ಹಿಂದೆಲ್ಲಾ ಯಾವುದೇ ಕೆಲಸ ಆಗಬೇಕಿದ್ದರೂ ಮೊಬೈಲ್ (Mobile) ಅಥವಾ ಸೈಬರ್ಗಳಿಗೆ (Cyber) ಹೋಗಿ ಮಾಡಿಸುತ್ತಿದ್ದರು. ಆದರೆ ಈ ಪ್ರತಿಯೊಬ್ಬರ ಮನೆಯಲ್ಲೂ ಲ್ಯಾಪ್ಟಾಪ್ ಎಂಬುದು ಇದ್ದೇ ಇದೆ. ಆದರೆ ಕೆಲವರು ಇದರ ಬೆಲೆ ದುಬಾರಿ ಎಂಬ ಕಾರಣಕ್ಕೆ ಖರೀದಿಸುವುದನ್ನೇ ಬಿಡುತ್ತಾರೆ. ಈಗಂತೂ ಚಿಕ್ಕ ಮಕ್ಕಳಿಂದ ಹಿಡಿದು ಆಫೀಸ್ ಕೆಲಸದವರವರೆಗೂ ಲ್ಯಾಪ್ಟಾಪ್ (Laptop) ಅಗತ್ಯ ಸಾಧನವಾಗಿಬಿಟ್ಟಿದೆ. ಆದರೆ ಮಾರುಕಟ್ಟೆಗೆಯಲ್ಲಿ ಹಲವಾರು ಲ್ಯಾಪ್ಟಾಪ್ ಕಂಪನಿಗಳಿವೆ. ಇವುಗಳೆಲ್ಲವೂ ವರ್ಷಕ್ಕೆ ಒಂದಾದರು ಹೊಸ ಲ್ಯಾಪ್ಟಾಪ್ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಇದೀಗ ಹೊಸ ಲ್ಯಾಪ್ಟಾಪ್ ಖರೀದಿ ಮಾಡಬೇಕೆಂದು ಯೋಚಿಸುತ್ತಿರುವವರಿಗೆ ಅಮೆಜಾನ್ ಗುಡ್ನ್ಯೂಸ್ ನೀಡಿದೆ. ಅಮೆಜಾನ್ 2022ರ ವರ್ಷಾಂತ್ಯದಲ್ಲಿ ಆಫರ್ ಸೇಲ್ ಅನ್ನು ಆರಂಭಿಸಿದೆ.
ಪ್ರಸಿದ್ಧ ಇಕಾಮರ್ಸ್ ಕಂಪನಿಯಾಗಿರುವ ಅಮೆಜಾನ್ ಇದೀಗ ವರ್ಷಾಂತ್ಯದಲ್ಲಿ ಆಫರ್ ಸೇಲ್ ಅನ್ನು ಆರಂಭಿಸಿದೆ. ಈ ಸೇಲ್ನಲ್ಲಿ ಭಾರೀ ಡಿಸ್ಕೌಂಟ್ ಇದ್ದು. ಲ್ಯಾಪ್ಟಾಪ್ಗಳನ್ನು ಅಮೆಜಾನ್ ಭರ್ಜರಿ ರಿಯಾಯಿತಿಯೊಂದಿಗೆ ಮಾರಾಟ ಮಾಡುತ್ತಿದೆ.
ಲೆನೋವೋ ಐಡಿಯಾಪ್ಯಾಡ್ 3
ಲೆನೋವೋ ಐಡಿಯಾಪ್ಯಾಡ್ 3 ಲ್ಯಾಪ್ಟಾಪ್ 15.6 ಇಂಚಿನ ಫುಲ್ ಹೆಚ್ಡಿ ಡಿಸ್ಪ್ಲೇಯನ್ನು ಹೊಂದಿದೆ. ಈ ಲ್ಯಾಪ್ಟಾಪ್ ಇಂಟೆಲ್ ಕೋರ್ i3 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 8ಜಿಬಿ ರ್ಯಾಮ್ ಮತ್ತು 512ಜಿಬಿ ಇಂಟರ್ನಲ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇನ್ನು ಲ್ಯಾಪ್ಟಾಪ್ ಪ್ಲಾಟಿನಂ ಗ್ರೇ ಬಣ್ಣದ ಆಯ್ಕೆಯಲ್ಲಿ ದೊರೆಯಲಿದ್ದು, ಸ್ಲಿಮ್ ಮತ್ತು ಹಗುರವಾದ ವಿನ್ಯಾಸದಲ್ಲಿ ದೊರೆಯಲಿದೆ. ಪ್ರಸ್ತುತ ಅಮೆಜಾನ್ನಲ್ಲಿ ಈ ಲ್ಯಾಪ್ಟಾಪ್ 37% ಡಿಸ್ಕೌಂಟ್ ಪಡೆದುಕೊಂಡಿದ್ದು, 37,919 ರೂ.ಬೆಲೆಯಲ್ಲಿ ದೊರೆಯಲಿದೆ.
ಇದನ್ನೂ ಓದಿ: ಒನ್ಪ್ಲಸ್ ಕಂಪನಿಯ ಹೊಸ ಇಯರ್ಬಡ್ಸ್ ಅನಾವರಣ! ಈ ವರ್ಷದ ಕೊನೆಯ ಗ್ಯಾಜೆಟ್
ಲೆನೋವೊ ಐಡಿಯಾಪ್ಯಾಡ್ ಸ್ಲಿಮ್ 3
ಲೆನೋವೋ ಐಡಿಯಾಪ್ಯಾಡ್ ಸ್ಲಿಮ್ 3 ಲ್ಯಾಪ್ಟಾಪ್ 15.6 ಇಂಚಿನ ಹೆಚ್ಡಿ ಡಿಸ್ಪ್ಲೇಯನ್ನು ಒಳಗೊಂಡಿದೆ. ಈ ಲ್ಯಾಪ್ಟಾಪ್ ಥಿನ್ ಆಂಡ್ ಲೈಟ್ವ್ಹೇಟ್ ಆಗಿದೆ. ಇನ್ನು ಲ್ಯಾಪ್ಟಾಪ್ ಇಂಟೆಲ್ ಸೆಲೆರಾನ್ N4020 4 ನೇ ಜನರಲ್ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ವಿಂಡೋಸ್ 11 ಆಪರೇಟಿಂಗ್ ಸಿಸ್ಟಂನಲ್ಲಿ ರನ್ ಆಗಲಿದೆ. ಈ ಲ್ಯಾಪ್ಟಾಪ್ ಅನ್ನು ವೈಫೈ ಮತ್ತು ಬ್ಲೂಟೂತ್ ಎರಡರಲ್ಲೂ ಸುಲಭವಾಗಿ ಸಂಪರ್ಕಿಸಬಹುದು. ಪ್ರಸ್ತುತ ಈ ಲ್ಯಾಪ್ಟಾಪ್ ಅಮೆಜಾನ್ನಲ್ಲಿ 26,478 ರೂಪಾಯಿ ಬೆಲೆಯಲ್ಲಿ ದೊರೆಯಲಿದೆ.
ಲೆನೋವೋ ಐಡಿಯಾಪ್ಯಾಡ್ ಸ್ಲಿಮ್ 1
ಲೆನೋವೋ ಐಡಿಯಾಪ್ಯಾಡ್ ಸ್ಲಿಮ್ 1 ಲ್ಯಾಪ್ಟಾಪ್ ಅನ್ನು ಅಮೆಜಾನ್ನಲ್ಲಿ 41% ಡಿಸ್ಕೌಂಟ್ನಲ್ಲಿ ಭಾರೀ ಅಗ್ಗದಲ್ಲಿ ಖರೀದಿ ಮಾಡಬಹುದಾಗಿದೆ. ಈ ಆಫರ್ ಮೂಲಕ ಈ ಲ್ಯಾಪ್ಟಾಪ್ ಅನ್ನು ನೀವು ಕೇವಲ 32,258 ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಲೆನೋವೋ ಐಡಿಯಾಪ್ಯಾಡ್ ಲ್ಯಾಪ್ಟಾಪ್ ಗೇಮಿಂಗ್ ಲ್ಯಾಪ್ಟಾಪ್ ಆಗಿದ್ದು, ಗೇಮರುಗಳಿಗೆ ಸೂಕ್ತವಾದ ಡಿವೈಸ್ ಆಗಿದೆ. ಇದು 15.6 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು, 1920x1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ವಿಂಡೋಸ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 512GB ಇನ್ಬಿಲ್ಟ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಈ ಲ್ಯಾಪ್ಟಾಪ್ ಅನ್ನು ಅತಿ ಕಡಿಮೆ ಬೆಲೆಯಲ್ಲಿ ಖರೀದಿಸುವುದಕ್ಕೆ ಸೂಕ್ತವಾದ ಸಮಯವಾಗಿದೆ.
ಲೆನೋವೋ ವಿ15
ಲೆನೋವೋ ವಿ15 ಲ್ಯಾಪ್ಟಾಪ್ ಅಮೆಜಾನ್ನಲ್ಲಿ ಕೇವಲ 19,490 ರೂ.ಬೆಲೆಯಲ್ಲಿ ಮಾರಾಟವಾಗುತ್ತಿದೆ. ಇನ್ನು ಈ ಲ್ಯಾಪ್ಟಾಪ್ನ ಫೀಚರ್ಸ್ ಬಗ್ಗೆ ನೋಡುವುದಾದರೆ ಇದರಲ್ಲಿ 15.6 ಇಂಚಿನ ಹೆಚ್ಡಿ ಡಿಸ್ಪ್ಲೇ ಅಳವಡಿಸಿದ್ದಾರೆ. ಈ ಡಿಸ್ಪ್ಲೇ 220 ನಿಟ್ಸ್ ಬ್ರೈಟ್ನೆಸ್ ಸಾಮರ್ಥ್ಯವನ್ನು ಹೊಂದಿದೆ. ಇದು ಆಂಟಿಗ್ಲೇರ್ ಥಿನ್ ಮತ್ತು ಲೈಟ್ ಲ್ಯಾಪ್ಟಾಪ್ ಆಗಿದೆ. ಈ ಲ್ಯಾಪ್ಟಾಪ್ ಇಂಟೆಲ್ ಸೆಲೆರಾನ್ N4020 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 256GB ಇನ್ಬಿಲ್ಟ್ ಸ್ಟೋರೇಜ್ ಅನ್ನು ಒಳಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ