Driving License ಮನೆಯಲ್ಲೇ ಮರೆತು ಟ್ರಾಫಿಕ್‌ ಪೊಲೀಸರ ಬಳಿ ಸಿಲುಕಿದ್ರೆ ಹೀಗೆ ಮಾಡಿ ಸಾಕು

ರಸ್ತೆ ಸಾರಿಗೆ ಸಚಿವಾಲಯವು ಸೂಚಿಸಿರುವ ನಿಯಮಗಳ ಪ್ರಕಾರ, ವಾಹನ ಚಾಲಕರು ತಮ್ಮ ವಾಹನದ ದಾಖಲೆಗಳ ಸಾಫ್ಟ್ ಕಾಪಿಗಳನ್ನು ಡಿಜಿಲಾಕರ್ (DigiLocker) ಮತ್ತು ಎಂಪರಿವಾಹನ್‌ (mParivahan) ಅಪ್ಲಿಕೇಶನ್‌ಗಳಲ್ಲಿ ಸಂಗ್ರಹಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನಗರಗಳಲ್ಲಿ ದ್ವಿಚಕ್ರ ವಾಹನ (Two Wheelers) ಅಥವಾ ಕಾರು (Car) ಸವಾರರ ಸಂಖ್ಯೆಗೇನು ಕೊರತೆ ಇಲ್ಲ. ಇನ್ನು, ವಾಹನ ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್‌ (Driving License) ಹಾಗೂ ಆ ವಾಹನಕ್ಕೆ ಸಂಬಂಧಪಟ್ಟ ದಾಖಲೆಗಳು ಬೇಕೇ ಬೇಕು ಅಲ್ಲವೇ..? ಆದರೆ, ಒಮ್ಮೊಮ್ಮೆ ಡ್ರೈವಿಂಗ್ ಲೈಸೆನ್ಸ್‌ (Vehicle Documents) ಇಲ್ಲದೆ ನಾವು ತುರ್ತಾಗಿ ಎಲ್ಲೋ ಹೊರಗೆ ಹೋಗಿರುತ್ತೀವಿ. ಇಲ್ಲದಿದ್ದರೆ, ಮನೆ ಹತ್ತಿರನೇ ಹೋಗೋದಲ್ವ ಟ್ರಾಫಿಕ್‌ ಪೊಲೀಸ್‌ ಇರಲ್ಲವೆಂದು ಲೈಸೆನ್ಸ್ ಬಿಟ್ಟು ಹೋಗಿರುತ್ತಿರಿ ಅಂದ್ಕೊಳಿ. ಆದರೆ, ಆವಾಗಲೇ ಸಂಚಾರಿ ಪೊಲೀಸರ ಕೈಲಿ ಸಿಕ್ಕಿಹಾಕಿಕೊಂಡಿರುವ ಸನ್ನಿವೇಶಗಳು ಬಹುತೇಕರಿಗೆ ಎದುರಾಗಿರುತ್ತದೆ ಅಲ್ಲವೇ..? ಆಗ ಸುಮ್ಮನೆ ಫೈನ್‌ ಕಟ್ಟಿ, ಇಲ್ಲವೇ ಚಲನ್‌ ತೆಗೆದುಕೊಂಡು ಮನೆಗೆ ಹೋಗಿರುತ್ತೀರಿ. ಹೌದು, ವಾಹನ ಚಾಲನೆ ಮಾಡುವಾಗ, ನಿಮ್ಮನ್ನು ಟ್ರಾಫಿಕ್‌ ಪೊಲೀಸರು ಗಾಡಿ ನಿಲ್ಲಿಸಿದರು ಎಂದರೆ, ಅವರು ಮಾಡುವ ಮೊದಲ ಕೆಲಸ ನಿಮ್ಮ ವಾಹನದ ದಾಖಲೆಗಳನ್ನು ಮತ್ತು ನಿಮ್ಮ ಚಾಲನಾ ಪರವಾನಗಿಯನ್ನು ಪರಿಶೀಲಿಸುವುದು. ನೀವು ಯಾವುದೇ ರಸ್ತೆ ನಿಯಮಗಳನ್ನು ಉಲ್ಲಂಘಿಸದಿದ್ದರೂ ಸರಿ, ಪರಿಶೀಲಿಸುತ್ತಾರೆ.

  ಒಂದು ವೇಳೆ, ನಿಮ್ಮ ಬಳಿ ನೋಂದಣಿ ಪ್ರಮಾಣಪತ್ರ, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ, ಚಾಲನಾ ಪರವಾನಗಿ ಅಥವಾ ಮಾನ್ಯವಾದ ಮೋಟಾರು ವಿಮೆಯಂತಹ ಯಾವುದೇ ಅಗತ್ಯ ದಾಖಲೆಗಳನ್ನು ಹೊಂದಿಲ್ಲದಿದ್ದರೆ ನಿಮಗೆ ಚಲನ್ ನೀಡಲಾಗುತ್ತದೆ. ಕೇವಲ ದಾಖಲೆಗಳನ್ನು ಒಯ್ಯಲು ಮರೆತರೂ ಸಹ 2,000 ಮತ್ತು 5,000 ರೂ.ಗಳವರೆಗೆ ದಂಡ ವಿಧಿಸಬಹುದು. ನಿಮಗೂ ಇಂತಹ ಪರಿಸ್ಥಿತಿ ಎದುರಾದಲ್ಲಿ, ದಂಡದಿಂದ ಪಾರಾಗಲು ಒಂದು ಮಾರ್ಗವಿದೆ ನೋಡಿ..

  ಆ್ಯಪ್‌ನಿಂದ ಸಹಾಯ ಪಡೆದುಕೊಳ್ಳಿ..!

  ರಸ್ತೆ ಸಾರಿಗೆ ಸಚಿವಾಲಯವು ಸೂಚಿಸಿರುವ ನಿಯಮಗಳ ಪ್ರಕಾರ, ವಾಹನ ಚಾಲಕರು ತಮ್ಮ ವಾಹನದ ದಾಖಲೆಗಳ ಸಾಫ್ಟ್ ಕಾಪಿಗಳನ್ನು ಡಿಜಿಲಾಕರ್ (DigiLocker) ಮತ್ತು ಎಂಪರಿವಾಹನ್‌ (mParivahan) ಅಪ್ಲಿಕೇಶನ್‌ಗಳಲ್ಲಿ ಸಂಗ್ರಹಿಸಬಹುದು.

  ಈ ಹಿನ್ನೆಲೆ ನಿಮ್ಮ ಡಿ. ಎಲ್‌. ಹಾಗೂ ಇತರ ದಾಖಲೆಗಳನ್ನು ಮನೆಯಲ್ಲೇ ಮರೆತುಬಂದಿದ್ದರೂ ಪರವಾಗಿಲ್ಲ, ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ನಿಮ್ಮ ಜೇಬಿನಿಂದ ತೆಗೆದು, ಈ ಮೇಲಿನ ಎರಡು ಅಪ್ಲಿಕೇಶನ್‌ಗಳಲ್ಲಿ ಒಂದರಲ್ಲಿ ನೀವು ಅಪ್ಲೋಡ್‌ ಮಾಡಿದ ದಾಖಲೆಗಳ ಸಾಫ್ಟ್‌ ಕಾಪಿಯನ್ನು ಟ್ರಾಫಿಕ್‌ ಪೊಲೀಸ್‌ಗೆ ತೋರಿಸಿ. ಸಾಫ್ಟ್ ಕಾಪಿಗಳನ್ನು ಹಾರ್ಡ್ ಕಾಪಿಗಳಿಗೆ ಸಮನಾಗಿ ಪರಿಗಣಿಸುವಂತೆ ಸಂಚಾರ ಪೊಲೀಸರಿಗೆ ಈಗಾಗಲೇ ಸೂಚನೆ ನೀಡಲಾಗಿದೆ.

  ಡಿಜಿ ಲಾಕರ್ ಅಪ್ಲಿಕೇಶನ್‌ನಿಂದ ಪ್ರಯೋಜನಗಳು

  ಡಿಜಿ ಲಾಕರ್ ಅಪ್ಲಿಕೇಶನ್ ನಿಮ್ಮ ಎಲ್ಲಾ ದಾಖಲೆಗಳನ್ನು ಸುರಕ್ಷಿತವಾಗಿರಿಸುತ್ತದೆ. ಟ್ರಾಫಿಕ್‌ ಪೊಲೀಸರು ನಿಮ್ಮ ವಾಹನ ದಾಖಲೆ ಅಥವಾ ವಾಹನ ಚಾಲನಾ ಪರವಾನಗಿ ತಪಾಸಣೆಯ ಸಮಯದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ನೀವು ಸರಳವಾಗಿ ತೋರಿಸಬಹುದು ಮತ್ತು ಈ ಮೂಲಕ ಟ್ರಾಫಿಕ್ ನಿಯಮಗಳ ಉಲ್ಲಂಘನೆಗೆ ಕಟ್ಟುವ ದಂಡದಿಂದ ನಿಮ್ಮನ್ನು ನೀವು ಬಚಾವ್‌ ಮಾಡಿಕೊಳ್ಳಬಹುದು.

  ಡಿಜಿ ಲಾಕರ್ ಅಪ್ಲಿಕೇಶನ್ ನಿಮ್ಮ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಲು ನಿಮಗೆ ಅನುಮತಿಸುತ್ತದೆ. ನಿಮ್ಮ ಡಾಕ್ಯುಮೆಂಟ್‌ಗಳ ಹಾರ್ಡ್ ಕಾಪಿಗಳನ್ನು ನೀವು ಸುರಕ್ಷಿತವಾಗಿ ಮನೆಯಲ್ಲಿ ಇರಿಸಬಹುದಾದರೂ, ಸಾಫ್ಟ್ ಕಾಪಿಗಳು ಮೇಲೆ ಹೇಳಿದ ಅಪ್ಲಿಕೇಶನ್‌ಗಳಲ್ಲಿ ಸ್ಟೋರ್ ಮಾಡಿಕೊಂಡರೆ, ನಿಮಗೆ ಹೆಚ್ಚು ಅನುಕೂಲಕರವಾಗಿದೆ.

  ಭಾರತದಲ್ಲಿ ಪ್ರಯಾಣಿಕರ ಹಕ್ಕುಗಳು:

  ಪ್ರಯಾಣಿಕರು ವಾಹನ ಸವಾರಿ ಮಾಡುವ ವೇಳೆ ತಿಳಿದಿರಬೇಕಾದ ಕೆಲವು ಹಕ್ಕುಗಳು ಇಲ್ಲಿವೆ:

  • ನೀವು ನಿಯಮಗಳನ್ನು ಉಲ್ಲಂಘಿಸದ ಹೊರತು ಟ್ರಾಫಿಕ್ ಪೊಲೀಸರು ನಿಮ್ಮ ಡ್ರೈವಿಂಗ್ ಲೈಸೆನ್ಸ್‌ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಟ್ರಾಫಿಕ್ ಸಿಗ್ನಲ್‌ನಲ್ಲಿ ಕೆಂಪು ದೀಪ ಇದ್ದಾಗ ಸಿಗ್ನಲ್‌ ಜಂಪ್‌ ಮಾಡುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ವಾಹನವನ್ನು ಓವರ್‌ಲೋಡ್ ಮಾಡುವುದು ಮತ್ತು ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದು ಭಾರತದಲ್ಲಿ ಕಂಡುಬರುವ ಕೆಲವು ಸಾಮಾನ್ಯ ಸಂಚಾರ ಅಪರಾಧಗಳಾಗಿವೆ.

  • ನೀವು ಸಂಚಾರಿ ಅಪರಾಧವನ್ನು ಎಸಗಿದ್ದರೆ, ನಿಮ್ಮ ಡ್ರೈವಿಂಗ್ ಲೈಸೆನ್ಸ್, ಮಾಲಿನ್ಯ ನಿಯಂತ್ರಣ (PUC) ಪ್ರಮಾಣಪತ್ರ ಮತ್ತು ಕಾರ್ ಇನ್ಶೂರೆನ್ಸ್ ಪೇಪರ್‌ಗಳನ್ನು ಕೇಳಿದಾಗ ಅದನ್ನು ನೀವು ತೋರಿಸಬೇಕು.

  • ಒಬ್ಬರು ಪೊಲೀಸ್‌ ಸಮವಸ್ತ್ರದಲ್ಲಿದ್ದಾರೆಂದರೆ ಅವನ/ಅವಳ ಹೆಸರು ಮತ್ತು ಬಕಲ್ ಸಂಖ್ಯೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಲಾಗುತ್ತದೆ. ನೀವು ನಿಮ್ಮ ದಾಖಲೆಗಳನ್ನು ಸಮವಸ್ತ್ರಧಾರಿ ಅಧಿಕಾರಿಗೆ ಮಾತ್ರ ತೋರಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

  • ನೀವು ವಾಹನದಿಂದ ಹೊರಗೆ ಹೋಗದ ಹೊರತು ಪೊಲೀಸರು ನಿಮ್ಮ ಕಾರನ್ನು ಟೋ ಮಾಡುವಂತಿಲ್ಲ.

  • ನೀವು ಮಹಿಳೆ ಅಥವಾ ಯುವತಿಯಾಗಿದ್ದರೆ, ಮತ್ತು ಸಂಜೆ 6 ಗಂಟೆಯ ನಂತರ ಪೊಲೀಸರು ತಡೆದರೆ, ನಿಮ್ಮನ್ನು ದೈಹಿಕವಾಗಿ ಸರ್ಚ್‌ ಮಾಡಲು ಮಹಿಳಾ ಪೊಲೀಸರಿಗಾಗಿ ವಿನಂತಿಸಬಹುದು.

  • ಟ್ರಾಫಿಕ್ ಪೋಲೀಸ್ ನಿಮ್ಮನ್ನು ವಾಹನದಿಂದ ಹೊರಗೆ ಬರುವಂತೆ ಬಲವಂತಪಡಿಸುವಂತಿಲ್ಲ ಅಥವಾ ನಿಮ್ಮ ಕಾರಿನ (ಅಥವಾ ಬೈಕ್) ಕೀಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.

  • ನಿಮಗೆ ದಂಡ ವಿಧಿಸಲು ಸಂಚಾರ ಪೊಲೀಸರು ಇ-ಚಲನ್ ಮಷಿನ್‌ ಅಥವಾ ಚಲನ್ ಪುಸ್ತಕವನ್ನು ಹೊಂದಿರಬೇಕು. ಇಲ್ಲದಿದ್ದರೆ ಪೊಲೀಸರಿಗೆ ದಂಡ ವಿಧಿಸಲು ಅವಕಾಶವಿಲ್ಲ.

  • ಒಂದು ವೇಳೆ ನೀವು ಕಾನೂನನ್ನು ಉಲ್ಲಂಘಿಸಿ, ನಿಮ್ಮನ್ನು ಬಂಧಿಸಿದ್ದರೆ, ನಿಮ್ಮನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ನಿಮ್ಮನ್ನು ವಶಕ್ಕೆ ಪಡೆದರೆ, 24 ಗಂಟೆಗಳ ಒಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗುತ್ತದೆ.

  • ಸಂಚಾರ ಪೊಲೀಸರಿಗೆ ರಸ್ತೆಯ ಸಂಪೂರ್ಣ ಅಧಿಕಾರವಿದೆ. ನೀವು ಅವನ / ಅವಳ ಸೂಚನೆಗಳನ್ನು ತ್ವರಿತವಾಗಿ ಅನುಸರಿಸಬೇಕು.

  Published by:Kavya V
  First published: