• Home
  • »
  • News
  • »
  • tech
  • »
  • Whatsapp Hack: ಇನ್ಮುಂದೆ ವಾಟ್ಸಪ್​ ಹ್ಯಾಕ್ ಆದ್ರೂ ನೋಟಿಫಿಕೇಶನ್ ಬರುತ್ತೆ!

Whatsapp Hack: ಇನ್ಮುಂದೆ ವಾಟ್ಸಪ್​ ಹ್ಯಾಕ್ ಆದ್ರೂ ನೋಟಿಫಿಕೇಶನ್ ಬರುತ್ತೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಾಟ್ಸಪ್ ಬಳಕೆದಾರರ ಮಾಹಿತಿಯನ್ನು ಹ್ಯಾಕ್ ಮಾಡಲು ಹ್ಯಾಕರ್‌ಗಳು ಇನ್ನೂ ಹಲವಾರು ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಆದರೆ ವಾಟ್ಸಾಪ್ ಚಾಟ್‌ಗಳನ್ನು ಅಪರಿಚಿತರು ಓದುತ್ತಿದ್ದಾರೆಂದರೆ ಅದಕ್ಕೆ ಈಗ ಸುಲಭ ಉಪಾಯವಿದೆ. ಈ ಕೆಳಗೆ ನೀಡಿರುವ ಟ್ರಿಕ್ಸ್​ ಮೂಲಕ ನಿಮ್ಮ ವಾಟ್ಸಪ್ ಹ್ಯಾಕ್​ ಆಗಿದ್ಯಾ ಎಂದು ನೋಡಬಹುದು.

ಮುಂದೆ ಓದಿ ...
  • Share this:

    ಜನಪ್ರಿಯ ತ್ವರಿತ ಸಂದೇಶ ಅಪ್ಲಿಕೇಶನ್ (Application) ವಾಟ್ಸಪ್ (Whatsapp) ಬಳಕೆದಾರರನ್ನು ಮೆಚ್ಚಿಸಲು ನಿಯಮಿತ ನವೀಕರಣಗಳನ್ನು ಒದಗಿಸುತ್ತದೆ. ಈ ಅಪ್ಲಿಕೇಶನ್ ಪ್ರಪಂಚದಾದ್ಯಂತ ಬಳಕೆದಾರರನ್ನು ಹೊಂದಿದೆ. ಇದು ಹೆಚ್ಚು ಬಳಸಿದ ಸಂದೇಶ ಅಪ್ಲಿಕೇಶನ್ ಎಂದು ಇತ್ತೀಚೆಗೆ ಗುರುತಿಸಲ್ಪಟ್ಟಿದೆ. ಮತ್ತೊಂದೆಡೆ ಹ್ಯಾಕರ್ಸ್ (Hackers) ವಾಟ್ಸಾಪ್ ಬಳಕೆದಾರರ ಮಾಹಿತಿಯನ್ನು ಹ್ಯಾಕ್ ಮಾಡಲು ನಿರಂತರವಾಗಿ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದೀಗ ವಾಟ್ಸಪ್ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಬಿಡುಗಡೆ ಮಾಡಿದೆ. ಇದೀಗ ವಾಟ್ಸಪ್ ಬಳಕೆದಾರರ ವಿವರಗಳ ಗೌಪ್ಯತೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಇದಕ್ಕಾಗಿಯೇ ವಾಟ್ಸಪ್ ಕಂಪನಿ ಹೊಸತನ್ನು ತರಲು ಪ್ರಯತ್ನಿಸುತ್ತಿದೆ.


    ವಾಟ್ಸಪ್ ಬಳಕೆದಾರರ ಮಾಹಿತಿಯನ್ನು ಹ್ಯಾಕ್ ಮಾಡಲು ಹ್ಯಾಕರ್‌ಗಳು ಇನ್ನೂ ಹಲವಾರು ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಆದರೆ ವಾಟ್ಸಾಪ್ ಚಾಟ್‌ಗಳನ್ನು ಅಪರಿಚಿತರು ಓದುತ್ತಿದ್ದಾರೆಂದರೆ ಅದಕ್ಕೆ ಈಗ ಸುಲಭ ಉಪಾಯವಿದೆ. ಈ ಕೆಳಗೆ ನೀಡಿರುವ ಟ್ರಿಕ್ಸ್​ ಮೂಲಕ ನಿಮ್ಮ ವಾಟ್ಸಪ್ ಹ್ಯಾಕ್​ ಆಗಿದ್ಯಾ ಎಂದು ನೋಡಬಹುದು.


    ವಾಟ್ಸಾಪ್ ಲಿಂಕ್


    ನಿಮ್ಮ ವಾಟ್ಸಪ್ ಚಾಟ್ ಅನ್ನು ಯಾರಾದರೂ ಓದುತ್ತಿದ್ದಾರೆ ಎಂದು ನೀವು ಭಾವಿಸಿದರೆ, ಪರಿಶೀಲಿಸಲು ಕಂಪನಿಯು ಒಂದು ಟಿಪ್ಸ್ ಅನ್ನು ನೀಡಿದೆ. ವಾಟ್ಸಪ್ ಲಿಂಕ್ ಕಾರ್ಯವು ಹೆಚ್ಚುವರಿ ಸಾಧನಗಳಲ್ಲಿ ವಾಟ್ಸಪ್ ಗೆ ಪ್ರವೇಶವನ್ನು ಅನುಮತಿಸುತ್ತದೆ.


    ಇದನ್ನೂ ಓದಿ: ವಿಶ್ವದಾದ್ಯಂತ ಅತೀ ಹೆಚ್ಚು ಇನ್ಸ್ಟಾಗ್ರಾಮ್ ಫಾಲೋವರ್ಸ್​ ಹೊಂದಿದವರ ಪಟ್ಟಿ ಇಲ್ಲಿದೆ.


    ಮೂಲ ವಾಟ್ಸಪ್ ಚಾಟ್‌ಗಳನ್ನು ಓದಲು ಬಳಕೆದಾರರು ಇದನ್ನು ಬಳಸಬಹುದು. ಹ್ಯಾಕರ್ಸ್ ತಮ್ಮ ಲಾಭಕ್ಕಾಗಿ ಇತ್ತೀಚೆಗೆ ಹೆಚ್ಚು ವಾಟ್ಸಪ್​ ಅನ್ನು ಬಳಸುತ್ತಿದ್ದಾರೆ. ವಾಟ್ಸಪ್ ಲಿಂಕ್ ಅನ್ನು ಬಳಸಿಕೊಂಡು ಸ್ಕ್ಯಾಮರ್‌ಗಳು ಬಳಕೆದಾರರ ಚಾಟ್‌ಗೆ ಪ್ರವೇಶವನ್ನು ಪಡೆಯುತ್ತಾರೆ.


    ಸಾಂಕೇತಿಕ ಚಿತ್ರ


    ಹ್ಯಾಕರ್ಸ್ ಚಾಟ್ ಓದುವುದು ಹೇಗೆ?


    ವಾಟ್ಸಪ್ ಬಳಕೆದಾರರ ಪ್ರೈವೇಟ್​ ಚಾಟ್‌ಗಳನ್ನು ಓದಲು ಹ್ಯಾಕರ್‌ಗಳು ವಾಟ್ಸಪ್ ಲಿಂಕ್ ಅನ್ನು ಬಳಸಬಹುದು. ಇದು ತುಂಬಾ ಸಾಮಾನ್ಯ ವಿಧಾನವಾಗಿದೆ. ಇದನ್ನು ತಿಳಿಯಲು, ಬಳಕೆದಾರರು ಮೊದಲು ವಾಟ್ಸಪ್ ಅನ್ನು ಓಪನ್​ ಮಾಡಬೇಕು. ನಿಮ್ಮ ಮೊಬೈಲ್ ಸ್ಕ್ರೀನ್​ನ ಮೇಲಿನ ಎಡ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.


    ಇಲ್ಲಿ ನೀವು ಲಿಂಕ್ಡ್ ಡಿವೈಸಸ್ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಅಲ್ಲಿ ನೀವು ವಾಟ್ಸಪ್ ಖಾತೆಗೆ ಸಂಪರ್ಕಗೊಂಡಿರುವ ಸಾಧನದ ಬಗ್ಗೆ ಮಾಹಿತಿಯನ್ನು ಕಾಣಬಹುದು. ಅದರಲ್ಲಿ ಯಾವುದಾದರೂ ಗುರುತಿಸಲಾಗದ ಬ್ರೌಸರ್ ಅಥವಾ ಸಾಧನವನ್ನು ನೀವು ನೋಡಿದರೆ.. ಅದನ್ನು ತಕ್ಷಣವೇ ತೆಗೆದುಹಾಕಬೇಕು.


    ವಾಟ್ಸಪ್ ಲಾಕ್ ಮಾಡಿ


    ವಾಟ್ಸಪ್ ಗೆ ಲಿಂಕ್ ಮಾಡಲಾದ ಗುರುತಿಸಲಾಗದ ಸಾಧನಗಳನ್ನು ತೆಗೆದುಹಾಕಲು, ಕಂಪ್ಯೂಟರ್ ಅಥವಾ ಬ್ರೌಸರ್ ಆಯ್ಕೆಮಾಡಿ. ನಂತರ ಡಿಲೀಟ್​ ಆಯ್ಕೆಯನ್ನು ಆರಿಸಿ. ನೀವು ಹೆಚ್ಚಿನ ರಕ್ಷಣೆಯನ್ನು ಬಯಸಿದರೆ, ವಾಟ್ಸಪ್ ಅನ್ನು ಲಾಕ್ ಮಾಡಲು ನೀವು ಅಪ್ಲಿಕೇಶನ್ ಲಾಕ್ ಅನ್ನು ಬಳಸಬಹುದು. ಹೆಚ್ಚುವರಿಯಾಗಿ ಎರಡು ಅಂಶಗಳ ಭದ್ರತಾ ಸಂಕೇತಗಳನ್ನು ಬಳಸಬಹುದು.


    ವಾಟ್ಸಪ್f​ನ ಹೊಸ ಅಪ್ಡೇಟ್ಸ್


    ವಾಟ್ಸಪ್ ಇತ್ತೀಚೆಗೆ ಕೆಲವು ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ. ಕಮ್ಯುನಿಟಿ, ಇನ್-ಚಾಟ್ ಪೋಲ್‌ಗಳು, ವೀಡಿಯೊ ಕರೆಗಳು, ಹೆಚ್ಚಿದ ಗುಂಪು ಸದಸ್ಯರ ಸಂಖ್ಯೆ ಈ ರೀತಿಯ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ. ವೇಗದ ಸಂದೇಶ ಕಳುಹಿಸುವ ಅಪ್ಲಿಕೇಶನ್‌ನ ಅತ್ಯುತ್ತಮ ಅನುಭವವನ್ನು ಒದಗಿಸಲು ಈ ವೈಶಿಷ್ಟ್ಯಗಳನ್ನು ಲಭ್ಯಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ವಿವಿಧ ಗುಂಪುಗಳನ್ನು ಒಂದೇ ಸ್ಥಳದಲ್ಲಿ ತರಲು ವಾಟ್ಸಪ್ ಕಮ್ಯುನಿಟಿ ವೈಶಿಷ್ಟ್ಯವನ್ನು ತಂದಿದೆ.


    ಈ ವೈಶಿಷ್ಟ್ಯದೊಂದಿಗೆ ಗುಂಪುಗಳನ್ನು ಸಂಘಟಿಸುವುದು ಸುಲಭವಾಗುತ್ತದೆ. ಇದಲ್ಲದೆ, ವಾಟ್ಸಾಪ್ ಇತ್ತೀಚೆಗೆ ಇನ್-ಚಾಟ್ಸ್ ಪೋಲ್ಸ್ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ, ಇದು ದೀರ್ಘಕಾಲದಿಂದ ಪರೀಕ್ಷಿಸಲ್ಪಟ್ಟಿದೆ. ಇನ್-ಚಾಟ್ ಪೋಲ್ ವೈಶಿಷ್ಟ್ಯದ ಮೂಲಕ ಚಾಟ್‌ನಲ್ಲಿ ಯಾವುದೇ ಪ್ರಶ್ನೆಯನ್ನು ರಚಿಸಬಹುದು ಮತ್ತು ಕಳುಹಿಸಬಹುದು. ಗ್ರೂಪ್​ಗಳಲ್ಲಿ ಇದು ವಿಶೇಷವಾಗಿ ಉಪಯುಕ್ತವಾಗಿದೆ.

    Published by:Prajwal B
    First published: