ನಥಿಂಗ್ ಇಯರ್ (1) ವೈರ್‌ಲೆಸ್ ಇಯರ್‌ಬಡ್ ತಂತ್ರಜ್ಞಾನ ಕ್ಷೇತ್ರದಲ್ಲಿ ವಿನೂತನ ಮೈಲಿಗಲ್ಲು ಸ್ಥಾಪಿಸಲು ಹೊರಟಿದೆ. ಇದು ಪಾರದರ್ಶಕ ಬಡ್‌ಗಳನ್ನು ಒಳಗೊಂಡಿದ್ದು ಧ್ವನಿ ರದ್ಧತಿ ಫೀಚರ್ ಹೊಂದಿದ್ದು ಇದರ ಬೆಲೆ 5,999 ರೂ. ಆಗಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿ ರೂಪುಗೊಂಡಿರುವ ನಥಿಂಗ್ ಇಯರ್ ವೈರ್‌ಲೆಸ್ ಇಯರ್‌ಬಡ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಬ್ರ್ಯಾಂಡ್ ಇಯರ್‌ಬಡ್‌ಗಳಿಗೂ ತೀವ್ರ ಪೈಪೋಟಿ ನೀಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್+ 5,990 ರೂ. ಗೆ ಲಭ್ಯವಿದ್ದರೆ ಒನ್‌ಪ್ಲಸ್ ಬಡ್ಸ್ ಜೆಡ್ 3,190 ರೂ. ಗೆ ಲಭ್ಯವಿದೆ. ಇವೆರಡೂ ಇಯರ್‌ಬಡ್‌ಗಳು ಧ್ವನಿ ರದ್ಧತಿ ಅಂದರೆ ನಾಯ್ಸ್ ಕ್ಯಾನ್ಸಲೇಶನ್ ಸೌಲಭ್ಯಗಳನ್ನು ಒಳಗೊಂಡಿವೆ ಎಂಬುದು ಪ್ಲಸ್ ಪಾಯಿಂಟ್ ಆಗಿದೆ.
ಇಯರ್‌ಬಡ್ ವಿಶೇಷತೆ ಏನು?
ನಾವು ಈ ಹಿಂದೆ ಸುಂದರವಾಗಿರುವ ಅತ್ಯುನ್ನತ ಇಯರ್‌ಬಡ್‌ಗಳನ್ನು ನೋಡಿದ್ದರೂ ಬಳಸಿದ್ದರೂ ನಥಿಂಗ್ ಲೈಕ್ ಇಯರ್‌ಬಡ್ ಕೊಂಚ ವಿಭಿನ್ನವಾಗಿದೆ. ಇಯರ್‌ಬಡ್ ಒಳಗಡೆ ಏನಿದೆ ಎಂಬುದನ್ನು ಇದರ ಪಾರದರ್ಶಕ ಫೀಚರ್ ನಿಮಗೆ ತಿಳಿಸುತ್ತದೆ. ಗ್ಯಾಜೆಟ್‌ನ ಒಳಭಾಗವನ್ನು ಸಂಪೂರ್ಣವಾಗಿ ವಿಶ್ಲೇಷಿಸಬಹುದಾಗಿದೆ.
ವಿಭಿನ್ನ ಹೇಗೆ
ಮೊದಲ ನೋಟದಲ್ಲೇ ನಥಿಂಗ್ ಇಯರ್‌ಬಡ್‌ಗಳ ವಿನ್ಯಾಸ ಹಾಗೂ ಫೀಚರ್ ನಿಮ್ಮ ಕಣ್ಸೆಳೆಯುತ್ತದೆ ಮತ್ತು ವಿಭಿನ್ನತೆಯನ್ನು ನೀವು ಮಾಪನ ಮಾಡಬಹುದು. ಈ ಇಯರ್‌ಬಡ್ ನಿಮ್ಮ ಕಿವಿಯೊಳಗೆ ಅಳವಡಿಕೆಯಾಗುವಂತಹ ಹೆಚ್ಚುವರಿ ಬದಿಯನ್ನು ಒಳಗೊಂಡಿದ್ದು ಆರಾಮವಾಗಿ ಇದನ್ನು ಧರಿಸಬಹುದು.
ಇಯರ್‌ಬಡ್‌ಗಳ ಸುಂದರ ಕೇಸ್
ನಥಿಂಗ್ ಇಯರ್‌ಬಡ್‌ಗಳ ಕೇಸ್ ಕೂಡ ಅದರಷ್ಟೇ ಸುಂದರವಾಗಿದೆ. ಇದು ಎಲ್‌ಇಡಿ ಒಳಗೊಂಡಿದ್ದರೂ ರಾತ್ರಿ ಸಮಯದಲ್ಲಿ ಬೆಳಕನ್ನುಂಟು ಮಾಡುವುದಿಲ್ಲ. ಇದರ ಕೇಸ್ ಕೂಡ ಪಾರದರ್ಶಕವಾಗಿದ್ದು ಚಾರ್ಜ್ ಆಗುವುದನ್ನು ವೀಕ್ಷಿಸಬಹುದಾಗಿದೆ.
ಧ್ವನಿ ಗುಣಮಟ್ಟ
ಇದು 11.6 ಮಿ. ಮೀಟರ್‌ನ ಆಡಿಯೋ ಡ್ರೈವರ್ ಹೊಂದಿದೆ. ಆರಂಭದಿಂದಲೂ, ನಥಿಂಗ್ ಇಯರ್‌ಬಡ್ಸ್ ನಿಮ್ಮ ಸಂಗೀತ ಪ್ಲೇಲಿಸ್ಟ್‌ಗಳನ್ನು ಅತ್ಯುತ್ತಮ ಧ್ವನಿಯೊಂದಿಗೆ ಸಂಪರ್ಕಿಸುತ್ತದೆ. ಪಾಡ್‌ಕಾಸ್ಟ್‌ಗಳು ಮತ್ತು ನೆಟ್‌ಫ್ಲಿಕ್ಸ್ ಸಂಗೀತ, ಶ್ರವ್ಯ ಕಾರ್ಯಕ್ರಮಗಳು ಸೇರಿದಂತೆ ಸೇರ್ಪಡೆ ಬಳಕೆಯ ಸನ್ನಿವೇಶಗಳಿಗೆ ಹೆಚ್ಚುವರಿ ನಮ್ಯತೆ ನೀಡುವುದು, ಅಲ್ಲಿ ಶಕ್ತಿಯುತವಾದ ಬಾಸ್‌ಗಿಂತ ಧ್ವನಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹೆಚ್ಚು ಸಮತೋಲಿತ, ಮೋರ್ ಬಾಸ್ ಹಾಗೂ ವಾಯ್ಸ್ ಇಕ್ಯೂ ಆಯ್ಕೆಗಳನ್ನು ಇಯರ್‌ಬಡ್‌ಗಳು ಹೊಂದಿವೆ.
ರಹಸ್ಯ ಪರಿಕರ
ಸ್ವೀಡಿಶ್ ಕಂಪೆನಿಯಾದ ಟೀನೇಜ್ ಇಂಜಿನಿಯರಿಂಗ್ ಆಡಿಯೋ ಪಾಡ್‌ಕಾಸ್ಟ್‌ಗಳು ಹಾಗೂ ಆ್ಯಕ್ಸೆಸರಿಗಳನ್ನು ನಿರ್ಮಿಸಿದೆ. ನಥಿಂಗ್ ಇಯರ್‌ಬಡ್ಸ್ ದ ಇಯರ್ ಆ್ಯಪ್ ಒದಗಿಸಿದ್ದು, ಇದು ಸುಂದರವಾಗಿದೆ ಹಾಗೂ ನಿಖರ ಕಾರ್ಯನಿರ್ವಹಣೆಯ ಒಳಗೊಂಡಿದೆ. ಆದರೂ, ಆ್ಯಪ್ ಬ್ಯಾಟರಿ ಮಟ್ಟವನ್ನು ತೋರಿಸುವುದಿಲ್ಲ. ಇನ್ನು ಧ್ವನಿ ಏರಿಳಿತಗಳನ್ನು ಪ್ರದರ್ಶಿಸುವುದಿಲ್ಲ. ಆದರೆ ಇದು ಇಯರ್‌ಬಡ್‌ಗಳನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ.
ಬ್ಯಾಟರಿ
ಇಯರ್‌ಬಡ್‌ಗಳು ನಿಮಗೆ 5.7 ಗಂಟೆಗಳ ಬ್ಯಾಟರಿ ದೀರ್ಘತೆಯನ್ನು ಒದಗಿಸಲಿವೆ. ಈ ಇಯರ್‌ಬಡ್‌ಗಳು ಫ್ಲಿಪ್‌ಕಾರ್ಟ್‌ನಲ್ಲಿ ಆಗಸ್ಟ್ 17ರಿಂದ ಲಭ್ಯವಾಗಲಿವೆ. ಆ್ಯಂಡ್ರಾಯ್ಡ್‌ನಲ್ಲಿ ವೇಗವಾದ ಪೇರಿಂಗ್ ಫೀಚರ್ ಅನ್ನು ಒದಗಿಸಲಿದ್ದು ಹಣಕ್ಕೆ ತಕ್ಕ ಉತ್ಪನ್ನ ಎಂಬುದಂತೂ ನಿಜವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ