• Home
 • »
 • News
 • »
 • tech
 • »
 • Nokia G60 5G: ಭಾರತದಲ್ಲಿ ಇಂದಿನಿಂದ ಲಗ್ಗೆಯಿಡಲಿದೆ ನೋಕಿಯಾ ಜಿ60 5ಜಿ! ಬೆಲೆ ಮತ್ತು ವೈಶಿಷ್ಟ್ಯತೆ ಬಗ್ಗೆ ಇಲ್ಲಿದೆ ಮಾಹಿತಿ

Nokia G60 5G: ಭಾರತದಲ್ಲಿ ಇಂದಿನಿಂದ ಲಗ್ಗೆಯಿಡಲಿದೆ ನೋಕಿಯಾ ಜಿ60 5ಜಿ! ಬೆಲೆ ಮತ್ತು ವೈಶಿಷ್ಟ್ಯತೆ ಬಗ್ಗೆ ಇಲ್ಲಿದೆ ಮಾಹಿತಿ

ನೋಕಿಯಾ ಜಿ60 5ಜಿ

ನೋಕಿಯಾ ಜಿ60 5ಜಿ

ನೋಕಿಯಾ ಕಂಪನಿ ಗ್ರಾಹಕರಿಗಾಗಿ ಪರಿಚಯಿಸುತ್ತಿದೆ ಹೊಸ ನೋಕಿಯಾ ಜಿ60 5ಜಿ ಸ್ಮಾರ್ಟ್‌ ಫೋನ್‌. ಇದು ಬಹಳಷ್ಟು ಫಿಚರ್ಸ್‌ ಅನ್ನು ಹೊಂದಿದ್ದುಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಿದೆ.

 • Share this:

  ಸ್ಮಾರ್ಟ್‌ಫೋನ್‌ ಕಂಪನಿಗಳಲ್ಲಿ (Smartphone Company) ಈ ನೋಕಿಯಾ (Nokia) ಕಂಪನಿ ಕೂಡ ಒಂದು. ಇದು ಇತ್ತೀಚಿನ ಮೊಬೈಲ್‌ (Mobile) ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳಲ್ಲಿ ನೋಕಿಯಾ ಕಂಪನಿ ಕೂಡಾ ಒಂದು. ಎಚ್ಎಂಡಿ ಗ್ಲೋಬಲ್ (HMD Global) ಮಾಲೀಕತ್ವದ ನೋಕಿಯಾ ಕಂಪನಿಯು ತನ್ನ ಹೊಸ ನೋಕಿಯಾ 2780 ಫ್ಲಿಪ್ ಫೀಚರ್ ಫೋನ್ ಅನ್ನು ಯುಎಸ್ ನಲ್ಲಿ ಬಿಡುಗಡೆ ಮಾಡಿದ್ದ ಸುದ್ದಿಯನ್ನು ನಾವೆಲ್ಲಾ ನೋಡಿದ್ದೆವು. ಈಗ ನೋಕಿಯಾ ಕಂಪನಿಯ ಒಂದು ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಯಲ್ಲಿ ಇಂದಿನಿಂದ ಖರೀದಿಗೆ ಲಭ್ಯವಿದೆ ಅಂತ ಹೇಳಿದ್ದಾರೆ ನೋಡಿ. ನೋಕಿಯಾ ಜಿ60 5ಜಿ (Nokia G60 5G) ಇಂದು ಭಾರತದಲ್ಲಿ ತನ್ನ ಮೊದಲ ಮಾರಾಟಕ್ಕೆ ಸಜ್ಜಾಗಿದೆ.


  ಈ ಸ್ಮಾರ್ಟ್‌ಫೋನ್ ಕಂಪನಿಯ ವೆಬ್‌ಸೈಟ್ ನಲ್ಲಿ ಲಭ್ಯವಿರುತ್ತದೆ. ನೋಕಿಯಾ ಜಿ60 5ಜಿ ಮಧ್ಯಮ ಶ್ರೇಣಿಯ ಫೋನ್ ಆಗಿದ್ದು, ಕ್ವಾಲ್ಕಮ್ ಸ್ನ್ಯಾಪ್ ಡ್ರ್ಯಾಗನ್ 695 5ಜಿ ಆಕ್ಟಾ-ಕೋರ್ ಪ್ರೊಸೆಸರ್ ನಿಂದ ಚಾಲಿತವಾಗಿದೆ. ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಸೆಲ್ಫಿಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.


  ನೋಕಿಯಾ ಜಿ60 5ಜಿ ಯ ಬೆಲೆ ಎಷ್ಟು ಗೊತ್ತೇ?


  ನೋಕಿಯಾ ಜಿ60 5ಜಿ ಫೋನ್ ಬೆಲೆ 29,999 ರೂಪಾಯಿ ಆಗಿದೆ. ಈ ಹ್ಯಾಂಡ್ಸೆಟ್ 6 ಜಿಬಿ ರ್‍ಯಾಮ್ ಅನ್ನು ಹೊಂದಿದೆ. ಮತ್ತು 128 ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ನೋಕಿಯಾ ಇಂಡಿಯಾ ವೆಬ್‌ಸೈಟ್ ನಲ್ಲಿ  ಈ ಫೋನ್ ಪ್ರೀ-ಆರ್ಡರ್‌ಗಾಗಿ ಸಿದ್ಧವಾಗಿದೆ.‌


  Nokia G60 5G will launch in India from today! Here is information about the price and features
  ನೋಕಿಯಾ ಜಿ60 5ಜಿ


  ಫೋನ್ ಅನ್ನು ಪ್ರಿ ಆರ್ಡರ್ ಮಾಡುವವರಿಗೆ 3,599 ರೂಪಾಯಿ ಮೌಲ್ಯದ ನೋಕಿಯಾ ಪವರ್ ಇಯರ್ ಬಡ್ಸ್ ಲೈಟ್ ಅನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಕಂಪನಿಯು ತಿಳಿಸಿದೆ. ಖರೀದಿದಾರರು ಈ ಸ್ಮಾರ್ಟ್‌ಫೋನ್ ಅನ್ನು ಕಪ್ಪು ಮತ್ತು ಐಸ್ ಬಣ್ಣಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು.


  ಇದನ್ನೂ ಓದಿ: ಜಸ್ಟ್‌ 5000 ರೂಪಾಯಿಗೆ ಸಿಗುತ್ತೆ ಒನ್‌ಪ್ಲಸ್‌ ಸ್ಮಾರ್ಟ್‌ವಾಚ್!


  ನೋಕಿಯಾ ಜಿ60 5ಜಿ ಸ್ಮಾರ್ಟ್ಫೋನ್ ನ ವಿಶೇಷತೆಗಳು


  • ನೋಕಿಯಾ ಜಿ60 5ಜಿ ಸ್ಮಾರ್ಟ್‌ಫೋನ್ 6.58-ಇಂಚಿನ ಫುಲ್ ಎಚ್ ‌ಡಿ ಪ್ಲಸ್ ಸ್ಕ್ರೀನ್ ಅನ್ನು ಹೊಂದಿದೆ.

  • 1,080x2,400 ಪಿಕ್ಸೆಲ್ ರೆಸಲ್ಯೂಶನ್ ಮತ್ತು 120 ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಫೋನ್ ಡಿಸ್ ಪ್ಲೇ 20:9 ಅನುಪಾತವನ್ನು ನೀಡುತ್ತದೆ.

  • ಸ್ಕ್ರೀನ್ ಮೇಲೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನ ಡಿಸ್ಪ್ಲೇ ಮತ್ತು 500 ನಿಟ್ ಗಳ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡುತ್ತದೆ.


  Nokia G60 5G will launch in India from today! Here is information about the price and features
  ನೋಕಿಯಾ ಜಿ60 5ಜಿ


  • ಈ ಸ್ಮಾರ್ಟ್‌‌ಫೋನ್ ಕ್ವಾಲ್ಕಮ್ ಸ್ನ್ಯಾಪ್ ಡ್ರ್ಯಾಗನ್ 695 5ಜಿ ಆಕ್ಟಾ-ಕೋರ್ ಪ್ರೊಸೆಸರ್ ನಿಂದ ಚಾಲಿತವಾಗಿದೆ.

  • ಇದು ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯ ನಿರ್ವಹಿಸುತ್ತದೆ.

  • ನೋಕಿಯಾ ಮೂರು ಓಎಸ್ ಅಪ್ಡೇಟ್ ಗಳು ಮತ್ತು ನೋಕಿಯಾ ಜಿ 60 5ಜಿ ಯೊಂದಿಗೆ ಮಾಸಿಕ ಆಂಡ್ರಾಯ್ಡ್ ಭದ್ರತಾ ಅಪ್ಡೇಟ್ ಗಳನ್ನು ಮೂರು ವರ್ಷಗಳವರೆಗೆ ಭರವಸೆ ನೀಡುತ್ತದೆ.


  ಕ್ಯಾಮೆರಾ ಸೆಟಪ್‌ ಹೇಗಿದೆ?

  • ಹ್ಯಾಂಡ್ಸೆಟ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾವನ್ನು ಸಹ ಹೊಂದಿದ್ದು, ಈ ಕ್ಯಾಮೆರಾ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಕ್ಯಾಮೆರಾ ಅನ್ನು ಒಳಗೊಂಡಿದೆ.

  • ಸೆಲ್ಫಿಗಾಗಿ, ಡಿವೈಸ್ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ನೈಟ್ ಮೋಡ್ 2.0, ಡಾರ್ಕ್ ವಿಷನ್ ಮತ್ತು ಎಐ ಪೋರ್ಟ್ರೇಟ್ ಫೋನ್ ನಲ್ಲಿರುವ ಕ್ಯಾಮೆರಾ ವೈಶಿಷ್ಟ್ಯಗಳಲ್ಲಿ ಸೇರಿವೆ.


  ನೆಟ್‌ವರ್ಕ್‌ ಫೀಚರ್ಸ್:

  • ಡ್ಯುಯಲ್ ಸಿಮ್ ನೋಕಿಯಾ ಜಿ60 5ಜಿ ಸ್ಮಾರ್ಟ್‌ಫೋನ್ 20 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4,500 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ.

  • ಈ ಸಾಧನವು ಐಪಿ 52 ರೇಟಿಂಗ್ ನೊಂದಿಗೆ ಬರುತ್ತದೆ ಮತ್ತು ನೀರು ಮತ್ತು ಧೂಳು ನಿರೋಧಕವಾಗಿದೆ.


  ಇದನ್ನೂ ಓದಿ: ಈ ಫ್ಯಾನ್​ ನಿಮ್ಮ ಮನೆ ಮಕ್ಕಳ ಜೀವ ಉಳಿಸಬಹುದು!

  • ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್ ವಿ5.1, 3.5 ಎಂಎಂ ಹೆಡ್ಫೋನ್ ಜ್ಯಾಕ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಎನ್ಎಫ್‌ಸಿ ಫೋನ್ ನಲ್ಲಿ ಲಭ್ಯವಿರುವ ಕನೆಕ್ಟಿವಿಟಿ ವೈಶಿಷ್ಟ್ಯಗಳಾಗಿವೆ.

  Published by:Harshith AS
  First published: