Nokia: ನೋಕಿಯಾ ಸ್ಮಾರ್ಟ್​ಟಿವಿ; ಸದ್ಯದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ

Flipkart: ಭಾರತೀಯರಿಗೆ ಇಷ್ಟವಾಗುವ ರೀತಿಯಲ್ಲಿ ನೂತನ ಸ್ಮಾರ್ಟ್​ಟಿವಿಯನ್ನು ತಯಾರಿಸಲಾಗಿದೆ. ಮೊಟೊರೊಲಾ ಕಂಪೆನಿ ಕೂಡ ಈ ಹಿಂದೆ ಫ್ಲಿಪ್​ಕಾರ್ಟ್​ನೊಂದಿಗೆ ಕೈಜೋಡಿಸಿ ಸ್ಮಾರ್ಟ್​ಟಿವಿಯನ್ನು ಬಿಡುಗಡೆಗೊಳಿಸಿತ್ತು.

news18-kannada
Updated:November 8, 2019, 3:19 PM IST
Nokia: ನೋಕಿಯಾ ಸ್ಮಾರ್ಟ್​ಟಿವಿ; ಸದ್ಯದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ
ನೋಕಿಯಾ ಸ್ಮಾರ್ಟ್​ಟಿವಿ
news18-kannada
Updated: November 8, 2019, 3:19 PM IST
ನೋಕಿಯಾ ಕಂಪೆನಿ ಹೊಸ ಸ್ಮಾರ್ಟ್​ಟಿವಿಯೊಂದನ್ನು ಸಿದ್ಧಪಡಿಸಿದ್ದು, ಸದ್ಯದಲ್ಲೇ ಭಾರತದ ಮಾರುಕಟ್ಟೆಯಲ್ಲಿ  ಬಿಡುಗಡೆ ಮಾಡಲು ಚಿಂತನೆ ನಡೆಸಿದೆ. ಆನ್​​ಲೈನ್​ ಮಾರುಕಟ್ಟೆ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ನೋಕಿಯಾ ಸ್ಮಾರ್ಟ್​ಟಿವಿ ಬಿಡುಗಡೆಯಾಗಲಿದ್ದು, ಆದರೆ ಬಿಡುಗಡೆಯ ದಿನಾಂಕವನ್ನು ಫ್ಲಿಪ್​ಕಾರ್ಟ್ ಇನ್ನು​ ಬಹಿರಂಗ ಪಡಿಸಿಲ್ಲ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ ನೋಕಿಯಾ ಸ್ಮಾರ್ಟ್​ಟಿವಿಯಲ್ಲಿ ಜೆಬಿಎಲ್​ ಸೌಂಡ್​ ಎಫೆಕ್ಟ್ ನೀಡಲಾಗಿದೆ. ಜೊತೆಗೆ ಹೊಸ ಫೀಚರ್​ಗಳನ್ನು ಅಳವಡಿಸಲಾಗಿದೆ. ಗುಣಮಟ್ಟದ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ಹೆಸರುಗಳಿಸಿದ್ದ ನೋಕಿಯಾ ಕಂಪೆನಿ. ಇದೀಗ ಸ್ಮಾರ್ಟ್​ಟಿವಿಯನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಅಭಿವೃದ್ಧಿ ಸಾಧಿಸಲು ಚಿಂತನೆ ಮಾಡಿದೆ.

ಭಾರತೀಯರಿಗೆ ಇಷ್ಟವಾಗುವ ರೀತಿಯಲ್ಲಿ ನೂತನ ಸ್ಮಾರ್ಟ್​ಟಿವಿಯನ್ನು ತಯಾರಿಸಲಾಗಿದೆ. ಮೊಟೊರೊಲಾ ಕಂಪೆನಿ ಕೂಡ ಈ ಹಿಂದೆ ಫ್ಲಿಪ್​ಕಾರ್ಟ್​ನೊಂದಿಗೆ ಕೈಜೋಡಿಸಿ ಸ್ಮಾರ್ಟ್​ಟಿವಿಯನ್ನು ಬಿಡುಗಡೆಗೊಳಿಸಿತ್ತು. ಇದೀಗ ನೋಕಿಯಾ ಕಂಪೆನಿ ಕೂಡ ಸ್ಮಾರ್ಟ್​ಟಿವಿಯನ್ನು ಫ್ಲಿಪ್​ಕಾರ್ಟ್​ನಲ್ಲಿ ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ: ಎರಡನೇ ಮಗು ಜನಿಸಿದ ಬೆನ್ನಲ್ಲೇ ಯಶ್- ರಾಧಿಕಾ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ!

ಇದನ್ನೂ ಓದಿ: Whatsapp: ​​ಗ್ರೂಪಿನ ಕಿರಿಕಿರಿ ತಪ್ಪಿಸಲು ವಾಟ್ಸ್​ಆ್ಯಪ್​ನಲ್ಲಿ ಬಂದಿದೆ ಹೊಸ ಫೀಚರ್​


First published:November 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...