• Home
  • »
  • News
  • »
  • tech
  • »
  • Nokia G60 5G: ಭಾರತಕ್ಕೆ ಲಗ್ಗೆಯಿಡಲಿದೆ ನೋಕಿಯಾದ ಹೊಸ 5ಜಿ ಫೋನ್‌, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ

Nokia G60 5G: ಭಾರತಕ್ಕೆ ಲಗ್ಗೆಯಿಡಲಿದೆ ನೋಕಿಯಾದ ಹೊಸ 5ಜಿ ಫೋನ್‌, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ

ನೋಕಿಯಾ ಜಿ60 5ಜಿ

ನೋಕಿಯಾ ಜಿ60 5ಜಿ

ನೋಕಿಯಾ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ 5ಜಿ ಸ್ಮಾರ್ಟ್‌ಫೋನ್‌ ಬಗ್ಗೆ ತಿಳಿಸಿದೆ. ಇದು ಬಹಳಷ್ಟು ಫೀಚರ್ಸ್‌ ಅನ್ನು ಹೊಂದಿದ್ದು ಈ ಸ್ಮಾರ್ಟ್‌ಫೋನಿನ ಸಂಪೂರ್ಣ ಮಾಹಿತಿ ಇಲ್ಲಿದೆ...

  • Share this:

    ವರ್ಷದಿಂದ ವರ್ಷಕ್ಕೆ ಸ್ಮಾರ್ಟ್‌ಫೋನ್‌ ಕಂಪೆನಿಗಳು (Smartphone Company) ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಇಲ್ಲದೇ ಇರುವವರು ಯಾರೂ ಇಲ್ಲ. ಇದು ಆಧುನಿಕ ಯುಗ ಇಲ್ಲಿ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುತ್ತಲೇ ಇರುತ್ತಾರೆ. ಹಾಗಿರುವಾಗ ಗ್ರಾಹಕರು (Customer) ಕೂಡ ಪ್ರತೀದಿನ ಹೊಸ ತಂತ್ರಜ್ಞಾನಗಳನ್ನು ಒಳಗೊಂಡ ಮೊಬೈಲ್‌ಗಳಿಗೆ (Mobile) ಕಾಯುತ್ತಿರುತ್ತಾರೆ. ಈ ಬಾರಿ ನೋಕಿಯಾ ಸ್ಮಾರ್ಟ್‌ಫೋನ್‌ ಕಂಪೆನಿಯಿಂದ ಹೊಸ ಫೀಚರ್‌ಗಳನ್ನು (Features) ಒಳಗೊಂಡ 5ಜಿ ಮೊಬೈಲ್‌ ಅನ್ನು ಭಾರತದಲ್ಲಿ (India) ಬಿಡುಗಡೆ ಮಾಡುತ್ತಿದೆ. ಈ ಹೇಳಿಕೆಯನ್ನು ನೋಕಿಯಾ (Nokia) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ (Website) ತಿಳಿಸಿದೆ


    ಇಲ್ಲಿ ನೋಕಿಯಾ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ 5ಜಿ ಸ್ಮಾರ್ಟ್‌ಫೋನ್‌ ಬಗ್ಗೆ ತಿಳಿಸಿದೆ. ಇದು ಬಹಳಷ್ಟು ಫೀಚರ್ಸ್‌ ಅನ್ನು ಹೊಂದಿದ್ದು ಈ ಸ್ಮಾರ್ಟ್‌ಫೋನಿನ ಸಂಪೂರ್ಣ ಮಾಹಿತಿ ಇಲ್ಲಿದೆ.


    ನೋಕಿಯಾ ಭಾರತದಲ್ಲಿ ಬಿಡುಗಡೆ ಮಾಡುತ್ತಿರುಔುದು "ನೋಕಿಯಾ ಜಿ60 5ಜಿ" ಎಂಬ ಸ್ಮಾರ್ಟ್‌ಫೋನ್.‌ ನೋಕಿಯಾ ಇಂಡಿಯಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಒದಗಿಸಿರುವ ಮಾಹಿತಿಯಂತೆ, ಐಎಫ್‌ಎ 2022 ಈವೆಂಟ್‌ನಲ್ಲಿ ಬಿಡುಗಡೆ ಮಾಡಲಾದ ನೋಕಿಯಾ ಜಿ60 5ಜಿ ಸ್ಮಾರ್ಟ್‌ಫೋನನನ್ನು ಅದೇ ವೈಶಿಷ್ಟ್ಯಗಳಲ್ಲಿ ಭಾರತದಲ್ಲೂ ಪರಿಚಯಿಸಲಾಗುತ್ತಿದೆ.


    ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಅನಗತ್ಯ ಸಂದೇಶ ಕಳುಹಿಸಿದರೆ ದಂಡ! ಇದಕ್ಕಂತನೇ ಸರ್ಕಾರದಿಂದ ಸಮಿತಿ ರಚನೆ


    ನೋಕಿಯಾ ಜಿ60 5ಜಿ ಸ್ಮಾರ್ಟ್‌ಫೋನ್‌ನ ಫೀಚರ್ಸ್:‌


    • ನೋಕಿಯಾ ಜಿ60 5ಜಿ ಸ್ಮಾರ್ಟ್‌ಫೋನ್ ವಾಟರ್‌ಡ್ರಾಪ್ ನಾಚ್ ಶೈಲಿಯಲ್ಲಿರುವ FHD+ ರೆಸಲ್ಯೂಶನ್ ಸಾಮರ್ಥ್ಯದ 6.58-ಇಂಚಿನ IPS LCD ಡಿಸ್‌ಪ್ಲೇ ಹೊಂದಿದೆ.

    • ಇದರ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಮತ್ತು 500 nits ಬ್ರೈಟ್‌ನೆಸ್ ಫೀಚರ್‌ ಅನ್ನು ಹೊಂದಿದ್ದು ಜೊತೆಗೆ ಗೊರಿಲ್ಲಾ ಗ್ಲಾಸ್ 5 ಅನ್ನು ಕೂಡ ಹಾಕಲಾಗಿದೆ.


    Nokia s new 5G phone will hit India Available in the market in few days
    ನೋಕಿಯಾ ಜಿ60 5ಜಿ


    • Nokia G60 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನೊಂದಿಗೆ 6GB RAM ಮತ್ತು 128GB ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

    • ಕ್ಯಾಮೆರಾ ವಿಭಾಗದಲ್ಲಿ, Nokia G60 5G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಜೊತೆಗೆ 50MPಪ್ರೈಮರಿ ಸೆನ್ಸರ್‌, 5MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಡೆಪ್ತ್ ಯೂನಿಟ್ ಸೆನ್ಸಾರ್‌ನಿಂದ ಹಿಂಭಾಗದ ಕ್ಯಾಮೆರಾವನ್ನು ರೂಪಿಸಲಾಗಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8MP ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದೆ.

    • Nokia G60 5G ಸ್ಮಾರ್ಟ್‌ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, ವೈಫೈ, ಬ್ಲೂಟೂತ್ 5.1, GPS, USB ಟೈಪ್-ಸಿ ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಹೊಂದಿದ ಫೀಚರ್ಸ್‌ಗಳಿವೆ.

    • 20ವ್ಯಾಟ್ಸ್‌  ವೇಗದ ಚಾರ್ಜಿಂಗ್‌ ಬೆಂಬಲದೊಂದಿಗೆ 4,500mAh ಬ್ಯಾಟರಿ ಮತ್ತು ಪವರ್ ಬಟನ್‌ನಲ್ಲಿ ಎಂಬೆಡ್ ಮಾಡಲಾದ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ವೈಶಿಷ್ಟ್ಯಗಳನ್ನು ಹೊಂದಿದೆ.

    • ಇನ್ನು ಸ್ಮಾರ್ಟ್‌ಫೋನ್ Android 12 OS ನಲ್ಲಿ ಕಾರ್ಯನಿರ್ವಹಿಸಲಿದೆ.


    Nokia s new 5G phone will hit India Available in the market in few days
    ನೋಕಿಯಾ ಜಿ60 5ಜಿ


    ಭಾರತದಲ್ಲಿ Nokia G60 5G ಸ್ಮಾರ್ಟ್‌ಫೋನಿನ ಬೆಲೆ ಮತ್ತು ಲಭ್ಯತೆ


    ನೋಕಿಯಾದ ಇಂಡಿಯಾ ವೆಬ್‌ಸೈಟ್‌ನಲ್ಲಿ ನೋಕಿಯಾ ಜಿ60 5ಜಿ ಸ್ಮಾರ್ಟ್‌ಫೋನಿನ ಸಂಪೂರ್ಣ ವೈಶಿಷ್ಟ್ಯಗಳನ್ನು ಪಟ್ಟಿಮಾಡಲಾಗಿದ್ದರೂ ಸಹ ಈ ಸ್ಮಾರ್ಟ್‌ಫೋನಿನ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಮಾತ್ರ ಇನ್ನು ಘೋಷಣೆ ಮಾಡಿಲ್ಲ.


    ಇದನ್ನೂ ಓದಿ: ಮರೆತು ಹೋಯಿತೆ ಮೊಬೈಲ್ ಪಾಸ್‌ವರ್ಡ್? ಟೆನ್ಷನ್‌ ಬಿಡಿ, ಹುಡುಕುವ ಟಿಪ್ಸ್ ಇಲ್ಲಿದೆ ನೋಡಿ


    ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ನೋಕಿಯಾ ಜಿ60 5ಜಿ ಸ್ಮಾರ್ಟ್‌ಫೋನಿನ ಬೆಲೆಗಳಿಗೆ ಹೋಲಿಸಿದರೆ, ಭಾರತದಲ್ಲಿ ನೋಕಿಯಾ ಜಿ60 5ಜಿ ಸ್ಮಾರ್ಟ್‌ಫೋನ್ 20 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ.

    Published by:Harshith AS
    First published: