ಇನ್ಶೂರೆನ್ಸ್ನ (Insurance) ಮಹತ್ವ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತು. ಯಾವುದೇ ವಾಹನ ಖರೀದಿಸುವಾಗಲೂ ಇನ್ಶೂರೆನ್ಸ್ ಅನ್ನು ಮಾಡಿಯೇ ಮಾಡುತ್ತಾರೆ. ಏನಾದರೂ ಹಾನಿ ಆದಾಗ ಹಣ ಪಾವತಿ ಮಾಡಲು, ನಷ್ಟ ಭರಿಸಲು ಈ ಇನ್ಶೂರೆನ್ಸ್ ಬಹಳಷ್ಟು ಸಹಕಾರಿಯಾಗುತ್ತದೆ. ಇತ್ತೀಚಿನ ಕಾಲಮಾನದಲ್ಲಿ ಸ್ಮಾರ್ಟ್ಫೋನ್ಗಳು ಎಲ್ಲರ ಅಗತ್ಯ ಸಾಧನವಾಗಿಬಿಟ್ಟಿದೆ. ಇನ್ಮುಂದೆ ವಾಹನ ಇನ್ಶೂರೆನ್ಸ್ (Vehicles Insurance), ಪ್ರಾಪರ್ಟಿ ಇನ್ಶೂರೆನ್ಸ್ಗಳಂತೆ ಸ್ಮಾರ್ಟ್ಫೋನ್ಗಳಿಗೂ ಇನ್ಶೂರೆನ್ಸ್ (Smartphone Insurance) ಮಾಡಿಕೊಳ್ಳಬಹುದು. ಆದರೆ ಈ ಸ್ಮಾರ್ಟ್ಫೋನ್ಗಳಿಗೆ ಇನ್ಶೂರೆನ್ಸ್ ಮಾಡಿದ್ರೆ ಬಹಳಷ್ಟು ಬಳಕೆದಾರರಿಗೆ ಸಹಕಾರಿಯಾಗಲಿದೆ. ಸ್ಮಾರ್ಟ್ಫೋನ್ಗಳು ಈಗ ಎಲ್ಲಾ ರೀತಿಯಲ್ಲೂ ಬಳಕೆಯಾಗುವುದರಿಂದ ಈ ರೀತಿಯ ಬೆಳವಣಿಗೆಯನ್ನು ಕಾಣಬಹುದು.
ಯಾರಾದರು ಸ್ಮಾರ್ಟ್ಫೋನ್ಗಳನ್ನು ಖರೀದಿ ಮಾಡಬೇಕಾದರೆ ಇನ್ಶೂರೆನ್ಸ್ ಮಾಡಲು ಮುಂದಾಗುವುದಿಲ್ಲ. ಆದರೆ ಮೊಬೈಲ್ಗಳಿಗೆ ಇನ್ಶೂರೆನ್ಸ್ ಮಾಡುವುದರಿಂದ ಬಹಳಷ್ಟು ಸಂದರ್ಭದಲ್ಲಿ ಸಹಕಾರಿಯಾಗಲಿದೆ. ಹಾಗಿದ್ರೆ ಈ ಇನ್ಶೂರೆನ್ಸ್ ಮಾಡುವುದರಿಂದ ಯಾವ ರೀತಿ ಸಹಕಾರಿಯಾಗುತ್ತದೆ ಎಂದು ಈ ಲೇಖನದಲ್ಲಿ ಓದಿ.
ಈಗ ಮಾರುಕಟ್ಟೆಯಲ್ಲಿ 5000 ರೂಪಾಯಿಯ ಆರಂಭಿಕ ಬೆಲೆಯಿಂದ ಸ್ಮಾರ್ಟ್ಫೋನ್ಗಳನ್ನು ಖರೀದಿ ಮಾಬಹುದಾಗಿದೆ. ಆದರೆ ಕೆಲವೊಬ್ಬರು ದುಬಾರಿ ಬೆಲೆಯನ್ನು ಹೊಂದಿರುವ ಸ್ಮಾರ್ಟ್ಫೋನ್ಗಳನ್ನು ಖರೀದಿ ಮಾಡ್ತಾರೆ. ಈ ಸಂದರ್ಭದಲ್ಲಿ ಇನ್ಶೂರೆನ್ಸ್ ಮಾಡಲು ಮುಂದಾಗುತ್ತಾರೆ. ಈ ಸ್ಮಾರ್ಟ್ಫೋನ್ಗಳ ಇನ್ಶೂರೆನ್ಸ್ ಮಾಡುವುದರಿಂದ ಯಾವಾಗೆಲ್ಲಾ ಪ್ರಯೋಜನಕ್ಕೆ ಬರುತ್ತದೆ ಎಂದು ಈ ಕೆಳಗಿನ ಲೇಖನದಲ್ಲಿದೆ.
ಇದನ್ನೂ ಓದಿ: ಸ್ಟೈಲಿಶ್ ಲುಕ್ನಲ್ಲಿ ಮಾರುಕಟ್ಟೆಗೆ ಹೊಸ ಇಯರ್ಬಡ್ಸ್ ಎಂಟ್ರಿ! ಫೀಚರ್ಸ್ ಕೇಳಿದ್ರೆ ಕಳೆದುಹೋಗ್ತೀರಾ!
ಸ್ಮಾರ್ಟ್ಫೋನ್ ನೀರಿಗೆ ಬಿದ್ದಾಗ
ನೀರು ಅಥವಾ ಇತರೆ ಯಾವುದೇ ದ್ರವ ತುಂಬಿದ ಪಾತ್ರೆಗಳಿಗೆ ನಿಮ್ಮ ಸ್ಮಾರ್ಟ್ಫೋನ್ ಬಿದ್ದರೆ ಸಂಪೂರ್ಣವಾಗಿ ಹಾನಿಯಾಗುತ್ತದೆ. ಕೆಲವೊಂದು ಸ್ಮಾರ್ಟ್ಫೋನ್ಗಳು ಬಂದ್ ಆಗುವ ಸಾಧ್ಯತೆಗಳಿರುತ್ತದೆ. ಈ ಸಂದರ್ಭದಲ್ಲಿ ಕೆಲವೊಂದು ಇನ್ಶೂರೆನ್ಸ್ ಕಂಪೆನಿಗಳು ಇದರ ನಷ್ಟವನ್ನು ಭರಿಸುತ್ತದೆ.
ಫೋನ್ ಕಳ್ಳತನವಾದಾಗ ಇನ್ಶೂರೆನ್ಸ್ ಸಹಾಯಕ
ಸ್ಮಾರ್ಟ್ಫೋನ್ ಕಳ್ಳತನಸ ಸುದ್ದಿಗಳು ಇತ್ತೀಚೆಗೆ ನಾವು ಬಹಳಷ್ಟು ಕೇಳಿರುತ್ತೇವೆ. ಈ ಸಂದರ್ಭದಲ್ಲಿ ಇನ್ಶೂರೆನ್ಸ್ಗಳು ನೆರವಿಗೆ ಬರುತ್ತದೆ. ನಿಮ್ಮ ಫೋನ್ ಕಳುವಾದಾಗ ಮೊದಲಿಗೆ ಈ ಘಟನೆಯ ಬಗ್ಗೆ ಪೊಲೀಸ್ ಠಾಣೆಗೆ ದೂರನ್ನು ನೀಡಬೇಕು. ಆದರೆ ಕಳೆದ ಫೋನ್ ಮತ್ತೆ ಸಿಗುವುದು ಬಹಳ ಕಡಿಮೆ, ಆದರೆ ಈ ಸಂದರ್ಭದಲ್ಲಿ ಇನ್ಶೂರೆನ್ಸ್ಗಳು ನೆರವಾಗುತ್ತದೆ.
ಆಕಸ್ಮಿಕವಾಗಿ ಹಾನಿಯಾದಾಗ
ಕೆಲವೊಮ್ಮೆ ನಮಗೆ ಗೊತ್ತಿಲ್ಲದ ಹಾಗೆಯೇ ಆಕಸ್ಮಿಕವಾಗಿ ನಮ್ಮ ಸ್ಮಾರ್ಟ್ಫೋನ್ಗಳು ಹಾನಿಯಾಗುತ್ತದೆ. ಇದರಿಂದ ಮೊಬೈಲ್ನ ಸಾಫ್ಟ್ವೇರ್ಗಳು ಆಂತರಿಕವಾಗಿ ಹಾನಿಗೊಳ್ಳಬಹುದು. ಇನ್ನು ಸ್ಕ್ರೀನ್ ಹಾಳಾದಾಗ, ಪ್ಯಾನೆಲ್ ಒಡೆದು ಹೋದಾಗ, ಡಿಸ್ಪ್ಲೇ ಹಾನಿಯಾದಾಗ ನೀವು ಸ್ಮಾರ್ಟ್ಫೋನ್ ಇನ್ಶೂರೆನ್ಸ್ ಮಾಡಿಸಿದ್ರೆ, ಇದರ ವೆಚ್ಚಗಳನ್ನು ಕಂಪೆನಿಯೇ ಭರಿಸುತ್ತದೆ.
ಮೊಬೈಲ್ ಟೂಲ್ಸ್ ಬದಲಾವಣೆ
ಕೆಲವೊಂದು ಸಂದರ್ಭಗಳಲ್ಲಿ ಸ್ಮಾರ್ಟ್ಫೋನ್ನಲ್ಲಿರುವಂತಹ ಆಂತರಿಕ ಮತ್ತು ಬಾಹ್ಯ ಟೂಲ್ಸ್ಗಳನ್ನು ಬದಲಾಯಿಸಬೇಕಾಗುತ್ತದೆ. ಆದರೆ ಇದರ ಕೆಲವೊಂದು ಬಿಡಿಭಾಗಗಳು ಬಹಳ ದುಬಾರಿ ಬೆಲೆಯನ್ನು ಹೊಂದಿರುತ್ತದೆ. ಈ ಸಂದರ್ಭದಲ್ಲಿ ಸ್ಮಾರ್ಟ್ಫೋನ್ ಇನ್ಶೂರೆನ್ಸ್ ನೆರವಿಗೆ ಬರುತ್ತದೆ.
ಯಾವೆಲ್ಲಾ ಸಂದರ್ಭದಲ್ಲಿ ಇನ್ಶೂರೆನ್ಸ್ ನೆರವಾಗುವುದಿಲ್ಲ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ