Nokia 7.2: ನೋಕಿಯಾದ 48 ಮೆಗಾಪಿಕ್ಸೆಲ್‌ ಕ್ಯಾಮರಾ ಫೋನ್‌ ಮಾರ್ಕೆಟ್​​​ನಲ್ಲಿ ಲಭ್ಯ

ಹಾಗೆಯೇ ಸೆಲ್ಫಿ ತೆಗೆದುಕೊಳ್ಳುವರಿಗೆ ಮುಂಭಾಗದಲ್ಲಿ 20 ಮೆಗಾಪಿಕ್ಸೆಲ್‌ ಕ್ಯಾಮರಾ ಇಡಲಾಗಿದೆ. ಝೈಸ್‌ ಆಪ್ಟಿಕ್ಸ್‌ನ ಕೆಮರಾ ಇದಾಗಿದ್ದು, ಕ್ಲಿಕ್ಕಿಸುವ ಚಿತ್ರಗಳು ಭಾರೀ ಸ್ಪಷ್ಟವಾಗಿ ಕಾಣಲಿವೆ.

news18
Updated:September 19, 2019, 7:16 PM IST
Nokia 7.2: ನೋಕಿಯಾದ 48 ಮೆಗಾಪಿಕ್ಸೆಲ್‌ ಕ್ಯಾಮರಾ ಫೋನ್‌ ಮಾರ್ಕೆಟ್​​​ನಲ್ಲಿ ಲಭ್ಯ
ನೋಕಿಯಾ 7.2
news18
Updated: September 19, 2019, 7:16 PM IST
ಬೆಂಗಳೂರು(ಸೆ.19): ದಸರಾ ಹಬ್ಬದ ಪ್ರಯುಕ್ತ ನೋಕಿಯಾ ಕಂಪನಿಯೂ ವಿವಿಧ ಫೀಚರ್​​ ಹೊಂದಿರುವ ಹೊಸ ಫೋನ್​​ವೊಂದನ್ನು ಬಿಡುಗಡೆ ಮಾಡಿದೆ. ತಮ್ಮ ಹಳೆಯ ಬ್ರಾಂಡ್ ಹಿಂದಿನಂತೆಯೇ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಎಚ್‌ಎಂಡಿ ಗ್ಲೋಬಲ್‌ ಕಂಪನಿ, ಹೊಸ ನೋಕಿಯಾ 7.2 ಮೊಬೈಲ್‌ ಭಾರತದ ಮಾರುಕಟ್ಟಗೆ ಬಿಟ್ಟಿದೆ.

48 ಮೆಗಾಪಿಕ್ಸೆಲ್‌ ಕ್ಯಾಮರಾ ಹೊಂದಿರುವ ಈ ನೋಕಿಯಾ ಫೋನ್‌ 4ಜಿಬಿ ರ‍್ಯಾಮ್, 64 ಜಿಬಿ ರೋಮ್‌, 6ಜಿಪಿ ರ‍್ಯಾಮ್, ಮತ್ತು 64 ಜಿಬಿ ರೋಮ್‌ ಆವೃತ್ತಿಯಲ್ಲಿ ಲಭ್ಯವಿದೆ. ಈ ಫೋನಿನ ದರ ತಲಾ 18,599 ರೂ. ಮತ್ತು 19599 ರೂ. ಆಗಿದೆ ಎನ್ನಲಾಗುತ್ತಿದೆ.

ಇನ್ನು ನೋಕಿಯಾ 7.2 ಫೋನ್​​ ಎರಡು ಬಣ್ಣಗಳಲ್ಲಿ ಸಿಗಲಿದೆ. ಫೋನಿನ ಹಿಂಬದಿ ಮೂರು ಕ್ಯಾಮರಾ, ಈ ಪೈಕಿ 48 ಮೆಗಾಪಿಕ್ಸೆಲ್‌ ಪ್ರೈಮರಿ ಕ್ಯಾಮರಾ ಇದೆ. ಜತೆಗೆ 5 ಮೆಗಾಪಿಕ್ಸೆಲ್‌ನ ಡೆಪ್ತ್ ಸೆನ್ಸರ್‌, 8 ಮೆಗಾಪಿಕ್ಸೆಲ್‌ನ ವೈಡ್‌ ಆ್ಯಂಗಲ್​​​ ಕ್ಯಾಮರಾ ಇದೆ.

ಇದನ್ನೂ ಓದಿ: Bank Holiday 2019: ಸೆ.26ರಿಂದ ಐದು ದಿನ ಬ್ಯಾಂಕ್​​ ರಜೆ; ಎಟಿಎಂನಿಂದ ಇಂದೇ ಹಣ ಡ್ರಾ ಮಾಡಿಟ್ಟುಕೊಳ್ಳಿ!

ಹಾಗೆಯೇ ಸೆಲ್ಫಿ ತೆಗೆದುಕೊಳ್ಳುವರಿಗೆ ಮುಂಭಾಗದಲ್ಲಿ 20 ಮೆಗಾಪಿಕ್ಸೆಲ್‌ ಕ್ಯಾಮರಾ ಇಡಲಾಗಿದೆ. ಝೈಸ್‌ ಆಪ್ಟಿಕ್ಸ್‌ನ ಕೆಮರಾ ಇದಾಗಿದ್ದು, ಕ್ಲಿಕ್ಕಿಸುವ ಚಿತ್ರಗಳು ಭಾರೀ ಸ್ಪಷ್ಟವಾಗಿ ಕಾಣಲಿವೆ.

ಈ ಫೋನ್​​ ಆ್ಯಂಡ್ರಾಯ್ಡ್​​ ಆಪರೇಟಿಂಗ್‌ ಸಿಸ್ಟಂ ಹೊಂದಿದೆ. ಮುಂದಿನ ದಿನಗಳಲ್ಲಿ ಇದೇ ಆ್ಯಂಡ್ರಾಯ್ಡ್​​ 10ನೇ ಆವೃತ್ತಿವರೆಗೂ ಅಪ್ಡೇಟ್​​ ಆಗಲಿದೆ. 6.3 ಇಂಚಿನ ಎಫ್‌ಎಚ್‌ಡಿ ಡಿಸ್​​ಪ್ಲೇ, ಗೊರಿಲ್ಲಾ ಗ್ಲಾಸ್‌ 3 ಸುರಕ್ಷತೆ, 660 ಪ್ರೊಸೆಸರ್‌, 3500 ಎಮ್‌ಎಚ್‌ ಬ್ಯಾಟರಿ ಕ್ಯಾಪಸಿಟಿ ಹೊಂದಿದೆ.

-------------
Loading...

First published:September 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...