ಸ್ಮಾರ್ಟ್‌ಫೋನ್ ಕಂಪೆನಿಗಳಲ್ಲಿ (Smartphone Company) ನೋಕಿಯಾ ಕಂಪೆನಿ ಭಾರೀ ಹಿಂದಿನಿಂದ ಪ್ರಚಲಿತದಲ್ಲಿದೆ. ಈ ಕಂಪೆನಿ ತನ್ನ ಬ್ರಾಂಡ್ನ ಅಡಿಯಲ್ಲಿ ಫೀಚರ್ ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಗ್ರಾಹಕರನ್ನು ಹೊಂದಿದೆ. ಆದರೆ ಟೆಕ್ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್ಫೋನ್ಗಳ ಅಬ್ಬರದಿಂದ ನೋಕಿಯಾ (Nokia Company) ಮೊಬೈಲ್ಗಳಿಗೆ ಬೇಡಿಕೆ ಕಡಿಮೆಯಾಯಿತು. ಆದರೆ ಭಾರತದಲ್ಲಿ ನೋಕಿಯಾ ಕಂಪೆನಿಗೆ (Nokia Mobiles) ಬಹಳಷ್ಟು ಗ್ರಾಹಕರಿದ್ದಾರೆ. ಈ ಕಂಪೆನಿ ಇದೀಗ ಬೇರೆ ಸ್ಮಾರ್ಟ್‌ಫೋನ್ ಕಂಪೆನಿಗಳಿಗೆ ಟಕ್ಕರ್ ನೀಡುವ ಉದ್ದೇಶದಿಂದ ಹೊಸ ಸ್ಮಾರ್ಟ್‌ಫೋನ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಲು ರೆಡಿಯಾಗಿದೆ. ಈ ಸ್ಮಾರ್ಟ್‌ಫೋನ್ ಬಹಳಷ್ಟು ಗುಣಮಟ್ಟದ ಫೀಚರ್ಸ್ಗಳನ್ನು ಒಳಗೊಂಡಿದ್ದು, ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸೋದು ಗ್ಯಾರಮಟಿಯಾಗಿದೆ.
ನೋಕಿಯಾ ಕಂಪೆನಿಯಿಂದ ನೋಕಿಯಾ ಎಕ್ಸ್30 5ಜಿ ಎಂಬ ಸ್ಮಾರ್ಟ್‌ಫೋನ್ ಲಾಂಚ್ ಆಗುತ್ತಿದ್ದು, ಇದರ ಫೀಚರ್ಸ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಈ ಸ್ಮಾರ್ಟ್ಫೋನ್ನ ಫೀಚರ್ಸ್, ಬೆಲೆ ಬಗ್ಗೆ ಮಾಹಿತಿಯನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
ನೋಕಿಯಾ ಎಕ್ಸ್30 5ಜಿ ಮೊಬೈಲ್ ವಿನ್ಯಾಸ ಹೇಗಿದೆ?
ನೋಕಿಯಾ X30 5ಜಿ ಫೋನ್ 6.43 ಇಂಚಿನ ಅಮೋಲ್ಡ್ ಪ್ಯೂರ್ ಡಿಸ್‌ಪ್ಲೇಯನ್ಜು ಹೊಂದಿದೆ. ಈ ಡಿಸ್ಪ್ಲೇಯು ಬಳಕೆದಾರರಿಗೆ ಹೆಚ್ಚು ಬ್ರೈಟ್‌ನೆಸ್ ಮತ್ತು ರೋಮಾಂಚಕ ಬಣ್ಣದ ಅನುಭವವನ್ನು ನೀಡುತ್ತದೆ. ಹಾಗೆಯೇ ಇದು 90hz ಸ್ಕ್ರೀನ್ ರಿಫ್ರೆಶ್ ರೇಟ್ ನೀಡಲಿದೆ. ಇನ್ನು ಈ ಸ್ಮಾರ್ಟ್ಫೋನ್ನ ಡಿಸ್ಪ್ಲೇ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಅನ್ನು ಆ್ಯಡ್ ಮಾಡಲಾಗಿದೆ.
ಇದನ್ನೂ ಓದಿ: ಅಮೆಜಾನ್ನಲ್ಲಿ ಒನ್ಪ್ಲಸ್ 10 ಪ್ರೋ 5ಜಿ ಮೇಲೆ ಭರ್ಜರಿ ಆಫರ್ಸ್! ಏನೆಲ್ಲಾ ರಿಯಾಯಿತಿ ಇದೆ?
ಕ್ಯಾಮೆರಾ ಸೆಟಪ್
ನೋಕಿಯಾ X30 5ಜಿ ಸ್ಮಾರ್ಟ್‌ಫೋನ್ ರಿಯರ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಅದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸೆಕೆಂಡರಿ ಕ್ಯಾಮೆರಾವನ್ನು ಒಳಗೊಂಡಿದ್ದು, ಈ ಕ್ಯಾಮೆರಾದಲ್ಲಿನ ಸೆನ್ಸಾರ್ ಎಐ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಫೀಚರ್ಸ್ ಪಡೆದುಕೊಂಡಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕಾಲ್ಗಳಿಗಾಗಿ 16 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಪ್ರೊಸೆಸರ್ ಸಾಮರ್ಥ್ಯ
ಈ ನೋಕಿಯಾ X30 5ಜಿ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಮೂರು ವರ್ಷಗಳ ಓಎಸ್ ನವೀಕರಣಗಳನ್ನು ನೀಡುತ್ತದೆ. ಅದರಂತೆ ಸದ್ಯಕ್ಕೆ ಅಂಡ್ರಾಯ್ಡ್ 12 ನಲ್ಲಿ ಈ ಫೋನ್ ರನ್ ಆಗುತ್ತದೆ. ಇನ್ನು 8ಜಿಬಿ ರ್‍ಯಾಮ್ ಹಾಗೂ 256ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಯಲ್ಲಿ ಲಭ್ಯ ಇರಲಿದೆ.
ಬ್ಯಾಟರಿ ಫೀಚರ್ಸ್
ನೋಕಿಯಾ X30 5ಜಿ ಸ್ಮಾರ್ಟ್‌ಫೋನ್ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 2 ದಿನಗಳ ಬ್ಯಾಟರಿ ಬ್ಯಾಕಪ್ ನೀಡಲಿದೆ. ಈ ಬ್ಯಾಟರಿ 4200mAh ಸಾಮರ್ಥ್ಯದ ಬ್ಯಾಕಪ್ ಅನ್ನು ಪಡೆದುಕೊಂಡಿದ್ದು, ಈ ಬ್ಯಾಟರಿಯು 33W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.
ಬೆಲೆ ಮತ್ತು ಲಭ್ಯತೆ
ನೋಕಿಯಾದ ಈ ವಿಶೇಷ ಫೋನ್‌ಗೆ 48,999 ರೂಪಾಯಿಗಳ ಆರಂಭಿಕ ಬೆಲೆ ನಿಗದಿ ಮಾಡಲಾಗಿದೆ. ಅದಾಗ್ಯೂ ಇದು ನಿಖರ ಬೆಲೆಯಾಗಿರದೆ ಮುಂಬರುವ ದಿನಗಳಲ್ಲಿ ಬದಲಾಗಬಹುದು ಎಂದು ಸಂಸ್ಥೆ ಮಾಹಿತಿ ನೀಡಿದೆ. ಜೊತೆಗೆ ನೋಕಿಯಾ ಪ್ರಿಯರು ಫೆಬ್ರವರಿ 20 ರಿಂದ ಅಮೆಜಾನ್ ಹಾಗೂ ನೋಕಿಯಾದ ಅಧಿಕೃತ ಸೈಟ್‌ಗೆ ಭೇಟಿ ನೀಡುವ ಮೂಲಕ ಖರೀದಿ ಮಾಡಬಹುದು ಎಂ ದು ಕಂಪೆನಿ ಹೇಳಿದೆ.
ಇದು ನೋಕಿಯಾ ಕಂಪೆನಿಯಿಂದ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಹೊಸ ಸ್ಮಾರ್ಟ್‌ಫೋನ್ ಆಗಿದೆ. ಈ ಸ್ಮಾರ್ಟ್‌ಫೋನ್ ಅನ್ನು ಫೆಬ್ರವರಿ 20ರಿಂದ ಖರೀದಿ ಮಾಡ್ಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ