• Home
  • »
  • News
  • »
  • tech
  • »
  • Nothing Phone 1: ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಇದು ಬೊಂಬಾಟ್ ಸಿಹಿಸುದ್ದಿ!

Nothing Phone 1: ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಇದು ಬೊಂಬಾಟ್ ಸಿಹಿಸುದ್ದಿ!

Nothing Phone 1

Nothing Phone 1

ಮೊಬೈಲ್ ಜಗತ್ತಿನಲ್ಲಿ ವಿಧವಿಧ ಮೊಬೈಲ್ಗಳು ಹೆಜ್ಜೆ ಹಾಕುತ್ತಿದೆ. ಸ್ಮಾರ್ಟ್ ಫೋನ್ ಗಳ ಸಂಖ್ಯೆಗಳು ಗಗನಕ್ಕೆರುತ್ತಿದೆ. ಈಗ ನಥಿಂಗ್ ಫೋನ್ 1 ಎನ್ನುವ ಸ್ಮಾಟ್ ಫೋನ್ ತನ್ನ ಹವಾವನ್ನು ಪ್ರರ್ದಶಿಸುತ್ತಿದೆ. ಸ್ಮಾಟ್ ಫೋನ್ ಪ್ರಿಯರಿಗೆ ಈ ಮೊಬೈಲ್ ಅಂತು ಸಕ್ಕತ್ ಖುಷಿ ಕೊಟ್ಟಿದೆ.

  • Share this:

    ಮೊಬೈಲ್ ಜಗತ್ತಿನಲ್ಲಿ (Mobile Word)  ವಿಧವಿಧ ಮೊಬೈಲ್ಗಳು ಹೆಜ್ಜೆ ಹಾಕುತ್ತಿದೆ. ಸ್ಮಾರ್ಟ್ ಫೋನ್ ಗಳ (Smart Phone) ಸಂಖ್ಯೆಗಳು ಗಗನಕ್ಕೆರುತ್ತಿದೆ. ಈಗ ನಥಿಂಗ್ ಫೋನ್ 1 ಎನ್ನುವ ಸ್ಮಾಟ್ ಫೋನ್ ತನ್ನ ಹವಾವನ್ನು ಪ್ರರ್ದಶಿಸುತ್ತಿದೆ (Displaying). ಸ್ಮಾಟ್ ಫೋನ್ ಪ್ರಿಯರಿಗೆ ಈ ಮೊಬೈಲ್ ಅಂತು ಸಕ್ಕತ್ ಖುಷಿ ಕೊಟ್ಟಿದೆ. ಇದರ ಫೀಚರ್ (Feature) ಅಂತೂ ಉತ್ತಮ ಅನುಭವ ನೀಡುತ್ತಿದೆ ಎಂದು ಬಳಕೆದಾರರಿಗೆ ಅಬಿಪ್ರಾಯ( Opinion ) ವ್ಯಕ್ತಪಡಿಸಿದ್ದರೆ. ಹಾಗದರೆ ಅಂತಹ ಫೀಚರ್ ಏನಿರಬಹುದು ಅನ್ನುವುದನ್ನು ತಿಳಿಯೋಣ ಬನ್ನಿ.


    ನಥಿಂಗ್ ಫೋನ್ 1 ಎಕ್ಸ್‌ಡಿಎ ಫೋರಮ್‌ಗಳ ವರದಿಗಳ ಪ್ರಕಾರ, 62.04MB ಗಾತ್ರದಲ್ಲಿ ಈ ಇತ್ತೀಚಿನ ನಥಿಂಗ್ ಓಎಸ್ ಆವೃತ್ತಿ 1.1.6 ಅಪ್‌ಡೇಟ್ ಆವೃತ್ತಿಯು Nothing Phone 1 ಸ್ಮಾರ್ಟ್‌ಫೋನಿಗೆ ಇದೇ ಮೊದಲ ಬಾರಿಗೆ ಜಿಯೋಗೆ 5G ಸಕ್ರಿಯತೆ, ಗೂಗಲ್ ಎಆರ್ ಕೋರ್ ಬೆಂಬಲ ತಂದಿದೆ.


    ಇದನ್ನೂ ಓದಿ:  Airtel Plan: ಏರ್ಟೆಲ್​ನ ಈ ಹೊಸ ಪ್ಲಾನ್ ಹಾಕಿಸಿಕೊಂಡರೆ ಸಿಗಲಿದೆ ಬಂಪರ್ ಆಫರ್


    ಸಿಹಿಸುದ್ದಿ  ಏನು ಗೊತ್ತಾ?


    5G ಸಕ್ರಿಯಗೊಳಿಸಿದ OS ಅಪ್‌ಡೇಟ್‌ಗಾಗಿ ಕಾದುಕುಳಿತಿದ್ದ Nothing Phone 1 ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಿಹಿಸುದ್ದಿ ದೊರೆತಿದೆ. ರಿಲಯನ್ಸ್ ಜಿಯೋ ಸಂಪರ್ಕ ಹೊಂದಿರುವ ಭಾರತೀಯ Nothing Phone 1 ಸ್ಮಾರ್ಟ್‌ಫೋನ್ ಬಳಕೆದಾರರಿಗೆ 5G ಸಕ್ರಿಯಗೊಳಿಸುವ ಹೊಸ OS ಅಪ್‌ಡೇಟ್ ದೊರೆತಿದ್ದು, ಇತ್ತೀಚಿನ ನಥಿಂಗ್ ಓಎಸ್ ಆವೃತ್ತಿ 1.1.6 ಅಪ್‌ಡೇಟ್ ನಲ್ಲಿ ಜಿಯೋಗೆ 5G ಸಕ್ರಿಯತೆ ಮತ್ತು Google AR ಕೋರ್‌ಗೆ ಬೆಂಬಲ ಸೇರಿದಂತೆ ಹಲವು ಸಿಸ್ಟಮ್ ಅಪ್‌ಡೇಟ್‌ಗಳನ್ನು ನೀಡಲಾಗಿದೆ. ಜೊತೆಗೆ ಕ್ಯಾಮೆರಾ ಸುಧಾರಣೆಯೊಂದಿದಿಗೆ ಹೆಚ್ಚಿನ ಸ್ಟೆಬಿಲಿಟಿ, ಆಪ್ಟಿಮೈಸ್ ಮಾಡಿದ ಲಾಂಚರ್, HDR ವೀಕ್ಷಣೆಗೆ ಹೆಚ್ಚಿನ ಬ್ರೈಟ್‌ನೆಸ್, ಹೊಸ ಗ್ಲಿಫ್ ಇಂಟರ್ಫೇಸ್ ಮತ್ತು NFC ಸೌಂಡ್ ಎಫೆಕ್ಟ್‌ ವೈಶಿಷ್ಟ್ಯಗಳು ದೊರೆತಿವೆ.


    ಇದನ್ನೂ ಓದಿ:  Truecaller: ಟ್ರೂ ಕಾಲರ್​ನ ಈ ಫೀಚರ್​​ಗಳನ್ನು ನೀವೊಮ್ಮೆ ನೋಡಲೇ ಬೇಕು


    ನಥಿಂಗ್ ಓಎಸ್ ಆವೃತ್ತಿ 1.1.6 ಅಪ್ಡೇಟ್ ಹೊಸ ಫೀಚರ್ಗಳು


     Google AR ಕೋರ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ.


    ಭಾರತೀಯ ರಿಲಯನ್ಸ್ ಜಿಯೋ ಬಳಕೆದಾರರು ಈಗ 5G ಬಳಸಬಹುದು.


    ಹೆಚ್ಚಿನ ಸ್ಟೆಬಿಲಿಟಿಯೊಂದಿಗೆ ವೀಡಿಯೊಗಳನ್ನು ಸೆರೆಹಿಡಿಯಬಹುದು.


    ರೆಕಾರ್ಡಿಂಗ್ ಲೈಟ್ ಇಂಡಿಕೇಟರ್ ಈಗ ಡಿಫಾಲ್ಟ್ ಆಗಿ ಯಾವಾಗಲೂ ಆನ್ ಆಗಿರುತ್ತದೆ.


    ಆಪ್ಟಿಮೈಸ್ಡ್ ಮಾಡಿರುವ ಫ್ಯುಲ್ಡ್ ಲಾಂಚರ್ ಅನುಭವ.


    ನಿಖರವಾದ ಬ್ಯಾಟರಿ ಸ್ಟೇಟಸ್ ಮಾಹಿತಿ ದೊರೆಯಲಿದೆ.


    HDR ಕಂಟೆಂಟ್ ವೀಕ್ಷಣೆ ವೇಳೆ ಗರಿಷ್ಠ ಬ್ರೈಟ್‌ನೆಸ್ ದೊರೆಯಲಿದೆ.


    ಹೊಸ ಗ್ಲಿಫ್ ಇಂಟರ್ಫೇಸ್ ಅನಿಮೇಶನ್ ವೈಶಿಷ್ಟ್ಯವನ್ನು ನವೀಕರಣಗೊಂಡಿದೆ


    ಗ್ಲಿಫ್ ಚಾರ್ಜಿಂಗ್ ಲೈಟ್ ಅನ್ನು ಈಗ ಸೌಂಡ್ ಎಫೆಕ್ಟ್ ಜೊತೆಗೆ ಸಿಂಕ್ ಮಾಡಲಾಗಿದೆ.


    NFC ಸೌಂಡ್ ಎಫೆಕ್ಟ್‌ ವೈಶಿಷ್ಟ್ಯವನ್ನು ನವೀಕರಿಸಲಾಗಿದೆ.


    ಸೆಪ್ಟೆಂಬರ್ 2022ರ Android ಭದ್ರತಾ ಪ್ಯಾಚ್‌ಗಳನ್ನು ಒಳಗೊಂಡಿದೆ.


    ಜೊತೆಗೆ, ಇತರೆ ಸಾಮಾನ್ಯ ಓಎಸ್ ದೋಷ ಪರಿಹಾರಗಳು ದೊರೆತಿವೆ.


    ಇದನ್ನೂ ಓದಿ:  Tech Tips: ಅಪರಿಚಿತರ ಕಾಲ್ ಕಿರಿಕಿರಿ! ತಪ್ಪಿಸಿಕ್ಕೊಳ್ಳೋಕೆ ಹೀಗೆ ಮಾಡಿ


    ಈ ಎಲ್ಲಾ ವೈಶಿಷ್ಟ್ಯಗಳನ್ನು ಒಳಗೊಂಡಿರುವ ನಥಿಂಗ್ OS 1.1.6 ಅಪ್‌ಡೆಟ್ ಅನ್ನು ನೀವು ಈಗಾಗಲೇ ನಿಮ್ಮ ನಥಿಂಗ್ ಫೋನ್ 1 ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದು. ಒಂದು ವೇಳೆ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ನೀವು ಈ ಹೊಸ ನವೀಕರಣವನ್ನು ಸಾದ್ಯವಾಗದಿದ್ದರೆ. ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಸೆಟ್ಟಿಂಗ್ಸ್ ತೆರೆಯಿರಿ. ನಂತರ ಸೆಟ್ಟಿಂಗ್‌ಗಳಲ್ಲಿ ಸಿಸ್ಟಮ್ ಅಪ್‌ಡೇಟ್ ವಿಭಾಗವನ್ನು  ನಿಮ್ಮ ನಥಿಂಗ್ ಫೋನ್ 1 ಸ್ಮಾರ್ಟ್‌ಫೋನನ್ನು ಅಪ್‌ಡೇಟ್ ಮಾಡಬಹುದು.

    Published by:Harshith AS
    First published: