• Home
  • »
  • News
  • »
  • tech
  • »
  • Mobile Phone: ಭಾರತದಲ್ಲಿ ತಯಾರಾಗಲಿದೆಯಂತೆ ನಥಿಂಗ್ ಅವರ ಹೊಸ ಸ್ಮಾರ್ಟ್ ಫೋನ್; ಇಲ್ಲಿದೆ ನೋಡಿ ವಿವರ

Mobile Phone: ಭಾರತದಲ್ಲಿ ತಯಾರಾಗಲಿದೆಯಂತೆ ನಥಿಂಗ್ ಅವರ ಹೊಸ ಸ್ಮಾರ್ಟ್ ಫೋನ್; ಇಲ್ಲಿದೆ ನೋಡಿ ವಿವರ

ನಥಿಂಗ್ ಫೋನ್ (1)

ನಥಿಂಗ್ ಫೋನ್ (1)

Smart Phone: ಹೊಸ ಬ್ರ್ಯಾಂಡುಗಳೂ ಸಹ ತಮ್ಮ ಛಾಪನ್ನು ಮೂಡಿಸಲು ಪ್ರಯತ್ನಿಸುತ್ತಿವೆ. ಅಂತಹ ಸಂಸ್ಥೆಗಳಲ್ಲಿ ಒಂದಾಗಿದೆ 'ನಥಿಂಗ್'. ಒನ್ ಪ್ಲಸ್ ಬ್ರ್ಯಾಂಡಿನ ಸಹ-ಸಂಸ್ಥಾಪಕರಾಗಿರುವ ಕಾರ್ಲ್ ಪೀಯ್ ಅವರ ಲಂಡನ್ ಮೂಲದ ಕಂಪನಿಯಾದ 'ನಥಿಂಗ್' ತನ್ನ ಮೊದಲ ಹೊಸ ಸ್ಮಾರ್ಟ್ ಫೋನ್ ಆದ ನಥಿಂಗ್ ಫೋನ್ (1) ಅನ್ನು ಜುಲೈ 12 ರಂದು ಲಾಂಚ್ ಮಾಡಲು ಸಜ್ಜಾಗಿರುವುದಾಗಿ ತಿಳಿದುಬಂದಿದೆ.

ಮುಂದೆ ಓದಿ ...
  • Share this:

Smart Phoneಇಂದಿನ ದಿನಗಳಲ್ಲಿ ಸ್ಮಾರ್ಟ್ ಫೋನುಗಳು (Smart Phone) ಸಾಕಷ್ಟು ಜನಪ್ರೀಯತೆಗಳಿಸುತ್ತಿದ್ದು ಹಲವು ಪ್ರತಿಷ್ಠಿತ ಬ್ರ್ಯಾಂಡುಗಳು (Brand) ಈ ಕ್ಷೇತ್ರದ ಮಾರುಕಟ್ಟೆಯನ್ನು (Market) ಆಕ್ರಮಿಸಲು ಪ್ರಯತ್ನಿಸುತ್ತಲೇ ಇವೆ. ಈಗಾಗಲೇ ಹಲವು ಪ್ರತಿಷ್ಠಿತ ಬ್ರ್ಯಾಂಡುಗಳ ಮಧ್ಯೆ ಸಾಕಷ್ಟು ಪೈಪೋಟಿ ಇರುವುದನ್ನು ಗಮನಿಸಬಹುದು. ಅಲ್ಲದೆ, ಕೆಲವು ಹೊಸ ಬ್ರ್ಯಾಂಡುಗಳೂ ಸಹ ತಮ್ಮ ಛಾಪನ್ನು ಮೂಡಿಸಲು ಪ್ರಯತ್ನಿಸುತ್ತಿವೆ. ಅಂತಹ ಸಂಸ್ಥೆಗಳಲ್ಲಿ ಒಂದಾಗಿದೆ 'ನಥಿಂಗ್' (Nothing). ಒನ್ ಪ್ಲಸ್ ಬ್ರ್ಯಾಂಡಿನ ಸಹ-ಸಂಸ್ಥಾಪಕರಾಗಿರುವ ಕಾರ್ಲ್ ಪೀಯ್ ಅವರ ಲಂಡನ್ (London) ಮೂಲದ ಕಂಪನಿಯಾದ 'ನಥಿಂಗ್' ತನ್ನ ಮೊದಲ ಹೊಸ ಸ್ಮಾರ್ಟ್ ಫೋನ್ ಆದ ನಥಿಂಗ್ ಫೋನ್ (1) ಅನ್ನು ಜುಲೈ 12 ರಂದು ಲಾಂಚ್ ಮಾಡಲು ಸಜ್ಜಾಗಿರುವುದಾಗಿ ತಿಳಿದುಬಂದಿದೆ.


ತಮಿಳುನಾಡಿನಲ್ಲಿ ತಯಾರಿಸುವ ನಥಿಂಗ್ ಫೋನ್ (1)
ಈ ಲಾಂಚ್ ಸಮಾರಂಭ ನಡೆಯುವ ಮುಂಚೆಯೇ ನಥಿಂಗ್ ಭಾರತ ವಲಯದ ಉಪಾಧ್ಯಕ್ಷ ಹಾಗೂ ಪ್ರಧಾನ ವ್ಯವಸ್ಥಾಪಕರಾಗಿರುವ ಮನು ಶರ್ಮಾ ಅವರು ಪಿಟಿಐ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ್ದು ಅವರ ಸಂಸ್ಥೆಯ ಮೊದಲ ಸ್ಮಾರ್ಟ್ ಫೋನ್, 'ನಥಿಂಗ್ ಫೋನ್ (1)' ಅನ್ನು ಭಾರತದಲ್ಲಿ ತಯಾರಿಸಲಾಗುವುದೆಂದು ಹೇಳಿದ್ದಾರೆ. ಟೆಕ್ ದೈತ್ಯ ಗೂಗಲ್ ಅವರಿಂದ ಬ್ಯಾಕಿಂಗ್ ಹೊಂದಿರುವ ಈ ಸ್ಮಾರ್ಟ್ ಫೋನನ್ನು ತಮಿಳುನಾಡಿನಲ್ಲಿ ತಯಾರಿಸಲಾಗುವುದೆಂದು ತಿಳಿದುಬಂದಿದೆ.


ಇಯರ್ (1) TWS ಇಯರ್ ಬಡ್
"ಭಾರತದಲ್ಲಿ ಮಾರಾಟವಾಗುವ ಪ್ರತಿ ಫೋನ್ (1) ಸ್ಥಳೀಯವಾಗಿಯೇ ತಯಾರಿಸಲ್ಪಟ್ಟಿರುತ್ತವೆ ಎಂಬ ವಿಷಯ ಹಂಚಿಕೊಳ್ಳಲು ನಾನು ತುಂಬಾ ಥ್ರಿಲ್ ಆಗಿದ್ದೇನೆ" ಎಂದು ಮನು ಶರ್ಮಾ ಈ ಸಂದರ್ಭದಲ್ಲಿ ನುಡಿದಿದ್ದಾರೆ. ನಥಿಂಗ್ ಅವರ ಈ 'ಫೋನ್ (1)'ಎರಡನೇಯ ಉತ್ಪನ್ನವಾಗಿದೆ.


ಇದನ್ನೂ ಓದಿ: ನೀವು ಆ್ಯಪಲ್ iPhone-13 ಖರೀದಿಸುವ ಪ್ಲ್ಯಾನ್ ಮಾಡ್ತಾ ಇದ್ದೀರಾ? ಅಮೆಜಾನ್, ಫ್ಲಿಪ್‌ಕಾರ್ಟ್ ನಲ್ಲಿದೆ ಸೂಪರ್ ಆಫರ್


ಇದಕ್ಕೂ ಮುಂಚೆ ನಥಿಂಗ್ ಕಳೆದ ವರ್ಷ ಭಾರತದಲ್ಲಿ ಇಯರ್ (1) TWS ಎಂಬ ಇಯರ್ ಬಡ್ ಗಳನ್ನು ಪರಿಚಯಿಸಿತ್ತು. ಪ್ರಸ್ತುತ ಈ ಸ್ಮಾರ್ಟ್ ಫೋನನ್ನು ಸಂಸ್ಥೆಯು ಭಾರತೀಯ ಕಾಲಮಾನ 8:30 PM ಗೆ ಆರಂಭವಾಗುವ ರಿಟರ್ನ್ ಟು ಇನ್ಸ್ಟಿಂಕ್ಟ್ ಎಂಬ ಕಾರ್ಯಕ್ರಮದಲ್ಲಿ ಪರಿಚಯಿಸಲಿರುವುದಾಗಿ ತಿಳಿದು ಬಂದಿದೆ.


ಫ್ಲಿಪ್ ಕಾರ್ಟ್ ಮೂಲಕ ಈ ಫೋನುಗಳ ಮಾರಾಟ
ಈ ಕಾರ್ಯಕ್ರಮವು ಲಂಡನ್ ನಗರದಲ್ಲಿ ನಡೆಯಲಿದ್ದು ಅದರ ಲೈವ್ ಸ್ಟ್ರೀಮಿಂಗ್ ಅದರ ಅಧಿಕೃತ ವೆಬ್ ತಾಣದಲ್ಲಿ ಜಗತ್ತಿನಾದ್ಯಂತ ಅದರ ವೀಕ್ಷಕರಿಗೆ ಲಭ್ಯವಾಗಲಿದೆ. ಈಗಾಗಲೇ ತಯಾರಿಸಲಾಗಿರುವ ನಕ್ಷೆಯಂತೆ ನಥಿಂಗ್ ಸಂಸ್ಥೆಯು ಭಾರತದಲ್ಲಿ ತನ್ನ ಗ್ರಾಹಕ ಸೇವೆ ಸಾಮರ್ಥ್ಯವನ್ನು ವೃದ್ಧಿಸುವ ಪಥದಲ್ಲಿ ಸಾಗುತ್ತಿದ್ದು ಈಗಾಗಲೇ 250 ನಗರಗಳಾದ್ಯಂತ 270 ಅಧಿಕೃತ ಸೇವಾ ಕೇಂದ್ರಗಳ ಸ್ಥಾಪನೆ, ವರ್ಷಪೂರ್ತಿ ಗ್ರಾಹಕರಿಗೆ ಸೇವೆ ಒದಗಿಸಲು ಭಾರತೀಯ ಸೇವಾ ಕೇಂದ್ರಗಳಿಗೆ ಚಾಲನೆ ನೀಡುವಲ್ಲಿ ನಿರತವಾಗಿದೆ. ಫ್ಲಿಪ್ ಕಾರ್ಟ್ ಮೂಲಕ ಈ ಫೋನುಗಳನ್ನು ಮಾರಾಟ ಮಾಡಲಾಗುವುದು ಎಂದು ಹೇಳಲಾಗಿದೆ.


ನಥಿಂಗ್ ಫೋನಿನ ವಿಶಿಷ್ಟತೆಗಳು
ಆಪಲ್ ರೀತಿಯಲ್ಲೇ ನಥಿಂಗ್ ತನ್ನದೆ ವಿಶಿಷ್ಟ ವಲಯವೊಂದನ್ನು ನಿರ್ಮಿಸಿ ಅದರ ಉತ್ಪನ್ನಗಳೊಂದಿಗೆ ಎಲ್ಲವೂ ಸಂಪರ್ಕದಲ್ಲಿರುವಂಥ ಯೋಜನೆಯನ್ನು ರೂಪಿಸುತ್ತಿದೆ. ಇನ್ನು ಫೋನಿನ ವಿಶಿಷ್ಟತೆಗಳ ಬಗ್ಗೆ ಮಾತನಾಡುವುದಾದರೆ ಹಲವಾರು ಊಹಾಪೋಹಗಳು ಹರಿದಾಡುತ್ತಿವೆ. ಆ ಪ್ರಕಾರ, ಈ ಫೋನ್ 6.43 ಇಂಚುಗಳ ಪರದೆ ಹೊಂದಿದ್ದು FHD+ಡಿಸ್ಪ್ಲೇ ಹೊಂದಿರುತ್ತದೆ. ಇದೊಂದು ಮಧ್ಯಮ ಶ್ರೇಣಿಯಲ್ಲಿ ಬರುವ ಸಾಧನವಾಗಿದ್ದು 90Hz ರಿಫ್ರೆಶ್ ರೇಟ್, ಸ್ನ್ಯಾಪ್ ಡ್ರ್ಯಾಗನ್ 778G ಚಿಪ್ಸೆಟ್ ಹೊಂದಿರುತ್ತದೆ. ಈ ಫೋನ್ 8 ಜಿಬಿ ರ್‍ಯಾಮ್ ಹಾಗೂ 128 ಜಿಬಿ ಶೇಖರಣಾ ಸಾಮರ್ಥ್ಯ ಹೊಂದಿದೆ ಎಂಬ ಸುದ್ದಿಯಿದೆ.


ಇದನ್ನೂ ಓದಿ: Smart Phones: 30 ಸಾವಿರ ರೂಪಾಯಿಯೊಳಗಿರುವ ಬೆಸ್ಟ್ ಫೋನುಗಳು ಇವು


ಕ್ಯಾಮೆರಾ ವೈಶಿಷ್ಠ್ಯಕ್ಕೆ ಬಂದರೆ ಈ ನಥಿಂಗ್ ಫೋನ್ (1) ಹಿಂಭಾಗದಲ್ಲಿ ಮೂರು ಲೆನ್ಸುಗಳನ್ನು ಹೊಂದಿದ್ದು 50MP ಕ್ಲ್ಯಾರಿಟಿಯ ಪ್ರಾಥಮಿಕ ಕ್ಯಾಮೆರಾ ಹೊಂದಿದೆ ಎನ್ನಲಾಗಿದೆ. ವಿಡಿಯೋ ಕರೆ ಹಾಗೂ ಸೆಲ್ಫಿಗಳಿಗಾಗಿ ಈ ಫೋನ್ 32MP ಕ್ಲ್ಯಾರಿಟಿಯ ಶೂಟರ್ ಸೌಲಭ್ಯ ಹೊಂದಿದೆ ಎನ್ನಲಾಗಿದೆ. ಈಗಾಗಲೇ ಕೆಲವೆಡೆ ಪ್ರಕಟವಾಗಿರುವ ವರದಿಗಳ ಪ್ರಕಾರ, ನಥಿಂಗ್ ಅವರ ಈ ಮೊದಲ ಸ್ಮಾರ್ಟ್ ಫೋನ್ 4,500 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಇನ್ನು ಬೆಲೆಯ ವಿಷಯಕ್ಕೆ ಬಂದರೆ, ಭಾರತದಲ್ಲಿ ಈ ಫೋನ್ 25,000 ದಿಂದ ಹಿಡಿದು 30,000 ರೂಪಾಯಿಗಳ ಶ್ರೇಣಿಯಲ್ಲಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.

Published by:Ashwini Prabhu
First published: