ಟೆಕ್ನಾಲಜಿ ಮಾರುಕಟ್ಟೆಯಲ್ಲಿ (Technology Market) ಸ್ಮಾರ್ಟ್ಫೋನ್ಗಳ ಹಾವಳಿ ಒಂದು ಕಡೆಯಾದರೆ ಟ್ಯಾಬ್ಲೆಟ್ಗಳ ಹಾವಳಿಯೂ ಶುರುವಾಗಿದೆ. ಜಾಗತಿಕ ಮಾರುಕಟ್ಟೆಗೆ ಟೆಕ್ ಕಂಪೆನಿಗಳು ಇತ್ತೀಚೆಗೆ ಸ್ಮಾರ್ಟ್ಫೋನ್ಗಳ ಜೊತೆಗೆ ಟ್ಯಾಬ್ಗಳನ್ನು ಸಹ ಬಿಡುಗಡೆ ಮಾಡುತ್ತಿದೆ. ಬಹಳ ಹಿಂದಿನಿಂದಲೂ ಮೊಬೈಲ್ ಯುಗದಲ್ಲಿ ಭಾರೀ ಸಂಚಲನ ಮೂಡಿಸಿದ್ದ ನೋಕಿಯಾ ಕಂಪೆನಿ (Nokia Company) ಇದೀಗ ಹೊಸ ಟ್ಯಾಬ್ ಒಂದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿತ್ತು. ಆದರೆ ಈ ಟ್ಯಾಬ್ ಅನ್ನು ಸದ್ಯ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ನೋಕಿಯಾ ಲಾಂಚ್ ಮಾಡಿರುವ ಟ್ಯಾಬ್ ನೋಕಿಯಾ ಟಿ21 ಟ್ಯಾಬ್ (Nokia T21 Tab) ಎಂಬುದಾಗಿದ್ದು, ವಿಶೇಷವಾಗಿ ಈ ಟ್ಯಾಬ್ಲೆಟ್ 8000 ಎಮ್ಎಹೆಚ್ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿರುತ್ತದೆ ಎಂದು ಕಂಪೆನಿ ತಿಳಿಸಿದೆ.
ಸದ್ಯ ಭಾರತದ ಮಾರುಕಟ್ಟೆಯಲ್ಲಿ ನೋಕಿಯಾ ಟಿ21 ಟ್ಯಾಬ್ ಬಿಡುಗಡೆಯಾಗಿದ್ದು, ಇದರ ಬ್ಯಾಟರಿ ಫೀಚರ್ಸ್ ಮೂಲಕವೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗಿದ್ರೆ ಈ ಟ್ಯಾಬ್ಲೆಟ್ನ ಇತರೆ ಫೀಚರ್ಸ್ ಹೇಗಿದೆ ಎಂದು ನೋಡಬೇಕಾದರೆ ಈ ಲೇಖನವನ್ನು ಓದಿ.
ಡಿಸ್ಪ್ಲೇ ವಿನ್ಯಾಸ ಹೇಗಿದೆ?
ನೋಕಿಯಾ ಟಿ21 ಟ್ಯಾಬ್ನ ಡಿಸ್ಪ್ಲೇ ವಿನ್ಯಾಸದ ಬಗ್ಗೆ ಹೇಳುವುದಾದರೆ ಇದು 10.36 ಇಂಚಿನ ಐಪಿಎಸ್ ಎಲ್ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 2000 x 1200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಕಂಪೆನಿ ತಿಳಿಸಿದೆ.ಇನ್ನು ಈ ಡಿಸ್ಪ್ಲೇಯು 400 ನಿಟ್ಸ್ ಬ್ರೈಟ್ನೆಸ್ ಸಾಮರ್ಥ್ಯವನ್ನು ನೀಡಲಿದೆ.
ನೋಕಿಯಾ ಟಿ21 ಟ್ಯಾಬ್ನ ಕ್ಯಾಮೆರಾ ಫೀಚರ್ಸ್
ನೋಕಿಯಾ ಟಿ21 ಟ್ಯಾಬ್ ಮುಖ್ಯವಾಗಿ 8 ಮೆಗಾಪಿಕ್ಸೆಲ್ ಸೆನ್ಸಾರ್ನ ಆಟೋಫೋಕಸ್ ಲೆನ್ಸ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಕ್ಯಾಮೆರಾದ ಜೊತೆಗೆ ಹಿಂಭಾಗದಲ್ಲಿ ಎಲ್ಇಡಿ ಫ್ಲ್ಯಾಷ್ ಲೈಟ್ ಅನ್ನು ನೀಡಲಾಗಿದೆ. ಇನ್ನು ಈ ಟ್ಯಾಬ್ ಮೂಲಕ ಸೆಲ್ಫಿ ಮತ್ತು ವಿಡಿಯೋ ಕಾಲ್ಗಾಗಿ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಪ್ರೊಸೆಸರ್ ಸಾಮರ್ಥ್ಯ
ನೋಕಿಯಾ ಟಿ21 ಟ್ಯಾಬ್ ಯುನಿಸೋಕ್ ಟಿ612 ಆಕ್ಟಾ ಕೋರ್ ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದೆ. ಇ ಪ್ರೊಸೆಸರ್ ಮಾಲಿ-G57 ಜಿಪಿಯು ಸಪೋರ್ಟ್ ಅನ್ನು ಪಡೆದುಕೊಂಡಿದೆ. ಇನ್ನು ಈ ನೋಕಿಯಾ ಟ್ಯಾಬ್ ಆಂಡ್ರಾಯ್ಡ್ 12 ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿದೆ.
ಇನ್ನು ಈ ನೋಕಿಯಾ ಟಿ21 ಟ್ಯಾಬ್ನ ಸ್ಟೋರೇಜ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಇದು 4ಜಿಬಿ ರ್ಯಾಮ್ ಮತ್ತು 64ಜಿಬಿ ಮತ್ತು 128ಜಿಬಿ ಸ್ಟೋರೇಜ್ ಸಾಮರ್ಥ್ಯದಲ್ಲಿ ಬಿಡುಗಡೆಯಾಗಲಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 512ಜಿಬಿ ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶವನ್ನು ಸಹ ನೀಡಿದೆ.
ಬ್ಯಾಟರಿ ಫೀಚರ್ಸ್
ನೋಕಿಯಾ ಟಿ21 ಟ್ಯಾಬ್ ವಿಶೇಷವಾಗಿ 8,200mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಈ ಬ್ಯಾಟರಿಯು 18W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನುಹೊಂದಿದೆ. ಇನ್ನು ಈ ಟ್ಯಾಬ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 3 ದಿನಗಳವರೆಗೆ ನಿರಂತರವಾಗಿ ಬಳಕೆ ಮಾಡಬಹುದಾಗಿದೆ.
ಇತರೆ ಫೀಚರ್ಸ್
ಈ ಟ್ಯಾಬ್ನ ಕನೆಕ್ಟಿವಿಟಿ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದು ಬ್ಲೂಟೂತ್ 5.0, ವೈಫೈ, ಹೆಡ್ಫೋನ್ ಜ್ಯಾಕ್, ಜಿಪಿಎಸ್, ಯುಎಸ್ಬಿ ಟೈಪ್ ಸಿ ಬೆಂಬಲವನ್ನು ಹೊಂದಿದೆ.
ಇದನ್ನೂ ಓದಿ: ಜಾಹೀರಾತು ನೋಡಿ ಜಾಬ್ಗೆ ಅರ್ಜಿ ಹಾಕುವವರೇ ಎಚ್ಚರ! ಇಲ್ಲೊಬ್ಬರು ಕಳಕೊಂಡದ್ದು 5 ಲಕ್ಷಕ್ಕೂ ಅಧಿಕ ಹಣ
ಬೆಲೆ ಮತ್ತು ಲಭ್ಯತೆ
ನೋಕಿಯಾ ಟಿ21 ಟ್ಯಾಬ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದರ ವೈಫೈ ವೇರಿಯಂಟ್ ಬೆಲೆಯು 17,999 ರೂಪಾಯಿ ಆಗಿದೆ. ಹಾಗೆಯೇ ಎಲ್ಟಿಇ ಮತ್ತು ವೈಫೈ ವೇರಿಯಂಟ್ ಬೆಲೆಯು 18,999 ರೂಪಾಯಿ ಆಗಿದೆ. ಇನ್ನು ಈ ಟ್ಯಾಬ್ ಅನ್ನು ಚಾರ್ಕೋಲ್ ಗ್ರೇ ಬಣ್ಣದಲದಲಿ ಖರೀದಿ ಮಾಡಬಹುದಾಗಿದೆ. ಈ ಡಿವೈಸ್ನೊಂದಿಗೆ ಆರಂಭಿಕ ಕೊಡುಗೆಯಾಗಿ ಫ್ಲಿಪ್ ಕವರ್ ಉಚಿತವಾಗಿ ಲಭ್ಯ ಆಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ