• ಹೋಂ
 • »
 • ನ್ಯೂಸ್
 • »
 • ಮೊಬೈಲ್- ಟೆಕ್
 • »
 • Smartphone Launch: ಏಕಕಾಲದಲ್ಲಿ 3 ಸ್ಮಾರ್ಟ್​​​ಫೋನ್​ಗಳನ್ನು ಬಿಡುಗಡೆ ಮಾಡಿದ ನೋಕಿಯಾ ಕಂಪೆನಿ! ಹೇಗಿದೆ ಗೊತ್ತಾ ಫೀಚರ್ಸ್?

Smartphone Launch: ಏಕಕಾಲದಲ್ಲಿ 3 ಸ್ಮಾರ್ಟ್​​​ಫೋನ್​ಗಳನ್ನು ಬಿಡುಗಡೆ ಮಾಡಿದ ನೋಕಿಯಾ ಕಂಪೆನಿ! ಹೇಗಿದೆ ಗೊತ್ತಾ ಫೀಚರ್ಸ್?

ನೋಕಿಯಾ ಸ್ಮಾರ್ಟ್​​ಫೋನ್​

ನೋಕಿಯಾ ಸ್ಮಾರ್ಟ್​​ಫೋನ್​

Nokia Smartphone: ಜನಪ್ರಿಯ ಸ್ಮಾರ್ಟ್​​ಫೋನ್​ ತಯಾರಿಕಾ ಕಂಪೆನಿಯಾಗಿರುವ ನೋಕಿಯಾ ಇದೀಗ ಮಾರುಕಟ್ಟೆಗೆ ಏಕಕಾಲದಲ್ಲಿ 3 ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಹಾಗಿದ್ರೆ ಆ ಸ್ಮಾರ್ಟ್​​ಫೋನ್​ಗಳು ಯಾವುದು?, ಫೀಚರ್ಸ್ ಹೇಗಿದೆ ಅನ್ನೋದನ್ನು ಈ ಲೇಖನದ ಮೂಲಕ ತಿಳಿಯಿರಿ.

ಮುಂದೆ ಓದಿ ...
 • Share this:

  ಸ್ಮಾರ್ಟ್​​ಫೋನ್ ವಲಯದಲ್ಲಿ ದಿನಕಳೆದಂತೆ ಹಲವಾರು ಸ್ಮಾರ್ಟ್​​ಫೋನ್​ಗಳು ಬಿಡುಗಡೆಯಾಗುತ್ತಲೇ ಇದೆ. ಅದರಲ್ಲೂ ನೋಕಿಯಾ ಕಂಪೆನಿ ಟೆಕ್‌ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಏಕಕಾಲದಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳನ್ನು (Smartphones) ಬಿಡುಗಡೆ ಮಾಡುವ ಮೂಲಕ ಫೋನ್‌ ಪ್ರಿಯರನ್ನು ಒಂದು ಕ್ಷಣ ದಂಗಾಗುವಂತೆ ಮಾಡಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಬಜೆಟ್‌ ಬೆಲೆಯ (Budget Price) ಸ್ಮಾರ್ಟ್‌ಫೋನ್‌ಗಳಾಗಿದ್ದು, ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯ ಸ್ಮಾರ್ಟ್​​ಫೋನ್​ಗಳ ಸಾಲಿಗೆ ಸೇರುವುದು ಗ್ಯಾರಂಟಿಯಾಗಿದೆ. ನೋಕಿಯಾ ಕಂಪೆನಿ (Nokia Company) ಭಾರೀ ಹಿಂದಿನಿಂದ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಪಡೆಯುತ್ತಾ ಬಂದಿದೆ. ಆದರೆ ಕೆಲ ಕಂಪೆನಿಗಳ ಬೆಳವಣಿಗೆಯಿಂದ ನೋಕಿಯಾ ಕಂಪೆನಿ ಸ್ಮಾರ್ಟ್​​ಫೋನ್​ಗಳನ್ನು ಉತ್ಪಾದಿಸುವಲ್ಲಿ ಹಿಂದೆ ಉಳಿದಿತ್ತು. ಆದರೆ ಈಗ ಮತ್ತೆ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ರೆಡಿಯಾಗಿದೆ.


  ಜನಪ್ರಿಯ ಸ್ಮಾರ್ಟ್​​ಫೋನ್​ ತಯಾರಿಕಾ ಕಂಪೆನಿಯಾಗಿರುವ ನೋಕಿಯಾ ಇದೀಗ ಮಾರುಕಟ್ಟೆಗೆ ಏಕಕಾಲದಲ್ಲಿ 3 ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಹಾಗಿದ್ರೆ ಆ ಸ್ಮಾರ್ಟ್​​ಫೋನ್​ಗಳು ಯಾವುದು?, ಫೀಚರ್ಸ್ ಹೇಗಿದೆ ಅನ್ನೋದನ್ನು ಈ ಲೇಖನದ ಮೂಲಕ ತಿಳಿಯಿರಿ.


  ನೋಕಿಯಾ ಜಿ22 ಸ್ಮಾರ್ಟ್​​ಫೋನ್​


  ನೋಕಿಯಾ G22 ಸ್ಮಾರ್ಟ್‌ಫೋನ್‌ ಅನ್ನು ಬಳಕೆಗೆ ಅನುಕೂಲವಾಗುವಂತೆ ವಿನ್ಯಾಸವನ್ನು ಮಾಡಲಾಗಿದೆ. ಇದು ಕರ್ವ್ಡ್‌ ಚಾರ್ಜಿಂಗ್ ಪೋರ್ಟ್ ಅಥವಾ ಫ್ಲಾಟ್ ಬ್ಯಾಟರಿಯನ್ನು ಹೊಂದಿದ್ದು ಈ ಮೂಲಕ ಬ್ಯಾಟರಿಯನ್ನು ಬದಲಾಯಿಸುವುದಕ್ಕೆ ಅವಕಾಶವನ್ನು ಸಹ ನೀಡಲಾಗಿದೆ ಎಂದು ನೋಕಿಯಾ ಕಂಪೆನಿ ಹೇಳಿಕೊಂಡಿದೆ. ಇದು 100% ರಷ್ಟು ಮರುಬಳಕೆಯ ಪ್ಲಾಸ್ಟಿಕ್ ಬ್ಯಾಕ್, ಸೌಂಡ್​ ಬಾಸ್ ಮತ್ತು ಸ್ಪಷ್ಟವಾದ ಧ್ವನಿಯನ್ನು ನೀಡುವ OZO ಪ್ಲೇಬ್ಯಾಕ್ ಅನ್ನು ಒಳಗೊಂಡಿದೆ. ಇನ್ನು ಈ ಫೋನ್‌ 2 ವರ್ಷಗಳ ಆಂಡ್ರಾಯ್ಡ್‌ ಎಂ ಓಎಸ್ ಅಪ್ಡೇಟ್‌ಗಳನ್ನು ನೀಡಲಿದೆ ಎಂದು ವರದಿಯಾಗಿದೆ.


  ಇದನ್ನೂ ಓದಿ: ಉಚಿತವಾಗಿ ಮ್ಯಾಚ್​ ನೋಡಲು ಇಲ್ಲಿದೆ ಏರ್​ಟೆಲ್​ನ ಬೆಸ್ಟ್​ ರೀಚಾರ್ಚ್​ ಪ್ಲ್ಯಾನ್​ಗಳು


  ನೋಕಿಯಾ ಸಿ22 ಸ್ಮಾರ್ಟ್​​ಫೋನ್​


  ನೋಕಿಯಾ C22 ಸ್ಮಾರ್ಟ್‌ಫೋನ್‌ ಉತ್ತಮ ಗುಣಮಟ್ಟದ ಫೀಚರ್ಸ್​ಗಳೊಂದಿಗೆ ಬರುತ್ತದೆ ಎಂದು ನೋಕಿಯಾ ಹೇಳಿದೆ. ಈ ಫೋನ್‌ ಐಪಿ 52 ರೇಟ್ ಹೊಂದಿದ್ದು, 2.5ಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಜೊತೆಗೆ ಗ್ಲಾಸ್ ಮತ್ತು ಬಲವಾದ ಪಾಲಿಕಾರ್ಬೊನೇಟ್ ಯುನಿಬಾಡಿ ವಿನ್ಯಾಸವನ್ನು ಮಾಡಲಾಗಿದೆ. ಈ ಫೋನ್‌ ಸುಧಾರಿತ 13 ಮೆಗಾಪಿಕ್ಸೆಲ್‌ ಕ್ಯಾಮೆರಾವನ್ನು ಒಳಗೊಂಡಿದೆ ಎಂದು ನೋಕಿಯಾ ಕಂಪೆನಿ ಹೇಳಿದೆ.


  ನೋಕಿಯಾ ಸಿ32 ಸ್ಮಾರ್ಟ್​​ಫೋನ್​


  ನೋಕಿಯಾ C32 ಸ್ಮಾರ್ಟ್‌ಫೋನ್‌ ಅನ್ನು ಕ್ಯಾಮೆರಾ ಫೀಚರ್ಸ್​​ಗಳನ್ನು ಕೇಂದ್ರವಾಗಿಟ್ಟುಕೊಂಡು ರಚಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ 50 ಮೆಗಾಪಿಕ್ಸೆಲ್ ಸೆನ್ಸಾರ್‌ನ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ ನೇರವಾದ ಸೈಡ್‌ವಾಲ್‌ ಹೊಂದಿದ್ದು, ಪ್ರೀಮಿಯಂ ಅನುಭವವನ್ನು ನೀಡಲಿದೆ. ಇದನ್ನು ನೋಕಿಯಾ 65W ಡ್ಯುಯಲ್ ಪೋರ್ಟ್ ವಾಲ್‌ ಮೂಲಕ ಚಾರ್ಜ್‌ ಮಾಡಬಹುದಾಗಿದೆ.


  ನೋಕಿಯಾ ಸ್ಮಾರ್ಟ್​​ಫೋನ್​


  ಬೆಲೆ ಮತ್ತು ಲಭ್ಯತೆ


  • ನೋಕಿಯಾ ಜಿ22 ಸ್ಮಾರ್ಟ್‌ಫೋನ್‌ ಬೆಲೆ 179 ಯುರೋ ಅಂದರೆ ಭಾರತದಲ್ಲಿ ಅಂದಾಜು 15,307 ರೂಪಾಯಿ ಎಂದು ನಿರ್ಧರಿಸಲಾಗಿದೆ.

  • ಇನ್ನು ನೋಕಿಯಾ ಸಿ22 ಬೆಲೆ 129 ಯುರೋ ಅಂದರೆ ಭಾರತದಲ್ಲಿ ಅಂದಾಜು 11,065 ರೂಪಾಯಿ ಆಗಿದೆ.

  • ಹಾಗೆಯೇ ನೋಕಿಯಾ ಸಿ32 ಸ್ಮಾರ್ಟ್‌ಫೋನ್‌ ಬೆಲೆ 139 ಯುರೋ ಅಂದರೆ ಭಾರತದಲ್ಲಿ ಅಂದಾಜು 11,931 ರೂಪಾಯಿ ಆಗಿರುತ್ತದೆ. ಇನ್ನು ಸ್ಮಾರ್ಟ್‌ಫೋನ್‌ಗಳನ್ನು ಮಿಡ್ನೈಟ್ ಬ್ಲ್ಯಾಕ್ ಮತ್ತು ಸ್ಯಾಂಡ್ ಕಲರ್‌ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.
  ನೋಕಿಯಾ C02 ಸ್ಮಾರ್ಟ್‌ಫೋನ್‌


  ನೋಕಿಯಾ C02 ಸ್ಮಾರ್ಟ್‌ಫೋನ್‌ 5.45 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ FWVGA+ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP52 ರೇಟಿಂಗ್ ಅನ್ನು ಹೊಂದಿದೆ. ನೋಕಿಯಾ C02 ಸ್ಮಾರ್ಟ್‌ಫೋನ್‌ ಅನ್​ಸ್ಪೆಸಿಫೈಡ್​ ಕ್ವಾಡ್‌ ಕೋರ್‌ SoC ಪ್ರೊಸೆಸರ್‌ ವೇಗವನ್ನು ಪಡೆದಿದೆ. ಇದು ಆಂಡ್ರಾಯ್ಡ್‌ 12 (Go ಆವೃತ್ತಿ) ನಲ್ಲಿ ಕಾರ್ಯನಿರ್ವಹಿಸಲಿದೆ.ನೋಕಿಯಾ C02 ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಇದಲ್ಲದೆ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

  Published by:Prajwal B
  First published: