ಫ್ಲಿಪ್​​ಕಾರ್ಟ್​ ಎಕ್ಸ್​ಛೇಂಜ್ ಆಫರ್​: ಕೇವಲ 99 ರೂ.ಗೆ ನೋಕಿಯಾ 6.1 ಪ್ಲಸ್​ ಖರೀದಿಸಿ

ಆನ್​ಲೈನ್ ಕಂಪೆನಿ ಫ್ಲಿಪ್​ಕಾರ್ಟ್​ನಲ್ಲಿ ಹೆಚ್​ಎಂಡಿ ಗ್ಲೋಬಲ್​ ಸಂಸ್ಥೆಯ ನೋಕಿಯಾ 6.1  ಪ್ಲಸ್ ಮೇಲೆ ಇಎಂಐ ಆಫರ್​ ನೀಡಿದೆ. 14999 ರೂ. ಮುಖಬೆಲೆಯ ಈ ಫೋನ್​ನನ್ನು ಎಕ್ಸ್​ಛೇಂಜ್​ ಆಫರ್​ನಲ್ಲೂ ಖರೀದಿಸಬಹುದು.

Harshith AS | news18
Updated:January 12, 2019, 5:16 PM IST
ಫ್ಲಿಪ್​​ಕಾರ್ಟ್​ ಎಕ್ಸ್​ಛೇಂಜ್ ಆಫರ್​: ಕೇವಲ 99 ರೂ.ಗೆ ನೋಕಿಯಾ 6.1 ಪ್ಲಸ್​ ಖರೀದಿಸಿ
ಆನ್​ಲೈನ್ ಕಂಪೆನಿ ಫ್ಲಿಪ್​ಕಾರ್ಟ್​ನಲ್ಲಿ ಹೆಚ್​ಎಂಡಿ ಗ್ಲೋಬಲ್​ ಸಂಸ್ಥೆಯ ನೋಕಿಯಾ 6.1  ಪ್ಲಸ್ ಮೇಲೆ ಇಎಂಐ ಆಫರ್​ ನೀಡಿದೆ. 14999 ರೂ. ಮುಖಬೆಲೆಯ ಈ ಫೋನ್​ನನ್ನು ಎಕ್ಸ್​ಛೇಂಜ್​ ಆಫರ್​ನಲ್ಲೂ ಖರೀದಿಸಬಹುದು.
Harshith AS | news18
Updated: January 12, 2019, 5:16 PM IST
ಗ್ರಾಹಕರು ಗ್ಯಾಜೆಟ್ ಲೋಕದ ತಾಣಗಳ ಒಳಹೊಕ್ಕಂತೆ ಮೊದಲಿಗೆ ಮೊಬೈಲ್​ ಹುಡುಕಾಟದಲ್ಲಿ ತೊಡಗುತ್ತಾರೆ. ಉತ್ತಮ ಫೀಚರ್, ​ಹೈ ರೆಸಲ್ಯೂಶನ್​​ ಕ್ಯಾಮೆರಾ, ದೀರ್ಘ ಕಾಲದ ಬ್ಯಾಟರಿ  ಅಧಿಕ ರ‍್ಯಾಮ್​ ಜೊತೆಗೆ ಬೆಸ್ಟ್​ ಮೊಬೈಲ್​ ಹುಡುಕಾಟದಲ್ಲಿ ಪರಿತಪಿಸುತ್ತಾರೆ. ಇನ್ನೂ ಕೆಲವರು ಮೊಬೈಲ್​ ಖರೀದಿಸಲು ಮುಂದಾದಾಗ ಅಧಿಕ ಬೆಲೆ ನೋಡಿ ಹಿಂದೇಟು ಹಾಕುತ್ತಾರೆ. ಆದರೆ ಫ್ಲಿಪ್​ಕಾರ್ಟ್​ನಲ್ಲಿ ನೋಕಿಯಾ ನೀಡಿರುವ ಆಫರ್​ನಲ್ಲಿ ನೀವು ಕಡಿಮೆ ಬೆಲೆಗೆ ಉತ್ತಮ ಮೊಬೈಲ್​ ಕೊಂಡುಕೊಳ್ಳಬಹುದು.

ಆನ್​ಲೈನ್ ಕಂಪೆನಿ ಫ್ಲಿಪ್​ಕಾರ್ಟ್​ನಲ್ಲಿ ಹೆಚ್​ಎಂಡಿ ಗ್ಲೋಬಲ್​ ಸಂಸ್ಥೆಯ ನೋಕಿಯಾ 6.1  ಪ್ಲಸ್ ಮೇಲೆ ಇಎಂಐ ಆಫರ್​ ನೀಡಿದೆ. 14999 ರೂ. ಮುಖಬೆಲೆಯ ಈ ಫೋನ್​ನನ್ನು ಎಕ್ಸ್​ಛೇಂಜ್​ ಆಫರ್​ನಲ್ಲೂ ಖರೀದಿಸಬಹುದು. ನಿಮ್ಮ ಮೊಬೈಲ್​ಗಳ ಮೇಲೆ 14000 ರೂ.ಗಳ ತನಕ ಎಕ್ಸ್​ಛೇಂಜ್​ ಆಫರ್​ ನೀಡಲಾಗಿದ್ದು, ನಿಮ್ಮ ಹಳೆಯ ಮೊಬೈಲ್​ಗೆ  ಸಂಪೂರ್ಣ ವಿನಿಮಯ ದರ ಸಿಕ್ಕರೆ ಕೇವಲ 99 ರೂ.ಗೆ ನೋಕಿಯಾ 6.1 ಪ್ಲಸ್​ ಅನ್ನು ತಮ್ಮದಾಗಿಸಿಕೊಳ್ಳಬಹುದು. ಇನ್ನೂ ಆಕ್ಸಿಸ್​ ಬ್ಯಾಂಕ್​ ಬಝ್​ ಕ್ರೆಡಿಟ್​ ಕಾರ್ಡ್​ ಮೂಲಕ ಖರೀದಿಸುವವರಿಗೆ 5% ಡಿಸ್ಕೌಂಟ್​ ನೀಡುತ್ತಿದೆ.

ಇದನ್ನೂಓದಿ:  'ನಿವೃತ್ತಿ ಬಳಿಕ ಮತ್ತೆಂದೂ ಬ್ಯಾಟ್​ ಎತ್ತಲಾರೆ' ವಿರಾಟ್​ ಕೊಹ್ಲಿ ಅಚ್ಚರಿಯ ಹೇಳಿಕೆ

ನೋಕಿಯಾ 6.1 ಪ್ಲಸ್ ಫೀಚರ್ಸ್

ಡಿಸ್​ಪ್ಲೇ: ಐಪಿಎಸ್​ ಎಲ್​ಸಿಡಿ 5.84 ಇಂಚಿನ ಡಿಸ್​ಪ್ಲೇ

ಕ್ಯಾಮೆರಾ: 16+5 ಮೆಗಾ ಪಿಕ್ಸೆಲ್​ ಫ್ರಂಟ್​ ಕ್ಯಾಮೆರಾ ಮತ್ತು 16 ಮೆಗಾ ಪಿಕ್ಸೆಲ್​ ರಿಯರ್​ ಕ್ಯಾಮೆರಾ ಹೊಂದಿದೆ.
Loading...

ಪ್ರೊಸೆಸರ್​: ಒಕ್ಟಾಕೋರ್​ ಪ್ರೊಸೆಸರ್​

ಬ್ಯಾಟರಿ: 3060mAh ಬ್ಯಾಟರಿ ಹೊಂದಿದೆ

RAM: 4GB

ಆಪರೇಟಿಂಗ್ ಸಿಸ್ಟಂ: ಆಂಡ್ರಾಯ್ಡ್​ 8.1

ಸ್ಟೊರೇಜ್: 64GB, ಮೈಕ್ರೋ ಎಸ್​ಡಿ ಕಾರ್ಡ್​ ಬಳಸಿ 400GBವರೆಗೂ ವಿಸ್ತರಿಸಿಕೊಳ್ಳಬಹುದು

ನಿರ್ದಿಷ್ಟ ಬೆಲೆ: 14,999 ರೂ.
First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...