿಕೊಳ್ಳಲು ಸುಲಭ. ಇದನ್ನು ದಿನದ 24 ಗಂಟೆಯೂ ಧರಿಸಿಯೂ ಇರಬಹುದು.


  ಈ ಸ್ಮಾರ್ಟ್‌ ರಿಂಗ್ಸ್ ಉತ್ತಮ ಗುಣಮಟ್ಟದಲ್ಲಿದ್ದು ಗ್ರಾಹಕರನ್ನು ಬೇಗನೆ ಆಕರ್ಷಿಸುತ್ತದೆ. ಇದು ಸ್ಮಾರ್ಟ್‌ವಾಚ್‌ನಂತೆಯೇ ಇದೆ. ಆದರೆ ಸ್ಮಾರ್ಟ್‌ರಿಂಗ್ಸ್‌ ಸ್ಮಾರ್ಟ್‌ವಾಚ್‌ಗಿಂತ ಚಿಕ್ಕದಾಗಿರುವುದರಿಂದ ಇದರಲ್ಲಿ ಫೀಚರ್ಸ್‌ ಸ್ವಲ್ಪ ಕಡಿಮೆ ಇದ್ದರೂ ಗುಣಮಟ್ಟದಲ್ಲಿ ಆ್ಯಡ್ ಮಾಡಿದ್ದಾರೆ.


  ಸ್ಮಾರ್ಟ್‌ ರಿಂಗ್ಸ್‌ ಏಕೆ ಆಕರ್ಷಕವಾಗಿದೆ?


  ಸ್ಮಾರ್ಟ್‌ವಾಚ್‌ಗಳಿಗೆ ಹೋಲಿಸಿದರೆ ಈ ಸ್ಮಾರ್ಟ್‌ ರಿಂಗ್ಸ್‌ ಉತ್ತಮ ಫೀಚರ್ಸ್‌ ಹೊಂದಿದೆ. ಇದರಲ್ಲಿ ಬೆರಳುಗಳ ಸಹಾಯದಿಂದ ಹೃದಯಬಡಿತವನ್ನು ಚೆಕ್‌ ಮಾಡುವುದರಿಂದ ಬಹಳ ನಿರ್ದಿಷ್ಟವಾಗಿರುತ್ತದೆ. ಇನ್ನು ಇದು ರಿಂಗ್‌ ಮಾದರಿಯಲ್ಲಿ ಇರುವುದರಿಂದ ದಿನದ 24 ಗಂಟೆಯೂ ಹಾಕಿಕೊಂಡಿರಬಹುದು. ಇನ್ನೊಂದು ವಿಷಯ ಏನೆಂದರೆ ಈ ಸ್ಮಾರ್ಟ್‌ ರಿಂಗ್ಸ್‌ ಸ್ಮಾರ್ಟ್‌ವಾಚ್‌ಗಿಂತ ಕಡಿಮೆ ಟೆಕ್ನಿಕಲ್‌ ತಂತ್ರಗಳನ್ನು ಹೊಂದಿದೆ. ಮುಖ್ಯ ಕಾರಣವೆಂದರೆ ಗಾತ್ರದ ಸಮಸ್ಯೆ ಅಂತ ಹೇಳಬಹುದು.


  ಇದನ್ನೂ ಓದಿ: ಓಲಾದಿಂದ ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ ಲಾಂಚ್, ರಿಲೀಸ್‌ಗೂ ಮುಂಚೆನೇ ಸಾವಿರಾರು ಬುಕ್ಕಿಂಗ್ಸ್!


  ಬೇರೆ ಬೇರೆ ವಿಧಗಳಲ್ಲಿ ರಿಂಗ್ಸ್ ಕಂಪನಿಗಳಿವೆ


  ಸ್ಮಾರ್ಟ್‌ ರಿಂಗ್ಸ್‌ ಕಂಪನಿಗಳಲ್ಲಿ ಔರಾ ರಿಂಗ್ಸ್‌ ಕೂಡಾ ಒಂದು. ಇದು ಇತ್ತಿಚಿಗೆ ರೌಂಡ್‌ ಆಗಿರುವ ರಿಂಗ್ಸ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿತು. ಈ ಔರಾ ರಿಂಗ್ಸ್‌ ತುಂಬಾ ಗುಣಮಟ್ಟದ್ದಾಗಿದೆ. ಅದಲ್ಲದೆ ಇದನ್ನು ಕೈಗೆ ಹಾಕಲು ತೆಳುವಾಗಿ ಇರುವುದರಿಂದ ತುಂಬಾ ಸುಲಭ ಎಂದು ವರದಿ ಮಾಡಿದ್ದಾರೆ. ಈ ರಿಂಗ್ಸ್‌ಗೆ ಸ್ಮಾರ್ಟ್‌ವಾಚ್‌ನಲ್ಲಿರುವ ಸಾಫ್ಟ್‌ವೇರ್‌ ಅನ್ನೇ ಆ್ಯಡ್ ಮಾಡಿ ಅಭಿವೃದ್ಧಿಪಾಡಿಸಿದ್ದಾರೆ.


  Now instead of Smartwatch Smartring Here is the information about Smartring
  ಸಾಂದರ್ಭಿಕ ಚಿತ್ರ


  ಈ ರೀತಿಯ ಬೇರೆ ಬೇರೆ ಕಂಪನಿಗಳಿವೆ ಒಂದೊಂದು ಬೇರೆ ಬೇರೆ ಫೀಚರ್ಸ್‌ ಅನ್ನು ಹೊಂದಿದೆ. ಕೆಲವೊಂದು ಕಂಪನಿಗಳು ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸಿದರೆ ಇನ್ನು ಕೆಲವು ಇದರ ಕಲರ್‌, ಟ್ರ್ಯಾಕಿಂಗ್‌ ಫೀಚರ್ಸ್‌ ಇವುಗಳನ್ನೆಲ್ಲಾ ಅಭಿವೃದ್ಧಿ ಪಡಿಸುತ್ತಾ ಇರುತ್ತದೆ. ಇದರಿಂದ ಗ್ರಾಹಕರಿಗೆ ಬೇಕಾದ ಸ್ಮಾರ್ಟ್‌ ರಿಂಗ್ಸ್‌ ಕೊಳ್ಳಲು ಸಹಕಾರಿಯಾಗುತ್ತದೆ.


  Now instead of Smartwatch Smartring Here is the information about Smartring
  ಸಾಂದರ್ಭಿಕ ಚಿತ್ರ


  ಸ್ಮಾರ್ಟ್‌ವಾಚ್‌ಗಿಂತ ಇದು ಹೇಗೆ ಭಿನ್ನವಾಗಿದೆ


  ಸ್ಮಾರ್ಟ್‌ವಾಚ್‌ಗಿಂತ ಈ ಸ್ಮಾರ್ಟ್‌ ರಿಂಗ್ಸ್‌ ಬಹಳಷ್ಟು ಭಿನವಾಗಿರುತ್ತದೆ. ಇಲ್ಲಿ ಸ್ಮಾರ್ಟ್‌ ರಿಂಗ್ಸ್‌ ಸ್ಮಾರ್ಟ್‌ವಾಚ್‌ಗಿಂತ ಗಾತ್ರದಲ್ಲಿ ಚಿಕ್ಕಾದಾಗಿದೆ. ಇದರಿಂದ ಸ್ಮಾರ್ಟ್‌ ರಿಂಗ್ಸ್‌ನಲ್ಲಿ ತಂತ್ರಜ್ಞಾನಗಳನ್ನು ಕಡಿಮೆ ಅಳವಡಿಸಲಾಗುತ್ತದೆ.


  ಇದನ್ನೂ ಓದಿ: ಭಾರತದಲ್ಲಿ ಮತ್ತೆ ಆರಂಭವಾಗಲಿದ್ಯಂತೆ PUBG, ಇನ್ಮುಂದೆ ಏನಿದ್ರು ವಿನ್ನರ್‌ ವಿನ್ನರ್‌ ಚಿಕನ್‌ ಡಿನ್ನರ್!


  ಸ್ಮಾರ್ಟ್‌ ರಿಂಗ್ಸ್‌ನಲ್ಲಿ ಹಾರ್ಟ್‌ ಬೀಟ್‌ ಅಥವಾ ಇತರ ಅರೋಗ್ಯ ಸಂಬಂಧಿತ ವಿಷಯಗಳನ್ನು ಬೆರಳುಗಳ ಸಹಾಯದಿಂದ ಚೆಕ್‌ ಮಾಡುವುದರಿಂದ ಉತ್ತರಗಳು ನಿಖರವಾಗಿರುತ್ತದೆ. ಸ್ಮಾರ್ಟ್‌ ವಾಚ್‌ನ ಡಿಸ್ಪ್ಲೇ ದೊಡ್ಡದಾಗಿರುತ್ತದೆ ಅದರೆ ಸ್ಮಾರ್ಟ್‌ ರಿಂಗ್‌ ಗಾತ್ರವೇ ಚಿಕ್ಕದಾಗಿರುವುದರಿಂದ ಡಿಸ್ಪ್ಲೇ ಕೂಡ ಚಿಕ್ಕದಾಗಿರುತ್ತದೆ.


  ಇದರ ಜೊತೆಗೆ ಆಪಲ್‌ ಕಂಪನಿ ಕೂಡ ಹೊಸ ಸ್ಮಾರ್ಟ ರಿಂಗ್ಸ್‌ ಅನ್ನು ಪರಿಚಯಿಸುತ್ತಿದೆ. ಇದು ಕೂಡ ಹೊಸ ರೀತಿಯಲ್ಲಿ ಪ್ರಾರಂಭವಾದ ಸ್ಮಾರ್ಟ್‌ ರಿಂಗ್ಸ್‌ ಅಗಿದೆ. ಗ್ರಾಹಕರಿಗೆ ಸುಲಭವಾಗುವಾಮತೆ ಈ ಉತ್ಪನ್ನವನ್ನು ಆರಂಭಿಸಲಾಗಿದೆ ಎಂದು ವರದಿ ಮಾಡಿದ್ದಾರೆ.

  Published by:Harshith AS
  First published: