ನೋಕಿಯಾ150,125 ಬಿಡುಗಡೆ; ಕಡಿಮೆ ಬೆಲೆಗೆ ದೊರಕುವ ಈ ಫೀಚರ್​ ಫೋನ್​​ನಲ್ಲಿ ಏನೇನಿದೆ?

Nokia: ನೋಕಿಯಾ 150 ಫೀಚರ್​ ಪೋನ್​​ 2.4 ಇಂಚಿನ ಕ್ಯೂವಿಜಿಎ ಕಲರ್​ ಡಿಸ್​ಪ್ಲೇಯನ್ನು ಹೊಂದಿದ್ದು, ಸಿರೀಸ್​ 30+ ಸಾಫ್ಟ್​​ವೇರ್​ನಲ್ಲಿ ಕಾರ್ಯ ನಿರ್ವಹಿಸುತ್ತದೆ. 4GB RAM​ ಮತ್ತು 4GB ಇಂಟರ್​ನಲ್​​ ಸ್ಟೊರೇಜ್​ ಆಯ್ಕೆಯನ್ನು ಒಳಗೊಂಡಿದೆ.

news18-kannada
Updated:May 13, 2020, 3:45 PM IST
ನೋಕಿಯಾ150,125 ಬಿಡುಗಡೆ; ಕಡಿಮೆ ಬೆಲೆಗೆ ದೊರಕುವ ಈ ಫೀಚರ್​ ಫೋನ್​​ನಲ್ಲಿ ಏನೇನಿದೆ?
ನೋಕಿಯಾ150
  • Share this:
ಲಾಕ್​ಡೌನ್​ ಅವಧಿಯಲ್ಲಿ ಹೆಚ್​ಎಮ್​ಡಿ ಗ್ಲೋಬಲ್​​​ ಸಂಸ್ಥೆ ನೋಕಿಯಾ 125 ಮತ್ತು ನೋಕಿಯಾ 150 ಫೀಚರ್​ ಫೋನ್​​ ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯಲ್ಲಿ ದೊರಕುವ ಈ ನೂತನ ಫೀಚರ್​ ಫೋನ್​ಗಳು ಸದ್ಯದಲ್ಲೇ ಭಾರತದ ಗ್ರಾಹಕರಿಗೂ ಖರೀದಿಗೆ ಸಿಗಲಿದೆ.

ನೋಕಿಯಾ 150 ಫೀಚರ್​ ಫೋನ್​ ಅನ್ನು​​ ಕೆಂಪು, ಸಿಯಾನ್​, ಕಪ್ಪು ಬಣ್ಣದಲ್ಲಿ ಬಿಡುಗಡೆ ಮಾಡಿದೆ. ಭಾರತದಲ್ಲಿ ಇದರ ಬೆಲೆ 2,200 ರೂಪಾಯಿ ಎಂದು ಅಂದಾಜಿಸಲಾಗಿದೆ.ಇನ್ನು ನೋಕಿಯಾ 125 ಸ್ಮಾರ್ಟ್​ಫೋನ್​​​ ಚಾರ್​ಕೋಲ್​ ಬ್ಲಾಕ್​ ಮತ್ತು ಪೌಡರ್​ ವೈಟ್​​ ಬಣ್ಣದಲ್ಲಿ ಪರಿಚಯಿಸಿದೆ. ಇದರ ಬೆಲೆ 1,900 ರೂ. ಇರಲಿದೆ ಎಂದು ಅಂದಾಜಿಸಲಾಗಿದೆ.

ನೋಕಿಯಾ 150 ಫೀಚರ್​ ಪೋನ್​​ 2.4 ಇಂಚಿನ ಕ್ಯೂವಿಜಿಎ ಕಲರ್​ ಡಿಸ್​ಪ್ಲೇಯನ್ನು ಹೊಂದಿದ್ದು, ಸಿರೀಸ್​ 30+ ಸಾಫ್ಟ್​​ವೇರ್​ನಲ್ಲಿ ಕಾರ್ಯ ನಿರ್ವಹಿಸುತ್ತದೆ. 4GB RAM​ ಮತ್ತು 4GB ಇಂಟರ್​ನಲ್​​​​ ಸ್ಟೊರೇಜ್​ ಆಯ್ಕೆಯನ್ನು ಒಳಗೊಂಡಿದೆ. ಹೆಚ್ಚಿನ ಸ್ಟೊರೇಜ್​ಗಾಗಿ 32GB ತನಕ ವೃದ್ಧಿಸುವ ಆಯ್ಕೆಯನ್ನು ಇದರಲ್ಲಿ ನೀಡಲಾಗಿದೆ.

ಇದರ ಜೊತೆಗೆ ಫಿಸಿಕಲ್​ ಕೀಪ್ಯಾಡ್​​, ಡುಯೆಲ್​ ಸಿಮ್​​, ಫ್ಲಾಶ್​​​​ ಮತ್ತು ವಿಜಿಎ ಕ್ಯಾಮೆರಾವನ್ನು ನೀಡಿದೆ. 3.5mm​​ ಹೆಡ್​ಫೋನ್​ ಜಾಕ್​​ , ಮೈಕ್ರೊ-ಯುಎಸ್​​ಬಿ ಪೋರ್ಟ್​​​, ಬ್ಲೂಟೂತ್​ 3.0, Mp3 ಪ್ಲೇಯರ್​​​ ಫೀಚರ್​ ನೀಡಿದೆ. 1,020mAh​​ ಬ್ಯಾಟರಿ ಹೊಂದಿರುವ ನೋಕಿಯಾ 150 ಫೀಚರ್​ ಫೋನ್​ನಲ್ಲಿ ಕ್ಲಾಸಿಕ್​​ ಸ್ನೇಕ್​​ ಗೇಮ್​​ ಕೂಡ ನೀಡಿದೆ.

ಇನ್ನು ನೋಕಿಯಾ 125 ಫೀಚರ್​ ಫೋನ್​​ 2.4 ಇಂಚಿನ ಕ್ಯೂವಿಜಿಎ ಕಲರ್​ ಡಿಸ್​ಪ್ಲೇ ಹೊಂದಿದ್ದು, ಸಿರೀಸ್​​+ 30 ಸಾಫ್ಟ್​​ವೇರ್​ ಅಳವಡಿಸಲಾಗಿದೆ. 4GB RAM​ ಸೇರಿದಂತೆ 4GB ಇಂಟರ್​ನಲ್​ ಸ್ಟೊರೇಜ್​​ ಆಯ್ಕೆಯನ್ನು ಹೊಂದಿದೆ. ಇದಲ್ಲದೆ ವಿಜಿಎ ಕ್ಯಾಮೆರಾ, ಫ್ಲಾಶ್​​ , FM​ ರೇಡಿಯೋ ಫೀಚರ್​ ಇದರಲ್ಲಿದೆ. ದೀರ್ಘ ಬಳಕೆಗಾಗಿ 1,020 ಎಮ್​ಎಎಚ್​ ಬ್ಯಾಟರಿಯನ್ನು ನೀಡಲಾಗಿದೆ.

ಸಮಂತಾ ಅಕ್ಕಿನೇನಿ ಈ ಪಾತ್ರ ಮಾಡಲು ತುಂಬಾ ಭಯಪಟ್ಟಿದ್ದರಂತೆ!
First published: May 13, 2020, 3:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading