• Home
  • »
  • News
  • »
  • tech
  • »
  • Oneplus Nord Smartwatch: ಒನ್‌ಪ್ಲಸ್ ಅಡಿಯಲ್ಲಿ ನಾರ್ಡ್​ ಸ್ಮಾರ್ಟ್​​ವಾಚ್​ ಬಿಡುಗಡೆ! ಸ್ಪೆಷಲ್​ ಫೀಚರ್ಸ್​ ಬಗ್ಗೆ ಮಾಹಿತಿ ಇಲ್ಲಿದೆ

Oneplus Nord Smartwatch: ಒನ್‌ಪ್ಲಸ್ ಅಡಿಯಲ್ಲಿ ನಾರ್ಡ್​ ಸ್ಮಾರ್ಟ್​​ವಾಚ್​ ಬಿಡುಗಡೆ! ಸ್ಪೆಷಲ್​ ಫೀಚರ್ಸ್​ ಬಗ್ಗೆ ಮಾಹಿತಿ ಇಲ್ಲಿದೆ

ಒನ್​ಪ್ಲಸ್ ನಾರ್ಡ್​ಸ್ಮಾರ್ಟ್​ವಾಚ್

ಒನ್​ಪ್ಲಸ್ ನಾರ್ಡ್​ಸ್ಮಾರ್ಟ್​ವಾಚ್

ಒನ್​ಪ್ಲಸ್​ ದಿನದಿಂದ ದಿನಕ್ಕೆ ಏನಾದರು ಹೊಸ ಸಾಧನವನ್ನು ಅಪ್ಡೇಟ್​ ಮಾಡುತ್ತಲೇ ಇರುತ್ತದೆ. ಅದೇ ರೀತಿ ಒನ್​ಪ್ಲಸ್​ ಇತ್ತೀಚೆಗೆ ನಾರ್ಡ್​​ ಸ್ಮಾರ್ಟ್​ವಾಚ್​ ಅನ್ನು ಪರಿಚಯಿಸಿದ್ದು ಇದೀಗ ಮಅರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಲ್ಲಿರುವ ಸ್ಮಾರ್ಟ್​ವಾಚ್ ಇದಾಗಿದೆ. ಇದರ ಫೀಚರ್ಸ್​ ಬಗ್ಗೆ ಕಂಪ್ಲೀಟ್​ ಮಾಹಿತಿ ಇಲ್ಲಿದೆ.

ಮುಂದೆ ಓದಿ ...
  • Share this:

    ಕಳೆದ ಎರಡು ವರ್ಷಗಳಲ್ಲಿ ಜಾಗತಿಕ ಬ್ರ್ಯಾಂಡ್ (Brand) ಆಗಿ ಬೆಳೆದಿರುವ ಒನ್‌ಪ್ಲಸ್‌ಗೆ (Oneplus) ಅದರ ನಾರ್ಡ್ (Nord) ಉಪ ಬ್ರ್ಯಾಂಡ್ ಬೆಳವಣಿಗೆ ಕಂಡುಕೊಂಡಿರುವುದು ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ. ನಾರ್ಡ್ ಬ್ರ್ಯಾಂಡ್ ವಿಸ್ತರಣೆಯಾಗುತ್ತಿದ್ದಂತೆ ಈ ಲೇಬಲ್ ಅಡಿಯಲ್ಲಿ ಸಂಸ್ಥೆ ಇನ್ನಷ್ಟು ಉತ್ಪನ್ನಗಳನ್ನು ಹೊರತರಲಾರಂಭಿಸಿತು. ಇದೀಗ ಈ ಶ್ರೇಣಿಗೆ ಇತ್ತೀಚೆಗೆ ಸೇರ್ಪಡೆಗೊಂಡಿರುವುದು ರೂ 4,999 ರ ಬೆಲೆಯ ನಾರ್ಡ್ ವಾಚ್ (Nord Watch) ಆಗಿದೆ. ಇದೀಗ ಒನ್​ಪ್ಲಸ್​ ಕಂಪನಿಯಲ್ಲಿ (Oneplus Company) ಅಡಿಯಲ್ಲಿ ಸಾಕಷ್ಟು ಗುಣಮಟ್ಟದ ಬ್ರಾಂಡ್​ಗಳಿವೆ. ಇದೀಗ ಒನ್​ಪ್ಲಸ್​ ದಿನದಿಂದ ದಿನಕ್ಕೆ ವಿಭಿನ್ನ ರೀತಿಯಲ್ಲಿ ಸ್ಮಾರ್ಟ್​​ಫೋನ್​ಗಳನ್ನು (Smartphone) ಪರಿಚಯಿಸುತ್ತಿತ್ತು. ಇನ್ನುಮುಂದಕ್ಕೆ ಸ್ಮಾರ್ಟ್​ವಾಚ್​​ನಲ್ಲೂ ಹೊಸತನದಲ್ಲಿ ವಾಚ್​ಗಳನ್ನು ತಯಾರಿಸುತ್ತಿದೆ.


    ಇಂಟರ್ನ್ಯಾಷನಲ್ ಡೇಟಾ ಕಾರ್ಪೋರೇಷನ್ ನಡೆಸಿರುವ ವಿಶ್ಲೇಷಣೆಯ ಪ್ರಕಾರ ಮಾರುಕಟ್ಟೆಯಲ್ಲಿ ಸ್ವದೇಶಿ ಬ್ರ್ಯಾಂಡ್‌ಗಳಾದ ನಾಯ್ಸ್, ಫೈರ್ ಬೋಲ್ಟ್ ಹಾಗೂ ಬೋಟ್‌ನಂತಹ ಬಜೆಟ್ ಸ್ನೇಹಿ ಉತ್ಪನ್ನಗಳಿಂದ ಕಠಿಣ ಪೈಪೋಟಿಯನ್ನು ಎದುರಿಸಬೇಕು ಎಮದು ತಿಳಿಸಿದೆ. ಹಾಗಿದ್ದರೆ ಒನ್​ಪ್ಲಸ್​ ನಾರ್ಡ್ ವಾಚ್ ಈ ಎಲ್ಲಾ ಪೈಪೋಟಿಯನ್ನು ಹೇಗೆ ಎದುರಿಸಲಿದೆ ಮತ್ತು ವಾಚ್‌ನ ವಿಶೇಷತೆಗಳನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳೋಣ.


    ಇದನ್ನೂ ಓದಿ: ಏರ್​ಟೆಲ್​ನ ಈ ಸಾಧನ ಖರೀದಿಸಿದರೆ ಅಮೆಜಾನ್ ಪ್ರೈಮ್, ಡಿಸ್ನಿ ಹಾಟ್​ಸ್ಟಾರ್​​ ಉಚಿತ!


    ಒನ್‌ಪ್ಲಸ್ ನಾರ್ಡ್ ಫೀಚರ್‌ಗಳು


    1.78 ಇಂಚಿನ ಅಮೋಲೆಡ್ (368×448 ಪಿಕ್ಸೆಲ್ ರೆಸಲ್ಯೂಶನ್) ಸಿಲಿಕಾನ್ ಸ್ಟ್ರಾಪ್ ಮತ್ತು ಸ್ಟೇನ್‌ಲೆಸ್ ಸ್ಟೀಲ್ ಬಕಲ್ ಜೊತೆಗೆ ಜಿಂಕ್ ಅಲೋಯ್ ಇರುವ ವಾಚ್ ಕೇಸ್, 35.6g ತೂಕ (ಸ್ಟ್ರಾಪ್ ಹೊರತುಪಡಿಸಿ) ಹೊಂದಿದ್ದು, ಸ್ಟ್ರಾಪ್‌ನೊಂದಿಗೆ ವಾಚ್ 52.4g ತೂಕದ್ದಾಗಿದೆ.


    ಒನ್​ಪ್ಲಸ್ ನಾರ್ಡ್​ಸ್ಮಾರ್ಟ್​ವಾಚ್


    3 ಆ್ಯಕ್ಸಿಸ್ ಅಕ್ಸೆಲೆರೊಮೀಟರ್, ಆಪ್ಟಿಕಲ್ ಹೃದಯ ಬಡಿತ ಸಂವೇದಕ ಮತ್ತು ರಕ್ತದ ಆಮ್ಲಜನಕ ಸಂವೇದಕವನ್ನು ವಾಚ್ ಹೊಂದಿದ್ದು, ಬ್ಲೂಟೂತ್ 5.2, 10 ದಿನಗಳ ಬ್ಯಾಟರಿ ದೀರ್ಘತೆಯೊಂದಿಗೆ 230mAh ಬ್ಯಾಟರಿ ಸಾಮರ್ಥ್ಯ, ಮ್ಯಾಗ್ನೆಟಿಕ್ ಚಾರ್ಜರ್, ಜಲ ಪ್ರತಿರೋಧಕ: IP68 ವಿಶೇಷತೆಯನ್ನೊಳಗೊಂಡಿದೆ.


    ಒನ್‌ಪ್ಲಸ್ ನಾರ್ಡ್ ವಾಚ್ ವಿಮರ್ಶೆ


    ದೊಡ್ಡ ಸ್ಕ್ರೀನ್ ಅನ್ನು ಈ ವಾಚ್ ಹೊಂದಿದ್ದು ಇದು ಅನುಕೂಲ ಹಾಗೂ ಅನಾನುಕೂಲತೆ ಎರಡನ್ನೂ ಹೊಂದಿದೆ. 1.78 ಇಂಚಿನ ಸ್ಕ್ರೀನ್ ಅಧಿಸೂಚನೆಗಳಿಂದ ಹೆಚ್ಚಿನ ವಿವರಗಳನ್ನು ತೋರಿಸಬಹುದು ಹಾಗೂ ವ್ಯಾಯಾಮ ನಡೆಸುವವರಿಗೆ ಇಂತಹ ವಾಚ್​ಗಳು ಹೆಚ್ಚು ಇಷ್ಟವಾಗುತ್ತದೆ.


    ಅನಾನುಕೂಲತೆ ಎಂದರೆ ದೊಡ್ಡ ಡಿಸ್‌ಪ್ಲೇಯಿಂದಾಗಿ ವಾಚ್ ದೊಡ್ಡದಾಗಿ ಹಾಗೂ ಹೆಚ್ಚು ಭಾರವಿರುವಂತೆ ಕಂಡುಬರುತ್ತದೆ ಹಾಗೂ ಮೂಳೆಗಳಿರುವ ಮಣಿಗಂಟುಗಳನ್ನು ಹೊಂದಿರುವವರಿಗೆ ಈ ವಾಚ್ ಅಷ್ಟೊಂದು ಆರಾಮದಾಯಕ ಎಂದೆನಿಸುವುದಿಲ್ಲ. ವಾಚ್‌ನ ಸ್ಕ್ರೀನ್ ಗಾತ್ರ ದೊಡ್ಡದಾಗಿರುವುದರಿಂದ ಕೆಲವೊಮ್ಮೆ ಧರಿಸಲು ಇದು ತುಂಬಾ ಭಾರ ಎಂಬ ಅನುಭವವನ್ನುಂಟು ಮಾಡಬಹುದು.


    ಒನ್‌ಪ್ಲಸ್ ವಾಚ್ ಉತ್ತಮ ಬ್ಯಾಟರಿ ಬಾಳ್ವಿಕೆಯೊಂದಿಗೆ ಬಂದಿದೆ. ಒಂದು ವಾರದವರೆಗೆ ವಾಚ್ ಉತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ ಇನ್ನು ದೈನಂದಿನ ನಡಿಗೆಯನ್ನು ಟ್ರ್ಯಾಕ್ ಮಾಡಲು ಹಾಗೂ ಯಾವುದೇ ಅಧಿಸೂಚನೆಗಳನ್ನು ನೀವು ಆನ್ ಮಾಡದೇ ಇದ್ದರೆ ಬ್ಯಾಟರಿ ಇನ್ನಷ್ಟು ಸಮಯ ಬರುವುದು ಖಂಡಿತ.


    ಒನ್​ಪ್ಲಸ್ ನಾರ್ಡ್​ಸ್ಮಾರ್ಟ್​ವಾಚ್


    ಒನ್‌ಪ್ಲಸ್ ನಾರ್ಡ್ ವಾಚ್ ವಿಮರ್ಶೆ: ಯಾವುದು ಉತ್ತಮವಾಗಿಲ್ಲ


    ನಾರ್ಡ್ ವಾಚ್ ಕೆಲವೊಂದು ಮಿತಿಗಳನ್ನು ಹೊಂದಿದ್ದು ಇದು ನೀರು ನಿರೋಧಕವಾಗಿದ್ದರೂ ಈಜುವ ಸಮಯದಲ್ಲಿ ವಾಚ್ ಧರಿಸುವಂತಿಲ್ಲ. ಇನ್ನು ವಾಚ್‌ನ ಡಿಸ್‌ಪ್ಲೇ ಗಾತ್ರ ವಾಚ್ ಅನ್ನು ಹೆಚ್ಚು ಭಾರವಿರುವಂತೆ ಹಾಗೂ ಧರಿಸಲು ಅನಾನುಕೂಲವಾಗಿರುವಂತೆ ಮಾಡುತ್ತದೆ.


    ಒನ್‌ಪ್ಲಸ್ ನಾರ್ಡ್ ವಾಚ್ ಸ್ಮಾರ್ಟ್ ವಾಚ್ ಆಯ್ಕೆಗೆ ಉತ್ತಮವಾಗಿದೆ. ಆರೋಗ್ಯ ಹಾಗೂ ಫಿಟ್‌ನೆಸ್‌ಗೆ ಈ ವಾಚ್ ಉತ್ತಮವಾಗಿದೆ. ಮಾರುಕಟ್ಟೆಯಲ್ಲಿ ಬಜೆಟ್ ಸ್ನೇಹಿಯಾಗಿರುವ ಅದೆಷ್ಟೋ ಸ್ಮಾರ್ಟ್‌ವಾಚ್‌ಗಳಲ್ಲಿ ಇದೂ ಕೂಡ ಒಂದು.


    ರೆಡ್ಮಿ, ಅಮೇಜ್‌ಫಿಟ್ ಹಾಗೂ ರಿಯಲ್‌ಮಿ ಇದರ ಹೆಚ್ಚು ಸಾಮರ್ಥ್ಯದ ಸ್ಪರ್ಧಿಗಳು ಎಂದೆನಿಸಿವೆ. ಸ್ಮಾರ್ಟ್‌ಫೋನ್ ತಯಾರಕರ ಪೋರ್ಟ್‌ಫೊಲಿಯೊದಲ್ಲಿ ಇರಲೇಬೇಕಾದ ಉತ್ಪನ್ನಗಳ ಪಟ್ಟಿಯಲ್ಲಿ ಈ ವಾಚ್ ಸಹ ಸೇರಿದೆ ಎಂದು ಹೇಳಬಹುದು.

    Published by:Prajwal B
    First published: